Samantha Birthday: ಟಾಲಿವುಡ್ ಬ್ಯೂಟಿ ರಿಸ್ಕ್ ತೆಗೆದುಕೊಂಡು ನಟಿಸಿದ 5 ಸಿನಿಮಾಗಳು ಇವೇನೆ!

ಸಮಂತಾ ರೀಲ್ ಲೈಫ್ ಕ್ಯಾರೆಕ್ಟರ್‌ಗಿಂತ ರಿಯಲ್ ಲೈಫ್ ಕ್ಯಾರೆಕ್ಟರ್‌ ಬೋಲ್ಡ್. ತನ್ನ ಬದುಕಿನ ಕೆಲವು ಕಷ್ಟದ ಕ್ಷಣಗಳನ್ನು ಎದುರಿಸಿದ ರೀತಿಯನ್ನು ಮೆಚ್ಚಲೇ ಬೇಕು. ವಿಚ್ಛೇದನ, ಅನಾರೋಗ್ಯ, ಟೀಕೆಗಳು, ಟ್ರೋಲ್ ಇವೆಲ್ಲವನ್ನು ಧೈರ್ಯವಾಗಿ ಎದುರಿಸುತ್ತಿದ್ದಾರೆ. ಇವೆಲ್ಲವನ್ನೂ ಪಕ್ಕಕ್ಕಿಟ್ಟು ಸಮಂತಾ ಇಂದು (ಏಪ್ರಿಲ್ 28) ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಸಮಂತಾ ಈ ಚೇತರಿಸಿಕೊಂಡಿದ್ದು, ಸಿನಿಮಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಸದ್ಯ ಸಮಂತಾ ಕೈಯಲ್ಲಿ 'ಸಿಟಾಡೆಲ್' ಅಂತ ಬಿಗ್ ಪ್ರಾಜೆಕ್ಸ್ ಇದೆ. ಬಾಲಿವುಡ್‌ ನಟ ವರುಣ್ ಧವನ್ ಜೊತೆ ಈ ಅಮೆಜಾನ್ ಸಿರೀಸ್‌ನಲ್ಲಿ ನಟಿಸಿದ್ದು, ಟ್ರೆಂಡಿಂಗ್‌ನಲ್ಲಿದೆ.

Samantha Birthday: 5 times she took bold characters that fire onscreen

ಸಮಂತಾ ಒಳ್ಳೆ ನಟಿಯಷ್ಟೇ ಅಲ್ಲ. ತಾನೆಷ್ಟು ಸ್ಟ್ರಾಂಗ್ ಅನ್ನೋದನ್ನು ಈಗಾಗಲೇ ಪ್ರೂವ್ ಮಾಡಿದ್ದಾರೆ. ಇನ್ನು ಸಿನಿಮಾ ಪಾತ್ರದ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ಪ್ರೂವ್ ಆಗಿದೆ. ಹೀಗಾಗಿ ರಿಸ್ಕ್ ತೆಗೆದುಕೊಂಡ 5 ಸಿನಿಮಾಗಳ ಪಟ್ಟಿ ಇಲ್ಲಿದೆ.

ಸೂಪರ್ ಡಿಲಕ್ಸ್

ವಿಜಯ್ ಸೇತುಪತಿ, ಫಹಾದ್ ಫಾಸಿಲ್, ಸಮಂತಾ ಹಾಗೂ ರಮ್ಯಾ ಕೃಷ್ಣ ನಟಿಸಿರೋ ಸಿನಿಮಾ 'ಸೂಪರ್ ಡಿಲಕ್ಸ್'. ತ್ಯಾಗರಾಜನ್ ಕುಮಾರರಾಜನ್ ನಿರ್ದೇಶನದ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾದಲ್ಲಿ ವಿಶ್ವಾಸದ್ರೋಹಿ ಪತ್ನಿಯ ಪಾತ್ರದಲ್ಲಿ ನಟಿಸಿದ್ದರು. ತನ್ನ ಗಂಡನಿಂದ ಬಾಯ್‌ಫ್ರೆಂಡ್ ಅನ್ನು ಮುಚ್ಚಿಡುವಂತಹ ಪಾತ್ರದಲ್ಲಿ ನಟಿಸಿದ್ದರು. ಯಶಸ್ಸಿನ ಉತ್ತುಂಗದಲ್ಲಿರೋ ನಟಿ ಇಂತಹ ಪಾತ್ರವನ್ನು ಒಪ್ಪಿಕೊಳ್ಳುವುದು ತೀರಾ ವಿರಳ. ಆದರೆ, ಸಮಂತಾ ಅಂತಹ ಪಾತ್ರವನ್ನು ಸವಾಲಾಗಿ ಸ್ವೀಕರಿಸಿ ಗೆದ್ದಿದ್ದರು. ಇಂದಿಗೂ ಈ ಸಿನಿಮಾ ಸಮಂತಾ ನಟನೆಯ ಬೆಸ್ಟ್ ಸಿನಿಮಾಗಳೊಂದು.

Samantha Birthday: 5 times she took bold characters that fire onscreen

ಫ್ಯಾಮಿಲಿ ಮ್ಯಾನ್ 2

ಸಮಂತಾ ವೃತ್ತಿ ಬದುಕಿನ ಸವಾಲಿನ ಪಾತ್ರವೊಂದಿದೆ. ಅದು ಅಮೆಜಾನ್ 'ಫ್ಯಾಮಿಲಿ ಮ್ಯಾನ್ 2' ಸೀರಿಸ್. ಇದರಲ್ಲಿ ಸಮಂತಾ ತಮಿಳು ಟೈಗರ್ ವಾರಿಯರ್ ಆಗಿ ನಟಿಸಿದ್ದರು. ಈ ಸಿನಿಮಾದಲ್ಲಿ ಸಮಂತಾ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸಿದ್ದರು. ಈ ಬಾರಿ ಕೂಡ ಸಮಂತಾ ರಿಸ್ಕ್‌ಗೆ ಕೈ ಹಾಕಿದ್ದರು. ಈ ಪಾತ್ರದ ಕೇವಲ ನೆಗೆಟಿವ್ ಶೇಡ್ ಅಷ್ಟೇ ಆಗಿರಲಿಲ್ಲ. ಇದು ಬೋಲ್ಡ್ ಪಾತ್ರ ಕೂಡ ಆಗಿತ್ತು. ಈ ಸಿರೀಸ್ ದೇಶ ವಿದೇಶದಲ್ಲೂ ಗಮನ ಸೆಳೆದಿತ್ತು.

ರಂಗಸ್ಥಳಂ

2017ರಲ್ಲಿ ತೆರೆಕಂಡ ಬ್ಲಾಕ್‌ಬಸ್ಟರ್ ಸಿನಿಮಾ 'ರಂಗಸ್ಥಳಂ'. ಸುಕುಮಾರ್ ನಿರ್ದೇಶಿಸಿದ ಈ ಸಿನಿಮಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿತ್ತು. ಇದರಲ್ಲಿ ರಾಮಲಕ್ಷ್ಮಿ ಅನ್ನೋ ಪಾತ್ರದಲ್ಲಿ ಸಮಂತಾ ನಟಿಸಿದ್ದರು. ಲೋಕಲ್ ಹಳ್ಳಿ ಹುಡುಗಿ ಪಾತ್ರದಲ್ಲಿ ಖಡಕ್ ಆಗಿ ಕಂಡಿದ್ದರು. ಸಮಂತಾ ಡಿ ಗ್ಲಾಮರ್ ರೋಲ್‌ನಲ್ಲೂ ಪ್ರೇಕ್ಷಕರ ಗಮನ ಸೆಳೆದಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯಿತು.

Samantha Birthday: 5 times she took bold characters that fire onscreen

ಯೂ ಟರ್ನ್

ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದ 'ಯೂಟರ್ನ್' ಸಿನಿಮಾವನ್ನು ತೆಲುಗು, ತಮಿಳಿಗೆ ರಿಮೇಕ್ ಮಾಡಿದ್ದರು. ಕನ್ನಡದಲ್ಲಿ ಶ್ರದ್ಧಾ ಶ್ರೀನಾಥ್ ಮಾಡಿದ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದರು. ಎಲ್ಲರೂ ಸೂಪರ್‌ಸ್ಟಾರ್‌ಗಳ ಜೊತೆ ನಟಿಸುತ್ತಿದ್ದರೆ, ಸಮಂತಾ ಮಾತ್ರ ಎಕ್ಸ್‌ಪೆರಿಮೆಂಟ್ ಸಿನಿಮಾ ಮಾಡೋಕೆ ನಿರ್ಧರಿಸಿದ್ದರು. ಸ್ವತ: ಪವನ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

ಯಶೋಧಾ

ಸಮಂತಾ ದಕ್ಷಿಣ ಭಾರತದಲ್ಲಿ ತನ್ನದೇ ಬ್ರ್ಯಾಂಡ್ ಸೃಷ್ಟಿಸಿಕೊಂಡಿದ್ದಾರೆ. ಇತ್ತೀಚೆಗೆ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಟಿಸಿದ ಪ್ಯಾನ್ ಇಂಡಿಯಾ ಸಿನಿಮಾ 'ಯಶೋಧಾ'ವನ್ನು ಜನರು ಮೆಚ್ಚಿಕೊಂಡಿದ್ದರು. ಈ ಸಿನಿಮಾದಲ್ಲಿ ಆಕ್ಷನ್, ಸೆಂಟಿಮೆಂಟ್ ಎಲ್ಲವೂ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಆದರೆ, ಈ ಸಿನಿಮಾ ಬಳಿಕ ತೆರೆಕಂಡ 'ಶಾಕುಂತಲಂ' ಮಾತ್ರ ಹೀನಾಯವಾಗಿ ಸೋಲುಂಡಿದೆ. ಇದು ಕೂಡ ಸಮಂತಾ ತೆಗೆದುಕೊಂಡ ರಿಸ್ಕ್ ಆಗಿತ್ತು.

More from Filmibeat

English summary
Samantha Birthday: 5 times she took bold characters that fire onscreen. Super Deluxe, Family Man 2, Rangasthalam, U Turn, Yashoda are the bold characters.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X