Just In
Don't Miss!
- News
ಗಡಿಯಲ್ಲಿ ಮತ್ತೆ ಶಿವಸೇನೆ ಪುಂಡಾಟ; ಕರ್ನಾಟಕ ಪ್ರವೇಶ ಯತ್ನ ವಿಫಲ
- Automobiles
ಐಷಾರಾಮಿ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತ ಪೊಲೀಸ್ ಕಾನ್ಸ್ಟೆಬಲ್ಗಳು
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈಯ್ನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಾಲ್ಕನೆಯ ಬಾರಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ ನಿಜ ಜೀವನದ ಜೋಡಿ
ನಿಜ ಜೀವನದ ಸಂಗಾತಿಗಳಾದ ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ತೆಲುಗು ಚಿತ್ರರಂಗದ ಚೆಂದದ ಜೋಡಿಗಳಲ್ಲಿ ಒಂದು. ತೆರೆ ಮೇಲೆ ಮತ್ತು ತೆರೆಯ ಹಿಂದೆ ಈ ಇಬ್ಬರೂ ತಮ್ಮ ನಡುವಿನ ಅದ್ಭುತ ಕೆಮಿಸ್ಟ್ರಿ ಮೂಲಕ ಗಮನ ಸೆಳೆದಿದ್ದಾರೆ.
'ಯೇ ಮಾಯಾ ಚೇಸುವೆ', 'ಆಟೋನಗರ್ ಸೂರ್ಯ' ಮತ್ತು 'ಮಜಿಲಿ'- ಹೀಗೆ ಮೂರು ಚಿತ್ರಗಳಲ್ಲಿ ಇಬ್ಬರೂ ಜತೆಯಾಗಿ ನಟಿಸಿದ್ದರು. ಈಗ ಮತ್ತೊಮ್ಮೆ ಇಬ್ಬರೂ ತೆರೆಯ ಮೇಲೆ ಜತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. 'ಓಹ್! ಬೇಬಿ' ಚಿತ್ರ ಖ್ಯಾತಿಯ ನಂದಿನಿ ರೆಡ್ಡಿ ಅವರ ನಿರ್ದೇಶನದ ಚಿತ್ರದಲ್ಲಿ ನಾಗಚೈತನ್ಯ ಮತ್ತು ಸಮಂತಾ ತೆರೆ ಹಂಚಿಕೊಳ್ಳಲಿದ್ದಾರೆ. ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಹೊರಬೇಕಿದೆ. ಇದು ನಿಜವಾದರೆ ಹಿರಿ ತೆರೆಯ ಮೇಲೆ ಈ ಮುದ್ದಾದ ಜೋಡಿ ಅಭಿಮಾನಿಗಳಿಗೆ ರಸದೌತಣ ನೀಡಲಿದೆ. ಮುಂದೆ ಓದಿ..
ಸೊಸೆ ಸಮಂತಾಗೆ ಮಾವ ನಾಗಾರ್ಜುನ ನೀಡಿದ ಉಡುಗೊರೆ ಇದೆ

ಕೊರಿಯನ್ ರೀಮೇಕ್
ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರ ಎಮೋಷನಲ್ ಡ್ರಾಮಾ ಕಥೆಯನ್ನು ಹೊಂದಿದೆ. ಇದು ಕೊರಿಯನ್ ಚಿತ್ರವೊಂದರ ರೀಮೇಕ್ ಎಂದು ಹೇಳಲಾಗಿದೆ. ಸಮಂತಾ ನಟಿಸಿದ್ದ ನಂದಿನಿ ಅವರ ಹಿಂದಿನ ಚಿತ್ರ, 'ಓಹ್! ಬೇಬಿ' ಕೂಡ ದಕ್ಷಿಣ ಕೊರಿಯಾದ 'ಮಿಸ್ ಗ್ರ್ಯಾನಿ' ಚಿತ್ರದ ರೀಮೇಕ್ ಆಗಿತ್ತು.

ನಂದಿನಿ ನನ್ನ ಅಕ್ಕನ ಹಾಗೆ
ಸಮಂತಾ ಮತ್ತು ನಂದಿನಿ ರೆಡ್ಡಿ ಅವರ ನಡುವೆ ವೃತ್ತಿ ಹಾಗೂ ವೈಯಕ್ತಿಕವಾಗಿ ಉತ್ತಮ ಬಾಂಧವ್ಯವಿದೆ. 'ನಂದಿನಿ ನನ್ನ ಅಕ್ಕ ಇದ್ದಂತೆ. ಅವರನ್ನು ಸಂಪೂರ್ಣವಾಗಿ ನಂಬಿದ್ದೇನೆ. ಆ ನಂಬಿಕೆಯೇ ನನ್ನ ಅಭಿನಯದಲ್ಲಿ ಕಾಣಿಸಲಿದೆ. ಈ ಸಿನಿಮಾ ಮಾಡುತ್ತಿರುವುದಕ್ಕೆ ಆಕೆಯ ಬಗ್ಗೆ ಹೆಮ್ಮೆ ಇದೆ' ಎಂದು 'ಓಹ್! ಬೇಬಿ' ಚಿತ್ರದ ವೇಳೆ ಸಮಂತಾ ಹೇಳಿದ್ದರು.

ಬಿಡುಗಡೆಯಾಗಬೇಕಿರುವ ಸಿನಿಮಾ
ವಿಘ್ನೇಶ್ ಶಿವನ್ ನಿರ್ದೇಶನದ 'ಕಾದುವಾಕುಲಾ ರೆಂಡು ಕಾದಲ್' ಚಿತ್ರದಲ್ಲಿ ಸಮಂತಾ, ನಯನತಾರಾ ಜತೆಗೆ ನಟಿಸಿದ್ದಾರೆ. ವಿಜಯ್ ಸೇತುಪತಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಈ ಚಿತ್ರ ಲಾಕ್ ಡೌನ್ ಅವಧಿ ಮುಗಿದ ಬಳಿಕ ಬಿಡುಗಡೆಯಾಗುವ ಸಾಧ್ಯತೆ ಇದೆ.
'ಬೆಂಗಳೂರು ನಾಗರತ್ನಮ್ಮ' ಬಯೋಪಿಕ್: ಅನುಷ್ಕಾ ಶೆಟ್ಟಿ ಮತ್ತು ಸಮಂತಾ ನಡುವೆ ಪೈಪೋಟಿ

ಸಮಂತಾ ತಾಯಿಯಾಗುತ್ತಿದ್ದಾರಾ?
ಈ ಬಗ್ಗೆ ಅಕ್ಕಿನೇನಿ ಕುಟುಂಬದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಸಮಂತಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅವರು ಗರ್ಭಿಣಿಯಾಗಿದ್ದಾರೆ. ಹೀಗಾಗಿ ಚಿತ್ರರಂಗದಿಂದ ಸದ್ಯಕ್ಕೆ ದೂರವಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದರ ಬಗ್ಗೆ ಕೂಡ ಕುಟುಂಬ ಯಾವುದೇ ಮಾಹಿತಿ ನೀಡಿಲ್ಲ.