ಸಮಂತಾ ನಟನೆಗೆ ಒಂದು ವರ್ಷ ಬ್ರೇಕ್ ಕೊಡೋದು ನಿಜವೇ? ಅಸಲಿ ಸಂಗತಿಯೇನು?
ಸಮಂತಾ ಬಾಲಿವುಡ್, ಟಾಲಿವುಡ್ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಎರಡೂ ಚಿತ್ರರಂಗದಲ್ಲೂ ಒಟ್ಟೊಟ್ಟಿಗೆ ನಟಿಸುತ್ತಿದ್ದಾರೆ. ಸದ್ಯ ವಿಜಯ್ ದೇವರಕೊಂಡ ಜೊತೆ 'ಖುಷಿ' ಸಿನಿಮಾದಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೇ ಕೊನೆಯ ಹಂತದ ಚಿತ್ರೀಕರಣವನ್ನು ಮುಗಿಸಿದ್ದಾರೆ.
ಸಮಂತಾ ಕಳೆದ ಕೆಲವು ವರ್ಷಗಳಿಂದ ಒಂದಲ್ಲ ಒಂದು ಸಂಕಷ್ಟಕ್ಕೆ ಸಿಲುಕುತ್ತಲೇ ಇದ್ದರು. ನಾಗ ಚೈತನ್ಯ ಜೊತೆ ವಿಚ್ಛೇದನ. ಡಿವೋರ್ಸ್ ಬಳಿಕ ಅನಾರೋಗ್ಯ ಹೀಗೆ ಜೀವನದಲ್ಲಿ ತೊಂದರೆ ಅನುಭವಿಸಿದ್ದರು. ಕೊನೆಗೂ ಇವೆಲ್ಲದರಿಂದ ಹೊರ ಬಂದು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

ಈಗಾಗಲೇ ಸಮಂತಾ 'ಸಿಟಾಡೆಲ್' ಹಾಗೂ 'ಖುಷಿ' ಎರಡು ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಗ್ಯಾಪ್‌ನಲ್ಲೇ ಸಮಂತಾ ಒಂದು ವರ್ಷ ನಟನೆಯಿಂದ ದೂರ ಉಳಿಯುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಆದ್ರೀಗ ಈ ಸುದ್ದಿಗೆ ಚಿಕ್ಕದೊಂದು ಟ್ವಿಸ್ಟ್ ಸಿಕ್ಕಿದೆ.
ಸಮಂತಾ ಬಗ್ಗೆ ಹರಿದಾಡುತ್ತಿರೋ ಸುದ್ದಿಯೇನು?
ಡಿವೋರ್ಸ್ ಬಳಿಕ ಸಮಂತಾ ಮತ್ತೆ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ಅನಾರೋಗ್ಯದ ನಡುವೆಯೂ ಪುಟಿದೆದ್ದು ನಿಂತಿದ್ದಾರೆ. ಅಸಲಿಗೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗುರುತಿಸಿಕೊಂಡಿರುವ ಸಮಂತಾ ಬಗ್ಗೆ ಒಂದು ಸುದ್ದಿ ಓಡಾಡಿತ್ತು. ದಿಢೀರನೇ ಒಂದು ವರ್ಷ ಸಿನಿಮಾದಿಂದ ದೂರು ಉಳಿಯುತ್ತಿದ್ದಾರೆ ಎಂದು ವರದಿಯಾಗಿತ್ತು.

ಸಮಂತಾ ಮಯೋಸೈಟಿಸ್‌ನಿಂದ ಬಳಸುತ್ತಿರೋದು ಗೊತ್ತೇ ಇದೆ. ಈ ಕಾರಣಕ್ಕೆ ಒಂದು ವರ್ಷ ಬ್ರೇಕ್ ಪಡೆದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಲಿದ್ದಾರೆ ಅನ್ನೋ ವರದಿ ಹರಿದಾಡಿತ್ತು. ಆದ್ರೀಗ ಅದೆಲ್ಲಾ ಸುಳ್ಳು ಅಂತ ಬಾಲಿವುಡ್ ನ್ಯೂಸ್ ವೆಬ್‌ಸೈಟ್ ಪಿಂಕ್ ವಿಲ್ಲಾ ವರದಿ ಮಾಡಿದೆ.
ಸಮಂತಾ ಬ್ರೇಕ್ ಪಡೆಯೋದು ನಿಜ, ಆದರೆ..?
ಸಮಂತಾ ರುತ್ ಪ್ರಭು ಸಿನಿಮಾ ಬ್ರೇಕ್ ಪಡೆಯುತ್ತಿರೋದು ನಿಜ. ಆದರೆ, ಒಂದು ವರ್ಷ ಬ್ರೇಕ್ ತೆಗೆದುಕೊಳ್ಳುತ್ತಿಲ್ಲ. ಕೆಲವೇ ತಿಂಗಳು ವಿಶ್ರಾಂತಿ ಪಡೆದು ಮತ್ತೆ ಸಿನಿಮಾ ಮರಳುತ್ತಿದ್ದಾರೆ. ಈ ಬಗ್ಗೆ ಮೂಲಗಳು ಮಾಹಿತಿ ನೀಡಿದ್ದಾಗಿ ಪಿಂಕ್ ವಿಲ್ಲ ವರದಿ ಮಾಡಿದೆ.
'ಶಾಕುಂತಲಂ' ಸಿನಿಮಾ ಬಳಿಕ ಸಮಂತಾ ಬ್ಯಾಕ್ ಟು ಬ್ಯಾಕ್ ಶೂಟಿಂಗ್ ಹಾಗೂ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ 'ಖುಷಿ' ಹಾಗೂ 'ಸಿಟಾಡೆಲ್' ಚಿತ್ರೀಕರಣ ಒಂದರ ಹಿಂದೊಂದು ನಡೆಯುತ್ತಿತ್ತು. ಅಲ್ಲದೆ ಹೊಸ ಪ್ರಾಜೆಕ್ಟ್ ಕಡೆ ಮುಖ ಮಾಡುವುದಕ್ಕೂ ಮುನ್ನ ಆರೋಗ್ಯದ ಕಡೆಗೂ ಗಮನ ಹರಿಸಬೇಕಿದೆ. ಈ ಕಾರಣಕ್ಕೆ ಚಿಕ್ಕದೊಂದು ಪಡೆದಿದ್ದಾರೆ ಎನ್ನಲಾಗಿದೆ.
ಎರಡು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ
ಸಮಂತಾ ಎರಡು ಪ್ರಾಜೆಕ್ಟ್‌ಗಳಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. 'ಖುಷಿ' ಹಾಗೂ 'ಸಿಟಾಡೆಲ್' ಈ ಎರಡೂ ಪ್ರಾಜೆಕ್ಟ್‌ಗಳೂ ಮುಗಿಯುವ ಹಂತದಲ್ಲಿದೆ. ಸದ್ಯದಲ್ಲೇ ಒಂದೊಂದೇ ಪ್ರಾಜೆಕ್ಟ್ ಪ್ರಚಾರ ಆರಂಭ ಮಾಡುವ ಸಾಧ್ಯತೆಯಿದೆ. ಅಷ್ಟರೊಳಗೆ ಸಮಂತಾ ಕೆಲವು ತಿಂಗಳು ಬ್ರೇಕ್ ಪಡೆದು ಚಿತ್ರರಂಗಕ್ಕೆ ಮರಳುತ್ತಿದ್ದಾರೆ.
ಈಗಾಗಲೇ 'ಖುಷಿ' ಸಿನಿಮಾದ ಹಾಡೊಂದು ರಿಲೀಸ್ ಆಗಿದ್ದು, ಸೂಪರ್ ಹಿಟ್ ಆಗಿದೆ. ವಿಜಯ್ ದೇವರಕೊಂಡ ಹಾಗೂ ಸಮಂತಾ ಜೋಡಿಯನ್ನು ಜನರು ಇಷ್ಟ ಪಡುವುದಕ್ಕೆ ಶುರು ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಹಾಗೂ ಹಾಡುಗಳಿಗಾಗಿ ಎದುರು ನೋಡುತ್ತಿದ್ದಾರೆ.


Click it and Unblock the Notifications











