ಮಮ್ಮುಟ್ಟಿ ಜೊತೆ ಫೋಟೋ.. ಸಮಂತಾಗೆ ಅಭಿಮಾನದ ಕ್ಷಣ; ಫಹಾದ್ ಫಾಸಿಲ್ ನೆಚ್ಚಿನ ನಟ ಎಂದ ಸ್ಯಾಮ್!
ಸಮಂತಾ ರುಥ್ ಪ್ರಭು ಮತ್ತೆ ಆಕ್ಟಿವ್ ಆಗಿದ್ದಾರೆ. ಅನಾರೋಗ್ಯ ಹಿನ್ನೆಲೆ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದ ನಟಿ ಹೊಸ ಹುರುಪಿನೊಂದಿಗೆ ಮತ್ತೆ ಕೆಲಸ ಮರಳಿದ್ದಾರೆ. ಕೆಲವು ತಿಂಗಳು ಸಿನಿಮಾದಿಂದ ದೂರ ಉಳಿದಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದರು. ತಮ್ಮ ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಈಗ ಅಂತಹದ್ದೇ ಒಂದು ಸಂತಸದ ಸಂಗತಿಯನ್ನು ಶೇರ್ ಮಾಡಿಕೊಂಡಿದ್ದಾರೆ.
ಟಾಲಿವುಡ್ ಲೇಡಿ ಸೂಪರ್ ಸ್ಟಾರ್ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಖುಷಿ ವಿಷಯವನ್ನು ಹಂಚಿಕೊಂಡಿದ್ದಾರೆ. ತನ್ನ ನೆಚ್ಚಿನ ನಟ, ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೊವನ್ನು ಹಂಚಿಕೊಂಡು ಸಂತಸ ಪಟ್ಟಿದ್ದಾರೆ.

ಸಮಂತಾಗೆ ಕೋಟಿ ಕೋಟಿ ಲೆಕ್ಕದಲ್ಲಿ ಅಭಿಮಾನಿಗಳಿದ್ದಾರೆ. ಆದರೆ, ಖುದ್ದಾಗಿ ಸಮಂತಾ ಅಭಿಮಾನಿಯಾಗಿದ್ದು ಅವರ ಫ್ಯಾನ್ಸ್‌ಗೆ ಥ್ರಿಲ್ ಕೊಟ್ಟಿದೆ. ಆ ಫೋಟೋಗಳನ್ನು ಸಮಂತಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ವೈರಲ್ ಆಗಿದೆ. ಈ ಮಲಯಾಳಂ ಸೂಪರ್‌ಸ್ಟಾರ್ ಜೊತೆ ಸಮಂತಾಳನ್ನು ಕಂಡ ಅಭಿಮಾನಿಗಳು ಒಂದು ಕ್ಷಣ ಕನ್ಫ್ಯೂಸ್ ಆಗಿದ್ದಾರೆ.
ಸಮಂತಾ ಫೋಟೋ ವೈರಲ್
ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಜೊತೆ ಸಮಂತಾ ತೆಗಿಸಿಕೊಂಡು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಮೇಲ್ನೋಟಕ್ಕೆ ಇದು ಯಾವುದೋ ಸಿನಿಮಾ ಶೂಟಿಂಗ್ ಹಿನ್ನೆಲೆಯಲ್ಲಿ ತೆಗೆದಂತೆ ಭಾಸವಾಗುತ್ತಿದೆ. ಸಮಂತಾ ತಿಳಿ ಹಸಿರು ಬಣ್ಣದ ಡ್ರೆಸ್‌ನಲ್ಲಿ ಮಿಂಚುತ್ತಿದ್ದು, ಮಮ್ಮುಟ್ಟಿ ಹಾಫ್ ವೈಟ್ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಹಾಗಂತ ಕೇವಲ ಮಮ್ಮುಟ್ಟಿಯಷ್ಟೇ ಅಲ್ಲ. ಮತ್ತೊಬ್ಬ ಮಲಯಾಳಂ ನಟ ಫಹಾದ್ ಫಾಸಿಲ್ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಹೀಗಾಗಿ ಸಮಂತಾ ಯಾವುದೋ ಹೊಸ ಪ್ರಾಜೆಕ್ಟ್‌ಗೆ ಕೈ ಹಾಕಿರಬಹುದು ಎಂದು ಅವರ ಅಭಿಮಾನಿಗಳು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.
'ಖುಷಿ' ಬಳಿಕ 'ಸಿಟಾಡೆಲ್' ಮೇಲೆ ಕಣ್ಣು
ಸಮಂತಾ 'ಖುಷಿ' ಬಳಿಕ ಯಾವುದೇ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಆದರೆ, 'ಸಿಟಾಡೆಲ್' ವೆಬ್ ಸೀರಿಸ್ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗಷ್ಟೇ 'ಸಿಟಾಡೆಲ್' ವೆಬ್ ಸೀರಿಸ್‌ಗೆ ಸಮಂತಾ ಡಬ್ ಕೂಡ ಮಾಡಿದ್ದರು. ಹೀಗಾಗಿ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಸಮಂತಾ ಏನಾದರೂ ಸುಳಿವು ಬಿಟ್ಟು ಕೊಟ್ಟಿರಬಹುದೇ ಎಂದು ಅಭಿಮಾನಿಗಳು ಗೆಸ್ ಮಾಡುತ್ತಿದ್ದಾರೆ
ಇನ್ನು ಮಮ್ಮುಟ್ಟಿ ಸಿನಿಮಾ ವಿಚಾರಕ್ಕೆ ಬರೋದಾರೆ, 'ಬ್ರಹ್ಮಯುಗಂ' ಸಿನಿಮಾ ಸಿನಿ ಪ್ರಿಯರಿಗೆ ಇಷ್ಟ ಆಗಿತ್ತು. ಹಾಗೇ 'ಕ್ಯಾಥಲ್ ದಿ ಕೋರ್' ಹಾಗೂ 'ಕಣ್ಣೂರ್ ಸ್ಕ್ವಾಡ್' ಸಿನಿಮಾಗಳು ಸೂಪರ್ ಹಿಟ್ ಲಿಸ್ಟ್ ಸೇರಿವೆ. ಹೀಗಾಗಿ ಅವರ ಮುಂದಿನ ಸಿನಿಮಾ ಬಗ್ಗೆ ಅವರ ಫ್ಯಾನ್ಸ್‌ಗೆ ಕುತೂಹಲವಿದೆ.
ಸಮಂತಾ ಸಿನಿ ಜರ್ನಿಗೆ 14 ವರ್ಷ
ಸಮಂತಾ ಅಭಿಮಾನಿಗಳು ಇತ್ತೀಚೆಗೆ ಖುಷಿಯ ಕ್ಷಣಗಳನ್ನು ಸಂಭ್ರಮಿಸಿದ್ದಾರೆ. ಚಿತ್ರರಂಗಕ್ಕೆ ಬಂದು 14 ವರ್ಷಗಳನ್ನು ಸಮಂತಾ ಪೂರೈಸಿದ್ದಾರೆ. 2010ರಲ್ಲಿ 'ಎಂ ಮಾಯಾ ಚೇಸಾವೇ' ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಸಮಂತಾ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ತಮಿಳು ಹಾಗೂ ತೆಲುಗು ಸೂಪರ್‌ಸ್ಟಾರ್‌ಗಳೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡು ಸಕ್ಸಸ್‌ಫುಲ್ ನಟಿ ಎನಿಸಿಕೊಂಡಿದ್ದಾರೆ.
ಇತ್ತೀಚೆಗೆ ವಿಚ್ಛೇದನದ ನೋವಿನ ಜೊತೆ ಅನಾರೋಗ್ಯ ಅವರನ್ನು ಕಾಡುತ್ತಿದೆ. ಹೀಗಿದ್ದರೂ, ಅದೆಲ್ಲದರಿಂದ ಚೇತರಿಸಿಕೊಂಡು ಸಿನಿಮಾಗಳಲ್ಲಿ ಮತ್ತೆ ಆಕ್ಟಿವ್ ಆಗಿದ್ದಾರೆ. ಸದ್ಯ ಹೆಲ್ತ್ ಪಾಡ್‌ಕಾಸ್ಟ್ ಆರಂಭಿಸಿದ್ದು, ಅದರ ಬಗ್ಗೆನೇ ಹೆಚ್ಚು ಗಮನ ಹರಿಸಿದ್ದಾರೆ.


Click it and Unblock the Notifications











