'ಊ ಅಂಟಾವ' ಐಟಂ ಸಾಂಗ್‌ನಲ್ಲಿ ಸಮಂತಾ ನಟಿಸಿದ್ದೇ ತಪ್ಪಾಯ್ತಾ? ನಟಿ ಹೇಳಿದ್ದೇನು?

'ಪುಷ್ಪ' ಸಿನಿಮಾ ಒಂದು ಹಾಡು ಥಿಯೇಟರ್ ಒಳಗೂ, ಥಿಯೇಟರ್ ಹೊರಗೂ ಬೇಜಾನ್ ಸದ್ದು ಮಾಡಿತ್ತು. ಅದುವೇ ಸಮಂತ ಅಭಿನಯದ ಐಟಂ ಸಾಂಗ್ 'ಊ ಅಂಟಾವ'. ಈ ಹಾಡಿನಲ್ಲಿ ಗ್ಲಾಮರಸ್ ಸಮಂತಾಳನ್ನು ನೋಡಿ ಅವರ ಫ್ಯಾನ್ಸ್ ಥ್ರಿಲ್ ಆಗಿದ್ದರು. ಈ ಹಾಡು ಕೂಡ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬೇಜಾನ್ ಸದ್ದು ಮಾಡಿತ್ತು. ನಟಿ ಸಮಂತಾಗೆ ಈ ಸಾಂಗ್ ಹೊಸ ಇಮೇಜ್ ಕೊಟ್ಟಿದ್ದು ಸುಳ್ಳಲ್ಲ. ಅಂಜಿಕೆಯಿಂದಲೇ ಐಟಂ ಸಾಂಗಿಗೆ ಸೈ ಎಂದಿದ್ದ ಸಮಂತಾಗೆ ಆಕೆಯ ಅಭಿಮಾನಿಗಳು ಭೇಷ್ ಎಂದಿದ್ದರು.

ಊ ಅಂಟಾವ ಐಟಂ ಸಾಂಗ್ ಸೂಪರ್ ಹಿಟ್ ಆಯ್ತು. ಸಮಂತಾಗೆ ಡ್ಯಾನ್ಸ್‌ಗೆ, ಮಾದಕ ನೋಟಕ್ಕೆ ಅಭಿಮಾನಿಗಳು ದಿಲ್ ಖುಷ್ ಆಗಿದ್ದರು. ಒಂದಿಷ್ಟು ದಿನ ಸಮಂತಾ ಕೂಡ ಅಭಿಮಾನಿಗಳ ಹೊಗಳಿಕೆ ಕೇಳಿ ಹಿಗ್ಗಿದ್ದರು. ಆದ್ರೀಗ ಅವಾರ್ಡ್ ಫಕ್ಷಂನ್‌ನಲ್ಲಿ ಸಮಂತಾ ಊ ಅಂಟಾವ ಸಾಂಗ್‌ನಲ್ಲಿ ನಟಿಸಿದ ಬಳಿಕ ಆದ ಬದಲಾವಣೆ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಐಟಂ ಸಾಂಗ್‌ನಲ್ಲಿ ನಟಿಸಿದ ಬಳಿಕ ಮತ್ತ ಬದುಕಿನಲ್ಲಿ ಏನೆಲ್ಲಾ ಬದಲಾವಣೆ ಆಯ್ತು ಅನ್ನುವುದನ್ನು ಸಮಂತಾ ಹೇಳಿದ್ದಾರೆ.

 ಜನರು ನನ್ನ ಸಿನಿಮಾವನ್ನೇ ಮರೆತಿದ್ದಾರೆ

ಜನರು ನನ್ನ ಸಿನಿಮಾವನ್ನೇ ಮರೆತಿದ್ದಾರೆ

ಮಾರ್ಚ್ 10 ರಂದು 'ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್' ಕಾರ್ಯಕ್ರಮ ನಡೆದಿತ್ತು. ಈ ವೇಳೆ ಸಮಂತಾ 'ಪುಷ್ಪ' ಸಿನಿಮಾದ ಐಟಂ ಸಾಂಗ್‌ ಬಗ್ಗೆ ಮಾತಾಡಿದ್ದಾರೆ. ಊ ಅಂಟಾವ.. ಐಟಂ ಸಾಂಗ್‌ನಲ್ಲಿ ನಟಿಸಿದ ಬಳಿಕ ಜನರು ಈ ಹಿಂದೆ ಸಮಂತಾ ನಟಿಸಿದ ಸಿನಿಮಾಗಳನ್ನೇ ಮರೆತುಬಿಟ್ಟಿದ್ದಾರಂತೆ. " ಊ ಅಂಟಾವ ಸಾಂಗ್‌ ಬಳಿಕ ತೆಲುಗು ಪ್ರೇಕ್ಷಕರಷ್ಟೇ ಅಲ್ಲ. ಇಡೀ ದೇಶದ ಜನರು ನಾನು ಇದೂವರೆಗೂ ನಟಿಸಿದ ಸಿನಿಮಾಗಳನ್ನೇ ಮರೆತು ಬಿಟ್ಟಿದ್ದಾರೆ. ಈಗ ಬರೀ ಊ ಅಂಟಾವ ಹಾಡಿನಿಂದಲೇ ನನ್ನನ್ನು ಗುರುತಿಸುತ್ತಿದ್ದಾರೆ." ಎಂದು ಸಮಂತಾ ಪ್ರಶಸ್ತಿ ಸಮಾರಂಭದಲ್ಲಿ ಬಹಿರಂಗ ಪಡಿಸಿದ್ದಾರೆ.

 ಊ ಅಂಟಾವ ಸಾಂಗ್ ಹಿಟ್ ಆಯ್ತು

ಊ ಅಂಟಾವ ಸಾಂಗ್ ಹಿಟ್ ಆಯ್ತು

'ಊ ಅಂಟಾವ..' ಸಮಂತಾ ನಟಿಸಿದ ಮೊದಲ ಐಟಂ ಸಾಂಗ್. ಈ ಹಾಡಿನ ತೆಲುಗಿನಲ್ಲಿ ಹಲವು ದಾಖಲೆಗಳನ್ನು ಮುರಿದು ಹಾಕಿತ್ತು. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ' ಸಿನಿಮಾಗೆ ಬೂಸ್ಟ್ ಕೊಟ್ಟಿದ್ದೇ ಈ ಹಾಡು. " ಜನರು ನನ್ನ ಮೇಲೆ ಪ್ರೀತಿ ವ್ಯಕ್ತಪಡಿಸುತ್ತಿರುವ ರೀತಿಯನ್ನು ವರ್ಣಿಸಲು ಅಸಾಧ್ಯ. ಊ ಅಂಟಾವ ಹಾಡು ಈ ಮಟ್ಟಕ್ಕೆ ಪ್ಯಾನ್ ಇಂಡಿಯಾ ಹಿಟ್ ಆಗುತ್ತೆ ಎಂದು ಯಾರೂ ಊಹಿಸಿರಲಿಲ್ಲ." ಎಂದು ಸಮಂತಾ ಪ್ರಶಸ್ತಿ ಸಮಾರಂಭದಲ್ಲಿ ಹೇಳಿಕೆ ನೀಡಿದ್ದಾರೆ.

 ಗ್ರೀನ್ ಗೌನ್‌ನಲ್ಲಿ ನಿದ್ದೆ ಕದ್ದ ಸ್ಯಾಮ್

ಗ್ರೀನ್ ಗೌನ್‌ನಲ್ಲಿ ನಿದ್ದೆ ಕದ್ದ ಸ್ಯಾಮ್

ಕ್ರಿಟಿಕ್ಸ್ ಚಾಯ್ಸ್ ಫಿಲ್ಮ್ ಅವಾರ್ಡ್‌ನಲ್ಲಿ ಸಮಂತಾ ಫ್ಯಾಷನ್ ಸೆನ್ಸ್ ಬಗ್ಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಗ್ರೀನ್ ಗೌನ್ ತೊಟ್ಟು ಬಂದಿದ್ದ ಪ್ರಶಸ್ತಿ ಸಮಾರಂಭಕ್ಕೆ ಬಂದಿದ್ದ ಸಮಂತಾ ಕಂಡು ತಾರೆಯರೇ ಫಿದಾ ಆಗಿದ್ದಾರೆ. ಡಾರ್ಕ್ ಗ್ರೀನ್ ಗೌನ್ ಧರಿಸಿ ಬಂದಿದ್ದ ಸಮಂತಾ ತನ್ನ ಸೌಂದರ್ಯದಿಂದಲೇ ಗಮನ ಸೆಳೆದಿದ್ದರು. ಫ್ಯಾಷನ್ ಡಿಸೈನರ್ ಗೌರಿ ಹಾಗೂ ನೈನಿಕಾ ಈ ಕಾಸ್ಟ್ಯೂಮ್ ಅನ್ನು ಡಿಸೈನ್ ಮಾಡಿದ್ದರು. ಟಾಲಿವುಡ್ ನಟಿ ರಾಶಿ ಖನ್ನಾ ಈ ಫೋಟೊಗಳಿಗೆ 'ಬ್ಯೂಟಿ' ಎಂದು ಕಮೆಂಟ್ ಮಾಡಿದ್ದಾರೆ. ಆದರೆ, ಟ್ರೋಲಿಗರು ಈ ಫೋಟೊಗಳನ್ನೂ ಬಿಟ್ಟಿಲ್ಲ.

 ಮತ್ತೆ ಸಮಂತಾ ಟ್ರೋಲ್

ಮತ್ತೆ ಸಮಂತಾ ಟ್ರೋಲ್

ಸಮಂತಾ ಗ್ರೀನ್‌ ಗೌನ್ ಧರಿಸಿ ಅವಾರ್ಡ್ ಫಂಕ್ಷನ್‌ಗೆ ಬಂದಿದ್ದು ಕೆಲವರಿಗೆ ಇಷ್ಟ ಆಗಿಲ್ಲ. ಸಮಂತಾ ಈ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿದ್ದಂತೆ ಮತ್ತೆ ಟ್ರೋಲ್ ಆಗಿದ್ದಾರೆ. ಕೆಲವರು ಗ್ರೀನ್ ಗೌನ್ ನೋಡಿ : ಎಂದೆಂಥಾ ಡ್ರೆಸ್" ಎಂದು ಕಮೆಂಟ್ ಮಾಡುತ್ತಿದ್ದರೆ. ಮತ್ತೆ ಕೆಲವರು " ಮೇಲೆ ಹಾಕಿಕೊಳ್ಳಬೇಕಿದ್ದ ಬಟ್ಟೆ ಕೆಳಗೆ ನೇತಾಡುತ್ತಿದೆ." ಎಂದು ಕಮೆಂಟ್ ಮಾಡಿದ್ದಾರೆ. ಸಮಂತಾ ಪ್ರತಿ ಭಾರಿ ಏನಾದರೂ ಒಂದು ವಿಷಯಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ. ಆದರೆ, ಅದ್ಯಾವುದಕ್ಕೂ ಸಮಂತಾ ತಲೆ ಕೆಡಿಸಿಕೊಳ್ಳುತ್ತಿಲ್ಲ. ವಿಚ್ಛೇದನದ ಬಳಿಕ ಸಮಂತಾ ತನ್ನಿಷ್ಟದಂತೆ ಬದುಕನ್ನು ಎಂಜಾಯ್ ಮಾಡುತ್ತಿದ್ದಾರೆ.

More from Filmibeat

English summary
Samantha Says People have forgotten my other works after 'Oo Antava'. Actress attended the Critics Choice Film Awards where she spoke about oo antava. Samantha also praised by several stars for her fashion sense.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X