Salaar Twitter Review: "ಸಿಂಪಲ್ ಇಂಗ್ಲಿಷ್.. ಗೊಂದಲ ಇಲ್ಲ".. ನೆಟ್ಟಿಗರು ಟೀಸಿಂಗ್ ಕಮೆಂಟ್!
ಇದೊಂದು ಕ್ಷಣಕ್ಕಾಗಿ ಪ್ರಭಾಸ್ ಅಭಿಮಾನಿಗಳು ಕಾದು ಕೂತಿದ್ದರು. 'ಸಲಾರ್' ಟೀಸರ್ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. 'ಆದಿಪುರುಷ್' ಹೀನಾಯ ಸೋಲು ಕಂಡ ಬಳಿಕ 'ಸಲಾರ್' ಮೇಲೆ ನಿರೀಕ್ಷೆ ಇಟ್ಟಿಕೊಂಡಿದ್ದರು. ಅದಕ್ಕೆ ತಕ್ಕಂತೆ ಈಗ ಬೆಳ್ಳಂಬೆಳಗ್ಗೆ 'ಸಲಾರ್' ಟೀಸರ್ ರಿಲೀಸ್ ಆಗಿದೆ.
'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್, ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು, 'ಕೆಜಿಎಫ್' ತಾಂತ್ರಿಕ ವರ್ಷ ಹಾಗೂ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಈ ಕಾಂಬಿನೇಷನ್‌ನಲ್ಲಿ ಸಿನಿಮಾ 'ಸಲಾರ್' ಸಹಜವಾಗಿಯೇ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದೆ.

'ಸಲಾರ್' ಟೀಸರ್ ರಿಲೀಸ್ ಟೈಮಿಂಗ್ ಅನೌನ್ಸ್ ಆದಲ್ಲಿಂದ 'ಕೆಜಿಎಫ್' ಜೊತೆನೇ ತಳುಕು ಹಾಕಿಕೊಳ್ಳುತ್ತಿದೆ. ಟೀಸರ್ ರಿಲೀಸ್ ಆದ್ಮೇಲೂ ಅದೇ ಹವಾ ಮುಂದುವರೆದಿದೆ. ಹಾಗಿದ್ದರೆ, ಟೀಸರ್ ನೋಡಿದ ನೆಟ್ಟಿಗರು ಏನಂತಾರೆ? ಸಿಂಪಲ್ ಇಂಗ್ಲಿಷ್.. ಗೊಂದಲ ಮಾಡಿಕೊಳ್ಳದೆ ಏನಂದಿದ್ದಾರೆ? ಅನ್ನೋದನ್ನು ನೋಡೋಣ.
ಸಲಾರ್ ಟೀಸರ್ ಮ್ಯಾಸಿವ್
ಸಲಾರ್ ಟೀಸರ್ ಅದ್ಭುತವಾಗಿದೆ. ನಿಜಕ್ಕೂ ಟೀಸರ್ ರೋಮಾಂಚನಗೊಳಿಸಿದೆ. ಇದನ್ನೇ ಅಲ್ಲವೇ ನಾವು ಪ್ರಭಾಸ್ ಅಲ್ಲಿ ನೋಡುವುದಕ್ಕೆ ಇಷ್ಟಪಟ್ಟಿದ್ದು. ಸೆಪ್ಟೆಂಬರ್ 28ಕ್ಕೆ ಕಾಯುತ್ತಿದ್ದೇವೆ. ಪ್ರಭಾಸ್ ಫ್ಯಾನ್ಸ್‌ಗೆ ಆಲ್ ದಿ ಬೆಸ್ಟ್" ಅಂತ ಕಮೆಂಟ್ ಮಾಡಿದ್ದಾರೆ.
"ಸಿಂಪಲ್ ಇಂಗ್ಲಿಷ್.. ಗೊಂದಲ ಇಲ್ಲ"
" ಸಿಂಪಲ್ ಇಂಗ್ಲಿಷ್.. ಗೊಂದಲ ಇಲ್ಲ. ಸಿಂಹ, ಚಿರತೆ, ಟೈಗರ್, ಎಲಿಫೆಂಟ್ ತುಂಬಾನೇ ಡೇಂಜರಸ್. ಆದರೆ, ಜುರಾಸಿಕ್ ಪಾರ್ಕ್‌ನಲ್ಲಿ ಅಲ್ಲ. ಯಾಕಂದ್ರೆ, ಆ ಪಾರ್ಟ್‌ನಲ್ಲಿ ರೆಬೆಲ್ ಇದ್ದಾನೆ." ಎಂದು ಸಲಾರ್ ಡೈಲಾಗ್ ಹೇಳಿ ಖುಷಿ ಪಟ್ಟಿದ್ದಾರೆ.
ಟೀಸರ್ ನೋಡಿ ನಿರಾಸೆಯಾಗಿದೆ
" ಸಲಾರ್ ಟೀಸರ್ ನಿರಾಸೆ ಮಾಡಿದೆ. ಇಂತಹ ದೊಡ್ಡ ಸಿನಿಮಾಗಳಲ್ಲಿ ಇಂತಹ ಅರ್ಥವಿಲ್ಲದ ಆಕ್ಷನ್ ಸೀನ್‌ಗಳನ್ನು ನೋಡಿ ಬೇಸರವಾಗಿದೆ" ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
'ಸಲಾರ್' ಟೀಸರ್ ಅದ್ಭುತ
" ಸಲಾರ್ ಟೀಸರ್ ಚಿಂದಿಯಾಗಿದೆ.. ಈ ವೀಕೆಂಡ್‌ನಲ್ಲಿ 'ಕೆಜಿಎಫ್ 2' ದಾಖಲೆಯನ್ನು ಹಿಂದಿಕ್ಕುತ್ತೆ" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಬೇಗ ಎದ್ದು ಕೆಲಸಕ್ಕೆ ಹೋಗಿ
"ಇದೆಂತಹ ಮಾಫಿಯಾ.. ವಿಕಿಪೀಡಿಯಾದಲ್ಲಿ ಈಗಾಗಲೇ ಮಿಶ್ರ ಪ್ರತಿಕ್ರಿಯೆ ಅಂತ ಕೊಟ್ಟಿದ್ದಾರೆ. ಬೇಗ ಎದ್ದು ಕೆಲಸಕ್ಕೆ ಹೋಗಿ" ಎಂದು ನೆಟ್ಟಿಗರೊಬ್ಬರು ಸಲಾರ್ ಟೀಸರ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ಬಂದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
'ಕೆಜಿಎಫ್' ಸಿನಿಮಾದ ರಿಮೇಕ್
ಬೆಳಗ್ಗೆಯಿಂದಲೇ ಸಲಾರ್ ಟೀಸರ್‌ನಲ್ಲಿ ಆಡ್ ಮಾಫಿಯಾ ಶುರುವಾಗಿದೆ. ಕೆಜಿಎಫ್ ಸೀನ್‌ಗಳು ಕಾಪಿ, ಕೆಜಿಎಫ್ ಬ್ಲ್ಯಾಕ್ ಥೀಮ್ ಕಾಪಿ, ಕೆಜಿಎಫ್ ಬಿಜಿಎಂ ಕಾಪಿ,ಕೆಜಿಎಫ್ ಇಂಗ್ಲಿಷ್ ಡೈಲಾಗ್ ಕಾಪಿ.. ಇದು ಕೆಜಿಎಫ್ ಸಿನಿಮಾ ರಿಮೇಕ್. ಯಶ್ ಇಂದ ಮಾತ್ರ ಸಲಾರ್ ಸಿನಿಮಾವನ್ನು ಕಾಪಾಡಲು ಸಾಧ್ಯ. ಇಲ್ಲದೆ ಹೋದರೇ ಇದು ಇನ್ನೊಂದು ದುರಂತರ ಗ್ಯಾರಂಟಿ" ಮತ್ತೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











