ಮುಂಜಾನೆಯೇ 'ಸಲಾರ್' ಟೀಸರ್ ರಿಲೀಸ್: 'ಕೆಜಿಎಫ್ 2' ಕಡೆ ಬೊಟ್ಟು.. ಟೈಮ್‌ನಲ್ಲಿದೆ ಟ್ವಿಸ್ಟ್?

Salaar Teaser: ಪ್ರಭಾಸ್ ಪಾಲಿಗೆ 'ಆದಿಪುರುಷ್' ಮುಗಿದ ಅಧ್ಯಾಯ. ಈಗೇನಿದ್ದರೂ ಪ್ರಭಾಸ್‌ಗೆ 'ಸಲಾರ್' ಹಾಗೂ 'ಪ್ರಾಜೆಕ್ಟ್ ಕೆ' ಮೇಲಷ್ಟೇ ನಂಬಿಕೆ ಉಳಿದುಕೊಂಡಿದೆ. ಅದರಲ್ಲೂ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿರೋ ಪ್ರಭಾಸ್‌ಗೆ ಒಂದು ಮೆಗಾ ಹಿಟ್ ಬೇಕಿದೆ. ಸದ್ಯ ಪ್ರಭಾಸ್ ಮುಂದಿರೋದು ಒಂದು 'ಸಲಾರ್'. ಇನ್ನೊಂದು 'ಪ್ರಾಜೆಕ್ಟ್ ಕೆ'. ಎರಡೂ ಬಿಗ್ ಬಜೆಟ್ ಸಿನಿಮಾಗಳೇ. ಆದರೆ, 'ಸಲಾರ್' ಮೊದಲು ರಿಲೀಸ್ ಆಗುತ್ತಿರೋದ್ರಿಂದ ಎಲ್ಲರ ನಿರೀಕ್ಷೆ ಅದರ ಮೇಲಿದೆ.

ಸದ್ಯ ಪ್ರಭಾಸ್ ಅಭಿಮಾನಿಗಳಿಗೆ ಖುಷಿ ವಿಷಯ ಏನಂದ್ರೆ.. ಜುಲೈ 6ರ ಬೆಳಗ್ಗೆ 5.12ಕ್ಕೆ 'ಸಲಾರ್' ಟೀಸರ್ ರಿಲೀಸ್ ಆಗುತ್ತಿದೆ. ಅಷ್ಟಕ್ಕೂ ಮುಂಜಾನೆ ಟೀಸರ್ ರಿಲೀಸ್ ಮಾಡುತ್ತಿರೋದೇಕೆ? ಅನ್ನೋದೇ ಗೊಂದಲದ ನಡುವೆ ನೆಟ್ಟಿಗರು ಕಾರಣ ಕಂಡುಕೊಂಡಿದ್ದಾರೆ. ಅದಕ್ಕೆ ಕೆಜಿಎಫ್ 2 ಕಾರಣ ಎಂದು ಊಹೆ ಮಾಡಿದ್ದಾರೆ. ಅಸಲಿಗೆ ಮ್ಯಾಟರ್ ಏನು? ಅಂತ ತಿಳಿಯಲು ಮುಂದೆ ಓದಿ.

Salaar Teaser Release Time

'ಸಲಾರ್' ಹೈ ವೋಲ್ಟೇಜ್ ಟೀಸರ್

'ಕೆಜಿಎಫ್ 2' ಬಳಿಕ ಪ್ರಶಾಂತ್ ನೀಲ್ ನಿರ್ದೇಶಕನದ ಮೆಗಾ ಸಿನಿಮಾ 'ಸಲಾರ್'. ಸಿನಿಮಾ ಆರಂಭ ಮಾಡುವಾಗಲೇ ಪ್ರಭಾಸ್ ಪಾತ್ರವನ್ನು ಪರಿಚಯಿಸಿದ ರೀತಿಯೇ ಪವರ್‌ಫುಲ್ ಆಗಿತ್ತು. ಈಗ ಆ ಪಾತ್ರವನ್ನು ತೋರಿಸುವ ಸಮಯ ಬಂದೇ ಬಿಟ್ಟಿದೆ. ಹೊಂಬಾಳೆ ಫಿಲ್ಮ್ಸ್ 'ಸಲಾರ್' ಟೀಸರ್ ರಿಲೀಸ್ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಪ್ರಭಾಸ್ ಲುಕ್, ಖದರ್‌ನ ಚಿಕ್ಕದೊಂದು ಝಲಕ್ ರಿವೀಲ್ ಆಗಲಿದೆ. ಪ್ರಶಾಂತ್ ನೀಲ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಅನ್ನು ಹೇಗೆ ಬಿಂಬಿಸಿರಬಹುದು ಅನ್ನೋದ ಗೊತ್ತಾಗುತ್ತೆ. ಆದರೆ, ನೆಟ್ಟಿಗರಿಗೆ ಟೀಸರ್‌ಗಿಂತ ಮುಂಜಾನೆ ಅದೂ, 5.12ಕ್ಕೆ ಟೀಸರ್ ರಿಲೀಸ್ ಮಾಡುತ್ತಿರೋದೇಕೆ? ಅಂತ ಹುಳ ಬಿಟ್ಟುಕೊಂಡಿದ್ದರು. ಕೊನೆಗೂ ಅವರಿಗೆ ಸಮಧಾನ ಕೊಡುವಂತಹ ಉತ್ತರ ಸಿಕ್ಕಿದೆ.

'ಸಲಾರ್' ಟೀಸರ್ ರಿಲೀಸ್ 'ಕೆಜಿಎಫ್ 2' ಲಿಂಕ್

'ಸಲಾರ್' ಟೀಸರ್ ಬೆಳ್ಳಂಬೆಳಗೆ 5.12ಕ್ಕೆ ಬಿಡುಗಡೆಯಾಗುತ್ತಿರುವುದಕ್ಕೂ, 'ಕೆಜಿಎಫ್ 2' ಸಿನಿಮಾದ ಕ್ಲೈಮ್ಯಾಕ್ಸ್‌ಗೂ ಲಿಂಕ್ ಇದೆ ಅಂತ ನೆಟ್ಟಿಗರೇ ಹೇಳುತ್ತಿದ್ದಾರೆ. ಹಾಗಂತ ಸುಮ್ಮನೆ ಹೇಳುತ್ತಿಲ್ಲ. ಅವರು ಸಾಕ್ಷಿ ಕೂಡ ಒದಗಿಸಿದ್ದಾರೆ. 'ಕೆಜಿಎಫ್ 2' ಕ್ಲೈಮ್ಯಾಕ್ಸ್‌ನಲ್ಲಿ ಶಿಪ್‌ನಲ್ಲಿ ಯಶ್ ಪ್ರಯಾಣ ಮಾಡುವಾಗ ಒಂದು ಗಡಿಯಾರದ ಸಮಯ 5.10 ಆಸುಪಾಸಿನಲ್ಲಿದೆ. ಹೀಗಾಗಿ 'ಸಲಾರ್‌' ಲಿಂಕ್ ಇದೆ ಎನ್ನುತ್ತಿದ್ದಾರೆ.

ಈ ಹಿಂದೆ ಕೂಡ 'ಸಲಾರ್' ಸಿನಿಮಾ 'ಕೆಜಿಎಫ್ 2' ಲಿಂಕ್ ಇದೆ ಎಂಬ ಸುದ್ದಿಗಳು ಹರಿದಾಡಿದ್ದವು. ಪ್ರಶಾಂತ್ ನೀಲ್ ಈ ಸಿನಿಮಾವನ್ನು 'ಕೆಜಿಎಫ್‌' ಲಿಂಕ್ ಮಾಡಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಈಗ ಮತ್ತೆ 'ಕೆಜಿಎಫ್ 2'ಗೆ ಲಿಂಕ್ ಮಾಡಲಾಗುತ್ತಿದೆ.

Salaar Teaser Release Time

ಕಾರಣ ಕೊಟ್ಟ ನಿರ್ಮಾಣ ಸಂಸ್ಥೆ

ಅಷ್ಟಕ್ಕೂ 'ಸಲಾರ್' ಸಿನಿಮಾದ ಟೀಸರ್ ಮುಂಜಾನೆಯೇ ಯಾಕೆ ರಿಲೀಸ್ ಆಗುತ್ತಿದೆ ಎನ್ನುವುದಕ್ಕೆ ನಿರ್ಮಾಣ ಸಂಸ್ಥೆ ಕಾರಣ ನೀಡಿದೆ. ಕೆಆರ್‌ಜಿ ಸಂಸ್ಥೆಯ ಕಾರ್ತಿಕ್ ಗೌಡ ಇದಕ್ಕೆ ಕಾರಣ ಏನು ಅನ್ನೋದನ್ನು ಹೇಳಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಆಗಲಿ, ಕೆಆರ್‌ಜಿ ಸ್ಟುಡಿಯೋ ಆಗಲಿ ಸಮಯವನ್ನು ತುಂಬಾನೇ ನಂಬುತ್ತಾರೆ. ಆ ಸಮಯದಲ್ಲಿಯೇ ಸಿನಿಮಾದ ಟೀಸರ್, ಟ್ರೈಲರ್ ಸೇರಿದಂತೆ ಸಿನಿಮಾವನ್ನೂ ಬಿಡುಗಡೆ ಮಾಡುತ್ತಾರೆ. ಈಗಲೂ ಅದೇ ಆಗಿದೆ.

More from Filmibeat

English summary
Prabhas fans link KGF 2's climax scene to Salaar teaser release timing, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X