ಎಲ್ಲರೂ ನಾನು ಗಟ್ಟಿಗಿತ್ತಿ ಎಂದುಕೊಂಡಿದ್ದಾರೆ: ನಾನೂ ಮಾನಸಿಕ ಸಮಸ್ಯೆಗಳಿಂದ ಬಳಲಿದ್ದೇನೆ ಎಂದ ಸಮಂತಾ
ಟಾಲಿವುಡ್ ಬ್ಯೂಟಿ ಸಮಂತಾ ವಿಚ್ಚೇದನದ ಬಳಿಕ 'ಟಾಕ್ ಆಫ್ ದಿ ಟೌನ್' ಆಗಿದ್ದಾರೆ. ಯಾವುದೇ ಚಿತ್ರರಂಗದಲ್ಲೂ ನಟಿ ಸಮಂತಾ ಬಗ್ಗೆನೇ ಚರ್ಚೆಯಾಗುತ್ತದೆ. ಸಮಂತಾ ಕೂಡ ತನ್ನ ಜೀವನದ ಕಹಿ ಘಟನೆಯನ್ನು ಮರೆತು, ಹೊಸ ಜೀವನಕ್ಕೆ ಕಾಲಿಡಲು ಚಿಂತಿಸುತ್ತಿದ್ದಾರೆ. ಆದರೆ, ಈ ಹಿಂದೆನೇ ಡಿವೋರ್ಸ್ ಅನ್ನುವುದೇ ಒಂದು ನೋವಿನ ಪ್ರಕ್ರಿಯೆ ಎಂದು ಹೇಳಿಕೊಂಡಿದ್ದರು. ಈಗ ತಾನೂ ಮಾನಸಿಕ ಸಮಸ್ಯೆಗಳನ್ನು ಎದುರಿಸಿದ್ದೇನೆ ಎಂದು ಹೇಳಿದ್ದಾರೆ.
ಟಾಲಿವುಡ್ ನಟ ನಾಗಚೈತನ್ಯದಿಂದ ಬೇರೆಯಾದ ಬಳಿಕ ಸಮಂತಾ ಕುಗ್ಗಿ ಹೋಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಮಂತಾಳದ್ದೇ ಅನ್ನುವಂತೆ ಚರ್ಚೆಯಾಗುತ್ತಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ವಿರುದ್ಧ ತಿರುಗಿಬಿದ್ದವರು ಅದೆಷ್ಟೋ ಮಂದಿ. ಹೀಗಿದ್ದರೂ, ಅವೆಲ್ಲವನ್ನೂ ನಿಭಾಯಿಸಿಕೊಂಡು ಬಂದಿದ್ದ ಸಮಂತಾನೇ ಸ್ಟ್ರಾಂಗ್ ಅಂತ ಹೊಗಳಿ ಅಟ್ಟಕ್ಕೇರಿಸಿದ್ದವರೂ ಇದ್ದರು. ಆದರೆ, ಸ್ವತ: ಸಮಂತಾ ನಾನು ಗಟ್ಟಿಗಿತ್ತಿಯಲ್ಲ ಅಂತ ಒಪ್ಪಿಕೊಂಡಿದ್ದಾರೆ.

ನಾನು ಸ್ಟ್ರಾಂಗ್ ಅಲ್ಲ ಎಂದ ಸಮಂತಾ
ಈ ಹಿಂದೆ ಸಮಂತಾ ವಿಚ್ಚೇದನದ ಬಗ್ಗೆ ಮನಬಿಚ್ಚಿ ಮಾತಾಡಿದ್ದರು. ತಪ್ಪು ಮಾಡದೆ ಟೀಕೆಗೆ ಒಳಗಾಗಿದ್ದ ಬಗ್ಗೆ ಸಮಂತಾ ಬೇಸರ ವ್ಯಕ್ತಪಡಿಸಿದ್ದರು. ಈ ವೇಳೆ ತನ್ನ ಮಾನಸಿಕ ಸ್ಥಿತಿಯ ಬಗ್ಗೆನೂ ಮಾತಾಡಿದ್ದರು. ಆಗ ಎಲ್ಲರೂ ನಾನು ಮಾನಸಿಕವಾಗಿ ಸ್ಟ್ರಾಂಗ್ ಆಗಿದ್ದೇನೆ ಎಂದಿಕೊಂಡಿದ್ದರು ಎಂದಿದ್ದಾರೆ. "ನನ್ನ ಬದುಕಿನ ಮತ್ತೊಂದು ಹಂತದಲ್ಲಿ ನಾನು ಯಶಸ್ವಿಯಾಗಿದ್ದೇನೆ. ಅದಕ್ಕೆ ಕಾರಣ ನಾನು ಸ್ಟ್ರಾಂಗ್ ಆಗಿದ್ದೇನೆ ಎಂದಲ್ಲ. ನನ್ನ ಸುತ್ತಮುತ್ತ ಇರುವ ಸಾಕಷ್ಟು ಹಲವು ಜನರಿಂದ ನಾನು ಸ್ಟ್ರಾಂಗ್ ಅಂತ ಅನಿಸಿಕೊಂಡಿದ್ದೇನೆ. ಸಾಕಷ್ಟು ಜನರು ನನಗೆ ಸಹಾಯ ಮಾಡಲು ಸಾಕಷ್ಟು ಸಮಯ ಕಳೆದಿದ್ದಾರೆ. ಇದೇ ಸಹಾಯವನ್ನೂ ನಾವೂ ಮಾಡುವ ಸಮಯ ಬಂದಿದೆ." ಎಂದಿದ್ದಾರೆ ಸಮಂತಾ.

ನನಗೂ ಮಾನಸಿಕ ಸಮಸ್ಯೆ ಇತ್ತು
ಸಮಂತಾ ತನ್ನ ಬದುಕಿನ ಕಟು ಸತ್ಯವೊಂದನ್ನು ಹೊರಹಾಕಿದ್ದಾರೆ. ಮಾನಸಿಕ ಸಮಸ್ಯೆಯಿಂದ ಬಳುತ್ತಿರುವ ವಿಷಯವನ್ನು ನಿರ್ಭಯವಾಗಿ ಬಹಿರಂಗ ಪಡಿಸಿದ್ದಾರೆ. "ನನ್ನ ಜೀವನದಲ್ಲಿ ಸಾಕಷ್ಟು ಮಾನಸಿಕ ಸಮಸ್ಯೆಗಳಿವೆ. ನಾನು ಸ್ನೇಹಿತರು ಹಾಗೂ ಸಲಹೆಗಾರರಿಂದ ಹೊರಬಂದಿದ್ದೇನೆ. ನಾನು ಹೇಗೆ ವೈದ್ಯರ ಬಳಿಗೆ ಹೋಗುತ್ತೆವೋ ಹಾಗೇ ನಮ್ಮ ಹೃದಯಕ್ಕೆ ನೋವಾದಾಗ ನಾವು ವೈದ್ಯರನ್ನು ಭೇಟಿಯಾಗಬೇಕು. ಈ ಬಗ್ಗೆ ನಾನು ಮುಜುಗರಕ್ಕೆ ಒಳಗಾಗಬಾರದು." ಎಂದು ಸಮಂತಾ ಜನರಿಗೆ ಸಲಹೆ ನೀಡಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಸಮಂತಾ ಹೇಳಿಕೆ
ಸಮಂತಾ ಇತ್ತೀಚೆಗೆ 'ನಿಮ್ಮ ಮನೆ ಬಾಗಿಲಿಗೆ ಮನೋವೈದ್ಯಶಾಸ್ತ್ರ' ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಟ್ರಸ್ಟ್ ಒಂದು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಈ ವೇಳೆ ಸಮಂತಾ ತನ್ನ ಮಾನಸಿಕ ಸಮಸ್ಯೆ ಬಗ್ಗೆ ಬಹಿರಂಗವಾಗಿ ಮಾಡಿದ್ದಾರೆ. ವಿಚ್ಛೇದನದ ಬಳಿ ಸಮಂತಾ ಮಾನಸಿಕ ಸಮಸ್ಯೆಯಿಂದ ಹೊರಬಂದಿದ್ದರು. ಹಲವು ಬಾರಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು.

ಸಿನಿಮಾಗಳಲ್ಲಿ ಬ್ಯುಸಿ ಸಮಂತಾ
ಡಿವೋರ್ಸ್ ಬಳಿಕ ಸಮಂತಾ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಯಶೋಧ' ಮೊದಲ ಹಂತದ ಚಿತ್ರೀಕರಣ ಮುಗಿದಿದೆ. 'ಶಾಕುಂತಲಂ' ಬಿಡುಗಡೆಗೆ ಸಜ್ಜಾಗುತ್ತಿದೆ. ನಯನತಾರಾ ಹಾಗೂ ವಿಜಯ್ ಸೇತುಪತಿ ಜೊತೆ ನಟಿಸುತ್ತಿರುವ ಸಿನಿಮಾ 'ಕಾಥುವಾಕುಲಾ ರೆಂಡು ಕಾದಲ್' ಚಿತ್ರ ಕೂಡ ಕೈಯಲ್ಲಿದೆ. ಇನ್ನೊಂದು ಕಡೆ ಫ್ಯಾಮಿಲಿ ಮ್ಯಾನ್ ನಿರ್ದೇಶಕರೊಂದಿಗೆ ವೆಬ್ ಸಿರೀಸ್ ಹಾಗೂ ಹಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.


Click it and Unblock the Notifications











