ಮೊದಲ ದಿನವೇ 'ಡಂಕಿ'ಗಿಂತ 'ಸಲಾರ್' ದುಪ್ಪಟ್ಟು ಕಲೆಕ್ಷನ್: ಫಸ್ಟ್ ಡೇ ಕಲೆಕ್ಷನ್ ಲೆಕ್ಕಾಚಾರವೇನು?

ಪ್ರಭಾಸ್ ಅಭಿನಯದ ಬಹು ನಿರೀಕ್ಷಿಯ ಸಿನಿಮಾ 'ಸಲಾರ್' ಬಿಡುಗಡೆಯಾಗಿ ಕೆಲವೇ ಗಂಟೆಗಳಾಗಿದೆಯಷ್ಟೇ. ಅಷ್ಟರಲ್ಲೇ 'ಸಲಾರ್' ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದು ಅನ್ನೋ ಬಗ್ಗೆ ಟ್ರೇಡ್ ಎಕ್ಸ್‌ಪರ್ಟ್ಸ್ ಈಗಾಗಲೇ ಲೆಕ್ಕ ಹಾಕುವುದಕ್ಕೆ ಶುರು ಮಾಡಿದ್ದಾರೆ.

ಕೇವಲ ಭಾರತದಲ್ಲಷ್ಟೇ ಅಲ್ಲ. 'ಸಲಾರ್' ಸಿನಿಮಾ ಇಂದು (ಡಿಸೆಂಬರ್ 22) ವಿಶ್ವದಾದ್ಯಂತ ರಿಲೀಸ್ ಆಗಿದೆ. ಸಿನಿಮಾ ರಿಲೀಸ್‌ಗೂ ಮುನ್ನವೇ ಅಡ್ವಾನ್ಸ್ ಬುಕಿಂಗ್ ಮೂಲಕ ದೊಡ್ಡ ಮೊತ್ತವನ್ನು ಕಲೆ ಹಾಕಿದ್ದಾರೋ ಬಗ್ಗೆ ಟ್ರೇಡ್ ಎಕ್ಸ್‌ಪರ್ಟ್ಸ್ ಈಗಾಗಲೇ ಲೆಕ್ಕ ಕೊಟ್ಟಿದ್ದಾರೆ.

Salaar box office prediction day 1: Prabhas movie may collect double the amount of Dunki

ಈ ವರ್ಷದ(2023) ಕೊನೆಯಲ್ಲಿ ರಿಲೀಸ್ ಆಗುತ್ತಿರುವ ದಕ್ಷಿಣ ಭಾರತದ ಅತೀ ದೊಡ್ಡ ಆಕ್ಷನ್ ಸಿನಿಮಾ 'ಸಲಾರ್'. ಹೀಗಾಗಿ ಈ ಹಿಂದೆ ಪ್ರಶಾಂತ್ ನೀಲ್ ನಿರ್ದೇಶಿಸಿದ್ದ 'ಕೆಜಿಎಫ್' ಸಿನಿಮಾದಂತೆಯೇ ಇದು ಕೂಡ ಬಾಕ್ಸಾಫೀಸ್ ದೋಚಬಹುದು ಎಂದು ಅಂದಾಜು ಮಾಡಲಾಗಿದೆ. ಇದರ ಜೊತೆಗೇ ಶಾರುಖ್ ಖಾನ್ 'ಡಂಕಿ'ಗೆ 'ಸಲಾರ್' ಟಕ್ಕರ್ ಕೊಡುತ್ತಾ? 'ಡಂಕಿ'ಯ ಫಸ್ಟ್ ಡೇ ಕಲೆಕ್ಷನ್‌ಗೆ ಹೋಲಿಸಿದ್ರೆ, 'ಸಲಾರ್' ಗಳಿಕೆ ಹೇಗಿದೆ? ಅನ್ನೋದಕ್ಕೆ ಟ್ರೇಡ್ ಎಕ್ಸ್‌ಪರ್ಟ್ಸ್ ಲೆಕ್ಕ ಕೊಟ್ಟಿದ್ದಾರೆ.

'ಸಲಾರ್' ಮೊದಲ ದಿನ ಮಾಸ್ ಓಪನಿಂಗ್ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಸಿನಿಮಾ ಟ್ರೇಡ್ ರಿಪೋರ್ಟ್ ಮಾಡುವ Sacnilk ಪ್ರಕಾರ, ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಸಿನಿಮಾ 'ಸಲಾರ್' ಫಸ್ಟ್ ಡೇನೇ 95 ಕೋಟಿ ರುಪಾಯಿ ಕಲೆಕ್ಷನ್ ಮಾಡಬಹುದು ಎಂದು ಅಂದಾಜಿಸಲಾಗಿದೆ. 'ಸಲಾರ್' ತೆಲುಗು ಸೇರಿ, ಕನ್ನಡ, ತಮಿಳು, ಮಲಯಾಲಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡಗಡೆಯಾಗಿದೆ. ಈ ಎಲ್ಲಾ ಭಾಷೆಗಳಿಂದ 100 ಕೋಟಿ ರೂಪಾಯಿ ಹತ್ತಿರ ಕಲೆಕ್ಷನ್ ಮಾಡಲಿದೆ ಎಂದು ಹೇಳಲಾಗುತ್ತಿದೆ.

Salaar box office prediction day 1: Prabhas movie may collect double the amount of Dunki

ಪ್ರಭಾಸ್ ಸಿನಿಮಾ 'ಸಲಾರ್' ಕೇವಲ ಅಡ್ವಾನ್ಸ್ ಬುಕಿಂಗ್‌ನಿಂದಾನೇ ಸುಮಾರು 48.94 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದು, ದಾಖಲೆ ಬರೆದಿದೆ ಎಂದು ಹೇಳಲಾಗುತ್ತಿದೆ. ಅಡ್ವಾನ್ಸ್ ಕಲೆಕ್ಷನ್ ವಿಚಾರದಲ್ಲಿ 'ಸಲಾರ್' ಈಗಾಗಲೇ 'ಲಿಯೋ', 'ಜವಾನ್', 'ಅನಿಮಲ್' ಹಾಗೂ 'ಪಠಾಣ್' ಸಿನಿಮಾದ ಮೊದಲ ದಿನದ ಅಡ್ವಾನ್ಸ್ ಕಲೆಕ್ಷನ್ ದಾಖಲೆಯನ್ನು ಹಿಂದಿಕ್ಕಿದೆ.

ಅಡ್ವಾನ್ಸ್ ಬುಕಿಂಗ್‌ನಿಂದ ಬಂದ 48.94 ಕೋಟಿ ರೂಪಾಯಿಯಲ್ಲಿ ತೆಲುಗು ಬೆಲ್ಟ್‌ನಿಂದ 38 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದರೆ, ಹಿಂದಿಯಿಂದ 5.6 ಕೋಟಿ ರೂಪಾಯಿ, ಮಲಯಾಳಂನಿಂದ 2.2 ಕೋಟಿ ರೂಪಾಯಿ, ತಮಿಳಿನಿಂದ 1.8 ಕೋಟಿ ಹಾಗೂ ಕನ್ನಡದಿಂದ 56 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವರದಿಗಳಾಗಿವೆ.

ಇತ್ತ 'ಸಲಾರ್' ಬಿಡುಗಡೆಗೂ ಒಂದು ದಿನ ಮುನ್ನ ರಿಲೀಸ್ ಆಗಿರೋ 'ಡಂಕಿ' ಕೇವಲ 30 ಕೋಟಿ ಆಸುಪಾಸಿನಲ್ಲಿ ಕಲೆಕ್ಷನ್ ಆಗಿದೆ. ಈ ಮೂಲಕ 'ಡಂಕಿ'ಯ ಮೂರು ಪಟ್ಟು ಹಣವನ್ನು 'ಸಲಾರ್' ಮೊದಲ ದಿನವೇ ಕಲೆಕ್ಷನ್ ಮಾಡಲಿದೆ ಎಂದು ಲೆಕ್ಕಾಚಾರ ಹಾಕಿದ್ದಾರೆ. ಒಟ್ನಲ್ಲಿ 'ಸಲಾರ್'ಗೆ ಅಲ್ಲಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್‌ಗೆ ಯಾವುದೇ ತೊಂದರೆ ಇಲ್ಲ ಎನ್ನುತ್ತಿದ್ದಾರೆ ಟ್ರೇಡ್ ಎಕ್ಸ್‌ಪರ್ಟ್ಸ್..

More from Filmibeat

English summary
Prabhas Prashanth Neel movie Salaar box office prediction day 1
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X