ಮದ್ಯದ ಜಾಹೀರಾತಿನಲ್ಲಿ ನಟಿಸಿದ ಸಮಂತಾಳನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ನಟಿಯರು ಟ್ರೋಲ್‌ಗೆ ಒಳಗಾಗುವುದು ಈಗ ಮಾಮೂಲಿಯಾಗಿದೆ. ಬಾಲಿವುಡ್‌, ಟಾಲಿವುಡ್, ಕಾಲಿವುಡ್ ಅಷ್ಟೇ ಯಾಕೆ ಸ್ಯಾಂಡಲ್‌ವುಡ್‌ ನಟಿಯರು ಹೆವಿಯಾಗಿ ಟ್ರೋಲ್ ಆಗಿದ್ದಾರೆ. ರಶ್ಮಿಕಾ ಮಂದಣ್ಣ, ಮಲೈಕಾ ಅರೋರಾ, ಕರೀನಾ ಕಪೂರ್ ಸೇರಿದಂತೆ ಟ್ರೋಲ್ ಆಗದ ನಟಿಯರು ಯಾರಿದ್ದಾರೆ ಹೇಳಿ? ಇತ್ತೀಚೆಗೆ ಸಮಂತಾಳನ್ನೂ ಸೇರಿಸಿಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಅದರಲ್ಲೂ ವಿಚ್ಛೇದನದ ಬಳಿಕ ಸಮಂತಾಳನ್ನು ಒಂದಲ್ಲ ಒಂದು ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಕಾಲೆಳೆಯುತ್ತಲೇ ಇದ್ದಾರೆ. ಈಗ ಮದ್ಯದ ಬ್ರ್ಯಾಂಡ್‌ವೊಂದರ ಜಾಹೀರಾತಿನಲ್ಲಿ ನಟಿಸಿ, ಪ್ರಚಾರ ಮಾಡಿದ್ದಾರೆ. ಅದನ್ನು ನೋಡಿ ನೆಟ್ಟಿಗರು ಸಮಂತಾ ವಿರುದ್ಧ ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ.

ಕಳೆದ ವರ್ಷ ಅಕ್ಟೋಬರ್ ತಿಂಗಳಿನಿಂದ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ. ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಸಮಂತಾರನ್ನು ತೆಗಳಿದ ಉದಾಹರಣೆಗಳೂ ಕೂಡ ಸಾಕಷ್ಟಿವೆ. ಇನ್ನೊಂದು ಕಡೆ ಸಮಂತಾ ನಡೆಗೆ ಜನರು ಮೆಚ್ಚುಗೆ ಸೂಚಿದ್ದೂ ಇದೆ. ಆದ್ರೀಗ ಪರಿಸ್ಥಿತಿ ಬೇರೆನೇ ಇದೆ. ಸಮಂತಾ ಮದ್ಯದ ಬ್ರ್ಯಾಂಡ್‌ವೊಂದರ ಜಾಹೀರಾತಿನಲ್ಲಿ ಹೆಜ್ಜೆ ಹಾಕಿ, ಅದನ್ನು ಪ್ರಚಾರ ಮಾಡಿದ್ದೇ ದೊಡ್ಡ ತಪ್ಪಾಗಿದೆ.

 ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಸಮಂತಾ

ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಸಮಂತಾ

ಸಮಂತಾ ರುಥ್ ಪ್ರಭು ಇತ್ತೀಚೆಗೆ ಆಲ್ಕೋಹಾಲ್ ಬ್ರ್ಯಾಂಡ್‌ನಲ್ಲಿ ನಟಿಸಿದ್ದರು. ಆ ಜಾಹೀರಾತಿನ ವಿಡಿಯೋವನ್ನು ಸಮಂತಾ ತನ್ನ ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಕಣ್ಣುಗಳು ಕೆಂಪಾಗಿವೆ. ಸಮಂತಾರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ. ನೆಟ್ಟಿಗರಿಗೆ ಸಮಂತಾ ಇಂತಹ ಜಾಹೀರಾತಿನಲ್ಲಿ ನಟಿಸಿದ್ದು ಸ್ವಲ್ಪವೂ ಇಷ್ಟ ಆಗಿಲ್ಲ. ಹೀಗಾಗಿ ನಟಿಯನ್ನು ಬ್ಯಾಕ್ ಟು ಬ್ಯಾಕ್ ಟ್ರೋಲ್ ಮಾಡುತ್ತಿದ್ದಾರೆ.

 ನೆಟ್ಟಿಗರು ತಿರುಗಿ ಬೀಳಲು ಕಾರಣವೇನು?

ನೆಟ್ಟಿಗರು ತಿರುಗಿ ಬೀಳಲು ಕಾರಣವೇನು?

ಮದ್ಯದ ಬ್ರ್ಯಾಂಡ್‌ವೊಂದರ ಜಾಹೀರಾತಿನಲ್ಲಿ ಸಮಂತಾ ಎರಡು ಅಲ್ಟ್ರಾ ಮಾಡರ್ನ್ ಡ್ರೆಸ್ ಅನ್ನು ಧರಿಸಿದ್ದಾರೆ. ಈ ಎರಡೂ ಡ್ರೆಸ್‌ಗಳಲ್ಲೂ ಸಮಂತಾ ಗ್ಲಾಮರಸ್ ಆಗಿ ಕಾಣಿಸುತ್ತಿದ್ದಾರೆ. ವೈಟ್ ಕಾಸ್ಟ್ಯೂಮ್‌ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರೆ, ಇನ್ನೊಂದರಲ್ಲಿ ಮರೂನ್ ಬಣ್ಣದ ಸ್ಟ್ರಾಪ್‌ಲೆಸ್ ಧರಿಸಿ, ಪ್ಯಾಂಟ್ ಕೊಟ್ಟಿದ್ದಾರೆ. ಟ್ರೋಲ್ ಮಾಡುತ್ತಿರುವವರಿಗೆ ಸಮಂತಾ ತೊಟ್ಟ ಈ ಡ್ರೆಸ್ ಇಷ್ಟ ಆಗಿರಲಿಲ್ಲ. ಇಂತಹ ಮಾಡರ್ನ್ ಡ್ರೆಸ್ ಧರಿಸಿದ್ದಕ್ಕೆ ಟ್ರೋಲಿಗರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

 ಹಣಕ್ಕಾಗಿ ಇಂತಹ ಹಾಹೀರಾತು ಬೇಡ

ಹಣಕ್ಕಾಗಿ ಇಂತಹ ಹಾಹೀರಾತು ಬೇಡ

ಹಣಕ್ಕಾಗಿಯೇ ಇಂತಹ ಜಾಹೀರಾತುಗಳಲ್ಲಿ ಸಮಂತಾ ನಟಿಸುತ್ತಿದ್ದಾರೆ. ಪರೋಕ್ಷವಾಗಿ ಮದ್ಯದ ಬ್ರ್ಯಾಂಡ್‌ ಅನ್ನು ಪ್ರಚಾರ ಮಾಡುತ್ತಿದ್ದಾರೆ. ಒಬ್ಬ ನಟಿಯಾಗಿ ಕೇವಲ ಹಣಕ್ಕಾಗಿ ಇಂತಹ ಜಾಹೀರಾತನ್ನು ತನ್ನ ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ವಿಚ್ಛೇದನದ ಬಳಿಕ ಸಮಂತಾ ಹಣ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಸಮಂತಾ ಫುಲ್ ಬ್ಯುಸಿ

ಸಮಂತಾ ಫುಲ್ ಬ್ಯುಸಿ

ಸಮಂತಾ ವಿಚ್ಛೇದನದ ಬಳಿಕ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸ್ಯಾಮ್ ನಟನೆಯ 'ಶಕುಂತಲಂ' ಸಿನಿಮಾ ಬಿಡುಗಡೆ ಸಜ್ಜಾಗಿ ನಿಂತಿದೆ. ಇದಲ್ಲದೆ, ವಿಜಯ್ ಸೇತುಪತಿ, ನಯನತಾರಾ ಜೊತೆ ನಟಿಸಿರುವ 'ಕಾಥುವಾಕುಲ ರೆಂಡು ಕಾದಲ್' ಕೂಡ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಂಡಿದೆ. 'ಪುಷ್ಪ' ಬಳಿಕ ಐಟಂ ಸಾಂಗ್‌ಗಳಿಗೆ ಹೆಚ್ಚು ಬೇಡಿಕೆ ಬಂದಿದೆ. ಇನ್ನೊಂದು ವೆಬ್ ಸಿರೀಸ್ ಹಾಗೂ ಹಾಲಿವುಡ್ ಸಿನಿಮಾಗಳಲ್ಲೂ ಸಮಂತಾ ಬ್ಯುಸಿಯಾಗಿದ್ದಾರೆ.

More from Filmibeat

English summary
Samantha Ruth Prabhu brutally trolled for new alcohol ad what netizens say. Samantha starred in an alcohol ad that has left a certain section of people unimpressed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X