ಸಮಂತಾ ಆಪ್ತ ಸ್ನೇಹಿತೆ ಶಿಲ್ಪಾ ರೆಡ್ಡಿಗೆ ಕೊರೊನಾ ವೈರಸ್ ಪಾಸಿಟಿವ್: ಅಭಿಮಾನಿಗಳಲ್ಲಿ ಆತಂಕ

ನಟಿ ಸಮಂತಾ ಅಕ್ಕಿನೇನಿ ಹಾಗೂ ಮಾಡೆಲ್-ಫ್ಯಾಷನ್ ವಿನ್ಯಾಸಕಿ ಶಿಲ್ಪಾ ರೆಡ್ಡಿ ಇಬ್ಬರೂ ಆತ್ಮೀಯ ಸ್ನೇಹಿತೆಯರು. ಸಮಯ ಸಿಕ್ಕಾಗೆಲ್ಲಾ ಜತೆ ಸೇರಿ ಹರಟುವ ಅವಕಾಶವನ್ನು ಅವರು ಮಿಸ್ ಮಾಡಿಕೊಳ್ಳುವುದಿಲ್ಲ. ಆದರೆ ಲಾಕ್ ಡೌನ್ ಕಾರಣದಿಂದ ಅವರ ಭೇಟಿ ಸಾಧ್ಯವಾಗಿರಲಿಲ್ಲ.

Recommended Video

ಸುಶಾಂತ್ ಸಿಂಗ್ ಲವ್ವರ್ ವಿರುದ್ಧ ದಾಖಲಾಯಿತು ಕೇಸ್ | Complaint against Sushant singh Ex girlfriend Rhea

ಈ ನಡುವೆ ತಮ್ಮಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದೆ ಎಂಬ ವಿಚಾರವನ್ನು ಶಿಲ್ಪಾ ರೆಡ್ಡಿ ಬಹಿರಂಗಪಡಿಸಿದ್ದಾರೆ. ಫ್ಯಾಷನ್ ಲೋಕದಲ್ಲಿ ಖ್ಯಾತನಾಮರಲ್ಲಿ ಒಬ್ಬರಾದ ಶಿಲ್ಪಾ ರೆಡ್ಡಿ, ಫಿಟ್ನೆಸ್ ಹಾಗೂ ಆರೋಗ್ಯದ ವಿಚಾರವಾಗಿ ಹೆಚ್ಚು ಗಮನ ಹರಿಸುವವರು. ಅದರ ಕುರಿತು ಜನರಿಗೆ ಮಾಹಿತಿ ನೀಡಲೆಂದೇ ಅವರು ಬ್ಲಾಗ್‌ಒಂದನ್ನು ಬರೆಯುತ್ತಿದ್ದಾರೆ. ಅದರಲ್ಲಿ ದೇಹದ ಫಿಟ್ನೆಸ್ ಹೇಗೆ ಕಾಪಾಡಿಕೊಳ್ಳಬೇಕು, ಆರೋಗ್ಯಯುತವಾಗಿರಲು ಯಾವ ರೀತಿ ಆಹಾರ ಸೇವನೆ, ವ್ಯಾಯಾಮ ಮಾಡಬೇಕು ಎಂದು ಅವರು ಸಲಹೆ ನೀಡುತ್ತಿದ್ದಾರೆ.

ಈ ನಡುವೆ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಾಣಿಸಿರುವುದು ಸಮಂತಾ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಏಕೆಂದರೆ ಕೆಲವು ದಿನಗಳ ಹಿಂದಷ್ಟೇ ಸಮಂತಾ ಜತೆಗಿನ ಫೋಟೊವನ್ನು ಶಿಲ್ಪಾ ಶೇರ್ ಮಾಡಿದ್ದರು. ಮುಂದೆ ಓದಿ...

ಕೊರೊನಾ ವಿರುದ್ಧ ಜಯ

ಕೊರೊನಾ ವಿರುದ್ಧ ಜಯ

ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿರುವ ಶಿಲ್ಪಾ ರೆಡ್ಡಿ, ತಮಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದು, ಅದನ್ನು ಕಡಿಮೆ ಮಾಡುವಲ್ಲಿ ಹೇಗೆ ಯಶಸ್ವಿಯಾಗಿದ್ದೇನೆ ಎಂಬುದನ್ನು ವಿವರಿಸಿದ್ದಾರೆ. ಹಾಗೆಯೇ ತಮ್ಮ ಸೋಂಕಿನ ಮೂಲ ಯಾವುದು ಎಂಬುದನ್ನೂ ಹೇಳಿದ್ದಾರೆ.

ಸ್ನೇಹಿತರಲ್ಲಿ ಕೊರೊನಾ

ಸ್ನೇಹಿತರಲ್ಲಿ ಕೊರೊನಾ

ಕೆಲವು ವಾರಗಳ ಹಿಂದೆ ಕುಟುಂಬದ ಆಪ್ತರೊಬ್ಬರು ತಮ್ಮಮನೆಗೆ ಭೇಟಿ ನೀಡಿದ್ದರು. ಹುಷಾರಿಲ್ಲ ಎಂದು ತಮ್ಮ ಮನೆಗೆ ಮರಳಿದ್ದರು. ಕೆಲವು ದಿನಗಳ ಬಳಿಕ ತಮ್ಮ ಸ್ನೇಹಿತರ ಮನೆಯ ಸದಸ್ಯರೊಬ್ಬರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದ್ದು ತಿಳಿಯಿತು. ಕೂಡಲೇ ಶಿಲ್ಪಾ ರೆಡ್ಡಿಯ ಮನೆಯವರೆಲ್ಲರೂ ಕೋವಿಡ್ 19 ಪರೀಕ್ಷೆಗೆ ಒಳಗಾಗಲು ನಿರ್ಧರಿಸಿದ್ದರು.

ಲಕ್ಷಣರಹಿತ ಸೋಂಕು

ಲಕ್ಷಣರಹಿತ ಸೋಂಕು

ಶಿಲ್ಪಾ ಮತ್ತು ಅವರ ಪತಿ ಇಬ್ಬರಲ್ಲಿಯೂ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದೆ. ಆದರೆ ಇಬ್ಬರಲ್ಲಿಯೂ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಆರೋಗ್ಯಕರ ಪಥ್ಯಾಹಾರ ಮತ್ತು ಫಿಟ್ನೆಸ್ ಪ್ಲಾನ್ ಅನುಸರಿಸುವ ಮೂಲಕ ಈ ವೈರಸ್‌ನ ಪರಿಣಾಮವನ್ನು ಕ್ರಮೇಣ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಅವರು ವಿವರಿಸಿದ್ದಾರೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ತಮ್ಮ ದಿನಚರಿಯ ಮಾಹಿತಿ ನೀಡಿರುವ ಶಿಲ್ಪಾ ರೆಡ್ಡಿ, ಈ ಸಂದರ್ಭದಲ್ಲಿ ತಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದೇ ಮದ್ದು ಎಂದು ಜನರಿಗೆ ಸಲಹೆ ನೀಡಿದ್ದಾರೆ. 'ಕೋವಿಡ್-ಇನ್‌ಫೋ-ಮುನ್ನೆಚ್ಚರಿಕೆಗಳು' ಎಂದು ಬರೆದಿರುವ ಅವರು, ಪ್ರತಿದಿನ ನಮ್ಮ ದೇಹಗಳನ್ನು ಸಿದ್ಧವಾಗಿಡಬೇಕು ಮತ್ತು ಇಮ್ಯುನಿಟಿ ಹೆಚ್ಚಿಸಬೇಕು. ನಿಮ್ಮ ವಿಟಮಿನ್ ಡಿ ಮಟ್ಟ ಪರೀಕ್ಷಿಸಿಕೊಳ್ಳಿ, ವಿಟಮಿನ್ ಸಿ, ಜಿಂಕ್, ದೇಹಕ್ಕೆ ಒದಗಿಸಿ ಎಂದು ಸುದೀರ್ಘ ಮಾಹಿತಿ ನೀಡಿದ್ದಾರೆ.

ಸಮಂತಾ ಅಭಿಮಾನಿಗಳಲ್ಲಿ ಕಳವಳ

ಸಮಂತಾ ಅಭಿಮಾನಿಗಳಲ್ಲಿ ಕಳವಳ

ಒಂದು ವಾರದ ಹಿಂದಷ್ಟೇ ಶಿಲ್ಪಾ ರೆಡ್ಡಿ, ಸಮಂತಾ ಜತೆಗಿರುವ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದರು. ಶಿಲ್ಪಾ ರೆಡ್ಡಿ ಕೆನ್ನೆಗೆ ಸಮಂತಾ ಚುಂಬಿಸುತ್ತಿರುವ ಫೋಟೊ ಅದು. ಶಿಲ್ಪಾ ರೆಡ್ಡಿ ಈಗ ತಮಗೆ ಕೊರೊನಾ ವೈರಸ್ ಇದೆ ಎಂದಿರುವುದು ಸಮಂತಾ ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿದೆ. ಸಮಂತಾ ಅವರನ್ನು ಯಾವಾಗ ಭೇಟಿ ಮಾಡಿದ್ದೀರಿ? ಇದು ಹಳೆಯ ಫೋಟೊವೇ? ಎಂದು ಶಿಲ್ಪಾ ಅವರನ್ನು ಪ್ರಶ್ನಿಸುತ್ತಿದ್ದಾರೆ.

More from Filmibeat

English summary
Samantha Akkineni's fans worried about star's health as her best friend, model Shilpa Reddy revealed that she was tested coronavirus positive.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X