ನಾಗ ಚೈತನ್ಯ ಅಭಿಮಾನಿಗಳ ವಿರುದ್ಧ ತಿರುಗಿಬಿದ್ದ ಸಮಂತಾ? ನೆಟ್ಟಿಗರಿಂದ ತಿರುಗೇಟು?

ಕಳೆದ ಕೆಲವು ದಿನಗಳಿಂದ ನಾಗಚೈತನ್ಯ ಹೊಸ ಗರ್ಲ್‌ಫ್ರೆಂಡ್‌ ಬಗ್ಗೆ ಸುದ್ದಿಯೊಂದು ಕಾಡ್ಗಿಚ್ಚಿನಂತೆ ಹಬ್ಬಿತ್ತು. ನಾಗ ಚೈತನ್ಯ ಟಾಲಿವುಡ್‌ನ ಯುವ ನಟಿಯನ್ನು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಭಯಂಕರ ಸುದ್ದಿಯಾಗಿತ್ತು. ವಿಶೇಷ ಅಂದರೆ, ಈ ಸುದ್ದಿಗೆ ಸಮಂತಾ ಪ್ರತಿಕ್ರಿಯೆ ನೀಡಿದ್ದೂ ಕೂಡ ಅಷ್ಟೇ ಸುದ್ದಿಯಾಗಿತ್ತು.

ಸಮಂತಾ ಹಾಗೂ ನಾಗಚೈತನ್ಯ ಇಬ್ಬರ ವಿಚ್ಛೇದನ ನೀಡುವುದಾಗಿ ಘೋಷಣೆ ಮಾಡಿದ ದಿನದಿಂದ ಇಬ್ಬರ ಅಭಿಮಾನಿಗಳ ನಡುವೆ ಗುದ್ದಾಟ ನಡೆಯುತ್ತಲೇ ಇದೆ. ಸಮಂತಾ ಹಾಗೂ ನಾಗಚೈತನ್ಯ ಅಭಿಮಾನಿಗಳಿಗೆ ಪ್ರತಿಕ್ರಿಯೆ ನೀಡದೇ ಹೋದರೂ, ಇಬ್ಬರೂ ಫ್ಯಾನ್ಸ್ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಅಖಾಡಕ್ಕೆ ಇಳಿದುಬಿಡುತ್ತಾರೆ.

ಕಳೆದೆರಡು ದಿನಗಳಿಂದ ಕೂಡ ಇದೇ ಆಗಿದೆ. ನಾಗಚೈತನ್ಯ ಹೊಸ ಗರ್ಲ್‌ಫ್ರೆಂಡ್ ಬಗ್ಗೆ ಸುದ್ದಿಯೊಂದು ಹರಿದಾಡಿತ್ತು. ಈ ಸುದ್ದಿಯನ್ನು ಹಬ್ಬಿಸಿದ್ದು ಸಮಂತಾ ಪಿಆರ್ ಟೀಮ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್‌ಗಳು ಬರಲಾರಂಭಿಸಿದ್ದವು. ಇದನ್ನು ನೋಡುತ್ತಿದ್ದಂತೆ ಸಮಂತಾ ಪ್ರತಿಕ್ರಿಯೆ ನೀಡಿದ್ದರು. ಈ ಪ್ರತಿಕ್ರಿಯೆಗೆ ನೆಟ್ಟಿಗರು ತಿರುಗಿ ಪ್ರತಿಕ್ರಿಯೆ ನೀಡಿದ್ದಾರೆ.

ಟ್ವಿಟರ್ ವಾರ್ ಶುರುವಾಗಿದ್ದೇಕೆ?

ನಾಗಚೈತನ್ಯ ಟಾಲಿವುಡ್‌ನ ಯುವನಟಿ ಶೋಭಿತಾ ಧುಲಿಪಾಲ ಜೊತೆಗೆ ಡೇಟಿಂಗ್ ನಡೆಸಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ಆರಂಭ ಆಗಿದ್ದವು. ನಾಗಚೈತನ್ಯ ಡೇಟಿಂಗ್ ಸುದ್ದಿ ಹಬ್ಬಲು ಸಮಂತಾ ಪರೋಕ್ಷವಾಗಿ ಕಾರಣವೆಂದು ಕಮೆಂಟ್‌ಗಳು ಬಂದಿದ್ದವು. ಇದನ್ನು ನೋಡಿದ ಸಮಂತಾ ಟ್ವೀಟ್ ಮಾಡಿ ನಾಗ ಚೈತನ್ಯ ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಸಮಂತಾಗೆ ನೆಟ್ಟಿಗರು ತಿರುಗೇಟು?

ಸಮಂತಾಗೆ ನೆಟ್ಟಿಗರು ತಿರುಗೇಟು?

ಸಮಂತಾ ಮಾಡಿದ ಈ ಟ್ವೀಟ್‌ಗೆ ನೆಟ್ಟಿಗರು ಮತ್ತೆ ಕಮೆಂಟ್‌ ಮಾಡಿದ್ದಾರೆ. ಇವರಲ್ಲಿ ಕೆಲವರು ಸಮಂತಾ ಬೆಂಬಲಕ್ಕೆ ಬಂದಿದ್ದರೆ, ಮತ್ತೆ ಕೆಲವರು ನಾಗಚೈತನ್ಯ ಪರ ನಿಂತಿದ್ದಾರೆ. ಒಬ್ಬರು "ನಿಮಗೆಲ್ಲ ಅವರು ಗೋಲ್ಡ್ ಆಗಿದ್ದರೆ. ನಮಗೆ ಸಮಂತಾ ಡೈಮಂಡ್ ಇದ್ದಂತೆ. ಈ ನಟಿ ಹಲವು ಹಾರ್ಡ್ ವರ್ಕ್ ಮಾಡುವ ಸ್ಟ್ರಾಂಗ್ ಆಗಿರುವ ಮಹಿಳೆಯಿರಿಗೆ ಪ್ರೇರಣೆ" ಎಂದು ಸಮಂತಾ ಬೆಂಬಲಕ್ಕೆ ನಿಂತಿದ್ದಾರೆ. ಇನ್ನೊಬ್ಬರು " ಹುಡುಗಿ ಮೇಲೆ ಎದ್ದಿರುವ ಗಾಳಿ ಸುದ್ದಿ ನಿಜವಿರಬೇಕು. ಚೈತನ್ಯ ಜೊತೆ ಲಿಂಕ್ ಆಗಿರುವ ಹೆಸರು ಹುಡುಗಿಯದ್ದಲ್ಲವೇ?" ಎಂದು ಸಮಂತಾಗೆ ಪ್ರಶ್ನೆ ಮಾಡಿದ್ದಾರೆ.

ಸ್ಯಾಮ್-ಚೈ ಕಿತ್ತಾಟ ಮನರಂಜನೆಯೇ?

ಸ್ಯಾಮ್-ಚೈ ಕಿತ್ತಾಟ ಮನರಂಜನೆಯೇ?

ಸಮಂತಾ ಹಾಗೂ ನಾಗಚೈತನ್ಯ ಇಬ್ಬರ ಅಭಿಮಾನಿಗಳ ಕಿತ್ತಾಟಕ್ಕೆ ನೆಟ್ಟಿಗರೊಬ್ಬರು "ಎಂಟರ್‌ಟೈನ್ಮೆಂಟ್ ಎಂಟರ್‌ಟೈನ್ಮೆಂಟ್ ಎಂಟರ್‌ಟೈನ್ಮೆಂಟ್" ಎಂದು ಕಮೆಂಟ್ ಮಾಡಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಿಂದ ಇಲ್ಲಿವರೆಗೂ ಇಬ್ಬರ ಅಭಿಮಾನಿಗಳೂ ಒಬ್ಬರ ಮೇಲೊಬ್ಬರಂತೆ ಕಮೆಂಟ್ ಮಾಡುತ್ತಲೇ ಇದ್ದಾರೆ. ಇದು ಯಾವಾಗ ಕೊನೆಯಾಗುತ್ತೋ ಗೊತ್ತಿಲ್ಲ. ಆದರೆ, ಸಮಂತಾ ಆಗಲಿ, ನಾಗಚೈತನ್ಯ ಆಗಲಿ ಕಮೆಂಟ್ ಮಾಡದೆ ಇರುವುದೇ ಉತ್ತಮ.

ಸಮಂತಾ ಮಾಡಿದ ಕಮೆಂಟ್ ಏನು?

ಸಮಂತಾ ಮಾಡಿದ ಕಮೆಂಟ್ ಏನು?

ಸಲಿಗೆ ಸಮಂತಾ ಟ್ವೀಟ್‌ ಮಾಡಿ "ಹುಡುಗಿಯರ ಬಗ್ಗೆ ಗಾಸಿಪ್- ಅದು ನಿಜವೆಂದು ನಂಬಲಾಗುತ್ತದೆ. ಹುಡುಗರ ಬಗ್ಗೆ ಗಾಸಿಪ್- ಇದಕ್ಕೆ ಹುಡುಗಿಯೇ ಕಾರಣ, ಎನ್ನುತ್ತೀರಾ. ಬುದ್ಧಿವಂತರಾಗಿ. ಜಗತ್ತು ಮುಂದುವರೆಯುತ್ತಿದೆ. ನೀವೂ ಕೂಡ ಮುಂದುವರೆಯಿರಿ. ನಿಮ್ಮ ಕೆಲಸ ಮತ್ತು ಕುಟುಂಬದ ಕಡೆಗೆ ಹೆಚ್ಚಿನ ಗಮನ ಕೊಡಿ. ಮುಂದೆ ಸಾಗಿ" ಎಂದು ಬರೆದುಕೊಂಡಿದ್ದರು. ಇದಕ್ಕೆ ನೆಟ್ಟಿಗರು ಕೂಡ ಕಮೆಂಟ್ ಮಾಡಿದ್ದಾರೆ.

More from Filmibeat

English summary
Samantha Blast Naga Chaitanya Fans: Here Is netizens Reaction, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X