ವರ್ಷದ ಹಿಂದೆ ಮಾಡಿದ ತಪ್ಪಿಗೆ ನಿರ್ದೇಶಕಿಯ ಕ್ಷಮೆ ಕೋರಿದ ಸಮಂತಾ
ಸಮಂತಾ ಅಕ್ಕಿನೇನಿ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಅಂದಹಾಗೆ, ಅದು ವಿವಾಹ ವಾರ್ಷಿಕೋತ್ಸವದ್ದಲ್ಲ. ಅವರ ಹಿಟ್ ಚಿತ್ರ 'ಓಹ್! ಬೇಬಿ' ಬಿಡುಗಡೆಯಾಗಿ ಜುಲೈ 5ಕ್ಕೆ ಒಂದು ವರ್ಷ. ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರದ ವಾರ್ಷಿಕೋತ್ಸವದ ನೆಪದಲ್ಲಿ ಸಮಂತಾ ಭಾವುಕ ಬರಹವೊಂದನ್ನು ಹಂಚಿಕೊಂಡಿದ್ದಾರೆ.
Recommended Video
ಓಹ್! ಬೇಬಿ ಚಿತ್ರವು 2019ರ ಜುಲೈ 5ರಂದು ಬಿಡುಗಡೆಯಾಗಿತ್ತು. ಸಮಂತಾ ಮುಖ್ಯ ಪಾತ್ರದಲ್ಲಿದ್ದ ನಾಯಕಿ ಪ್ರಧಾನ ಚಿತ್ರ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿತ್ತು. ಒಳ್ಳೆಯ ವಿಮರ್ಶೆ ಕೂಡ ಸಿಕ್ಕಿತ್ತು. ಬಳಿಕ ಇದು ಹಿಂದಿಯಲ್ಲಿ ರೀಮೇಕ್ ಆಗಿತ್ತು. ಆದರೆ, ಈ ಚಿತ್ರದ ಬಿಡುಗಡೆಯ ಹಿಂದಿನ ದಿನವಷ್ಟೇ ನಿರ್ದೇಶಕಿ ನಂದಿನಿ ರೆಡ್ಡಿ ತಮ್ಮನ್ನು ಸಾಮಾಜಿಕ ಜಾಲತಾಣದಲ್ಲಿ ಅನ್‌ಫ್ರೆಂಡ್ ಮಾಡಿದ್ದರು ಎಂಬ ಸಂಗತಿಯನ್ನು ಸಮಂತಾ ಬಹಿರಂಗಪಡಿಸಿದ್ದಾರೆ.
ಇಬ್ಬರೂ ಜತೆಯಾಗಿ ಮತ್ತೊಂದು ಸಿನಿಮಾಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಸುದ್ದಿಯ ನಡುವೆ ಇವರ ನಡುವೆ ಜಗಳ ನಡೆದಿತ್ತೇ ಎಂಬ ಸಂದೇಹ ಮೂಡಬಹುದು. ಆದರೆ ನಂದಿನಿ ರೆಡ್ಡಿ ಹಾಗೆ ಮಾಡಲು ಕಾರಣವೇನು ಎಂಬುದನ್ನು ಸಮಂತಾ ವಿವರಿಸಿದ್ದಾರೆ. ಮುಂದೆ ಓದಿ...

ನಂದಿನಿಗೆ ಕ್ಷಮೆ
ಕಳೆದ ವರ್ಷ ಇದೇ ದಿನ ನಾನು ಬಹಳ ನರ್ವಸ್ ಆಗಿದ್ದೆ. ಇಂದು ನಾನು ಎಂಜಾಯ್ ಮಾಡುತ್ತಿರುವಂತೆ 2019ರ ಜುಲೈ 5ರಂದು ಕೂಡ ಎಂಜಾಯ್ ಮಾಡಬೇಕಾಗಿತ್ತು. ಸಾರಿ ನಂದಿನಿ ರೆಡ್ಡಿ ಎಂದು ತಮ್ಮ ನಿರ್ದೇಶಕಿಯ ಕ್ಷಮೆ ಕೋರಿದ್ದಾರೆ.

ಅನ್‌ಫ್ರೆಂಡ್ ಮಾಡಿದ್ದ ನಂದಿನಿ
'ಓಹ್! ಬೇಬಿ' ಚಿತ್ರದ ಬಿಡುಗಡೆ ಹಿಂದಿನ ದಿನ ಜನರು ಚಿತ್ರದ ಕುರಿತು ಆಡುವ ನೆಗೆಟಿವ್ ಮಾತುಗಳನ್ನೆಲ್ಲ ಕಂಡು ಸಮಂತಾ ಕುಗ್ಗಿದ್ದರಂತೆ. ಅಷ್ಟೇ ಅಲ್ಲ, ಹಾಗೆ ಕಂಡ ವಿಚಾರಗಳನ್ನೆಲ್ಲ ನಿರ್ದೇಶಕಿ ನಂದಿನಿ ರೆಡ್ಡಿ ಅವರಿಗೂ ಕಳುಹಿಸುತ್ತಿದ್ದರಂತೆ. ಇದರಿಂದ ಕೋಪಗೊಂಡ ನಂದಿನಿ ಅವರನ್ನು ಅನ್‌ಫ್ರೆಂಡ್ ಮಾಡಿದ್ದರಂತೆ.

ಮತ್ತೆ ಫ್ರೆಂಡ್ ಮಾಡಿಕೊಂಡಿರಿ
'ಅಂದು ನನಗೆ ಹುಚ್ಚು ಹಿಡಿದಿತ್ತು. ಆ ದಿನ ನನ್ನನ್ನು ನೀವು ಅನ್‌ಫ್ರೆಂಡ್ ಮಾಡಿದ್ದು ಒಳ್ಳೆಯದೇ ಆಯ್ತು. ಮದು ದಿನವೇ ನನ್ನನ್ನು ಮತ್ತೆ ಫ್ರೆಂಡ್ ಮಾಡಿಕೊಂಡಿರಿ' ಎಂದು ಸಮಂತಾ, ಒಂದು ವರ್ಷ ಹಿಂದೆ ನಡೆದಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಕೊರಿಯನ್ ಚಿತ್ರ
'ಓಹ್! ಬೇಬಿ' ಚಿತ್ರದಲ್ಲಿ ನಟಿಸಿದ್ದು ನನ್ನ ಹೆಮ್ಮೆಯ ಸಂಗತಿ ಎಂದಿರುವ ಸಮಂತಾ, ನಂದಿನಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಓಹ್ ಬೇಬಿ ಚಿತ್ರವು ದಕ್ಷಿಣ ಕೊರಿಯಾದ ಕಾಮಿಡಿ ಚಿತ್ರ 'ಮಿಸ್ ಗ್ರ್ಯಾನಿ'ಯ ತೆಲುಗು ರೀಮೇಕ್ ಆಗಿದೆ.


Click it and Unblock the Notifications











