"ದೇವಸ್ಥಾನವೇನೋ ಇದೆ.. ಆದರೆ ಸಮಂತಾನೇ ಇಲ್ವಲ್ಲ ಸಾರ್": ಸ್ಯಾಮ್ ದೇವಸ್ಥಾನ ಫುಲ್ ಟ್ರೋಲ್
ಹೀರೊಯಿನ್‌ಗಳಿಗಾಗಿ ದೇವಸ್ಥಾನ ಕಟ್ಟೋದು ದಕ್ಷಿಣ ಭಾರತದಲ್ಲಿ ಮಾತ್ರ ಅನಿಸುತ್ತೆ. ಅದರಲ್ಲೂ ತಮಿಳುನಾಡಿನಲ್ಲಿ ಅಭಿಮಾನಿಗಳು ಈಗಾಗಲೇ ಕೆಲ ನಾಯಕಿಯರಿಗೆ ದೇವಸ್ಥಾನ ಕಟ್ಟಿ ಅಭಿಮಾನ ಮೆರೆದಿದ್ದಾರೆ.
ತಮಿಳುನಾಡಿನಲ್ಲಿ ಅಭಿಮಾನಿಗಳು ಈಗಾಗಲೇ ಖುಷ್ಬೂಗೆ ದೇವಸ್ಥಾನ ಕಟ್ಟಿದ್ದಾರೆ. ಇತ್ತೀಚೆಗೆ ನಿಧಿ ಅಗರ್ವಾಲ್‌ಗೂ ದೇವಸ್ಥಾನ ನಿರ್ಮಿಸಿದ್ದರು. ನಯನತಾರಾ ಹಾಗೂ ನಮಿತಾಗೂ ದೇವಸ್ಥಾನ ಕಟ್ಟಿ ಅಭಿಮಾನ ಮೆರೆದಿದ್ದಾರೆ. ಈಗ ಈ ಅಭಿಮಾನ ಆಂಧ್ರ ಪ್ರದೇಶಕ್ಕೂ ವ್ಯಾಪಿಸಿದೆ. ಇತ್ತೀಚೆಗೆ ಅಭಿಮಾನಿಯೊಬ್ಬ ಸಮಂತಾಗೆ ದೇವಸ್ಥಾನ ಕಟ್ಟಿ ಅಭಿಮಾನ ಮೆರೆದಿದ್ದಾನೆ.

ಅಭಿಮಾನಿಯೇನೋ ತನ್ನ ಅಭಿಮಾನ ವ್ಯಕ್ತಪಡಿಸಲು ದೇವಸ್ಥಾನ ಕಟ್ಟಿದ್ದಾನೆ. ಆದರೆ, ಅದೇ ದೇವಸ್ಥಾನ ಈಗ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದೆ. ಗುಡಿಯಲ್ಲಿ ಸಮಂತಾ ಮೂರ್ತಿ ನೋಡಿ " ದೇವಸ್ಥಾನ ಓಕೆ ಸಮಂತಾ ಎಲ್ಲಿ?" ಎಂದು ಟ್ರೋಲ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಸಮಂತಾ ದೇವಸ್ಥಾನಕ್ಕೆ ಹೇಗೆಲ್ಲಾ ಟ್ರೋಲ್ ಆಗಿದ್ದಾರೆ? ಅನ್ನೋದನ್ನು ತಿಳಿಯೋಕೆ ಮುಂದೆ ಓದಿ.
ಆಂಧ್ರದಲ್ಲಿ ಸಮಂತಾ ದೇವಸ್ಥಾನ
ಆಂಧ್ರ ಪ್ರದೇಶದ ಗುಂಟೂರಿನ ಆಲಪಾಡು ಗ್ರಾಮದ ಸಂದೀಪ್ ಅನ್ನೋ ಸಮಂತಾ ಅಭಿಮಾನಿ ಇತ್ತೀಚೆಗೆ ದೇವಸ್ಥಾನ ನಿರ್ಮಿಸಿದ್ದ. ಸಮಂತಾ ಹುಟ್ಟುಹಬ್ಬ(ಏಪ್ರಿಲ್ 28)ದಂದೇ ಆ ದೇವಸ್ಥಾನವನ್ನು ಉದ್ಘಾಟನೆಯನ್ನೂ ಮಾಡಲಾಗಿದೆ.
ಸಮಂತಾ ಅಭಿಮಾನಿ ಗ್ರಾಮದ ಜನರನ್ನೆಲ್ಲಾ ಕರೆದು, ಅಭಿಮಾನಿಗಳನ್ನೂ ಆಹ್ವಾನ ಮಾಡಿ ಅದ್ಧೂರಿ ಕಾರ್ಯಕ್ರಮವನ್ನು ಮಾಡಿದ್ದಾನೆ. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಾಗಿತ್ತು. ಆದರೆ, ಒಂದು ದಿನದೊಳಗೆ ಸಮಂತಾ ದೇವಸ್ಥಾನ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅಷ್ಟಕ್ಕೂ ಟ್ರೋಲಿಗರು ಹೇಗೆಲ್ಲ ಟ್ರೋಲ್ ಮಾಡುತ್ತಿದ್ದಾರೆ? ನೋಡಿ.
ಅಯ್ಯೋ ಸಮಂತಾ ಎಲ್ಲಿ?
ಟಾಲಿವುಡ್ ನಟಿ ಸಮಂತಾ ದೇವಸ್ಥಾನ ಕಟ್ಟಿರೋದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದೆ. ಕೆಲವರು ಸಂದೀಪ್ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಸಮಂತಾ ಮೇಲಿನ ಅಭಿಮಾನ ಓಕೆ. ಆದರೆ, ದೇವಸ್ಥಾನದಲ್ಲಿ ಸಮಂತಾನೇ ಕಾಣುತ್ತಿಲ್ಲ ಎಂದು ಹೆವೀ ಟ್ರೋಲ್ ಮಾಡುತ್ತಿದ್ದಾರೆ.
"ದೇವಸ್ಥಾನದಲ್ಲಿ ಸಮಂತಾನೇ ಇಲ್ವಲ್ಲ ಸಾರ್.. ದೇವಸ್ಥಾನದ ಕಥೆಯೇನು?" ಅಂತ ತೆಲುಗು ಮಂದಿ ಟ್ರೋಲ್ ಮಾಡುತ್ತಿದ್ದಾರೆ. ಮತ್ತೆ ಕೆಲವರು "ದೇವಸ್ಥಾನವಿದೆ.. ಆದರೆ, ಸಮಂತಾನೇ ಇಲ್ಲ" ಎಂದು ಟ್ರೋಲ್ ಮಾಡುತ್ತಿದ್ದಾರೆ.
ಟೀಕೆಗೆ ಗುರಿಯಾಗದ ಅಭಿಮಾನಿ
ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರೆಟಿಗಳಿಗಿಂತ ಅವರ ಅಭಿಮಾನಿಗಳೇ ಹೆಚ್ಚು ಆಕ್ಟಿವ್ ಆಗಿರುತ್ತಾರೆ. ಅಲ್ಲದೇ, ತಮ್ಮದೇ ರೀತಿಯಲ್ಲಿ ತಮ್ಮ ಅಭಿಮಾನವನ್ನ ವ್ಯಕ್ತಪಡಿಸುತ್ತಾರೆ. ಆಂಧ್ರದ ಅಭಿಮಾನಿ ಕೂಡ ಸಮಂತಾಗೆ ಗುಡಿ ಕಟ್ಟಿ ಅಭಿಮಾನ ಮೆರೆದಿದ್ದಾನೆ. ಆದರೆ, ಅದು ಎಡವಟ್ಟಾಗಿಬಿಟ್ಟಿದೆ.
"ದೇವಸ್ಥಾನ ಇದೆ.. ಆದರೆ ಅದರೊಳಗೆ ಸಮಂತಾನೇ ಇಲ್ಲ" ಅಂತ ಟ್ರೋಲ್ ಮಾಡಿ ಕಾಲೆಳೆಯುತ್ತಿದ್ದಾರೆ. ಸಮಂತಾ ಮೇಲಿನ ಅಭಿಮಾನದಿಂದ ಗುಡಿ ಕಟ್ಟಿದ್ದು ತಪ್ಪೇನಿಲ್ಲ. ಆದರೆ, ಸಮಂತಾ ಮೂರ್ತಿ ರೂಪಿಸಲು ಉತ್ತಮ ಶಿಲ್ಪಿಯನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಗುಡಿ ಭೇಷ್ ಎನಿಸಿಕೊಳ್ಳಬೇಕಿದ್ದ ಸಮಂತಾ ಅಭಿಮಾನಿ ಸಂದೀಪ್ ಟೀಕೆಗೆ ಗುರಿಯಾಗಿದ್ದಾನೆ.
ಲಂಡನ್‌ನಲ್ಲಿ ಸಮಂತಾ ಬ್ಯುಸಿ
'ಶಾಕುಂತಲಂ' ಸಿನಿಮಾ ಸೋಲಿನ ಬಳಿಕ ಸಮಂತಾ ಲಂಡನ್‌ಗೆ ಹಾರಿದ್ದಾರೆ. ಅಮೆಜಾನ್ ಪ್ರೈಮ್‌ಗಾಗಿ ನಿರ್ಮಾಣ ಆಗುತ್ತಿರುವ 'ಸಿಟಾಡೆಲ್' ವೆಬ್ ಸಿರೀಸ್‌ಗಾಗಿ ಶೂಟಿಂಗ್ ಆರಂಭಿಸಿದ್ದಾರೆ. ಈ ಸಿರೀಸ್‌ನಲ್ಲಿ ವರುಣ್ ಧವನ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.
ಹುಟ್ಟುಹಬ್ಬದ ದಿನದಂದೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದ್ದಾರೆ. 'ಸಿಟಾಡೆಲ್' ಬೇಗ ಬೇಗ ಮುಗಿಸಿ, ವಿಜಯ್ ದೇವರಕೊಂಡ ಜೊತೆ ನಟಿಸುತ್ತಿರುವ 'ಖುಷಿ' ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾ ಇದೇ ಸೆಪ್ಟೆಂಬರ್ 1ರಂದು ವಿಶ್ವದಾದ್ಯಂತ ಬಿಡುಗಡೆ ಸಜ್ಜಾಗಿದ್ದು, ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











