ಸಲ್ಮಾನ್ ಖಾನ್‌ಗೆ 'ಊ ಅಂಟಾವಾ..' ಸಾಂಗ್ ಇಷ್ಟವಂತೆ: ಸಮಂತಾ ರಿಯಾಕ್ಷನ್ ಏನು?

ವಿಚ್ಛೇದನದ ಬಳಿಕ ಸಮಂತಾ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಐಟಂ ಸಾಂಗ್ ಹಿಟ್ ಆಯ್ತು. ಬ್ಯಾಕ್ ಟು ಬ್ಯಾಕ್ ಸಿನಿಮಾ ಸಿಕ್ಕಿತು. ವೆಬ್ ಸಿರೀಸ್‌ಗಳಿಗೂ ಹುಡುಕಿಕೊಂಡು ಬಂದಿವೆ. ಆದರೆ ಇಷ್ಟರಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಗಮನ ಸೆಳೆದಿದ್ದು ಸಮಂತಾ ಹೆಜ್ಜೆ ಹಾಕಿದ ಐಟಂ ಸಾಂಗ್.

'ಪುಷ್ಪ' ಸಿನಿಮಾದಲ್ಲಿ ಹೆದರುತ್ತಲೇ "ಊ ಅಂಟಾವಾ ಮಾವ.. ಊಹುಂ ಅಂಟಾವಾ ಮಾವ.." ಹೆಜ್ಜೆ ಹಾಕಿದ್ದರು. ಹಾಡು ರಿಲೀಸ್ ಆಗುತ್ತಿದ್ದಂತೆ 'ಪುಷ್ಪ' ಸಮಂತಾನೇ ಸೂಪರ್ ಸ್ಟಾರ್ ಎನ್ನುವಂತೆ ಫೇಮಸ್ ಆಗಿದ್ದರು. ಈ ಹಾಡು ಭಾರತದಾದ್ಯಂತ ಭಾರೀ ಫೇಮಸ್ ಆಗಿತ್ತು.

'ಪುಷ್ಪ' ಬಂದಿದ್ದೂ ಆಯ್ತು. ಪ್ರೇಕ್ಷಕರು ಇಷ್ಟ ಪಟ್ಟಿದ್ದೂ ಆಗಿದೆ. ಈಗ್ಯಾಕೆ ಈ ಸಾಂಗ್ ಬಗ್ಗೆ ಹೇಳ್ತಿದ್ದರೆ ಅಂತ ಅನಿಸಿರಬಹುದು. ಅದಕ್ಕೆ ಕಾರಣ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್. ಕೆಲವು ಸಿನಿಮಾಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಆ ವಿಡಿಯೋ ನೋಡಿ ಸ್ವತ: ಸಮಂತಾನೇ ಥ್ರಿಲ್ ಆಗಿದ್ದಾರೆ.

ಸಂಚಲನ ಸೃಷ್ಟಿಸಿದ್ದ ಪುಷ್ಪ ಸಾಂಗ್

ಸಂಚಲನ ಸೃಷ್ಟಿಸಿದ್ದ ಪುಷ್ಪ ಸಾಂಗ್

'ಪುಷ್ಪ' ಸಿನಿಮಾದ 'ಊ ಅಂಟಾವಾ...' ಹಾಡು ಬಹಳಷ್ಟು ದಿನ ಸಂಗೀತ ಮನಸ್ಸಿನಲ್ಲಿ ಗುನುಗುತ್ತಲೇ ಇತ್ತು. ಯಾವುದೇ ಭಾಷೆಯಾಗಿದ್ದರೂ ಸಂಗೀತ ಪ್ರಿಯರು 'ಊ ಅಂಟಾವಾ ಅಂತ ಹಾಡುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ಸಮಂತಾ ಡ್ಯಾನ್ಸ್.. ದೇವಿಶ್ರೀ ಪ್ರಸಾದ್ ಟ್ಯೂನ್ ಎಲ್ಲವೂ ಸೇರಿ ಸೂಪರ್ ಡೂಪರ್ ಹಿಟ್ ಆಗಿತ್ತು. ಅಳುಕುತ್ತಲೇ ದುಬಾರಿ ಸಂಭಾವನೆ ಪಡೆದು ಹೆಜ್ಜೆ ಹಾಕಿದ್ದ ಈ ಸಾಂಗ್‌ಗೆ ಸಲ್ಮಾನ್ ಕೂಡ ಅಭಿಮಾನಿ. ಅದಕ್ಕೆ ಸಾಕ್ಷಿನೇ ಈ ವಿಡಿಯೋ.

ಸಲ್ಮಾನ್‌ಗೆ 'ಊ ಅಂಟಾವಾ' ಸಾಂಗ್ ಇಷ್ಟ

ಸಲ್ಮಾನ್‌ಗೆ 'ಊ ಅಂಟಾವಾ' ಸಾಂಗ್ ಇಷ್ಟ

ಐಫಾ ಅವಾರ್ಡ್ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್‌ಗೆ ನಿರೂಪಕಿಯೊಬ್ಬರು ಪ್ರಶ್ನೆ ಮಾಡಿದ್ದರು. ಕಳೆದ ವರ್ಷ ನಿಮಗೆ ಯಾವುದಾದರೂ ಸಿನಿಮಾ ಅಥವಾ ಹಾಡು ಇಷ್ಟ ಆಗಿದೆಯಾ? ಎಂದು ಕೇಳಿದ್ದರು. ಅದಕ್ಕೆ ಸಲ್ಮಾನ್ ಖಾನ್ ತಕ್ಷಣವೇ ಅಂಟಾವಾ ಮಾವ ಅಂತ ಹಾಡುತ್ತಾ ನಿರ್ಗಮಿಸುತ್ತಾರೆ. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ವೈರಲ್ ಆಗುತ್ತಿದೆ. ಸಲ್ಮಾನ್ ಖಾನ್ ವಿಡಿಯೋಗೆ ಸಮಂತಾ ಕೂಡ ರಿಯಾಕ್ಷನ್ ಕೊಟ್ಟಿದ್ದಾರೆ.

ಸಮಂತಾ ರಿಯಾಕ್ಷನ್ ಏನು?

ಟಾಲಿವುಡ್ ಬ್ಯೂಟಿ ಸಮಂತಾ ಈ ಹಾಡಿನಲ್ಲಿ ಸಖತ್ ಗ್ಲಾಮರಸ್‌ ಆಗಿ ಹೆಜ್ಜೆ ಹಾಕಿದ್ದರು. ಸಮಂತಾ ಡ್ಯಾನ್ಸ್‌ ನೋಡಿ ಥಿಯೇಟರ್‌ನಲ್ಲಿ ಬೇಜಾನ್ ಶಿಳ್ಳೆಗಳು ಬಿದ್ದಿದ್ದವು. ಈಗ ಬಾಲಿವುಡ್‌ ಬಾಕ್ಸಾಫೀಸ್ ಬಾದ್‌ಷಾ ಸಲ್ಮಾನ್ ಸ್ವತ: ಇಷ್ಟ ಪಟ್ಟಿದ್ದು ಕಂಡು ಸಮಂತಾ ಥ್ರಿಲ್ ಆಗಿದ್ದಾರೆ. ಅವರೇ ಸಲ್ಮಾನ್ ಖಾನ್ ಅಭಿಮಾನಿಗಳು ಹಂಚಿಕೊಂಡ ಈ ವಿಡಿಯೋ ನೋಡಿ ಫುಲ್ ಖುಷಿಯಾಗಿದ್ದು, ಹಾರ್ಟ್ ಎಮೋಜಿ ಹಾಕಿ ಸಂತಸ ವ್ಯಕ್ತಪಡಿಸಿದ್ದಾರೆ.

ಸಮಂತಾ ಫುಲ್ ಬ್ಯುಸಿ

ಸಮಂತಾ ಫುಲ್ ಬ್ಯುಸಿ

ಡಿವೋರ್ಸ್ ಬಳಿಕ ಸಮಂತಾ ಫುಲ್ ಬ್ಯುಸಿಯಾಗಿದ್ದಾರೆ. ವೆಬ್ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ 'ಶಾಕುಂತಲಂ' ಸಿನಿಮಾ ಬಿಡುಗಡೆ ಸಜ್ಜಾಗಿದೆ. ಇನ್ನೊಂದು ಕಡೆ 'ಯಶೋಧಾ' ಶೂಟಿಂಗ್ ನಡೆಯುತ್ತಿದೆ. ಬಾಲಿವುಡ್ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹಾಗೇ ಹಾಲಿವುಡ್ ಸಿನಿಮಾದಲ್ಲಿಯೂ ಸಮಂತಾ ನಟಿಸುತ್ತಿದ್ದಾರೆ.

More from Filmibeat

English summary
Salman Khan Like Oo Antava Song From The Film Pushpa Samantha Thrilled, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X