ಟವೆಲ್ ಸುತ್ತಿಕೊಂಡು ಕನ್ನಡಿ ಮುಂದೆ ' ಐ ಮಿಸ್ ಯು' ಎಂದ ಸಮಂತಾ: ಫೋಟೊ ಫುಲ್ ವೈರಲ್!
ಸಮಂತಾ ರುತ್ ಪ್ರಭು ಈಗ ಕೇವಲ ದಕ್ಷಿಣ ಭಾರತದ ನಟಿಯಷ್ಟೇ ಅಲ್ಲ. ಪ್ಯಾನ್ ಇಂಡಿಯಾ ಸ್ಟಾರ್. 'ಫ್ಯಾಮಿಲಿ ಮ್ಯಾನ್ 2' ವೆಬ್ ಸೀರಿಸ್‌ನಲ್ಲಿ ನಟಿಸಿದ ಬಳಿಕ ಸಮಂತಾ ರೇಂಜ್ ದೇಶದುದ್ದಗಲಕ್ಕೂ ಹರಡಿದೆ. ಈ ಕಾರಣಕ್ಕೆ ಸಮಂತಾ ಜೊತೆ ಸಿನಿಮಾ ಮಾಡಲು ಫಿಲ್ಮ್ ಮೇಕರ್ಸ್ ತುದಿಗಾಲಲ್ಲಿ ನಿಂತಿದ್ದಾರೆ.
ಸಮಂತಾ ಈಗ ದಕ್ಷಿಣ ಭಾರತದ ನಂ 1 ನಟಿ. ನಾಗಚೈತನ್ಯ ಜೊತೆ ವಿಚ್ಛೇದನದ ಬಳಿಕ ಸಮಂತಾಗೆ ವಿಶೇಷ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಸಮಂತಾ ಕೂಡ ಅದೆಷ್ಟೇ ಟೀಕೆಗೆ ಗುರಿಯಾಗಿದ್ದರೂ, ಅವೆಲ್ಲವನ್ನೂ ಸಮರ್ಥವಾಗಿ ಎದುರಿಸಿದ್ದಾರೆ. ತನ್ನನ್ನು ಇಷ್ಟ ಪಡುವವರೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಂಪರ್ಕದಲ್ಲಿದ್ದಾರೆ. ಸದ್ಯ ಸಮಂತಾ ಫೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದೆ.
ಸಮಂತಾ ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿರುತ್ತಾರೆ. ತನ್ನ ಫೋಟೊಗಳನ್ನು, ಸಿನಿಮಾ ಸುದ್ದಿಗಳನ್ನು, ವರ್ಕ್ಔಟ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ನಿನ್ನೆ (ಮೇ 10) ಇನ್‌ಸ್ಟಾ ರೀಲ್ಸ್‌ನಲ್ಲಿ ಟವೆಲ್ ಸುತ್ತಿಕೊಂಡು ಶೇರ್ ಮಾಡಿದ ಫೋಟೊವೊಂದು ಬೇಜಾನ್ ವೈರಲ್ ಆಗುತ್ತಿದೆ.

ಸಮಂತಾ ಟವೆಲ್ ಫೋಟೊ ವೈರಲ್
ಸೋಶಿಯಲ್ ಮೀಡಿಯಾ ಬಳಸುವುದರಲ್ಲಿ ಸಮಂತಾ ಸದಾ ಮುಂದು. ತನ್ನ ಆಪ್ತರೊಂದಿಗೆ ವಿಷಯ ಹಂಚಿಕೊಳ್ಳುವುದಕ್ಕೂ ಸಮಂತಾ ಇನ್‌ಸ್ಟಾಗ್ರಾಂ ಅನ್ನು ಬಳಸಿಕೊಳ್ಳುತ್ತಾರೆ. ನಿನ್ನೆ (ಮೇ 10) ಕೂಡ ಸಮಂತಾ ಫೋಟೊ ಒಂದನ್ನು ಇನ್‌ಸ್ಟಾ ರೀಲ್ಸ್‌ನಲ್ಲಿ ಬಳಸಿಕೊಂಡಿದ್ದರು. ಅದರಲ್ಲಿ ಮುಖ ತೋರಿಸದೆ ಟೆವೆಲ್ ಸುತ್ತಿಕೊಂಡ ಫೋಟೊವೊಂದನ್ನು ಶೇರ್ ಮಾಡಿದ್ದರು. ಇದು ಸಮಂತಾರದ್ದೇ ಫೋಟೊ ಎಂದು ಟಾಲಿವುಡ್ ಹೇಳುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಮಂತಾ ಬರೆದ ನೋಟ್‌ನಲ್ಲಿ ಏನಿದೆ?
ಟವೆಲ್ ಸುತ್ತಿಕೊಂಡ ಫೋಟೊದಲ್ಲಿ ಸಮಂತಾ ಮುಖ ತೋರಿಸಿಕೊಂಡಿಲ್ಲ. ಆದರೆ, ಫೋಟೊ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಮಂತಾ ಫೋಟೊ ಜೊತೆ ಅವರು ಬರೆದ ಸಾಲುಗಳೂ ಕೂಡ ಅಭಿಮಾನಿಗಳ ಗಮನ ಸೆಳೆದಿದೆ. ಅಷ್ಟಕ್ಕೂ ಮಿರರ್ ಮುಂದೆ ನಿಂತು ಸಮಂತಾ ಒಂದಿಷ್ಟು ಸಾಲುಗಳನ್ನು ಬರೆದುಕೊಂಡಿದ್ದಾರೆ. ಅದು ವಾರ ಸ್ಟೈಲಿಸ್ಟ್ ನಿರಜಾ ಕೋನಾಗೆ ಬರೆದ ಸಾಲುಗಳು. " ನಿನ್ನು ಈಗಾಗಲೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಬಂದು ಬಿಡು, ನೀನು ಬರೆದ ಕ್ಯೂ ಸಾಲುಗಳಿಗೆ ಥ್ಯಾಂಕ್ಯೂ." ಎಂದು ಸಮಂತಾ ಬರೆದುಕೊಂಡಿದ್ದಾರೆ.

ಯಾರೀ ನೀರಜಾ ಕೋನಾ?
ಟಾಲಿವುಡ್‌ನಲ್ಲಿ ನೀರಜಾ ಕೋನಾ ಎಲ್ಲಾ ನಟಿಯರಿಗೂ ಗೊತ್ತು. ವಸ್ತ್ರ ವಿನ್ಯಾಸಕಿಯಾಗಿರುವ ನೀರಜಾ ಕೋನಾ ಟಾಲಿವುಡ್‌ನ ಕೆಲ ನಟಿಯರ ಫೇವರೀಟ್. ಅದರಲ್ಲೂ ಟಾಲಿವುಡ್ ನಟಿ ಸಮಂತಾಗೆ ಅಚ್ಚು ಮೆಚ್ಚು. ನೀರಜಾ ಕೊನಾ ಸಮಂತಾಗೆ ಕ್ಯೂಟ್ ನೋಟ್ ಒಂದನ್ನು ಬರೆದಿದ್ದರು. ಅದನ್ನೂ ಸಮಂತಾ ಶೇರ್ ಮಾಡಿಕೊಂಡಿದ್ದು, ಮಿರರ್ ಮುಂದೆ ಅಂಟಿಸಿಕೊಂಡಿದ್ದಾರೆ. " ಪಾಪಾ ಲವ್ ಯು! ನೀನು ಅದ್ಭುತ ಎನ್ನುವುದನ್ನು ನೆನಪಿನಲ್ಲಿಟ್ಟುಕೊ.." ಎಂದು ನೀರಜಾ ಸಂದೇಶ ರವಾನಿಸಿದ್ದರು.

ಸಮಂತಾ ಫುಲ್ ಬ್ಯುಸಿ
ಸಮಂತಾ ಸದ್ಯ ಕಾಶ್ಮೀರದಲ್ಲಿದ್ದಾರೆ. ವಿಜಯ್ ದೇವರಕೊಂಡ ಜೊತೆ ನಟಿಸುತ್ತಿರುವ ಸಿನಿಮಾದಲ್ಲಿ ಸಮಂತಾ ಕಾಶ್ಮೀರಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಮಜಲಿ' ಚಿತ್ರದ ನಿರ್ದೇಶಕ ಶಿವ ನಿರ್ವಾನ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಲ್ಲದೆ ಇತ್ತೀಚೆಗೆ ನಯನತಾರಾ ಹಾಗೂ ವಿಜಯ್ ಸೇತುಪತಿ ಜೊತೆ ನಟಿಸಿದ 'ಕಾತುವಾಕುಲಾ ರೆಂಡು ಕಾದಲ್' ಸಿನಿಮಾ ತೆರೆಕಂಡಿದ್ದು, ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ.


Click it and Unblock the Notifications











