ತೆಲಂಗಾಣದಲ್ಲಿ 'ಸಲಾರ್' ಟಿಕೆಟ್ ದರ ಹೆಚ್ಚಳಕ್ಕೆ ವಿರೋಧ: ನೂತನ ಸಿಎಂಗೆ ಮನವಿ

' ಸಲಾರ್' ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಆಗಲೇ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್ ಸಿನಿಮಾಗೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚಾಗಿದೆ. ಯುಎಸ್‌ಎ, ಯುಕೆ ಸೇರಿದಂತೆ ಹಲವು ದೇಶಗಳಲ್ಲಿ ಅಡ್ವಾನ್ಸ್ ಬುಕಿಂಗ್‌ಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ.

ನಿನ್ನೆಯಷ್ಟೇ (ಡಿಸೆಂಬರ್ 13) 'ಸಲಾರ್' ಸಿನಿಮಾದ ಮೊದಲ ಸಾಂಗ್ ಅನ್ನು ರಿಲೀಸ್ ಮಾಡಲಾಗಿದೆ. ರವಿ ಬಸ್ರೂರು ನಿರ್ದೇಶನ ಮಾಡಿದ ಈ ಹಾಡು ಸಂಗೀತ ಪ್ರಿಯರಿಗೆ ಇಷ್ಟ ಆಗಿದೆ. ಇದಲ್ಲದೆ ಇನ್ನೂ ಒಂದು ಟ್ರೈಲರ್ ರಿಲೀಸ್ ಮಾಡುವುದಕ್ಕೆ ಚಿಂತಿಸಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

 Salaar ticket price issue Netti Kumar argues the ticket price of 120 rupees should stop in Telangana

ಇದೆಲ್ಲದರ ನಡುವೆ 'ಸಲಾರ್' ತಂಡ ತೆಲುಗು ರಾಜ್ಯಗಳಲ್ಲಿ ಟಿಕೆಟ್ ಬೆಲೆಯನ್ನು ಏರಿಕೆ ಮಾಡುವಂತೆ ಸರ್ಕಾರಗಳ ಮುಂದೆ ಬೇಡಿಕೆ ಇಟ್ಟಿತ್ತು. ಎರಡೂ ರಾಜ್ಯಗಳ ಮಲ್ಟಿಪ್ಲೆಕ್ಸ್‌ನಲ್ಲಿ 450 ರೂಪಾಯಿ ಟಿಕೆಟ್ ದರ ಹಾಗೂ ಸಿಂಗಲ್ ಸ್ಕ್ರೀನ್‌ನಲ್ಲಿ 250 ರೂಪಾಯಿ ಟಿಕೆಟ್ ದರವನ್ನು ನಿಗದಿ ಮಾಡುವಂತೆ ಮನವಿ ಮಾಡಿಕೊಡಲಾಗಿತ್ತು ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

'ಸಲಾರ್' ತಂಡ ಟಿಕೆಟ್ ಬೆಲೆ ಏರಿಕೆಗೆ ಮನವಿ ಮಾಡುತ್ತಿದ್ದಂತೆ, ಇತ್ತ ವಿವಾದ ಹುಟ್ಟಿಕೊಂಡಿದೆ. 'ಸಲಾರ್' ಟಿಕೆಟ್ ಬೆಲೆ ಏರಿಕೆಗೆ ತೆಲುಗಿನ ಸಣ್ಣ ನಿರ್ಮಾಪಕರ ಸಂಘ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಲ್ಟಿಪ್ಲೆಕ್ಸ್‌ನಲ್ಲಿ 450 ರೂಪಾಯಿಗೆ ಏರಿಕೆ ಮಾಡಿದರೆ, ಸಣ್ಣ ಸಿನಿಮಾಗಳ ಗತಿಯೇನು? ಎಂದು ಕಿಡಿಕಾರುತ್ತಿದ್ದಾರೆ. ಇದು ಸಣ್ಣ ಸಿನಿಮಾಗಳನ್ನು ನಾಶ ಮಾಡುತ್ತೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದೇ ವಿವಾದದ ಮಧ್ಯೆನೇ ಹಿಂದಿನ ಬಿಆರ್‌ಎಸ್ ಸರ್ಕಾರ ನೀಡಿದ್ದ 120 ಆದೇಶವನ್ನು ರದ್ದುಗೊಳಿಸಬೇಕು ಎಂದು ಸಣ್ಣ ನಿರ್ಮಾಪಕರ ಸಂಘ ತೆಲಂಗಾಣದ ಯುವ ಮುಖ್ಯಮಂತ್ರಿ ರೇವಂತ್ ರೆಡ್ಡಿಗೆ ಮನವಿ ಮಾಡಿಕೊಂಡಿದ್ದಾರೆ. ತೆಲಂಗಾಣದ ನೂತನ ಸಿಎಂ ಆಗಿ ರೇವಂತ್ ರೆಡ್ಡಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಹೊಸ ಸಮಸ್ಯೆ ಎದುರಾಗಿದೆ.

 Salaar ticket price issue Netti Kumar argues the ticket price of 120 rupees should stop in Telangana

ಟಿಕೆಟ್ ದರ ಏರಿಕೆ ವಿಚಾರವಾಗಿ ವಕೀಲ ಜಿ.ಎಲ್.ನರಸಿಂಹರಾವ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ, ನ್ಯಾಯಮೂರ್ತಿ ಎನ್.ತುಕಾರಂಜೆ ಟಿಕೆಟ್ ಬೆಲೆಯನ್ನು 120 ಆದೇಶವನ್ನು ನೀಡಿದ್ದರು. 75 ರೂಪಾಯಿ ಟಿಕೆಟ್ ದರವನ್ನು 120ಕ್ಕೆ ಮಾರ್ಪಡು ಮಾಡಿ ಅಂದಿನ ಸರ್ಕಾರ ನ್ಯಾಯಾಲಯದ ಗಮನಕ್ಕೆ ತಂದಿತ್ತು.

ಈಗ 'ಸಲಾರ್' ಟಿಕೆಟ್ ದರ ಏರಿಕೆ ವಿಚಾರ ಸಣ್ಣ ನಿರ್ಮಾಪಕರ ಸಂಘದ ಪರವಾಗಿ ನಟ್ಟಿ ಕುಮಾರ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ಚಿತ್ರರಂಗಕ್ಕೆ ಲಾಭ ಅಗಿದೆ. ಇಂದಿರಾ ಗಾಂಧಿ ಸರ್ಕಾರದ ವೇಳೆ ಲಾಭ ಬಂದಿತ್ತು. ಕಡಿಮೆ ದರದಲ್ಲಿ ಸಿನಿಮಾ ಮಾಡಿದರೆ, ಸಣ್ಣ ನಿರ್ಮಾಪಕರಿಗೆ ನಷ್ಟ ಆಗುತ್ತೆ. ಅದಕ್ಕೆ ಮಲ್ಟಿಪ್ಲೆಕ್ಸ್‌ನಲ್ಲಿ ಸಲಾರ್ ಸಿನಿಮಾ ಟಿಕೆಟ್ ದರ 200 ರೂಪಾಯಿ ಮೀರಬಾರದು. ಸಿಂಗಲ್ ಸ್ಕ್ರೀನ್‌ನಲ್ಲಿ 100 ರೂಪಾಯಿ ಮೀರಬಾರದು. 120 ರೂಪಾಯಿ ಆದೇಶವನ್ನು ರದ್ದು ಮಾಡಿ, 100 ರೂಪಾಯಿ ಮಾಡಬೇಕು ಎಂದು ಹೇಳಿದ್ದಾರೆ.

ಪ್ರಶಾಂತ್ ನೀಲ್, ಪ್ರಭಾಸ್ ಸಿನಿಮಾ 'ಸಲಾರ್' ಇದೇ ಡಿಸೆಂಬರ್ 22ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಕಳೆದ ಒಂದು ತಿಂಗಳಿನಿಂದ ಸಿನಿಮಾದ ಪ್ರಚಾರ ಆರಂಭ ಮಾಡಿದೆ. ಇನ್ನು ಎಂಟು ದಿನಗಳಲ್ಲಿ ಸಿನಿಮಾ ಪ್ರಿಯರಿಗೆ ಏನೆಲ್ಲಾ ಸರ್ಪ್ರೈಸ್ ಸಿಗುತ್ತೆ ಅನ್ನೋದನ್ನು ನೋಡಬೇಕಿದೆ.

More from Filmibeat

English summary
Salaar ticket price hike in telangana issue:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X