ಜಲಪಾತದ ಮುಂದೆ ನಿಂತು ಜೀವನದ ಬಗ್ಗೆ ಪಾಠ ಮಾಡಿದ ಸಮಂತಾ: 'ಶಾಕುಂತಲಂ' ಫಸ್ಟ್‌ಲುಕ್ ಕಥೆಯೇನು?

2021 ಈ ವರ್ಷವನ್ನು ಸಮಂತಾ ಜೀವನದುದ್ದಕ್ಕೂ ಮರೆಯಲು ಸಾಧ್ಯವೇ ಇಲ್ಲ. ಆಕೆಯ ಜೀವನದಲ್ಲಿ ಅತೀ ಕಹಿ ಘಟನೆಯನ್ನು ಹೇಗೆ ಮರೆಯಲು ಸಾಧ್ಯ? ಪತಿ ನಾಗಚೈತನ್ಯರಿಂದ ದೂರವಾದ ಬಳಿಕ ಸಮಂತಾ ಹೊಸ ಜೀವನದೆಡೆಗೆ ಮುಖ ಮಾಡುತ್ತಿದ್ದಾರೆ. ವಿಚ್ಛೇದನದ ನೋವಿನಿಂದ ಹೊರಬರಲು ಪ್ರವಾಸಗಳನ್ನು ಕೈ ಗೊಳ್ಳುತ್ತಿದ್ದಾರೆ. ಆಗಾಗ ಆಧ್ಯಾತ್ಮದಿಂದ ಪ್ರೇರಣೆ ಹೊಂದಿದಂತೆ ಹೇಳಿಕೆಗಳನ್ನೂ ನೀಡುತ್ತಿದ್ದಾರೆ. ಈಗ ಜಲಪಾತ ಮುಂದೆ ನಿಂತು ಬದುಕಿನ ಬಗ್ಗೆ ಮಾತಾಡಿದ್ದಾರೆ.

ಸಮಂತಾ-ನಾಗಚೈತನ್ಯ ಇಬ್ಬರೂ ಬೇರೆಯಾಗಿದ್ದು ಯಾಕೆ ಎಂಬುದನ್ನು ಇಂದಿಗೂ ಬಹಿರಂಗ ಪಡಿಸಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಒಂದಿಷ್ಟು ಊಹಾಪೋಹಗಳು ಹರಿದಾಡಿದ್ದು ಬಿಟ್ಟರೆ, ಅಸಲಿ ಕಾರಣವೇನು ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಆದರೆ, ನಾಗಚೈತನ್ಯ ಅಭಿಮಾನಿಗಳು ಮಾತ್ರ ಇದು ಸಮಂತಾಳದ್ದೇ ತಪ್ಪು ಎನ್ನುವಂತೆ ಮಾತಾಡುತ್ತಿದ್ದಾರೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸಮಂತಾ ಹೊಸ ಬದುಕನ್ನು ಆರಂಭಿಸಿದ್ದಾರೆ. ಸದ್ಯ ಕೇರಳದ ಫಾಲ್ಸ್ ಮುಂದೆ ಬದುಕಿಗೆ ಹೊಸ ವ್ಯಾಖ್ಯಾವನ್ನು ನೀಡಿದ್ದಾರೆ.

ಜಲಪಾತದ ಮುಂದೆ ಸಮಂತಾಗೆ ಜ್ಞಾನೋದಯ

ಜಲಪಾತದ ಮುಂದೆ ಸಮಂತಾಗೆ ಜ್ಞಾನೋದಯ

ವಿಚ್ಚೇದನದ ಬಳಿಕ ಸಮಂತಾ ಹಳೇ ಸಮಂತಾಳಾಗಿ ಉಳಿದಿಲ್ಲ. ನೋವಿನಲ್ಲಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿಲ್ಲ. ಬದುಕು ನಿಂತ ನೀರಿನಂತಾಗಬಾರದೆಂದು ತನ್ನನ್ನು ತಾನು ಬ್ಯುಸಿಯಾಗಿರಿಸಿಕೊಂಡಿದ್ದಾರೆ. ಹಳೆ ನೆನಪುಗಳನ್ನು ಮರೆಯಲು ಸಮಂತಾ ಹೊಸ ಜಾಗಗಳನ್ನು ಹುಡುಕಿಕೊಂಡು ಹೊರಟ್ಟಿದ್ದಾರೆ. ಸದ್ಯ ಸಮಂತಾ ಕೇರಳದ ಆದಿರಪ್ಪಳ್ಳಿ ಜಲಪಾತಕ್ಕೆ ಭೇಟಿ ನೀಡಿದ್ದಾರೆ. ಇದೇ ಜಲಪಾತದ ಮುಂದೆ ಕುಳಿತು "ಜೀವನ.. ಅನುಭವಿಸು ಅಥವಾ ಸಹಿಸಿಕೊ, ಏರು ಹಾಗೂ ಇಳಿತದಂತೆ ಅದು ಬಂದು ಹೋಗುತ್ತದೆ." ಎಂದು ಫೋಟೊಗಳಿಗೆ ಸಮಂತಾ ಬರೆದುಕೊಂಡಿದ್ದಾರೆ.

ಕೆಂಪು ದಿರಿಸಿನಲ್ಲಿ ಮಿಂಚಿದ ಸಮಂತಾ

ನಟಿ ಸಮಂತಾ ತನ್ನ ಟ್ರಾವೆಲ್ ಡೈರಿಯಿಂದ ಎರಡು ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕೇರಳದ ಆದಿರಪ್ಪಳ್ಳಿ ಜಲಪಾತದ ಮುಂದೆ ನಿಂತಿರುವ ಫೋಟೊ ಹಾಗೂ ಕಾಲ್ಲು ಬಂಡೆ ಮೇಲೆ ಕುಳಿತ ಮತ್ತೊಂದು ಫೋಟೊವನ್ನು ಹಂಚಿಕೊಂಡಿದ್ದಾರೆ. ಕೆಂಪು ದಿರಿಸಿನಲ್ಲಿ ಜಲಪಾತಕ್ಕೆ ಮುಖಮಾಡಿರುವ ಸಮಂತಾ ಫೋಟೊಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿವೆ. ಅಲ್ಲದೆ ಈ ಎರಡೂ ಫೋಟೊಗಳೂ ಸಿಕ್ಕಾಪಟ್ಟೆ​ ವೈರಲ್​ ಆಗುತ್ತಿವೆ. ಸಮಂತಾ ಅಭಿಮಾನಿಗಳೂ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.

ಸ್ಯಾಮ್ ಫ್ಯಾನ್ಸ್‌ಗೆ ಮತ್ತೊಂದು ಖುಷಿ

ವಿಚ್ಛೇದನಕ್ಕೂ ಮುನ್ನವೇ ಸಮಂತಾ 'ಶಾಕುಂತಲಂ' ಸಿನಿಮಾದಲ್ಲಿ ನಟಿಸುತ್ತಿದ್ದರು. ಆದರೆ ಈ ಸಿನಿಮಾ ಮುಗಿಯುವುದರೊಳಗೆ ವಿಚ್ಚೇದನ ಪಡೆಯುವ ಬಗ್ಗೆ ನಿರ್ಧಾರ ಮಾಡಿದ್ದರು. ಈಗ 'ಶಾಕುಂತಲಂ' ಸಿನಿಮಾ ಪೂರ್ಣಗೊಂಡಿದ್ದು ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ ನಾಳೆ (ಫೆ.21) ಶಾಕುಂತಲಂ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲು ಮುಂದಾಗಿದೆ. ಬೆಳಗ್ಗೆ ಸರಿಯಾಗಿ 9.30ಕ್ಕೆ ಸಮಂತಾ ಅಭಿಮಾನಿಗಳಿಗಾಗಿ 'ಶಾಕುಂತಲಂ' ಫಸ್ಟ್ ಲುಕ್ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ.

ಶಾಕುಂತಲಂ ಕಥೆಯೇನು?

ಶಾಕುಂತಲಂ ಕಥೆಯೇನು?

'ಶಾಕುಂತಲಂ' ಸಿನಿಮಾ ಒಂದು ಪೌರಾಣಿಕ ಸಿನಿಮಾ. ಇದು ರಾಜ ದುಶ್ಯಂತ ಹಾಗೂ ಶಾಕುಂತಲಾ ಅವರ ಕಥೆಯನ್ನು ತೆರೆಮೇಲೆ ತರಲಾಗಿದೆ. ದೇವ್ ಮೋಹನ್ ಎಂಬುವವರು ರಾಜ ದುಶ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಶಾಕುಂತಲಾ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ನೀಲಿಮಾ ಗುನಾ ನಿರ್ಮಾಣ ಮಾಡಿದ್ದಾರೆ, ಗುಣಶೇಖರ್ ಈ ಪೌರಾಣಿಕ ಚಿತ್ರ ನಿರ್ದೇಶಕರು. ಅಲ್ಲು ಅರ್ಜುನ್ ಪುತ್ರಿ ಅರ್ಹ ಈ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದು, ಭರತನ ಪಾತ್ರದಲ್ಲಿ ನಟಿಸಿದ್ದಾಳೆ.

More from Filmibeat

English summary
Samantha about life as she shares glimpse of her Athirappilly Falls. She says Life...You enjoy it or endure it as it comes and goes ,as it ebbs and flows. Feb 21st Samantha new movie Shakunthalam First look will be released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X