ನಾಗಚೈತನ್ಯ ಮದುವೆ ಆಗಲು ಬಯಸಿದ್ದು ಸಮಂತಾ ಅಲ್ಲ ಶೃತಿ ಹಾಸನ್

ನಾಗಚೈತನ್ಯ ಹಾಗೂ ಸಮಂತಾ ಟಾಲಿವುಡ್‌ನಲ್ಲಿ ತುಂಬಾನೇ ಇಷ್ಟ ಪಡುವ ಜೋಡಿ. ಇಬ್ಬರೂ ಜೊತೆಯಾಗಿ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ. ಈ ಜೋಡಿ ಮದುವೆ ವಿಷಯ ಅನೌನ್ಸ್ ಮಾಡಿದಾಗಲೂ ಇಬ್ಬರ ಫ್ಯಾನ್ಸ್ ಖುಷಿಪಟ್ಟಿದ್ದರು. ಆದ್ರೀಗ ಈ ಜೋಡಿ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಇಬ್ಬರೂ ನಾನೊಂದು ತೀರ, ನೀನೊಂದು ತೀರಾ ಅಂತಿದ್ದಾರೆ. ಇಬ್ಬರು ಬೇರೆ ಬೇರೆ ವಾಸವಿದ್ದು, ಮತ್ತೆ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ನಿಮಗೆ ಗೊತ್ತಾ ? ನಾಗಚೈತನ್ಯ ಮೊದಲ ಮದುವೆ ಆಗಲು ಬಯಸಿದ್ದು ಸಮಂತಾರನ್ನು ಅಲ್ಲ ಬದಲಾಗಿದೆ ಶೃತಿ ಹಾಸನ್.

ಟಾಲಿವುಡ್ ನಟ ನಾಗಚೈತನ್ಯ ಇಂದು (ನವೆಂಬರ್ 24) 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಪತಿಯ ಹುಟ್ಟುಹಬ್ಬದ ಸಂಭ್ರಮದಲ್ಲಿ ಇರುತ್ತಿದ್ದ ಸಮಂತಾ ಈ ಬಾರಿ ಮಿಸ್ ಆಗಿದ್ದಾರೆ. ನಾಗಚೈತನ್ಯ ಹುಟ್ಟುಹಬ್ಬದ ದಿನದಂದೇ ಈ ನಟ ಮದುವೆ ಆಗಲು ಬಯಸಿದ್ದು ಸಮಂತಾರನ್ನು ಅಲ್ಲ ಬದಲಾಗಿ ಕಮಲ್ ಹಾಸನ್ ಪುತ್ರಿ ಅನ್ನುವ ಮತ್ತೆ ಟ್ರೆಂಡ್ ಆಗುತ್ತಿದೆ.

2013ರಲ್ಲಿ ಶೃತಿ ಹಾಸನ್-ನಾಗಚೈತನ್ಯ ಭೇಟಿ

2013ರಲ್ಲಿ ಶೃತಿ ಹಾಸನ್-ನಾಗಚೈತನ್ಯ ಭೇಟಿ

ನಾಗಚೈತನ್ಯ ಹಾಗೂ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಮೊದಲು ಭೇಟಿಯಾಗಿದ್ದು 2013ರಲ್ಲಿ ಅಂತಿದೆ ಟಾಲಿವುಡ್. ಮೊದಲು ಸ್ನೇಹಿತರಾಗಿದ್ದರು, ಬಳಿಕ ಈ ಸಂಬಂಧ ಡೇಟಿಂಗ್‌ವರೆಗೂ ಬೆಳೆದು ನಿಂತಿತ್ತು. ಕೊನೆಗೆ ಈ ಸಂಬಂಧ ಎಲ್ಲಿವರೆಗೆ ಬೆಳೆದು ನಿಂತಿತ್ತು ಅಂದರೆ, ಇಬ್ಬರೂ ಒಂದೇ ಒಂದು ದಿನ ಭೇಟಿ ಮಾಡದೆ ಇರುತ್ತಿರಲಿಲ್ಲ. ಆ ಮಟ್ಟಿಗೆ ಇಬ್ಬರು ಸಂಬಂಧ ಗಾಢವಾಗಿತ್ತು. ಆ ಬಳಿಕವೇ ನಾಗಚೈತನ್ಯ ಹಾಗೂ ಶೃತಿ ಹಾಸನ್ ಇಬ್ಬರೂ ವಿವಾಹವಾಗುತ್ತಾರೆಂಬ ಸುದ್ದಿ ಎಲ್ಲೆಡೆ ಹರಡಲು ಶುರುವಾಗಿತ್ತು.

ನಾಗಚೈತನ್ಯ-ಶೃತಿ ಹಾಸನ್ ಬ್ರೇಕಪ್ ಹೇಗಾಯ್ತು?

ನಾಗಚೈತನ್ಯ-ಶೃತಿ ಹಾಸನ್ ಬ್ರೇಕಪ್ ಹೇಗಾಯ್ತು?

ಇನ್ನೇನು ನಾಗಚೈತನ್ಯ ಹಾಗೂ ಶೃತಿ ಹಾಸನ್ ಇಬ್ಬರು ಮದುವೆ ಆಗೇ ಬಿಡುತ್ತಾರೆ ಅನ್ನುವ ಸುದ್ದಿ ಹಬ್ಬಿತ್ತು. ಆಗಲೇ ಈ ಜೋಡಿ ಲವ್ ಸ್ಟೋರಿ ಮುರಿದು ಬಿದ್ದಿದೆ ಅನ್ನುವ ಶಾಕಿಂಗ್ ಸುದ್ದಿ ಅಭಿಮಾನಿಗಳಿಗೆ ತಲುಪಿತ್ತು. ಅಷ್ಟಕ್ಕೂ ಬ್ರೇಕಪ್ ಕಾರಣ ಹುಡುಕಿ ಹೊರಟಾಗ ಶೃತಿ ಹಾಸನ್ ಸಹೋದರಿ ಅಕ್ಷರ ಹಾಸನ್ ಹೆಸರು ಕೇಳಿಬಂದಿತ್ತು. ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಶೃತಿ ಹಾಸನ್ ಹಾಗೂ ಅಕ್ಷರ ಹಾಸನ್ ಜೊತೆ ನಾಗಚೈತನ್ಯ ಭಾಗವಹಿಸಿದ್ದರು. ಈ ವೇಳೆ ಶೃತಿ ಹಾಸನ್ ಪರ್ಫಾಮೆನ್ಸ್ ಕೊಡಬೇಕಿತ್ತು. ಆ ವೇಳೆ ಶೃತಿ ತನ್ನ ಬಾಯ್‌ಫ್ರೆಂಡ್ ನಾಗಚೈತನ್ಯಗೆ ತಂಗಿ ಅಕ್ಷರ ಹಾಸನ್ ಜೊತೆ ಇರುವಂತೆ ಹೇಳಿ ಹೋಗಿದ್ದರು. ಶೃತಿ ಹಾಸನ್ ಪರ್ಫಾಮೆನ್ಸ್ ಮುಗಿಸಿ ವಾಪಾಸ್ ಬರುವಾಗ ನಾಗಚೈತನ್ನ ಅಲ್ಲಿಂದ ಕಾಲುಕಿತ್ತಿದ್ದರು. ತಂಗಿ ಅಕ್ಷರ ಹಾಸನ್‌ ಒಬ್ಬರನ್ನೇ ಬಿಟ್ಟು ಹೋಗಿದ್ದರಿಂದ ಶೃತಿ ಹಾಸನ್‌ಗೆ ಬೇಸರವಾಗಿತ್ತು. ಇಲ್ಲಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು ಎಂದು ಟಾಲಿವುಡ್ ಮಾತಾಡಿಕೊಂಡಿತ್ತು.

ನಾಗಚೈತನ್ಯ ಅಫೇರ್ ಬಗ್ಗೆ ಕಾಲೆಳೆದಿದ್ದ ಸಮಂತಾ

ನಾಗಚೈತನ್ಯ ಅಫೇರ್ ಬಗ್ಗೆ ಕಾಲೆಳೆದಿದ್ದ ಸಮಂತಾ

ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಹಲವು ಸಿನಿಮಾಗಳಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಇಬ್ಬರೂ ಜೊತೆಯಾಗಿ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್ ಅನ್ನು ಕೊಳ್ಳೆಹೊಡೆದಿವೆ. ಇಂತಹದ್ದೇ ಒಂದು ಸಿನಿಮಾ ಮಜಲಿ. ಈ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಸಮಂತಾ ತನ್ನ ಪ್ರೀತಿ ಬಗ್ಗೆ ಹೇಳಿಕೊಂಡಿದ್ದರು. ಏಳು ವರ್ಷ ತಾನು ನಾಗಚೈತನ್ಯ ಪ್ರೀತಿಯಲ್ಲಿ ಬಿದ್ದಿದ್ದು, ನಾಗ ಚೈತನ್ಯ ಮಾತ್ರ ಹಲವು ಹುಡುಗಿಯರೊಂದಿಗೆ ಓಡಾಡಿಕೊಂಡಿದ್ದರು. ಕೊನೆಗೆ ನಾನು ತಗಲಾಕಿಕೊಂಡೆ ಎಂಬರ್ಥದಲ್ಲಿ ಪತಿಯ ಕಾಲೆಳೆದಿದ್ದರು.

ನಾಗಚೈತನ್ಯ-ಸಮಂತಾ ಪಯಣ ಹೇಗಿದೆ?

ನಾಗಚೈತನ್ಯ-ಸಮಂತಾ ಪಯಣ ಹೇಗಿದೆ?

ವಿಚ್ಛೇದನದ ಬಳಿಕ ಸಮಂತಾ ಹಾಗೂ ನಾಗಚೈತನ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಚ್ಛೇದನಕ್ಕೂ ಮುನ್ನ ಸಮಂತಾ ಅಭಿನಯದ 'ಶಾಕುಂತಲಂ' ಸಿನಿಮಾ ಪೂರ್ಣಗೊಂಡಿತ್ತು. ಈಗ ಅಲ್ಲು ಅರ್ಜುನ್ ಪುಷ್ಷ ಸಿನಿಮಾದ ಹಾಡೊಂದರಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಕೈಯಲ್ಲಿ ನಾಲ್ಕೈದು ಸಿನಿಮಾಗಳಿದ್ದು, ಶೀಘ್ರವೇ ಚಾಲನೆ ಸಿಗಲಿದೆ. ಇನ್ನೊಂದು ಕಡೆ ನಾಗಚೈತನ್ಯ ಬಂಗಾರರಾಜು, ಥ್ಯಾಂಕ್ ಯು ಸಿನಿಮಾ ಕೈಯಲ್ಲಿವೆ. ಎಲ್ಲಕ್ಕಿಂತ ಹೆಚ್ಚಾಗಿ ಆಮಿರ್ ಖಾನ್ ಜೊತೆ ನಟಿಸಿರುವ ಲಾಲ್ ಸಿಂಗ್ ಚಡ್ಡಾ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.

More from Filmibeat

English summary
Naga Chaitanya’s first choice for marriage wasn’t Samanatha but another famous Tollywood actress Shurti Haasan. On Naga Chaitanya's birthday old Story revealed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X