"ಸಮಂತಾ ಖಿನ್ನತೆಗೆ ಜಾರಿದ್ದಾಳೆ.. ಆಕೆ ಫ್ಲಾಪ್ ಕ್ವೀನ್": ವಿಮರ್ಶಕನ ಮತ್ತೊಂದು ಅತಿರೇಕದ ಕಮೆಂಟ್!
ಟಾಲಿವುಡ್‌ನ ಸ್ಟಾರ್ ನಿರ್ದೇಶಕ ಗುಣಶೇಖರ್ ಆಕ್ಷನ್ ಕಟ್ ಹೇಳಿದ್ದ ಸಿನಿಮಾ 'ಶಾಕುಂತಲಂ'. ಈ ಪ್ಯಾನ್ ಇಂಡಿಯಾ ಸಿನಿಮಾ ಸಿಕ್ಕಾಪಟ್ಟೆ ಟೀಕೆಗಳನ್ನು ಎದುರಿಸುತ್ತಿದೆ. ಈ ಸಿನಿಮಾ ಕಾಳಿದಾಸನ 'ಅಭಿಜ್ಞಾನ ಶಾಕುಂತಲಂ' ಕಥೆಯನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣ ಮಾಡಲಾಗಿದೆ. ಶಕುಂತಲಾ ಪಾತ್ರದಲ್ಲಿ ಸಮಂತಾ ನಟಿಸಿದ್ದು, ಇದೇ ಏಪ್ರಿಲ್ 14 ರಂದು ಅದ್ಧೂರಿಯಾಗಿ ರಿಲೀಸ್ ಆಗಿದೆ.
'ಶಾಕುಂತಲಂ' ಸಿನಿಮಾಗೆ ಫಸ್ಟ್ ಡೇ ಫಸ್ಟ್ ಶೋಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡಿಲ್ಲ. ಟಾಲಿವುಡ್ ಮೂಲಗಳ ಪ್ರಕಾರ, ಈ ಸಿನಿಮಾದ ನಿರ್ಮಾಪಕರಿಗೆ ಸಿಕ್ಕಾಪಟ್ಟೆ ನಷ್ಟ ಆಗಿದೆ ಅಂತಲೂ ಹೇಳಲಾಗುತ್ತಿದೆ.
ಈ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಮೆಂಟ್ ಮಾಡಲಾಗುತ್ತಿದೆ. ಈ ಮಧ್ಯೆ ವಿವಾದಾತ್ಮಕ ವಿಮರ್ಶಕ ಉಮೈರ್ ಸಂಧು ಈ ಸಿನಿಮಾದ ನಾಯಕಿ ಸಮಂತಾ ವಿರುದ್ಧ ಕಮೆಂಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಸೆಲಿನಾ ಜೇಟ್ಲಿ ವಿರುದ್ಧ ಕಮೆಂಟ್ ವಿವಾದಕ್ಕೀಡಾಗಿದ್ದರು. ಈಗ 'ಶಾಕುಂತಲಂ' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಸಮಂತಾ ವಿರುದ್ಧನೂ ಕಮೆಂಟ್ ಮಾಡಿದ್ದಾರೆ.

ಸಮಂತಾ 'ಫ್ಲಾಪ್ ಕ್ವೀನ್'
ಉಮೈರ್ ಸಂಧು ವಿರುದ್ಧ ಬಾಲಿವುಡ್ ತಾರೆಯರು ಕಣ್ಣು ಕೆಂಪು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಹೀರೊಯಿನ್‌ಗಳ ಪರ್ಸನಲ್ ಲೈಫ್ ಬಗ್ಗೆ ಕಮೆಂಟ್ ಮಾಡಿ ವಿವಾದವನ್ನಯ ಮೈಮೇಲೆ ಎಳೆದುಕೊಂಡಿದ್ದಾರೆ. ಈಗ ಸಮಂತಾ ವಿರುದ್ಧವೂ ಟ್ವೀಟ್ ಮಾಡಿದ್ದು, 'ಫ್ಲಾಪ್ ಕ್ವೀನ್' ಎಂದು ಬರೆದುಕೊಂಡಿದ್ದಾರೆ.
"ಸಮಂತಾ ರುಥ್ ಪ್ರಭು ಕೆರಿಯರ್ ಹಾಗೂ ಕ್ರೇಜ್ ಮುಗಿದ ಅಧ್ಯಾಯ. ಇವರ ಸೋಲೋ ಹಾಗೂ ಅತೀ ದೊಡ್ಡ ರಿಲೀಸ್ ಶಾಕುಂತಲಂ ಮೊದಲ ದಿನ ವಿಶ್ವದಾದ್ಯಂತ ದುರಂತ ಕಂಡಿದೆ. ಸಮಂತಾ ಒಬ್ಬ 'ಫ್ಲಾಪ್ ಕ್ವೀನ್'. ನಿರ್ಮಾಪಕರಿಗೆ ಸಿಕ್ಕಾಪಟ್ಟೆ ಹಣ ನಷ್ಟ ಆಗಿದೆ. ಮೊದಲ ದಿನದ ಕಲೆಕ್ಷನ್ ನಾಚಿಕೆಗೇಡು" ಎಂದು ಉಮೈರ್ ಸಂಧು ಟ್ವೀಟ್ ಮಾಡಿದ್ದಾರೆ. ಇದೇ ಟ್ವೀಟ್ ಈಗ ವೈರಲ್ ಆಗಿದೆ. ಇದರ ಹಿಂದೇನೆ ಇನ್ನೊಂದು ಟ್ವೀಟ್ ಮಾಡಿದ್ದಾರೆ.
"ಸಮಂತಾ ಖಿನ್ನತೆಗೆ ಜಾರಿದ್ದಾರೆ"- ಉಮೈರ್ ಸಂಧು ಟ್ವೀಟ್
ಮೊದಲ ಟ್ವೀಟ್ ಸಿನಿಮಾ ರಿಲೀಸ್ ಆದ ದಿನ ಮಾಡಿದ್ದರು. ಏಪ್ರಿಲ್ 16ರಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. " ಶಾಕುಂತಲಂ ಸಿನಿಮಾದ ಸೋಲಿನ ಬಳಿಕ ಸಮಂತಾ ಖಿನ್ನತೆಗೆ ಜಾರಿದ್ದಾರೆ. ನಿನ್ನೆಯಿಂದ ಸಮಂತಾ ತನ್ನ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಅವರ ಬ್ರ್ಯಾಂಡ್ ಹಾಗೂ ಮಾರ್ಕೆಟ್ ಬೆಲೆ ಒಂದು ದಿನದಲ್ಲೇ ಕಡಿಮೆಯಾಗಿದೆ" ಎಂದು ಉಮೈರ್ ಸಂಧು ಟ್ವೀಟ್ ಮಾಡಿದ್ದಾರೆ.
ಇನ್ನೊಂದು ಕಡೆ ಪ್ರೇಕ್ಷಕರು ಕೂಡ 'ಶಾಕುಂತಲಂ' ಸಿನಿಮಾ ಬಗ್ಗೆ ಕಿಡಿಕಾರಿದ್ದಾರೆ. ಸಿನಿಮಾದ ಸ್ಕ್ರೀನ್ ಹಾಗೂ ವಿಎಫ್‌ಎಕ್ಸ್ ಬಗ್ಗೆ ಕಂಡು ರೊಚ್ಚಿಗೆದ್ದಿದ್ದಾರೆ. ಕಳೆದ ಮೂರು ದಿನದ ಕಲೆಕ್ಷನ್ ಕಳಪೆಯಾಗಿದೆ. ಈ ಮಧ್ಯೆ ಉಮೈರ್ ಸಂಧು ನೆಗೆಟಿವ್ ಕಮೆಂಟ್ ಮಾಡಿದ್ದು, ಟ್ವೀಟ್‌ಗಳು ವೈರಲ್ ಆಗಿವೆ. ಆದರೆ, ಸಮಂತಾ ಬಗ್ಗೆ ಕಮೆಂಟ್ ಮಾಡಿದ್ದಕ್ಕೆ ನೆಟ್ಟಿಗರು ಉಮೈರ್ ಸಂಧು ವಿರುದ್ಧ ತಿರುಗಿಬಿದ್ದಿದ್ದಾರೆ.

ಉಮೈರ್ ಸಂಧು ನೆಟ್ಟಿಗರಿಂದ ಕ್ಲಾಸ್
ಉಮೈರ್ ಸಂಧು ಹೀಗೆ ಇಲ್ಲಸಲ್ಲದ ವಿಷಯಗಳಿಗೆ ಟ್ವೀಟ್ ಮಾಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಈಗ ಸಮಂತಾ ವಿರುದ್ಧ ಟ್ವೀಟ್ ಮಾಡಿದ್ದಕ್ಕೆ ನೆಟ್ಟಿಗರ ಕಣ್ಣುಗಳು ಕೆಂಪಗಾಗಿವೆ. " ಚಿಂತೆ ಮಾಡಬೇಡ. ಎಲ್ಲರಿಗೂ ಹಿಟ್ ಮತ್ತು ಪ್ಲಾಪ್ ಸಿಕ್ಕಿದೆ. ಎಸ್‌ಆರ್‌ಕೆ, ಅಮಿತಾಬ್, ಆಮಿರ್, ದೀಪಿಕಾ, ಆಲಿಯಾ.. ಸಮಂತಾ ಕೂಡ ಹಲವು ಹಿಟ್‌ಗಳನ್ನು ಕೊಟ್ಟಿದ್ದಾರೆ. ಇದೊಂದು ಫ್ಲಾಪ್ ಆದರೆ ಏನಂತೆ?" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು " ಬಾಯ್ ಮುಚ್ಚು.. ಸುಮ್ಮನೆ ಗಾಸಿಪ್ ಹಬ್ಬಿಸುತ್ತೀಯಾ.. ಈ ಹಿಂದೆ ನೀನು ಹೇಳಿದ್ದೆಲ್ಲವೂ ಸುಳ್ಳು ಎಂದು ಸಾಬೀತಾಗಿದೆ" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಶಾಕುಂತಲಂ ಸಿನಿಮಾ ಬಗ್ಗೆ ಇದೇ ಉಮೈರ್ ಸಂಧು ಪಾಸಿಟಿವ್ ವಿಮರ್ಶೆ ಕೊಟ್ಟು, 3 ಸ್ಟಾರ್ ಕೊಟ್ಟಿದ್ದನ್ನು ಟ್ವೀಟ್ ಮಾಡಿ ಕಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











