'ಪುಷ್ಪ' ಸಿನಿಮಾದಲ್ಲಿ ಸಮಂತಾ ಐಟಂ ಸಾಂಗ್‌ ಕಂಡು ಥಿಯೇಟರ್‌ನಲ್ಲೇ ಒನ್ಸ್‌ ಮೋರ್ ಬೇಡಿಕೆ ಇಟ್ಟ ಫ್ಯಾನ್ಸ್

ಐಕಾನ್ ಸ್ಟಾರ್ ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾ ಇಂದು (ಡಿಸೆಂಬರ್ 17) ವಿಶ್ವದಾದ್ಯಂತ ತೆರೆಕಂಡಿದೆ. ಹೆಸರಿಗೆ ಪ್ಯಾನ್ ಇಂಡಿಯಾ ಸಿನಿಮಾ ಅಂತ ಹೇಳಿದ್ದರೂ, ತೆಲುಗು ಹಾಗೂ ತಮಿಳಿನಲ್ಲಿ ಅಚ್ಚು ಕಟ್ಟಾಗಿ ರಿಲೀಸ್ ಆಗಿದ್ದು ಬಿಟ್ಟರೆ, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದು ಇನ್ನೂ ಗೊಂದಲದಲ್ಲೇ ಇದೆ. ಸಿನಿಮಾ ಬಿಡುಗಡೆಗೆ ಒಂದು ದಿನವಿರುವಾಗಲೇ ವಿವಾದಕ್ಕೆ ಸಿಲುಕಿದ ಸಿನಿಮಾಗೆ ರೆಸ್ಪಾನ್ಸ್ ಕೂಡ ಅಷ್ಟಕ್ಕಷ್ಟೇ ಇದೆ.

ಪ್ರೇಕ್ಷಕರಿಗೆ 'ಪುಷ್ಪ' ಸಿನಿಮಾದ ಫಸ್ಟ್ ಹಾಫ್ ಓಕೆ ಅನಿಸಿದೆ. ಸೆಕೆಂಡ್ ಹಾಫ್ ತುಂಬಾನೇ ದೊಡ್ಡದಿದೆ ಅಂತನಿಸಿದೆ. ಈ ಸಿನಿಮಾ ಬಗ್ಗೆ ಒಬ್ಬೊಬ್ಬರದ್ದೂ ಒಂದು ಪ್ರತಿಕ್ರಿಯೆ ಸಿಕ್ಕಿದೆ. 'ಪುಷ್ಪ' ಫಸ್ಟ್ ಡೇ ಫಸ್ಟ್ ಶೋನೇ ಠುಸ್ ಪಟಾಕಿಯಂತಾಗಿದೆ. ಇಷ್ಟು ಬರೀ ಬಿಲ್ಡಪ್ ಕೊಟ್ಟಿದ್ದಷ್ಟೇ ಬಂತು ಅಂತ ಸಿನಿಪ್ರಿಯರು ಮಾತಾಡಿಕೊಳ್ಳುತ್ತಿದ್ದಾರೆ. ಆದರೆ, 'ಪುಷ್ಪ' ನೋಡಿದವರಿಗೆ ಥ್ರಿಲ್ ಕೊಟ್ಟಿದ್ದು, ಸಮಂತಾ ಐಟಂ ಸಾಂಗ್ ಮಾತ್ರ. ಅದಕ್ಕೊಂದು ಸಾಕ್ಷಿ ಇಲ್ಲಿದೆ ನೋಡಿ.

ಸಮಂತಾ ಐಟಂ ಸಾಂಗ್ ಮೆಚ್ಚಿದ ಫ್ಯಾನ್ಸ್

ಸಮಂತಾ ಐಟಂ ಸಾಂಗ್ ಮೆಚ್ಚಿದ ಫ್ಯಾನ್ಸ್

ಅಲ್ಲು ಅರ್ಜುನ್ ರಗಡ್ ಲುಕ್, ಅದ್ಧೂರಿ ತಾರಾಬಳಗ, ಸುಕುಮಾರ್ ನಿರ್ದೇಶನ ಇದ್ಯಾವುದೂ ಪ್ರೇಕ್ಷಕರಿಗೆ ಇಷ್ಟ ಆಗಿಲ್ಲ. ತೆಲುಗಿನ 'ಪುಷ್ಪ' ಸಿನಿಮಾಗೆ ಇಷ್ಟ ಅಂತ ಆಗಿದ್ದು ಕೇವಲ ಒಂದೇ ಒಂದು ಸಾಂಗ್. ಅದೂ ಸಮಂತಾ ಇದೇ ಮೊದಲ ಬಾರಿಗೆ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದು ಪ್ರೇಕ್ಷಕರಿಗೆ ಸಖತ್ ಇಷ್ಟ ಆಗಿದೆ. ದೇವಿಶ್ರೀ ಪ್ರಸಾದ್ ಟ್ಯೂನ್, ಸಮಂತಾ ಮಾದಕ ಹೆಜ್ಜೆಗಳು ಸಿನಿಪ್ರೇಮಿಗಳಿಗೆ ಸಿಕ್ಕಾಪಟ್ಟೆ ಕಿಕ್ ಕೊಟ್ಟಿದೆ.

ಐಟಂ ಸಾಂಗಿಗೆ ಒನ್ಸ್ ಮೋರ್ ಕೂಗು

ವಿಚ್ಛೇದನದ ಬಳಿಕ ಸಮಂತಾ ಇದೇ ಮೊದಲ ಬಾರಿಗೆ ಐಟಂ ಸಾಂಗ್‌ ಒಂದರಲ್ಲಿ ನಟಿಸಿದ್ದಾರೆ. ಈಗಾಗಲೇ 'ಪುಷ್ಪ' ಟೀಮ್ 'ಹೂಂ ಅಂತಿಯಾ.. ಊಹೂಂ ಅಂತಿಯಾ' ಅನ್ನುವ ಲಿರಿಕಲ್ ಸಾಂಗ್ ಅನ್ನು ರಿಲೀಸ್ ಮಾಡಿದ್ದರು. ಆದರೆ, ಥಿಯೇಟರ್‌ನಲ್ಲಿ ಸಮಂತಾಳ ಮಾದಕ ಹಾಡನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಒನ್ಸ್ ಮೋರ್ ಅಂತಿದ್ದಾರೆ. ಅದ್ರಲ್ಲೂ ಸಮಂತಾ ಹುಟ್ಟೂರು ಚೆನ್ನೈನ ಥಿಯೇಟರ್‌ಗಳಲ್ಲಿ ಸಮಂತಾ ಹಾಡಿಗೆ ಪ್ರೇಕ್ಷಕರು ಒನ್ಸ್ ಮೋರ್ ಅಂತ ಬೇಡಿಕೆ ಇಡುತ್ತಿದ್ದಾರೆ. ವಿಮರ್ಶಕರೊಬ್ಬರ ಈ ಟ್ವೀಟ್‌ಗೆ ಸಮಂತಾ ಮೆಚ್ಚುಗೆ ಸೂಚಿಸಿದ್ದಾರೆ.

'ಪುಷ್ಪ' ಐಟಂ ಸಾಂಗಿಗೆ 1 ಮಿಲಿಯನ್ ಲೈಕ್ಸ್

'ಪುಷ್ಪ' ಐಟಂ ಸಾಂಗಿಗೆ 1 ಮಿಲಿಯನ್ ಲೈಕ್ಸ್

ಸಮಂತಾ ಲಿರಿಕಲ್ ಸಾಂಗ್ ಕೂಡ ಯೂಟ್ಯೂಬ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಕೇವಲ ಆರು ದಿನಗಳಲ್ಲಿ 39 ಮಿಲಿಯನ್ ಮಂದಿ ತೆಲುಗಿನ 'ಪುಷ್ಪ' ಐಟಂ ಸಾಂಗ್ ಅನ್ನು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಇದೇ ಹಾಡಿಗೆ 1 ಮಿಲಿಯನ್ ಲೈಕ್ಸ್ ಕೂಡ ಸಿಕ್ಕಿದೆ. ಕನ್ನಡದಲ್ಲೂ 'ಹೂ ಅಂತಿಯಾ.. ಊಹೂಂ ಅಂತಿಯಾ' ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇದೂವರೆಗೂ ಸುಮಾರು 37 ಲಕ್ಷ ಮಂದಿ ಈ ಹಾಡನ್ನು ವೀಕ್ಷಣೆ ಮಾಡಿದ್ದಾರೆ.

ಸಮಂತಾ ಫುಲ್ ಖುಷ್

ಸಮಂತಾ ಫುಲ್ ಖುಷ್

ಸಮಂತಾ ಅಭಿಮಾನಿಯೊಬ್ಬ ಥಿಯೇಟರ್‌ ಒಳಗೆ ಅಭಿಮಾನಿಗಳು ಹುಚ್ಚೆದು ಕುಣಿಯವ ಹಾಗೂ ಒನ್ಸ್ ಮೋರ್ ಅನ್ನುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ ಮಾಡಿದ್ದ. ಇದನ್ನು ಕಂಡು ಸಮಂತಾ ಕೂಡ "ಮಾಸ್ ಪ್ರೇಕ್ಷಕರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ." ಎಂದು ಟ್ವೀಟ್ ಮಾಡಿದ್ದರು. ಆದರೆ, ಕಾಪಿ ರೈಟ್ ಸಂಬಂಧ ಆ ವಿಡಿಯೋವನ್ನು ಹಿಂತೆಗೆದುಕೊಳ್ಳಲಾಗಿದೆ. ಒಟ್ಟಿನಲ್ಲಿ 'ಪುಷ್ಪ' ಸಿನಿಮಾದ ಪ್ರಮುಖ ಹೈಲೈಟ್ ಸಮಂತಾ ಅನ್ನುವುದನ್ನು ಪ್ರೇಕ್ಷಕರೇ ಒಪ್ಪಿಕೊಂಡಿದ್ದಾರೆ.

More from Filmibeat

English summary
Samantha Item song in Pushpa audience says once more in theaters. Chennai audience goes crazy in theaters after watching Samantha in OoAntava.. ooAntava item song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X