'ಖುಷಿ' ಸೈಡಿಗಿಟ್ಟು 'ಸಿಟಾಡೆಲ್' ಸಿರೀಸ್‌ಗೆ ಸಮಂತಾ ಎಂಟ್ರಿ: ವಿಜಯ್ ದೇವರಕೊಂಡ ಫ್ಯಾನ್ಸ್‌ಗೆ Sorry ಎಂದ ನಟಿ!

ಕಳೆದ ಎರಡು ಮೂರು ವರ್ಷಗಳಿಂದ ಸಮಂತಾ ವೈಯಕ್ತಿಕ ಬದುಕಿನಲ್ಲಿ ನೂರಾರು ಸಂಕಷ್ಟಗಳು ಎದುರಾಗಿವೆ. ವೃತ್ತಿ ಬದುಕಿನಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದ ನಟಿಯ ಪರ್ಸನಲ್‌ ಲೈಫ್ ಅದ್ಭುತವಾಗೇನು ಇರಲಿಲ್ಲ. ಸಮಂತಾ ಖುಷಿಗಿಂತ ದು:ಖ ಪಟ್ಟಿದ್ದೇ ಹೆಚ್ಚು.

ಮೊದಲು ಸಮಂತಾ ಬಾಳಲ್ಲಿ ವಿಚ್ಚೇದನದ ಬಿರುಗಾಳಿ ಬೀಸಿತ್ತು. ಇನ್ನೇನು ಈ ನೋವಿನಿಂದ ಹೊರಬಂದರು ಅನ್ನುವಾಗಲೇ ಅನಾರೋಗ್ಯ ಕಾಡುವುದಕ್ಕೆ ಶುರು ಮಾಡಿತ್ತು. ಡಿವೋರ್ಸ್‌ನಿಂದ ಆದ ಗಾಯ ಸಿನಿಮಾದ ಯಶಸ್ಸು ಮರೆಸಿತ್ತು. ಹಾಗೇ, ಅನಾರೋಗ್ಯದ ನೋವು ಕೂಡ ಸಿನಿಮಾದ ಯಶಸ್ಸಿನಿಂದಲೇ ಸಿಗಬೇಕಿದೆ.

ಸದ್ಯ ಮಯೋಸೈಟಿಸ್ ಅನ್ನೋ ಅಪರೂಪದ ಖಾಯಿಲೆಯಿಂದ ಸಮಂತಾ ಗುಣಮುಖರಾಗಿ ಹಿಂತಿರುಗಿದ್ದಾರೆ. ಇದರೊಂದಿಗೆ 'ಫ್ಯಾಮಿಲಿ ಮ್ಯಾನ್' ಖ್ಯಾತಿಯ ರಾಜ್‌ & ಡಿಕೆ ನಿರ್ದೇಶಕರ ಹೊಸ ವೆಬ್‌ ಸಿರೀಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬೆನ್ನಲ್ಲೇ ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಮನಸಾರೆ ಕ್ಷಮೆಯಾಚಿಸಿದ್ದಾರೆ. ಅದ್ಯಾಕೆ ಅಂತ ತಿಳಿಯುವುದಕ್ಕೆ ಮುಂದೆ ಓದಿ.

'ಸಿಟಾಡೆಲ್' ವೆಬ್‌ ಸೀರಿಸ್‌ಗೆ ಸಮಂತಾ ಎಂಟ್ರಿ

'ಸಿಟಾಡೆಲ್' ವೆಬ್‌ ಸೀರಿಸ್‌ಗೆ ಸಮಂತಾ ಎಂಟ್ರಿ

'ಸಿಟಾಡೆಲ್' ವೆಬ್‌ ಸಿರೀಸ್‌ಗೆ ಸಮಂತಾ ಎಂಟ್ರಿ ಕೊಟ್ಟಿದ್ದಾಗಿದೆ. ಈಗಾಗಲೇ ಮುಂಬೈನಲ್ಲಿ ಈ ವೆಬ್‌ ಸಿರೀಸ್ ಶೂಟಿಂಗ್ ಶುರುವಾಗಿದೆ. ಬಾಲಿವುಡ್‌ ಸ್ಟಾರ್ ನಟ ವರುಣ್ ಧವನ್ ಜೊತೆ ನಟ ಸಮಂತಾ ಕಾಂಬಿನೇಷನ್‌ನಲ್ಲಿ ಶೂಟಿಂಗ್ ನಡೆಯುತ್ತಿದೆ. ಮುಂಬೈನಲ್ಲಿ ಉತ್ತರ ಭಾರತದ ಹಲವು ಭಾಗಗಳಲ್ಲಿ ಶೂಟಿಂಗ್ ಮುಂದುವರೆಯಲಿದೆ. ಅಲ್ಲದೆ ಆ ಬಳಿಕ ಸೆರ್ಬಿಯಾ ಹಾಗೂ ದಕ್ಷಿಣ ಆಫ್ರಿಕಾದಲ್ಲಿಯೂ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

ಹಿಂದಿ, ಇಟಾಲಿಯನ್ ಭಾಷೆಯಲ್ಲೂ 'ಸಿಟಾಡೆಲ್'

ಹಿಂದಿ, ಇಟಾಲಿಯನ್ ಭಾಷೆಯಲ್ಲೂ 'ಸಿಟಾಡೆಲ್'

ಹಾಲಿವುಡ್‌ನ ಜನಪ್ರಿಯ ನಿರ್ದೇಶಕರಾದ ರುಸ್ಸೋ ಬ್ರದರ್ಸ್ 'ಸಿಟಾಡಲ್' ಅನ್ನೋ ವೆಬ್‌ ಸಿರೀಸ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅದೇ ವೆಬ್ ಸಿರೀಸ್ ಭಾರತದಲ್ಲೂ ನಿರ್ಮಾಣ ಆಗುತ್ತಿದೆ. ಅಲ್ಲದೆ ಇಟಾಲಿಯನ್ ಭಾಷೆಯಲ್ಲೂ 'ಸಿಟಾಡೆಲ್' ವೆಬ್ ಸಿರೀಸ್ ನಿರ್ಮಾಣ ಆಗುತ್ತಿದೆ. ರುಸೋ ಬ್ರದರ್ಸ್ ನಿರ್ದೇಶಿಸುತ್ತಿರುವ 'ಸಿಟಾಡೆಲ್' ವೆಬ್ ಸಿರೀಸ್ 2023ರಲ್ಲೇ ಪ್ರೀಮಿಯರ್ ಆಗಲಿದೆ. ಪ್ರಿಯಾಂಕಾ ಚೋಪ್ರಾ ಈ ಸಿರೀಸ್‌ನಲ್ಲಿ ನಟಿಸುತ್ತಿದ್ದು, ಅಮೆಜಾನ್ ಪ್ರೈಂ ವಿತರಣೆ ಮಾಡುತ್ತಿದೆ.

ವಿಜಯ್ ದೇವರಕೊಂಡ ಸಿನಿಮಾ ಕಥೆಯೇನು?

ವಿಜಯ್ ದೇವರಕೊಂಡ ಸಿನಿಮಾ ಕಥೆಯೇನು?

ವಿಜಯ್ ದೇವರಕೊಂಡ ಹಾಗೂ ಸಮಂತಾ ಕಾಂಬಿನೇಷನ್‌ನಲ್ಲಿ 'ಖುಷಿ' ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಶೇ. 40ರಷ್ಟು ಚಿತ್ರೀಕರಣ ಕೂಡ ನಡೆದಿತ್ತು. ಈ ಹೊತ್ತಲೇ ಸಮಂತಾ ಮಯೋಸೈಟಿಸ್ ಅನ್ನೋ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ 'ಖುಷಿ' ಶೂಟಿಂಗ್ ಸ್ಥಗಿತಗೊಂಡಿತ್ತು. ಇನ್ನೇನು ಸಮಂತಾ ಗುಣಮುಖರಾಗಿ ಮರಳಿದ ಕೂಡ 'ಖುಷಿ' ಚಿತ್ರೀಕರಣದಲ್ಲಿ ಭಾಗಿಯಾಗುತ್ತಾರೆ ಎನ್ನಲಾಗಿತ್ತು. ಅದರೆ, ಸಮಂತಾ 'ಖುಷಿ' ಸಿನಿಮಾ ಬಿಟ್ಟು ವರುಣ್ ಧವನ್ ಜೊತೆ 'ಸಿಟಾಡೆಲ್'ಗೆ ಜೈ ಅಂದಿದ್ದಾರೆ.

ವಿಜಯ್ ಫ್ಯಾನ್ಸ್‌ಗೆ ಸಮಂತಾ ಕ್ಷಮೆ

'ಲೈಗರ್' ಸೋಲಿನ ಬಳಿಕ ವಿಜಯ್ ದೇವರಕೊಂಡ 'ಖುಷಿ' ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಮೂಲಕ ವಿಜಯ್ ದೇವರಕೊಂಡ ಗೆಲ್ಲಲೇ ಬೇಕಿದೆ. ಹೀಗಾಗಿ ಸಮಂತಾ ಗುಣಮುಖರಾಗುವುದನ್ನು ಎದುರು ನೋಡುತ್ತಿದ್ದರು. ಇದೇ ವೇಳೆ ಅಭಿಮಾನಿಯೊಬ್ಬರು " ಖುಷಿ ಸಿನಿಮಾದ ಕಥೆಯೇನು?" ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಸಮಂತಾ ಪ್ರತಿಕ್ರಿಯಿಸಿದ್ದು, "ಖುಷಿ ಸಿನಿಮಾ ಆದಷ್ಟು ಬೇಗ ಆರಂಭ ಆಗುತ್ತಿದೆ. ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಧನ್ಯವಾದಗಳು" ಎಂದು ಹೇಳಿದ್ದಾರೆ.

ವಿಜಯ್ ದೇವರಕೊಂಡ ಪ್ರತಿಕ್ರಿಯೆ

ಸಮಂತಾ ಟ್ವೀಟ್ ಮಾಡಿ ಅಭಿಮಾನಿಗಳಿಗೆ ಕ್ಷಮೆ ಕೋರುತ್ತಿದ್ದಂತೆ, ವಿಜಯ್ ದೇವರಕೊಂಡ ಕೂಡ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. "ನಾವೆಲ್ಲರೂ ನೀವು ಸಂಪೂರ್ಣ ಗುಣಮುಖರಾಗಿ, ನಿಮ್ಮ ಅದ್ಭುತ ನಗುವಿನೊಂದಿಗೆ ಹಿಂತಿರುಗುವುದನ್ನು ಕಾಯುತ್ತಿದ್ದೆವು." ಎಂದು ಟ್ವೀಟ್ ಮಾಡಿದ್ದಾರೆ.

More from Filmibeat

English summary
Samantha Apology To Vijay Devarakonda Fans And Started New Citadel With Varun Dhawan, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X