ತಿರುಪತಿಯಲ್ಲಿ ಅಪರಿಚಿತನ ಜೊತೆ ಕಂಡ ಸಮಂತಾ; ಮತ್ತೆ ಗುಸು ಗುಸು ಶುರು

ಕಳೆದ ಕೆಲವು ತಿಂಗಳು ಅನಾರೋಗ್ಯ ಹಿನ್ನೆಲೆ ಸಮಂತಾ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಒಂದಿಷ್ಟು ದಿನಗಳಿಂದ ಮತ್ತೆ ಆಕ್ಟಿವ್ ಆಗಿದ್ದು, ಕೆಲಸಕ್ಕೆ ಮರಳಿದ್ದೇನೆ ಅನ್ನುವ ಸಂದೇಶವನ್ನು ರವಾನೆ ಮಾಡಿದ್ದರು. ಈ ಬೆನ್ನಲ್ಲೇ ದಕ್ಷಿಣ ಭಾರತದ ಈ ಸ್ಟಾರ್ ನಟಿ ಸಮಂತಾ ಇತ್ತೀಚೆಗೆ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

ಸಮಂತಾ ದಿಢೀರನೇ ತಿರುಪತಿ ಭೇಟಿ ನೀಡಿ ತಿರುಮಲದಲ್ಲಿರುವ ತಿಮ್ಮಪ್ಪನ ದರ್ಶನ ಪಡೆಯಲು ಬಂದಿದ್ದರು. ಈ ವೇಳೆ ಸಮಂತಾ ಭೇಟಿ ಎಲ್ಲರ ಗಮನ ಸೆಳೆದಿದ್ದರು. ಈ ವೇಳೆ ಸಮಂತಾ ಒಬ್ಬರೇ ಬಂದಿಲ್ಲ ಅವರೊಂದಿಗೆ ಮತ್ತೊಬ್ಬ ಅಪರಿಚಿತ ವ್ಯಕ್ತಿ ಬಂದಿರೋದು ಕೂಡ ಗೊತ್ತಾಗಿತ್ತು. ಆ ವ್ಯಕ್ತಿ ಯಾರು? ಸಮಂತಾಗೂ ಆ ವ್ಯಕ್ತಿಗೂ ಏನು ಸಂಬಂಧ ಅನ್ನೋ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

Samantha once again seen with preetham jukalker while visiting Tirupati

ಸಮಂತಾ ವಿಚ್ಚೇದನದ ಬಳಿಕ ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಅದರಲ್ಲೂ ಮಯೋಸೈಟಿಸ್ ಕಾಯಿಲೆಯಿಂದ ಬಳಲುತ್ತಿರುವ ನಟಿ ಚಿಕಿತ್ಸೆ ಜೊತೆಗೆ ಆಧ್ಯಾತ್ಮದ ಮೊರೆ ಹೋಗಿರುವುದು ಗೊತ್ತೇ ಇದೆ. ಶಿರಡಿ ಸಾಯಿ ಸೇರಿದಂತೆ ಹಲವೆಡೆ ದರ್ಶನ ಪಡೆಯುತ್ತಿದ್ದಾರೆ. ಈಗ ತಿರುಮಲದಲ್ಲಿರುವ ತಿರುಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.

ನಿನ್ನೆ (ಮಾರ್ಚ್ 4) ತಿರುಪತಿಗೆ ಬಂದಿದ್ದ ಸಮಂತಾ ನೋಡಿ ಅಲ್ಲಿನ ಖುಷಿ ಪಟ್ಟಿದ್ದೇನೋ ಹೌದು. ಆದರೆ, ಸಮಂತಾ ತಿರುಪತಿಗೆ ಬಂದ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಕೆ ಜೊತೆ ಬಂದಿದ್ದ ವ್ಯಕ್ತಿಯ ಮೇಲೆ ಕಣ್ಣು ಬಿದ್ದಿದೆ. ಅಸಲಿಗೆ ಈ ವ್ಯಕ್ತಿ ಬಗ್ಗೆ ಈ ಹಿಂದೆ ಕೂಡ ಚರ್ಚೆಯಾಗಿತ್ತು. ಸಮಂತಾ ವಿಚ್ಚೇದನಕ್ಕೆ ಈತನೇ ಕಾರಣ ಅಂತ ನಾಗಚೈತನ್ಯ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಗಂಭೀರ ಆರೋಪ ಮಾಡಿದ್ದರು. ಅದೇ ವ್ಯಕ್ತಿ ಮತ್ತೆ ಸಮಂತಾ ಜೊತೆ ಕಾಣಿಸಿಕೊಂಡಿದ್ದಾರೆ.

ಅಂದ ಹಾಗೆ ಈ ವ್ಯಕ್ತಿಯ ಹೆಸರು ಪ್ರೀತಂ ಜುಕಾಲ್ಕರ್. ಇವರು ನಟಿ ಸಮಂತಾಗೆ ತುಂಬಾನೇ ಆತ್ಮೀಯರು. ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನದ ಸಂದರ್ಭದಲ್ಲಿಯೂ ಪ್ರೀತಮ್ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಈತನಿಂದಲೇ ಇಬ್ಬರ ದಾಂಪತ್ಯ ಜೀವನ ಹಾಳಾಗಿದ್ದು, ಭಿನ್ನಾಭಿಪ್ರಾಯಗಳು ಮೂಡುವುದಕ್ಕೆ ಈತನೇ ಕಾರಣ ಅಂತ ಆರೋಪ ಮಾಡಲಾಗಿತ್ತು. ಆ ವೇಳೆ ತನಗೆ ಸಮಂತಾ ಜೊತೆ ಸ್ನೇಹವಷ್ಟೇ. ಅವರ ವಿಚ್ಛೇದನಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದರು.

Samantha once again seen with preetham jukalker while visiting Tirupati

ತಿರುಪತಿಯಲ್ಲಿ ಮತ್ತೆ ಇದೇ ವ್ಯಕ್ತಿಯೊಂದಿಗೆ ಸಮಂತಾ ಕಾಣಿಸಿಕೊಂಡ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಮತ್ತದೇ ಪ್ರಶ್ನೆಗಳು ಗರಿಗೆದರಿವೆ. ತಿಮ್ಮಪ್ಪನ ದರ್ಶನ ಪಡೆಯುವುದಕ್ಕೆ ಆತನನ್ನು ಕರೆದುಕೊಂಡು ಹೋಗಲು ಕಾರಣವೇನು? ಆತನೊಂದಿಗೆ ಸ್ನೇಹವನ್ನೂ ಮೀರಿದ ಸಂಬಂಧವಿದೆಯೇ? ಎಂಬರ್ಥದಲ್ಲಿ ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಆದರೆ, ಸಮಂತಾ ಇಂತಹ ಕಮೆಂಟ್‌ಗಳಿಗೆ ಕ್ಯಾರೆ ಅಂತಾನೂ ಅಂದಿಲ್ಲ.

ಅಷ್ಟಕ್ಕೂ ಸಮಂತಾ ಆಪ್ತ ಗೆಳೆಯ ಪ್ರೀತಮ್ ಜುಕಾಲ್ಕರ್ ಯಾರು? ಇವರು ಸಿನಿಮಾ ಮಂದಿಗೆ ತುಂಬಾನೇ ಚಿರಪರಿಚಿತ. ಸೆಲೆಬ್ರೆಟಿಗಳ ವೈಯಕ್ತಿಕ ಸ್ಟೈಲಿಸ್ಟ್ ಆಗಿದ್ದಾರೆ. ಹಾಗೇ ಸಮಂತಾ ಸ್ಟೈಲಿಸ್ಟ್ ಕೂಡ ಆಗಿದ್ದರು. ಸಮಂತಾ ಕಷ್ಟದ ದಿನಗಳಲ್ಲಿ ಅವರ ಜೊತೆಗೆ ನಿಂತಿದ್ದರು. ಹೀಗಾಗಿ ಸಮಂತಾ ಹಾಗೂ ಅವರ ನಡುವೆ ಉತ್ತಮ ಬಾಂಧವ್ಯವಿದೆ. ಸದ್ಯ ಸಮಂತಾ ಸಿನಿಮಾ ಕಡೆ ಫೋಕಸ್ ಮಾಡುತ್ತಿದ್ದಾರೆ. 'ಖುಷಿ' ಬಳಿಕ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಹೀಗಾಗಿ ಅವರ ಮುಂದಿನ ಹೆಜ್ಜೆ ಏನು ಅನ್ನುವುದನ್ನು ಎದುರು ನೋಡುತ್ತಿದ್ದಾರೆ.

More from Filmibeat

English summary
Samantha seen with Preetham Jukalker in Tirupati:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X