RRR ಟ್ರೈಲರ್ ನೋಡಿದ ಕೂಡಲೇ ಇಂಥ ಬದಲಾವಣೆ ಕಂಡೇ ಇಲ್ಲ ಎಂದಿದ್ದೇಕೆ ಸಮಂತಾ?
ಜೂ. ಎನ್‌ಟಿಆರ್ ಹಾಗೂ ರಾಮ್ ಚರಣ್ ಪವರ್‌ಫುಲ್ ಕಾಂಬಿನೇಷನ್ ಸಿನಿಮಾ RRR. ಈ ಸಿನಿಮಾ ಟ್ರೈಲರ್‌ಗಾಗಿ ಕಾದು ಕೂತಿದ್ದವರಿಗೆ ಭರ್ಜರಿ ಬಾಡೂಟವೇ ಸಿಕ್ಕಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್‌ಗೆ ಸಜ್ಜಾಗಿರುವ ಈ ಸಿನಿಮಾ ಟ್ರೈಲರ್ ಚಿಂದಿ ಉಡಾಯಿಸಿದೆ. ಪ್ರೇಕ್ಷಕರ ಮನಗೆಲ್ಲುವುದಷ್ಟೇ ಅಲ್ಲ. ಟಾಲಿವುಡ್ ಮಂದಿ ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಪರ್ಫಾಮೆನ್ಸ್ ಕಂಡು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಡಿ.3ರಂದೇ RRR ಸಿನಿಮಾದ ಟ್ರೈಲರ್ ರಿಲೀಸ್ ಆಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳಿಂದ ಟ್ರೈಲರ್ ರಿಲೀಸ್ ಆಗಿರಲಿಲ್ಲ. ಕೊನೆಗೂ ಡಿಸೆಂಬರ್ 9ರಂದು ಎಲ್ಲಾ ಭಾಷೆಯಲ್ಲೂ ಟ್ರೈಲರ್ ರಿಲೀಸ್ ಆಗಿದೆ. 'RRR' ಕನ್ನಡ ಟ್ರೈಲರ್‌ನಲ್ಲಿ ರಾಮ್ ಚರಣ್ ಹಾಗೂ ಜೂ. ಎನ್‌ಟಿಆರ್ ಕನ್ನಡದಲ್ಲಿ ಧ್ವನಿ ನೀಡಿದ್ದು ಕನ್ನಡಿಗರ ಮೆಚ್ಚುಗೆಗೆ ಕಾರಣವಾಗಿದೆ. ಅದೇ ಇನ್ನೊಂದೆಡೆ ಈ ಸೂಪರ್‌ಸ್ಟಾರ್‌ಗಳ ಪವರ್‌ಫುಲ್ ಪರ್ಫಾಮೆನ್ಸ್ ಕಂಡು ನಟಿ ಸಮಂತಾ ಹೊಗಳಿ ಕೊಂಡಾಡಿದ್ದಾರೆ.
ಕೊಮರಂ ಕಂಡು 100 ಪರ್ಸೆಂಟ್ ರಿಯಲ್ ಎಂದ ಸ್ಯಾಮ್
'RRR' ಟ್ರೈಲರ್ ವೀಕ್ಷಿಸಿದ ಬಳಿಕ ಸಮಂತಾ ಸಿನಿಮಾ ಎರಡು ಪ್ರಮುಖ ಪಾತ್ರಗಳ ಬಗ್ಗೆ ಕಮೆಂಟ್ ಮಾಡಿದ್ದಾರೆ. ಅದರಲ್ಲೂ ಕೊಮರಂ ಭೀಮ್ ಪಾತ್ರ ಮಾಡಿರುವ ಜೂ.ಎನ್‌ಟಿಆರ್ ಮುಂದು ಹುಲಿ ಘರ್ಜಿಸುವ ಫೋಟೊ ಶೇರ್ ಮಾಡಿ " ಇದು 100 ಪರ್ಸೆಂಟ್ ರಿಯಲ್ ಅಂತ ನನಗೆ ಅನಿಸುತ್ತಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ನಿಮ್ಮ ಕಣ್ಣುಗಳಲ್ಲಿ ಆ ಬೆಂಕಿಯನ್ನು ಇಟ್ಟುಕೊಂಡು ನೀವು ಏನು ಬೇಕಾದರೂ ಮಾಡಬಹುದು" ಎಂದು ಸಮಂತಾ ಟ್ವೀಟ್ ಮಾಡಿದ್ದಾರೆ.
ರಾಮ್ ಚರಣ್ ಕಂಡು ಬೆರಗಾದ ಸಮಂತಾ
ಇನ್ನೊಂದು ಕಡೆ ರಾಮ್ ಚರಣ್ ಪಾತ್ರದ ಬಗ್ಗೆನೂ ಸಮಂತಾ ಥ್ರಿಲ್ ಆಗಿದ್ದಾರೆ. ರಾಮ್ ಚರಣ್ ಈ ಸಿನಿಮಾದಲ್ಲಿ ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ನಟಿಸಿದ್ದಾರೆ. ಟ್ರೈಲರ್ ನೋಡಿದ ಬಳಿಕ "ಇಂತಹ ಬದಲಾವಣೆಯನ್ನು ತೆರೆಮೇಲೆ ಹಿಂದೆಂದೂ ನೋಡಿಲ್ಲ. ಹಿಂದೆಂದೂ ಇಂತಹ ರೂಪವನ್ನು ಕಂಡಿಲ್ಲ. ಇದಕ್ಕೆ ರಾಮ್ ಚರಣ್ ಸಂಪೂರ್ಣ ವಾರಸುದಾರರು" ಎಂದು ಸಮಂತಾ ರಾಮ್ ಚರಣ್ ಪಾತ್ರದ ಹೊಗಳಿ ಟ್ವೀಟ್ ಮಾಡಿದ್ದಾರೆ.

ಕನ್ನಡದಲ್ಲೇ ಜೂ.ಎನ್‌ಟಿಆರ್ - ರಾಮ್ ಚರಣ್ ಡಬ್ಬಿಂಗ್
'RRR' ಸಿನಿಮಾ ಕನ್ನಡದಲ್ಲಿ ಗ್ರ್ಯಾಂಡ್ ಆಗಿ ಬಿಡುಗಡೆಯಾಗುತ್ತಿದೆ. ಹೀಗಾಗಿ ರಾಜಮೌಳಿ ಕನ್ನಡಿಗರಿಗೂ ಈ ಸಿನಿಮಾವನ್ನು ತಲುಪಿಸುವುದಕ್ಕೆ ಮುಂದಾಗಿದ್ದಾರೆ. ಅದರಲ್ಲೂ ರಾಮ್ ಚರಣ್ ಹಾಗೂ ಜೂ.ಎನ್‌ಟಿಆರ್ ತಮ್ಮ ಪಾತ್ರಗಳಿಗೆ ತಾವೇ ಧ್ವನಿ ನೀಡಿರುವುದು ವಿಶೇಷ. ಸಿನಿಮಾದಲ್ಲಿ ಇವರು ತಮ್ಮ ಪಾತ್ರಗಳಿಗೆ ಡಬ್ಬಿಂಗ್ ಮಾಡುವುದು ಅನುಮಾನ. ಆದರೆ, ಟ್ರೈಲರ್‌ನಲ್ಲಾದರೂ ಕನ್ನಡದಲ್ಲಿ ತಾವೇ ಸ್ವತ: ಡಬ್ ಮಾಡಿದ್ದಕ್ಕೆ ಕನ್ನಡದ ಅಭಿಮಾನಿಗಳು ಫಿದಾ ಆಗಿದ್ದಾರೆ.

ಬೆಂಗಳೂರಿಗೆ ರಾಜಮೌಳಿ ಅಂಡ್ ಟೀಮ್
'RRR' ಸಿನಿಮಾ ಪ್ರಚಾರಕ್ಕೆ ನಾಳೆ (ಡಿಸೆಂಬರ್ 10) ರಾಜಮೌಳಿ ಅಂಡ್ ಟೀಮ್ ಬೆಂಗಳೂರಿಗೆ ಕಾಲಿಡಲಿದೆ. ರಾಜಮೌಳಿ ಜೊತೆ ಜೂ.ಎನ್‌ಟಿಆರ್, ಬಾಲಿವುಡ್ ನಟಿ ಆಲಿಯಾ ಭಟ್ ಕೂಡ ಆಗಮಿಸುತ್ತಿದ್ದು, ಸಿನಿಪ್ರಿಯರಲ್ಲಿ ಕುತೂಹಲ ದುಪ್ಪಟ್ಟಾಗಿದೆ. ರಾಮ್ ಚರಣ್ ಮನೆಯಲ್ಲಿ ಮದುವೆ ಇರುವುದರಿಂದ ಬೆಂಗಳೂರಿಗೆ ಬರುವುದು ಅನುಮಾನ ಎನ್ನಲಾಗಿದೆ.


Click it and Unblock the Notifications











