ಸಮಂತಾಗೆ ಮೋಸ.. ವೃತ್ತಿಜೀವನ ಹಾಳು ಮಾಡಿದ ಆರೋಪ; ದೆಹಲಿ ಹೈಕೋರ್ಟ್ ಮೊರೆ ಹೋದ ನಾಗ ಚೈತನ್ಯ

ಇತ್ತೀಚೆಗೆ ಸಿನಿಮಾ ಪರ್ಸನಾಲಿಟಿಗಳು ತಮ್ಮ 'ವ್ಯಕ್ತಿತ್ವದ ಹಕ್ಕುಗಳ' (Personality Rights) ಕೋರಿ ನ್ಯಾಯಾಲಯ ಮೆಟ್ಟಿಲನ್ನು ಏರುತ್ತಿದ್ದಾರೆ. ಐಶ್ವರ್ಯಾ ರೈ ಬಚ್ಚನ್, ಸಲ್ಮಾನ್ ಖಾನ್ ಸೇರಿದಂತೆ ನಟ-ನಟಿಯರು ಕೋರ್ಟ್ ಮೊರೆ ಹೋಗಿದ್ದರು. ಈಗ ಟಾಲಿವುಡ್‌ ನಟ ನಾಗ ಚೈತನ್ಯ ತಮ್ಮ 'ವ್ಯಕ್ತಿತ್ವದ ಹಕ್ಕುಗಳ' ರಕ್ಷಣೆ ಕೋರಿ ದೆಹಲಿ ಹೈಕೋರ್ಟ್‌ಗೆ ದೂರನ್ನು ಸಲ್ಲಿಸಿದ್ದಾರೆ.

ಈ ದೂರಿನಲ್ಲಿ ತಮ್ಮ ಅನುಮತಿ ಇಲ್ಲದೆ ತನ್ನ ಹೆಸರು, ಇಮೇಜ್ ಹಾಗೂ ಧ್ವನಿಯನ್ನು ದುರಪಯೋಗ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲೂ ಆನ್‌ಲೈನ್‌ನಲ್ಲಿ ತಮ್ಮ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಸಮಂತಾ ಜೊತೆಗೆ ವಿಚ್ಚೇದನವಾದ ದಿನದಿಂದ ನಾಗಚೈತನ್ಯ ವಿರುದ್ಧ ಆನ್‌ಲೈನ್‌ನಲ್ಲಿ ನೆಗೆಟಿವ್ ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Samantha Ruth Prabhu career destroyed and cheated allegation Naga Chaitanya moved Delhi HC

ನಾಗ ಚೈತನ್ಯ ಹಾಗೂ ಸಮಂತಾ ರುಥ್ ಪ್ರಭು ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದರು. ಆದರೆ, ವಿಚ್ಚೇದನದ ಬಳಿಕ ನಾಗ ಚೈತನ್ಯ ವಿರುದ್ಧ ಟೀಕೆಗಳು ವ್ಯಾಪಕವಾಗಿ ನಡೆದಿದ್ದವು. ಅದರಲ್ಲೂ ನಾಗ ಚೈತನ್ಯ ತನ್ನ ಮಾಜಿ ಪತ್ನಿ ಸಮಂತಾಗೆ ಮೋಸ ಮಾಡಿ, ಅವರ ಜೀವನವನ್ನೇ ಹಾಳು ಮಾಡಿದ್ದಾರೆಂದು ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿ ಹಬ್ಬಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ವಿಷಯವನ್ನು ನಾಗ ಚೈತನ್ಯ ಪರ ವಕೀಲರು ಕೋರ್ಟ್‌ ಗಮನಕ್ಕೆ ತಂದಿದ್ದಾರೆ.

ಕೋರ್ಟ್‌ನಲ್ಲಿ ನಾಗ ಚೈತನ್ಯ ವಾದವೇನು?

ಹಲವು ವೆಬ್‌ಸೈಟ್‌ಗಳು, ಯೂಟ್ಯೂಬ್ ಚಾನೆಲ್‌ಗಳು ಟ್ರಾಫಿಕ್ ಹಾಗೂ ಆರ್ಥಿಕ ಲಾಭಕ್ಕಾಗಿ ನಾಗ ಚೈತನ್ಯ ಹೆಸರನ್ನು ದುರುಪಯೋಗ ಮಾಡಿಕೊಂಡಿವೆ. ಆಕ್ಷೇಪಾರ್ಹ ಸರ್ಚ್‌ ಟರ್ಮ್‌ಗಳು, ಎಐ, ಡೀಪ್‌ಫೇಕ್ ತಂತ್ರಜ್ಞಾನದ ಮೂಲಕ ಸತ್ಯಕ್ಕೆ ದೂರವಲ್ಲದ ವಿಡಿಯೋವನ್ನು ಪ್ರಸಾರ ಮಾಡುತ್ತಿವೆ ಎಂದು ದೆಹಲಿ ಹೈಕೋರ್ಟ್‌ನಲ್ಲಿ ನಾಗ ಚೈತನ್ಯ ಪರ ಹಿರಿಯ ವಕೀಲರಾದ ವೈಭವ್ ಗಗ್ಗರ್ ದೂರಿದ್ದಾರೆ.

Also Read
ಒಂದೇ ಮದುವೆ ಸಮಾರಂಭದಲ್ಲಿ ನಟ ನಾಗಚೈತನ್ಯಾ ಹಾಗೂ ನಟಿ ಸಮಂತಾ ಭಾಗಿ; ವಿಡಿಯೋ ವೈರಲ್
ಒಂದೇ ಮದುವೆ ಸಮಾರಂಭದಲ್ಲಿ ನಟ ನಾಗಚೈತನ್ಯಾ ಹಾಗೂ ನಟಿ ಸಮಂತಾ ಭಾಗಿ; ವಿಡಿಯೋ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ನಾಗ ಚೈತನ್ಯ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಸಮಂತಾಗೆ ವಿಚ್ಚೇದನ ನೀಡಿ ನಾಗ ಚೈತನ್ಯ ವಂಚಿಸಿದ್ದಾರೆ. ಅವರ ವೃತ್ತಿಜೀವನವನ್ನೇ ಹಾಳು ಮಾಡಿದ್ದಾರೆ ಎನ್ನುವ ರೀತಿ ವಿಡಿಯೋಗಳನ್ನು ಸೃಷ್ಟಿಸಿ ಹರಿಬಿಡಲಾಗುತ್ತಿದೆ. ಇದರಿಂದ ಅವರ ಘನತೆ, ಗೌರವಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ನಾಗ ಚೈತನ್ಯ ಪರವಾಗಿ ಡೈನಾಮಿಕ್ ಇಂಜೆಕ್ಷನ್ ನೀಡುವಂತೆ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

Samantha Ruth Prabhu career destroyed and cheated allegation Naga Chaitanya moved Delhi HC

ನ್ಯಾಯಾಧೀಶರ ಅಭಿಪ್ರಾಯವೇನು?

ನಾಗ ಚೈತನ್ಯ ಪ್ರಕರಣವನ್ನು ಕೈಗೆತ್ತಿಕೊಂಡ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಈ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಿದ್ದಾರೆ. ಈ ವೇಳೆ "ಸೆಲೆಬ್ರೆಟಿಗಳು ಸಾಮಾನ್ಯ ಜನರಿಗಿಂತ ಹೆಚ್ಚು ಟೀಕೆಗಳಿಗೆ ಗುರಿಯಾಗುತ್ತಾರೆ. ಆದರೆ, ಎಲ್ಲದಕ್ಕೂ ಒಂದು ಮಿತಿಗಳಿವೆ" ಎಂದು ನ್ಯಾಯಾಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಇಷ್ಟೇ ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಸಮನ್ಸ್ ಜಾರಿ ಮಾಡಿ, ನಾಗ ಚೈತನ್ಯ ಅವರ ವ್ಯಕ್ತಿತ್ವದ ಹಕ್ಕುಗಳನ್ನು ರಕ್ಷಣೆ ಮಾಡುವುದಕ್ಕೆ ಮಧ್ಯಂತರ ಆದೇಶವನ್ನು ಹೊರಡಿಸುವುದಾಗಿ ನ್ಯಾಯಾಧೀಶರು ಹೇಳಿದ್ದಾರೆಂದು ವರದಿಯಾಗಿದೆ.

English summary
Actor Naga Chaitanya moved Delhi High Court for protection of his personality rights. Samantha Ruth Prabhu career destroyed, cheated allegation and unauthorized use of his name, image.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X