Samantha: ಬೆಡ್‌ ರೂಮ್‌ ಫೋಟೊ ಹಂಚಿಕೊಂಡ ಸಮಂತಾ; ಲ್ಯಾಪ್‌ಟಾಪ್‌ ಮುಂದೆ ಕೂತ ಪತಿ ಗುರಾಯಿಸಿದ್ದೇಕೆ?

ನಾಗಚೈತನ್ಯ ಜೊತೆ ಸಮಂತಾ ವಿಚ್ಚೇದನಕ್ಕೆ ಮುಂದಾದಾಗ ಅಭಿಮಾನಿಗಳು ಬೇಸರಗೊಂಡಿದ್ದರು. ಟಾಲಿವುಡ್‌ನ ಜನಪ್ರಿಯ ಜೋಡಿ ಹೀಗೆ ಬೇರೆಯಾಗಿದ್ದಕ್ಕೆ ಅಸಮಧಾನವನ್ನೂ ಹೊರ ಹಾಕಿದ್ದರು. ಇದು ಸಮಂತಾ ವೈಯಕ್ತಿಕ ಬದುಕಿನ ಮೇಲೆ ಬಹಳ ದೊಡ್ಡ ಪರಿಣಾಮವೇ ಬೀರಿತ್ತು. ಒಂದರ ಹಿಂದೊಂದು ಕಷ್ಟಗಳು ಅವರನ್ನು ಬೆಂಬಿಡದೆ ಕಾಡಿತ್ತು. ಈ ಸಂಕಷ್ಟದಿಂದ ಹೊರ ಬರುವುದಕ್ಕೆ ಹಲವು ಪ್ರಯತ್ನಗಳನ್ನು ಮಾಡಿದ್ದರು.

ವಿಚ್ಚೇದನದ ನೋವಿನಿಂದ ಹೊರ ಬರಬೇಕು ಅನ್ನುವಷ್ಟರಲ್ಲಿಯೇ ಅಪರೂಪದ ಮಯೋಸೈಟಿಸ್ ಕಾಯಿಲೆ ಅವರನ್ನು ಕಾಡಿತ್ತು. ಇದರಿಂದ ಗುಣಮುಖರಾಗಿ ಹೊರ ಬರುವುದಕ್ಕೆ ಸಾಕಷ್ಟು ನೋವುಗಳನ್ನು ಅನುಭವಿಸಿದ್ದಾರೆ. ಇದೇ ವೇಳೆ ಅರ್ಧಕ್ಕೆ ನಿಂತಿದ್ದ ಪ್ರಾಜೆಕ್ಟ್‌ಗಳನ್ನು ಅದೇ ನೋವಿನಲ್ಲೇ ಪೂರ್ಣಗೊಳಿಸಿದ್ದಾರೆ. ಹಾಗಂತ ಇಲ್ಲಿಗೆ ಮುಗಿದಿರಲಿಲ್ಲ. ಸಮಂತಾ ವೃತ್ತಿ ಬದುಕಿನಲ್ಲಿಯೂ ಹಿನ್ನಡೆ ಅನುಭವಿಸಿದ್ದರು. ಇವರು ನಟಿಸಿದ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲುಂಡಿದ್ದವು.

Samantha Ruth Prabhu complained her husband Raj Nidimoru by sharing her bedroom pic

ಸಮಂತಾ ಕಾಲ ಇಲ್ಲಿಗೆ ಮುಗೀತು ಎನ್ನುವಾಗಲೇ ವೆಬ್‌ ಸೀರಿಸ್‌ಗಳು ಇವರ ಕೈಹಿಡಿದಿದ್ದವು. 'ದಿ ಫ್ಯಾಮಿಲಿ ಮ್ಯಾನ್' ಹಾಗೂ 'ಸಿಟಾಡೆಲ್' ಎರಡೂ ವೆಬ್ ಸೀರಿಸ್‌ ಮತ್ತೆ ವೃತ್ತಿ ಬದುಕಿಗೆ ಬೀಸ್ ಕೊಟ್ಟಿದ್ದವು. ಇಲ್ಲಿಂದ ಸಮಂತಾ ಬದುಕು ಮತ್ತೆ ಹೊಸ ಹಳಿಯನ್ನು ಹಿಡಿದಿತ್ತು. ಈ ಎರಡೂ ವೆಬ್ ಸೀರಿಸ್‌ನ ನಿರ್ದೇಶಕ ರಾಮ್ ನಿಡಿಮೋರು ಅವರ ಪರಿಚಯ ಆಗಿತ್ತು. ಆ ಪರಿಚಯ ಪ್ರೀತಿಗೆ ತಿರುಗಿತ್ತು. ಹೊಸ ಬದುಕು ಸಮಂತಾಗೆ ಕಾಣುತ್ತಿತ್ತು. ಇಬ್ಬರೂ ತಮ್ಮ ಪ್ರೀತಿಯ ಬಗ್ಗೆ ಎಲ್ಲೂ ಹೇಳಿಕೊಳ್ಳಲಿಲ್ಲ. ರಹಸ್ಯವಾಗಿಯೇ ಮದುವೆಯಾದ ಬಳಿಕ ತಮ್ಮ ಅಭಿಮಾನಿಗಳಿಗಾಗಿ ಫೋಟೊಗಳನ್ನು ಶೇರ್ ಮಾಡಿದ್ದರು.

ಪತಿ ರಾಜ್ ನಿಡಿಮೋರು ಜೊತೆಗೆ ಸಮಂತಾ ಈಗ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ರಾಜ್ ಕೂಡ ಸಿನಿಮಾರಂಗದಲ್ಲಿ ಸಿಕ್ಕಾಪಟ್ಟೆ ಯಶಸ್ಸು ಕಂಡಿದ್ದಾರೆ. ಉತ್ತಮ ಪ್ರಾಜೆಕ್ಟ್‌ಗಳು ಅವರ ಕೈಯಲ್ಲಿದೆ. ಸದ್ಯಕ್ಕೀಗ ಸಮಂತಾ ಹಾಗೂ ರಾಜ್ ನಿಡಿಮೋರು ಇಬ್ಬರೂ ತಮ್ಮ ವೃತ್ತಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಸಮಂತಾ ಇತ್ತೀಚೆಗೆ ತನ್ನ ಬೆಡ್ ರೂಮ್‌ ಫೋಟೊವೊಂದು ಹಂಚಿಕೊಂಡಿದ್ದರು. ಈ ಪೋಟೊ ಬಗ್ಗೆ ಅವರ ಅಭಿಮಾನಿಗಳು ಕಮೆಂಟ್‌ಗಳನ್ನು ಮಾಡಿದ್ದೋ ಮಾಡಿದ್ದು.

ಅಷ್ಟಕ್ಕೂ ಬೆಡ್ ರೂಮ್ ಫೋಟೊ ಅಂದ ಕೂಡಲೇ ಅನ್ಯತಾ ಭಾವಿಸೋದು ಬೇಡ. ತನ್ನ ಪತಿಯ ಬಗ್ಗೆ ಏನೋ ಹೇಳುವುದಕ್ಕೆ ಬೆಡ್‌ ರೂಮ್ ಫೋಟೊವನ್ನು ಶೇರ್ ಮಾಡಿದ್ದರು. ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಆ ಫೋಟೊವನ್ನು ಶೇರ್ ಮಾಡಿದ್ದು, ಅವರ ಅಭಿಮಾನಿಗಳು ನಾನಾ ರೀತಿಯ ಕಾಮೆಂಟ್‌ಗಳನ್ನು ಹಾಕಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಸಮಂತಾ ತಮ್ಮ ಸಿನಿಮಾಗಳು, ಶೂಟಿಂಗ್ ಕೆಲವೊಮ್ಮೆ ವೈಯಕ್ತಿಕ ವಿಷಯಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಈ ಫೋಟೊವನ್ನು ಶೇರ್ ಮಾಡಿರಬಹುದೆಂದು ಅಂದಾಜಿಸಲಾಗಿದೆ.

Samantha Ruth Prabhu complained her husband Raj Nidimoru by sharing her bedroom pic

ಆದರೆ, ಅಭಿಮಾನಿಗಳು ಮಾತ್ರ ಆ ಪೋಟೊದಲ್ಲಿ ಪತಿ ರಾಜ್ ನಿಡಿಮೋರು ಲ್ಯಾಪ್‌ ಟಾಪ್ ಮುಂದೆ ಕೂತಿರುವುದನ್ನು ಗಮನಿಸಿದ್ದಾರೆ. ಸಮಂತಾ ತೆಗೆದ ಫೋಟೊಗೆ ಯಾಕೋ ಗುರಾಯಿಸುತ್ತಿದ್ದಾರಲ್ಲ ಅಂತನೂ ಕಾಮೆಂಟ್ ಮಾಡಿದ್ದರು. ಇನ್ನು ಕೆಲವರು ಪತಿಯ ಕಠಿಣ ಪರಿಶ್ರಮವನ್ನು ತೋರಿಸುವ ಉದ್ದೇಶದಿಂದಲೇ ಸಮಂತಾ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆಂದು ಕಾಮೆಂಟ್ ಮಾಡಿದ್ದರು. ಸದ್ಯ ಸಮಂತಾ ಬೆಡ್‌ ರೂಮ್‌ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಮಂತಾ ಸಿನಿಮಾ ಅಷ್ಟೇ ಅಲ್ಲದೆ, ಬ್ಯುಸಿನೆಸ್‌ಗೂ ಕೈ ಹಾಕಿದ್ದಾರೆ. ಪಿಕ್ಕಲ್‌ಬಾಲ್ ಲೀಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಸದ್ಯ ತೆಲುಗಿನಲ್ಲಿ ಇವರ 'ಮಾ ಇಂಟಿ ಬಂಗಾರಂ' ಸಿನಿಮಾ ರಿಲೀಸ್ ಆಗಬೇಕಿದೆ. ಇನ್ನೊಂದು ಕಡೆ ಸಲ್ಮಾನ್ ಖಾನ್ ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದಾರೆಂಬ ಸುದ್ದಿ ಹಬ್ಬಿದೆ. ಆದರೆ, ಅಧಿಕೃತ ಸುದ್ದಿ ಇನ್ನೂ ಹೊರಬಿದ್ದಿಲ್ಲ. ಒಟ್ನಲ್ಲಿ ಸಮಂತಾ ಮದುವೆ ಬಳಿಕ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

More from Filmibeat

English summary
Samantha Ruth Prabhu complained her husband Raj Nidimoru by sharing her bedroom pic.
Read more about: samantha actress social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X