ಬಾಕ್ಸಾಫೀಸ್‌ನಲ್ಲಿ 'ಸಲಾರ್' ಕಲೆಕ್ಷನ್ ಕುಸಿತ: 5ನೇ ದಿನ ಪ್ರಭಾಸ್, ಪ್ರಶಾಂತ್ ನೀಲ್ ಸಿನಿಮಾ ಗಳಿಸಿದ್ದೆಷ್ಟು?

ಪ್ರಭಾಸ್, ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾ 'ಸಲಾರ್' ಬಿಡುಗಡೆಯಾಗಿ 6ನೇ ದಿನಕ್ಕೆ ಕಾಲಿಟ್ಟಿದೆ. ಬ್ಯಾಕ್ ಟು ಬ್ಯಾಕ್ ರಜೆ ಸಿಕ್ಕಿದ್ದರಿಂದ ಅದರ ಲಾಭವನ್ನು ಚೆನ್ನಾಗಿಯೇ ಬಳಸಿಕೊಂಡಿದೆ. ನಿರಂತರ ನಾಲ್ಕು ದಿನಗಳ ರಜೆಯಲ್ಲಿ 'ಸಲಾರ್' ಅದ್ಭುತವಾಗಿಯೇ ಕಲೆಕ್ಷನ್ ಮಾಡಿತ್ತು. ಆದರೆ, ಐದನೇ ದಿನದ ಗಳಿಕೆಯಲ್ಲಿ ಕೊಂಚ ಮಟ್ಟಿಗೆ ಇಳಿಕೆ ಕಂಡಿದೆ.

ಭಾರತದಲ್ಲಿ 'ಸಲಾರ್' ಮೊದಲ ದಿನ 90.70 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ 56.35 ಕೋಟಿ ರೂಪಾಯಿ, ಮೂರನೇ ದಿನ 62.05 ಕೋಟಿ ರೂಪಾಯಿ ಹಾಗೂ ನಾಲ್ಕನೇ ದಿನ 46.30 ಕೋಟಿ ರೂಪಾಯಿ ಗಳಿಸಿತ್ತು. ಆದರೆ, ಐದನೇ ದಿನ ಯಾಕೋ ಕಲೆಕ್ಷನ್ ಡ್ರಾಪ್ ಆಗಿದೆ.

Salaar Box Office Collection Day 5 ₹25.13 crore Prabhas Prashanth Neel movie Day sees drop

ಹೊಸ ವರ್ಷ ಹಾಗೂ ಕ್ರಿಸ್‌ಮಸ್ ಸಂಭ್ರಮದಲ್ಲಿ ಕಲೆಕ್ಷನ್‌ನಲ್ಲಿ ಏರಿಕೆ ಆಗಬೇಕಿತ್ತು. ಆದರೆ, 5ನೇ ದಿನ ಕೇವಲ 23.13 ಕೋಟಿ ರೂಪಾಯಿ ಗಳಿಸುವಷ್ಟೇ ಸಾಧ್ಯವಾಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ಲೆಕ್ಕ ಹಾಕಿದ್ದಾರೆ. ಒಟ್ಟಾರೆ, ಈ ಐದು ದಿನಗಳಲ್ಲಿ ಭಾರತದಾದ್ಯಂತ ಈ ಸಿನಿಮಾದ ಕಲೆಕ್ಷನ್ 278.90 ಕೋಟಿ ರೂಪಾಯಿ ದಾಟಿದೆ. ಇನ್ನೊಂದು ದಿನದಲ್ಲಿ 300 ಕೋಟಿ ಕ್ಲಬ್ ಸೇರಲಿದೆ.

ಬಾಲಿವುಡ್‌ನ ಟ್ರೇಡ್ ಎಕ್ಸ್‌ಪರ್ಟ್ ಹಾಗೂ ಫಿಲ್ಮ್ ಕ್ರಿಟಿಕ್ ಸಮಿತ್ ಕಡೆಲ್ ಪ್ರಕಾರ, ಶೀಘ್ರವೇ ಹಿಂದಿ ಬೆಲ್ಟ್‌ನಲ್ಲಿ 'ಸಲಾರ್' ಬಿಗ್ ಹಿಟ್ ಲಿಸ್ಟ್ ಸೇರಿಕೊಳ್ಳಲಿದೆ ಎಂದು ಟ್ವೀಟ್ (X) ಮಾಡಿದ್ದಾರೆ. " ಸಲಾರ್ ಹಿಂದಿ ಬೆಲ್ಟ್‌ನಲ್ಲಿ ಮೆಗಾ ಹಿಟ್ ಆಗಲಿದೆ. ರಜೆಯ ದಿನಗಳನ್ನು ಬಿಟ್ಟು ಉಳಿದ ದಿನಗಳಲ್ಲೂ ಅಡ್ವಾನ್ಸ್ ಬುಕಿಂಗ್ ಜೋರಾಗಿದೆ. ಬುಧವಾರ ನೋಯ್ಡಾದಲ್ಲಿ ಬುಕಿಂಗ್ ಜೋರಾಗಿದೆ. ಎಡ, ಬಲ, ಸೆಂಟರ್‌ನಿಂದ ವೇಗವಾಗಿ ಟಿಕೆಟ್ ಬುಕಿಂಗ್ ಆಗುತ್ತಿದೆ. ಇದೇ ಸ್ಥಿತಿ ಭಾರತದ ಬೇರೆ ಬೇರೆ ಭಾಗಗಳಲ್ಲೂ ಇದೆ. ಪ್ರಭಾಸ್ ಮೇನಿಯಾ ರಗಡ್ ಆಗಿದೆ" ಎಂದು ಸಮಿತ್ ಕಡೆಲ್ ತಮ್ಮ ಪೋಸ್ಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

5ನೇ ದಿನ 'ಸಲಾರ್' ಡ್ರಾಪ್ ಆಗಿದ್ದು ಸಹಜ. ಎಲ್ಲಾ ಸಿನಿಮಾಗಳು ವೀಕ್‌ ಡೇಸ್‌ನಲ್ಲಿ ಡ್ರಾಪ್ ಆಗುತ್ತವೆ. ಹಾಗೇ 'ಸಲಾರ್' ಕೂಡ ಆಗಿದೆ. ವೀಕೆಂಡ್‌ನಲ್ಲಿ ಮತ್ತೆ ಪಿಕಪ್ ಆಗುತ್ತವೆ ಎಂದು ವಿತರಕರೊಬ್ಬರು ಹೇಳುತ್ತಾರೆ. ಹೀಗಾಗಿ ಈ ಡ್ರಾಪ್ ತಾತ್ಕಾಲಿಕ ಎಂದು ಹೇಳುತ್ತಾರೆ. ಅಂದ್ಹಾಗೆ 6ನೇ ದಿನವಾದ ಇಂದು (ಡಿಸೆಂಬರ್ 27) ಅಡ್ವಾನ್ಸ್ ಬುಕಿಂಗ್ ಪಾಸಿಟಿವ್ ಆಗಿದೆ. ತೆಲುಗಿನಲ್ಲಿ 6ನೇ ದಿನ 2.3 ಕೋಟಿ ರೂಪಾಯಿ ಅಡ್ವಾನ್ಸ್ ಬುಕಿಂಗ್‌ನಿಂದ ಕಲೆಕ್ಷನ್ ಆಗಿದೆ. ಅದೇ ಹಿಂದೆ ಬೆಲ್ಟ್‌ನಲ್ಲಿ 16.4 ಲಕ್ಷ ರೂಪಾಯಿ, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ 76.5 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ.

Salaar Box Office Collection Day 5 ₹25.13 crore Prabhas Prashanth Neel movie Day sees drop

ಇನ್ನೊಂದು ಕಡೆ 'ಸಲಾರ್' ಸಿನಿಮಾ ವಿಶ್ವದಾದ್ಯಂತ 391.5 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಭಾರತದಲ್ಲಿ 301.5 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದರೆ, ವಿದೇಶದಿಂದ 90 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಅಂತ ವರದಿಗಳಾಗಿವೆ. ಆದರೆ, ಸಲಾರ್ ಬಿಡುಗಡೆಯಾದ ಮೂರನೇ ದಿನವೇ 402 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂಬ ಪೋಸ್ಟ್ ಹರಿದಾಡಿತ್ತು.

ಏನೇ ಇದ್ದರೂ, ಒಂದ್ಕಡೆ ಪ್ರಭಾಸ್, ಇನ್ನೊಂದು ಕಡೆ ಪ್ರಶಾಂತ್ ನೀಲ್. ಇವರಿಬ್ಬರ ಕಾಂಬಿನೇಷನ್‌ನ ಮೊದಲ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿರೋದು ನಿಜ. ಈ ಕಲೆಕ್ಷನ್ ಹೀಗೆ ಎರಡು ವಾರ ಮುಂದುವರೆದರೆ, 600 ಕೋಟಿ ರೂಪಾಯಿಗೇನು ಮೋಸವಿರಲ್ಲ ಅನ್ನೋದ ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ. ಆದರೆ, ಇದು ಟ್ರೇಡ್ ಎಕ್ಸ್‌ಪರ್ಟ್‌ಗಳು ಕೊಟ್ಟಿರೋ ಬಾಕ್ಸಾಫೀಸ್‌ ಕಲೆಕ್ಷನ್ ಅಷ್ಟೇ. ಹೊಂಬಾಳೆ ಫಿಲ್ಮ್ಸ್ ಇನ್ನೂ ಅಧಿಕೃತವಾಗಿ ಕಲೆಕ್ಷನ್ ಬಗ್ಗೆ ಹೇಳಬೇಕಿದೆ.

More from Filmibeat

English summary
Salaar Box Office Day 5 collects ₹25.13 crores
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X