ಸಮಂತಾ ಕೈ ಹಿಡಿದುಕೊಂಡ ವ್ಯಕ್ತಿ ಅವರೇನಾ? ಡೇಟಿಂಗ್ ಮಾಡ್ತಿರೋದು ಕನ್ಫರ್ಮ್ ಮಾಡಿದ್ರಾ?

ಸಮಂತಾ ಹಾಗೂ ನಾಗ ಚೈತನ್ಯ ಡಿವೋರ್ಸ್‌ನ ಆಫ್ಟರ್ ಎಫೆಕ್ಟ್ ಇನ್ನೂ ಇದೆ. ಒಂದೋ ಸಮಂತಾ ಸುದ್ದಿಯಲ್ಲಿರುತ್ತಾರೆ. ಇಲ್ಲವೋ ನಾಗ ಚೈತನ್ಯ ಚರ್ಚೆಯಲ್ಲಿರುತ್ತಾರೆ. ಎರಡನೇ ಮದುವೆ ಬಳಿಕ ಶೋಭಿತಾ ಕೂಡ ಆಗಾಗ ಮಾಧ್ಯಮಗಳಲ್ಲಿ ಪ್ರತ್ಯಕ್ಷ ಆಗುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದರೂ, ಅದನ್ನು ಪೋಸ್ಟ್ ಮಾರ್ಟಮ್ ಮಾಡಿ ಹೊಸ ಕಥೆಯನ್ನು ಕಟ್ಟಲಾಗುತ್ತೆ.

ವಿಚ್ಚೇದನದ ಬಳಿಕ ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಎರಡನೇ ಮದುವೆ ಬಗ್ಗೆನೇ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ತಮ್ಮ ಲವ್ ಲೈಫ್‌ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ಕೆಲವು ದಿನಗಳ ಬಳಿಕ ಇವರ ಬಗ್ಗೆ ಅನೇಕ ಊಹಾಪೋಹಗಳು ಹರಿದಾಡಿದ್ದವು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ನಟಿ ಏನೇ ಪೋಸ್ಟ್ ಮಾಡಿದರೂ ಅಲ್ಲೊಂದು ಕಥೆ ಹುಟ್ಟಿಕೊಳ್ಳುತ್ತೆ.

Samantha Ruth Prabhu Holds Raj Nidimoru s Hand in New Reel Dubai Trip Sparks Buzz

ಈಗ ಸಮಂತಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದರು. ಒಂದು ಫೋಟೋ ಹಾಕಿದ್ದಷ್ಟೇ, ಆ ಪೋಸ್ಟ್ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಆ ಫೋಟೊ ನೋಡುತ್ತಿದ್ದಂತೆ ಎರಡನೇ ಮದುವೆಗೆ ಸಜ್ಜಾಗುತ್ತಿದ್ದಾರೆಯೇ ಸಮಂತಾ ಎನ್ನುವ ಅನುಮಾನ ಮೂಡುವುದಕ್ಕೆ ಶುರುವಾಗಿದೆ.

ಸಮಂತಾ 'ಫ್ಯಾಮಿಲಿ ಮ್ಯಾನ್' ವೆಬ್‌ ಸೀರಿಸ್‌ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ಡೇಟ್ ಮಾಡುತ್ತಿದ್ದಾರೆಂಬ ಮಾತು ಬಹಳ ದಿನಗಳಿಂದ ಕೇಳಿ ಬರುತ್ತಿವೆ. ಇವರಿಬ್ಬರು ಒಟ್ಟಿಗೆ ಇರುವ ಅನೇಕ ಫೋಟೋಗಳು ವೈರಲ್ ಆಗಿದ್ದವು. ಆದರೆ, ಇಬ್ಬರೂ ಕೂಡ ತಮ್ಮ ಸಂಬಂಧವನ್ನು ಬಹಿರಂಗಪಡಿಸಿರಲಿಲ್ಲ. ಆದರೆ, ಇತ್ತೀಚೆಗೆ ಸಮಂತಾ ಹಂಚಿಕೊಂಡಿರುವ ವಿಡಿಯೋ ಅವರ ಸಂಬಂಧವನ್ನು ಅಧಿಕೃತಗೊಳಿಸಿತೇ? ಎಂಬ ಪ್ರಶ್ನೆಗಳನ್ನಂತು ಹುಟ್ಟುಹಾಕಿದೆ.

ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ದುಬೈ ಪ್ರವಾಸದ ಚಿಕ್ಕದೊಂದು ಝಲಕ್ ತೋರಿಸಿದ್ದರು. ಈ ವಿಡಿಯೋವನ್ನು ಅವರು ಹಂಚಿಕೊಂಡಿದ್ದರು. ಈ ವಿಡಿಯೋದ ಮೊದಲ ಎರಡು ಕ್ಲಿಪ್‌ಗಳು ಅಭಿಮಾನಿಗಳ ಗಮನ ಸೆಳೆದಿವೆ. ಮೊದಲ ಕ್ಲಿಪ್‌ನಲ್ಲಿ ಸಮಂತಾ ಕಾರಿನಲ್ಲಿ ಸಂತೋಷದಿಂದ ಪೋಸ್ ನೀಡುತ್ತಿದ್ದಾರೆ. ನಂತರ, ಅವರು ಒಬ್ಬ ವ್ಯಕ್ತಿಯ ಕೈಯನ್ನು ಪ್ರೀತಿಯಿಂದ ಹಿಡಿದುಕೊಂಡಿರುವ ದೃಶ್ಯವಿದೆ.

ಈ ವಿಡಿಯೋದಲ್ಲಿ ಇಬ್ಬರ ನಡುವೆ ಆತ್ಮೀಯತೆ ಹಾಗೂ ಖುಷಿಯ ಕ್ಷಣಗಳನ್ನು ಸ್ಪಷ್ಟಪಡಿಸುತ್ತೆ. ಈ ವಿಡಿಯೋ ನೋಡಿದ ಅಭಿಮಾನಿಗಳು, ಸಮಂತಾ ಹಿಡಿದಿರುವ ಕೈ ಅವರ ಹೊಸ ಬಾಯ್‌ಫ್ರೆಂಡ್‌ನದ್ದು ಇರಬಹುದಾ? ಎಂದು ಊಹಿಸುತ್ತಿದ್ದಾರೆ. ವಿಡಿಯೋದಲ್ಲಿ ಆ ವ್ಯಕ್ತಿಯ ಮುಖವನ್ನು ಸಮಂತಾ ತೋರಿಸಿಲ್ಲ. ಅದು ರಾಜ್ ನಿಡಿಮೋರು ಅವರದ್ದೇ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇಂತಹದ್ದೊಂದು ಚರ್ಚೆಯಾಗುತ್ತಿರುವಾಗಲೇ ಅಭಿಮಾನಿಗಳು ಸಮಂತಾಗೆ ಶುಭಾಶಯಗಳನ್ನು ಸಹ ಹೇಳುತ್ತಿದ್ದಾರೆ.

ನಟಿ ಸಮಂತಾ ಶೇರ್ ಮಾಡಿದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ವರುಣ್ ಧವನ್ ಮತ್ತು ದಿಶಾ ಪಟಾನಿ ಸಹ ಸಮಂತಾ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ. ವಿಚ್ಛೇದನಕ್ಕಾಗಿ ನಾಗ ಚೈತನ್ಯ 200 ಕೋಟಿ ರೂಪಾಯಿ ಜೀವನಾಂಶವನ್ನು ಸಮಂತಾಗೆ ನೀಡಲು ಮುಂದಾಗಿದ್ದರು. ಆದರೆ, ಸಮಂತಾ ಅದನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ನಂತರ, ನಾಗ ಚೈತನ್ಯ 50 ಕೋಟಿ ರೂಪಾಯಿ ಆಫರ್ ಮಾಡಿದ್ದರೂ, ಸಮಂತಾ ಅದನ್ನು ಸಹ ಸ್ವೀಕರಿಸಲಿಲ್ಲ ಎಂದು ಸುದ್ದಿಯಾಗಿತ್ತು.

More from Filmibeat

English summary
Samantha Ruth Prabhu’s latest reel from her Dubai trip is going viral as she is seen holding Raj Nidimoru’s hand, sparking fresh buzz on social media. Fans are curious about the duo’s off-screen bond.
Read more about: samantha actress relationship
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X