'ಸಲಾರ್' 6ನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಹೊಸ ದಾಖಲೆ ಸೃಷ್ಟಿ ಮಾಡುತ್ತಾ?

'ಸಲಾರ್' 5ನೇ ದಿನದಿಂದ ಬಾಕ್ಸಾಫೀಸ್‌ನಲ್ಲಿ ಕೊಂಚ ಮಟ್ಟಿಗೆ ಇಳಿಕೆ ಕಂಡಿದ್ದರೂ, ಪ್ರಭಾಸ್‌ಗೆ ಮರುಜೀವ ಕೊಟ್ಟಿರೋದಂತೂ ನಿಜ. ಯಂಗ್ ರೆಬೆಲ್‌ ಸ್ಟಾರ್ ಅನ್ನು ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಮಾಡಿದ್ದು ರಾಜಮೌಳಿಯ 'ಬಾಹುಬಲಿ'. ಈ ಸಿನಿಮಾ ಬಳಿಕ ಪ್ರಭಾಸ್‌ಗೆ ಒಂದೇ ಒಂದು ಸೂಪರ್ ಸಕ್ಸಸ್ ಸಿಕ್ಕಿರಲಿಲ್ಲ. ಅದೀಗ 'ಸಲಾರ್' ಮೂಲಕ ಸಿಕ್ಕಿದೆ.

ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾ 'ಸಲಾರ್' ಮೇಲೆ ನಿರೀಕ್ಷೆಗಳು ಹೆಚ್ಚಿದ್ದವು. ಅಂದುಕೊಂಡಂತೆ ಸಿನಿಮಾಗೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿತ್ತು. ನಿರಂತರ ನಾಲ್ಕು ದಿನ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಐದನೇ ದಿನದಿಂದ ಮತ್ತೆ ರಜೆಗಳು ಮುಗಿದ ಹಿನ್ನೆಲೆ ಕಲೆಕ್ಷನ್‌ನಲ್ಲಿ ಕೊಂಚ ಮಟ್ಟಿಗೆ ಡ್ರಾಪ್ ಆಗಿದೆ. 5ನೇ ದಿನದಂದು (ಡಿಸೆಂಬರ್ 26) 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಅದೇ 6ನೇ ದಿನ (ಡಿಸೆಂಬರ್ 27) ಅಂದರೆ ನಿನ್ನೆ ಇನ್ನೂ ಇಳಿಕೆ ಕಂಡಿದ್ದು, 17 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

Salaar Box Office Collection Day 6: Prabhas Prashanth Neel movie reach Rs300 crore

ಟ್ರೇಡ್ ಎಕ್ಸ್‌ಪರ್ಟ್ಸ್‌ ಮನೋಬಾಲ ವಿಜಯಬಾಲನ್ 'ಸಲಾರ್' ಕಲೆಕ್ಷನ್ ಬಗ್ಗೆ ಹೊಸ ಅಪ್‌ಡೇಟ್ ಕೊಟ್ಟಿದ್ದಾರೆ. ಬಾಕ್ಸಾಫೀಸ್ ಗಳಿಕೆ ವಿಚಾರದಲ್ಲಿ ಈ ಸಿನಿಮಾ ಹೊಸ ಮೈಲಿಗಲ್ಲು ಸೃಷ್ಟಿಸಿದೆ ಎಂದು ತಮ್ಮ ಎಕ್ಸ್ ಖಾತೆ (ಟ್ವಿಟರ್)ಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

'ಸಲಾರ್' ಕೇವಲ 6 ದಿನಗಳಲ್ಲಿ ವಿಶ್ವದಾದ್ಯಂತ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಮನೋಬಾಲ ವಿಜಯಬಾಲನ್ ಪೋಸ್ಟ್ ಮಾಡಿದ್ದಾರೆ. ಈಗ ಚಿತ್ರತಂಡದ ಮುಂದಿನ ಗುರಿ 550 ಕೋಟಿ ರೂಪಾಯಿ. ಇನ್ನು ಭಾರತದಲ್ಲಿ ಈ ಸಿನಿಮಾ ಇಂದು (ಡಿಸೆಂಬರ್ 28) 300 ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ಮೊದಲ ದಿನ 90.70 ಕೋಟಿ ರೂಪಾಯಿ, 2ನೇ ದಿನ 56.35 ಕೋಟಿ ರೂಪಾಯಿ, 3ನೇ ದಿನ 62.05 ಕೋಟಿ ರೂಪಾಯಿ, ನಾಲ್ಕನೇ ದಿನ 46.30 ಕೋಟಿ ರೂಪಾಯಿ, 5ನೇ ದಿನ 25 ಕೋಟಿ ರೂಪಾಯಿ ಹಾಗೂ 6ನೇ ದಿನ 17 ಕೋಟಿ ರೂಪಾಯಿ ಕಲೆಕ್ಷನ್ ಆಗಿರೋ ಬಗ್ಗೆ ವರದಿಯಾಗಿದೆ.

ಭಾರತದಲ್ಲಿ 6ನೇ ದಿನಕ್ಕೆ 'ಸಲಾರ್' ಸಿನಿಮಾ 297.40 ರೂಪಾಯಿ ಕಲೆಕ್ಷನ್ ಆಗಿದೆ. ಟ್ರೇಡ್ ಪೋರ್ಟಲ್ Sacnilk ಪ್ರಕಾರ, 'ಸಲಾರ್' 6ನೇ ದಿನ ಭಾರತದಾದ್ಯಂತ ಡಿಸೆಂಟ್ ಕಲೆಕ್ಷನ್ ಮಾಡಿದೆ. ಹಿಂದಿ ಬೆಲ್ಟ್‌ನಲ್ಲಿ ಶೇ.28.98ರಷ್ಟು, ತೆಲುಗಿನಲ್ಲಿ ಶೇ.28.02, ಕನ್ನಡದಲ್ಲಿ ಶೇ.22.95, ಮಲಯಾಳಂ ಶೇ.21.56, ತಮಿಳು ಶೇ.18.20 ರಷ್ಟು ಥಿಯೇಟರ್ ಫುಲ್ ಆಗಿದೆ.

Salaar Box Office Collection Day 6: Prabhas Prashanth Neel movie reach Rs300 crore

6ನೇ ದಿನ 'ಸಲಾರ್' ಡಿಸೆಂಟ್ ಕಲೆಕ್ಷನ್ ಮಾಡಿದೆ ಅನ್ನೋದ ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ. 'ಸಲಾರ್' ಸಿನಿಮಾ ಸುಮಾರು 9521 ಶೋಗಳಿಂದ 7.64 ಲಕ್ಷ ಟಿಕೆಟ್‌ಗಳು ಮಲ್ಟಿಪ್ಲೆಕ್ಸ್ ಚೈನ್‌ಗಳು ಸೇಲ್ ಮಾಡಿವೆ. ಪಿವಿಆರ್ 1.16 ಲಕ್ಷ ಟಿಕೆಟ್ ಸೇಲ್ ಮಾಡಿದೆ. ಹಾಗೇ ಐನಾಕ್ಸ್, ಸಿನಿಪೊಲಿಸ್ 1 ಲಕ್ಷದ 54 ಸಾವಿರ ಟಿಕೆಟ್ ಸೇಲ್ ಆಗಿದೆ. ನಿನ್ನೆ ಮಾರಾಟ ಆದ 7.67 ಲಕ್ಷ ಟಿಕೆಟ್‌ಗಳಿಂದ ಸುಮಾರು 15 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ.

'ಸಲಾರ್' ಸಿನಿಮಾ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ, ಇದು 'ಉಗ್ರಂ' ಸಿನಿಮಾ ದುಬಾರಿ ರಿಮೇಕ್ ಅನ್ನೋ ಅಭಿಪ್ರಾಯವೂ ವ್ಯಕ್ತವಾಗಿತ್ತು. ಹೀಗಾಗಿ 'ಕೆಜಿಎಫ್‌' ರೇಂಜ್‌ನಲ್ಲಿ ಸಿನಿಮಾ ದರ್ಬಾರ್ ಮಾಡುತ್ತಿಲ್ಲ ಅನ್ನೋದು ಟ್ರೇಡ್ ಎಕ್ಸ್‌ಪರ್ಟ್‌ಗಳ ಅಭಿಪ್ರಾಯ. ಪ್ರಶಾಂತ್ ನೀಲ್ ನಿರ್ದೇಶಿಸಿರೋ ಈ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು, ಟಿನು ಆನಂದ್, ಶ್ರಿಯಾ ರೆಡ್ಡಿ ಮತ್ತು ಈಶ್ವರಿ ರಾವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ.

More from Filmibeat

English summary
Salaar Box Office Collection Day 6:Prabhas Prashanth Neel movie reach Rs 300 crore milestone in India:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X