ಮತ್ತೆ ವೈರಲ್ ಆಯ್ತು ಸಮಂತಾ ಬೋಲ್ಡ್ ಫೋಟೊ: ಸೆಲೆಬ್ರೆಟಿಗಳು ಏನಂದ್ರು?
ವಿಚ್ಚೇದನದ ಬಳಿಕ ಸಮಂತಾ ಮತ್ತಷ್ಟು ಬೋಲ್ಡ್ ಲುಕ್ ಕೊಡುತ್ತಿದ್ದಾರೆ. ಮತ್ತಷ್ಟು ಬೋಲ್ಡ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಈ ಪೋಟೊಗಳನ್ನು ನೋಡಿದ ಮೇಲಂತೂ ಸಮಂತಾ ಬಗ್ಗೆ ಟೀಕೆ ಮಾಡಿದವರೆಲ್ಲಾ ಒಮ್ಮೆ ಸೈಲೆಂಟ್ ಆಗುತ್ತಾರೆ. ಸಮಂತಾ ಸುಂದರಿ ಅಲ್ಲ ಅಂದೊರೆಲ್ಲಾ ಸುಮ್ಮನಾಗುತ್ತಾರೆ.
ಇತ್ತೀಚೆಗೆ ಸಮಂತಾ ಎರಡು ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ವೈರಲ್ ಆಗುತ್ತಿದೆ. ಬಾಲಿವುಡ್, ಟಾಲಿವುಡ್ ಇಂದ ಹಿಡಿದು ಭಾರತ ಎಲ್ಲಾ ಚಿತ್ರರಂಗದ ಸೆಲೆಬ್ರೆಟಿಗಳೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಸಲಿಗೆ ಸಮಂತಾ ಇಷ್ಟೊಂದು ಬೋಲ್ಡ್ ಅವತಾರವೆತ್ತಿದ್ದು ಯಾಕೆ? ಯಾವ್ಯಾವ ಸೆಲೆಬ್ರೆಟಿಗಳು ಏನಂದ್ರು? ಅನ್ನೋದನ್ನು ತಿಳಿಯಲಿ ಮುಂದೆ ಓದಿ.

ಇಷ್ಟೊಂದು ಹಾಟ್ ಲುಕ್ ಕೊಟ್ಟಿಲ್ಲ ಸ್ಯಾಮ್
ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಸೋಶಿಯಲ್ ಮೀಡಿಯಾದಲ್ಲಿ ಸದಾ ಹಾಟ್ ಆಗಿ ಇರುತ್ತಾರೆ. ಪ್ರತಿದಿನ ತನ್ನ ಒಂದಲ್ಲ ಒಂದು ಫೋಟೊವನ್ನು ಶೇರ್ ಮಾಡುತ್ತಲೇ ಇರುತ್ತಾರೆ. ತನ್ನ ವರ್ಕ್‌ಔಟ್ ಫೋಟೊಗಳನ್ನು ಹಂಚಿಕೊಂಡರೆ, ಇನ್ನೊಮ್ಮೆ ಫೋಟೊಗಳನ್ನು ಶೇರ್ ಮಾಡುತ್ತಾರೆ. ಆದ್ರೀಗ ಹುಡುಗ ನಿದ್ದೆ ಕದಿಯುವಂತಹ ಫೋಟೊ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಬ್ಲ್ಯಾಕ್ ಬ್ರಾ ಹಾಗೂ ಪ್ರಿಂಟೆಡ್ ಪ್ಯಾಂಟ್ ಧರಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದ ವೈರಲ್ ಆಗಿವೆ.

ಸಮಂತಾ ಹಾಟ್ ಫೋಟೊಗೆ ಮೆಚ್ಚುಗೆ
ಸಮಂತಾ ಬೋಲ್ಡ್ ಫೋಟೊಗಳನ್ನು ಶೇರ್ ಮಾಡುತ್ತಿದ್ದಂತೆ ಸ್ಟಾರ್ ನಟಿಯರು ಮೂಕವಿಸ್ಮಿತರಾಗಿದ್ದಾರೆ. ಸಮಂತಾ ಅವರ ಹೊಳೆಯುವ ಮೈಮಾಟವನ್ನು ಕಂಡು ಥ್ರಿಲ್ ಆಗಿದ್ದಾರೆ. ಸೆಲೆಬ್ರೆಟಿಗಳು ಸಮಂತಾರನ್ನು ಸೌಂದರ್ಯದ ಐಕಾನ್ ಎಂದು ಕರೆಯುತ್ತಿದ್ದಾರೆ. ಅನುಷ್ಕಾ ಶರ್ಮಾ 'ಹಾಟಿ' ಎಂದು ಕಮೆಂಟ್ ಮಾಡಿದ್ದರೆ, ನಿಕೆಶಾ ಪಟೇಲ್ " ವಾವ್ಹ್ ಸ್ಯಾಮ್.. ಲವ್ ಇಟ್" ಎಂದಿದ್ದಾರೆ. ಟಾಲಿವುಡ್ ನಟಿ ಲಕ್ಷ್ಮಿ ಮಂಚು " ನಿಂದಿಸುವವರಿಗೆ ಸಾಧನವಾಗುತ್ತೀಯಾ" ಎಂದು ಕಮೆಂಟ್ ಮಾಡಿದ್ದಾರೆ. ಹಾಗೇ ಕನ್ನಡದ ನಟಿ ಸಂಯುಕ್ತ ಹೆಗ್ಡೆ " ಯಾರಾದರೂ ಫೈಯರ್ ಬ್ರಿಗೇಡ್ ಅನ್ನು ಕರೆಯಿರಿ" ಎಂದು ಕಮೆಂಟ್ ಮಾಡಿದ್ದಾರೆ.
ಸಮಂತಾ ಫೋಟೊಗೆ 10 ಲಕ್ಷ ಲೈಕ್ಸ್
ಸಮಂತಾ ತನ್ನ ಇನ್‌ಸ್ಟಾಗ್ರಾಂ ಪೋಟೊಗಳಲ್ಲಿ ಈ ಫೋಟೊಗಳನ್ನು ಶೇರ್ ಮಾಡುತ್ತಿದ್ದಂತೆ ಲೈಕ್ಸ್ ಸುರಿಮಳೆಯೇ ಸುರಿದಿದೆ. ಸಮಂತಾ ಬೋಲ್ಡ್ ಫೋಟೊಗಳಿಗೆ ಕಮೆಂಟ್ ಮಾಡುವವರಿಗಿಂತ ಇಷ್ಟ ಪಡುವವರ ಸಂಖ್ಯೆನೇ ಹೆಚ್ಚಾಗಿದೆ. ಹಿಂದೆಂದಿಗಿಂತಲೂ ಸಮಂತಾ ಬೋಲ್ಡ್ ಲುಕ್‌ಗೆ ಲೈಕ್ಸ್ ಹೆಚ್ಚು ಸಿಕ್ಕಿದ್ದು, ಕೇವಲ ಎರಡು ಗಂಟೆಗಳಲ್ಲೇ 10 ಲಕ್ಷಕ್ಕೂ ಅಧಿಕ ಮಂದಿ ಇಷ್ಟ ಪಟ್ಟಿದ್ದಾರೆ.

ಸಿನಿಮಾಗಳಲ್ಲೂ ಸಿಕ್ಕಾಪಟ್ಟೆ ಬ್ಯುಸಿ
ಸಮಂತಾ ಕೇವಲ ಇನ್‌ಸ್ಟಾಗ್ರಾಂನಲ್ಲಷ್ಟೇ ಬ್ಯುಸಿಯಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಸಮಂತಾ ಅಭಿನಯದ 'ಶಾಕುಂತಲಂ' ರಿಲೀಸ್ ರೆಡಿಯಾಗುತ್ತಿದೆ. ವಿಜಯ್ ದೇವರಕೊಂಡ ಜೊತೆ 'ಖುಷಿ' ಶೂಟಿಂಗ್ ನಡೆಯುತ್ತಿದೆ. ಇತ್ತೀಚೆಗೆ ರಣ್‌ವೀರ್ ಸಿಂಗ್ ಜೊತೆನೂ ಕಾಣಿಸಿಕೊಂಡಿದ್ದು, ಇವರೊಂದಿಗೆ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಎಂದು ಗುಸುಗುಸು ಹಬ್ಬಿದೆ.


Click it and Unblock the Notifications











