"ನನ್ನ ಸಾಕು ನಾಯಿಗಳಿಗೆ ಹೇಳಿ, ನಾನಿನ್ನು ಅವುಗಳ ಮಲ ಸ್ವಚ್ಚಗೊಳಿಸುತ್ತೇನೆ" ಟಾಂಗ್ ಕೊಟ್ರಾ ಸಮಂತಾ?

ದಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ವಿಚ್ಛೇದನದ ಬಳಿಕ ತಮ್ಮ ವೃತ್ತಿ ಬದುಕಿನಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಸಿನಿಮಾ, ವೆಬ್ ಸೀರಿಸ್ ಅಂತ ತೊಡಗಿಸಿಕೊಂಡಿದ್ದು, ಬದುಕಿನ ಕಹಿ ಘಟನೆಗಳನ್ನು ಮರೆಯುವುದಕ್ಕೆ ಹೊರಟ್ಟಿದ್ದಾರೆ.

'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸೀರಿಸ್ ಬಳಿಕ ಸಮಂತಾ ರೇಂಜ್ ಬದಲಾಗಿತ್ತು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಮಂತಾ ಜನಪ್ರಿಯರಾಗಿದ್ದರು. ಇಲ್ಲಿಂದ ಸಮಂತಾ ಪ್ಯಾನ್ ಇಂಡಿಯಾ ಸಿನಿಮಾಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಐದು ಭಾಷೆಯಲ್ಲಿ ಈಕೆಯ ಸಿನಿಮಾಗಳು ರಿಲೀಸ್ ಆಗುತ್ತಿವೆ.

Samanthas Epic Response about Pan India Star: She says I still clean their poop

ಇತ್ತೀಚೆಗಷ್ಟೇ ಸಮಂತಾ ಅಭಿನಯದ 'ಯಶೋದಾ' ಸಿನಿಮಾ ಕೂಡ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. ಈ ಬೆನ್ನಲ್ಲೇ ಮತ್ತೊಂದು ಸಿನಿಮಾ 'ಶಾಕುಂತಲಂ' ಕೂಡ ರಿಲೀಸ್‌ಗೆ ರೆಡಿಯಾಗಿದೆ. ಇದೇ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ನಟಿಗೆ ಪ್ಯಾನ್ ಇಂಡಿಯಾ ಸ್ಟಾರ್ ಎಂದು ಕರೆಯಲಾಗಿತ್ತು. ಈ ಕಮೆಂಟ್‌ಗೆ ಸಮಂತಾ ಮಾರ್ಮಿಕವಾಗಿ ಉತ್ತರ ಕೊಟ್ಟಿದ್ದಾರೆ. ಅಷ್ಟಕ್ಕೂ ನಟಿ ಕೊಟ್ಟ ಉತ್ತರ ಏನಾಗಿತ್ತು? ನಟಿ ಹೇಳಿದ ಮಾತುಗಳು ಚರ್ಚೆಯಾಗುತ್ತಿರೋದೇಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಪ್ಯಾನ್ ಇಂಡಿಯಾ ಸ್ಟಾರ್ ಬಗ್ಗೆ ಜೀವನ ಹೇಗಿದೆ?

'ಶಾಕುಂತಲಂ' ಸಿನಿಮಾ ಪ್ಯಾನ್ ಸಿನಿಮಾ. ಈ ಸಿನಿಮಾ ಕನ್ನಡ,ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಸಮಂತಾ ಈ ಸಿನಿಮಾವನ್ನು ಭರ್ಜರಿಯಾಗಿ ಪ್ರಚಾರದಲ್ಲಿ ಮಾಡುತ್ತಿದ್ದಾರೆ. ಈ ವೇಳೆ ಸಮಂತಾಗೆ " ಪ್ಯಾನ್ ಇಂಡಿಯಾ ಸ್ಟಾರ್ ಆದ ಬಳಿಕ ನಿಮ್ಮ ಜೀವನ ಹೇಗಿದೆ?" ಅಂತ ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಸಮಂತಾ ಕೊಟ್ಟ ಪ್ರತಿಕ್ರಿಯೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.

Samanthas Epic Response about Pan India Star: She says I still clean their poop

"ನಾನು ಸಾಕಿದ ನಾಯಿಗಳಿಗೆ ಯಾರಾದರೂ ಹೇಳಿ. ಯಾಕಂದ್ರೆ, ಈಗಲೂ ನಾನು ಅವುಗಳ ಮಲವನ್ನು ಸ್ವಚ್ಛಗೊಳಿಸುತ್ತೇನೆ" ಎಂದು ನಗುತ್ತಲೇ ಉತ್ತರಿಸಿದ್ದರು. ಸಮಂತಾ ಹೀಗೆ ಹೇಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ನಟಿಯ ನೇರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

"ನಾನು ಸಂಜೆ 6 ಗಂಟೆವರೆಗೆ ಮಾತ್ರ ಸ್ಟಾರ್"

ಸಮಂತಾ ತನಗೆ ಸ್ಟಾರ್ ಪಟ್ಟ ಅನ್ನೋದು ಮುಖ್ಯವೇ ಅಲ್ಲ. ಸಾಮಾನ್ಯಳಂತೆ ಇರುತ್ತೇನೆ ಅಂತಾನೂ ಹೇಳಿದ್ದಾರೆ. " ಪ್ಯಾನ್ ಇಂಡಿಯಾ ಸ್ಟಾರ್ ಆದ್ಮೇಲೆ ನನ್ನ ಜೀವನ ಬದಲಾಗಿದೆ ಅಂತ ನಾನು ಹೇಳುವುದಿಲ್ಲ. ಸಂಜೆ 6 ಗಂಟೆಯವರೆಗೆ ಮಾತ್ರ ನಾನು ಸ್ಟಾರ್. ಆ ಬಳಿಕ ನನ್ನ ಬದುಕು ಸಾಮಾನ್ಯವಾಗುತ್ತೆ" ಎಂದು ಹೇಳಿದ್ದಾರೆ.

ಇದರ ಜೊತೆಗೆ ಸಮಂತಾ ನೆಟ್ಟಿಗರ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ. ಒಬ್ಬರು " ನೀವು ಪರ್ಸನಲ್ ಹಾಗೂ ಪ್ರೊಫೆಷನಲ್ ಸಕ್ಸಸ್ ಹಾಗೂ ಸೋಲುಗಳನ್ನು ಹೇಗೆ ತೆಗೆದುಕೊಳ್ಳುತ್ತೀರಿ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಸಮಂತಾ " ಸೋಲು ಯಶಸ್ಸಿಗಿಂತಲೂ ದೊಡ್ಡ ಪಾಠವನ್ನು ಕಲಿಸುತ್ತವೆ" ಎಂದು ಹೇಳಿದ್ದರು. ಹಾಗೇ, ಈ ಎರಡು ವರ್ಷಗಳಲ್ಲಿ ನನ್ನ ಜೀವನದಲ್ಲಿ ಬಹಳಷ್ಟು ನಡೆದಿದೆ. ಇವು ನನಗೆ ಜೀವನದ ಪಾಠಗಳನ್ನು ಕಲಿಸಿವೆ. ಈಗ ಎಲ್ಲದಕ್ಕೂ ಸಿದ್ಧ" ಎಂದು ಹೇಳಿದಳು.

ಕ್ರೇಜಿಯಾಗಿದೆ 'ಶಾಕುಂತಲಂ'

ಸಮಂತಾಳ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಮಂತಾ ಶಾಕುಂತಲೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. " ಈ ಪಾತ್ರ ತುಂಬಾನೇ ಪ್ರೇರಣೆ ಕೊಟ್ಟಿದೆ. ಇದೊಂದು ಎಂಟರ್‌ಟೈನರ್ ಸಿನಿಮಾ ಆಗಿದ್ದು, ಪ್ರೇಕ್ಷಕರಿಗೆ ಹೊಸ ಅನುಭವವನ್ನು ಕೊಡುವುದಲ್ಲದೆ, ಇದು ಪ್ರೇಕ್ಷಕರನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತೆ." ಎಂದು ಹೇಳಿದ್ದಾರೆ.

ಗುಣಶೇಖರ್ ನಿರ್ದೇಶಿಸಿರೋ ಈ ಸಿನಿಮಾ ಸಿನಿಮಾ ಪ್ರೇಮಿಗಳಿಗೆ ಸಖತ್ ವಿಜ್ಯೂವಲ್ ಟ್ರೀಟ್ಮೆಂಟ್. ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದರೂ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಿಗೆ ಸಮಂತಾನೇ ಡಬ್ ಮಾಡಿದ್ದಾರೆ. ಮಲಯಾಳಂ ಹಾಗೂ ಕನ್ನಡ ಭಾಷೆಗಳಿಗೆ ಬೇರೆಯವರು ಡಬ್ ಮಾಡಿದ್ದಾರೆ. ಏಪ್ರಿಲ್ 14ರಂದು 'ಶಾಕುಂತಲಂ' ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.

More from Filmibeat

English summary
Samantha's Epic Response about Pan India Star: She Says "Someone tell that to my pets because I still clean their poop", Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X