Samantha: "ಸ್ಟಿರಾಯ್ಡ್ ತಗೊಂಡು ನನ್ನ ಮುಖ ಹೀಗಾಯ್ತು.. ಫೋಟೊಗೆ ಫಿಲ್ಟರ್ ಹಾಕ್ತೀನಿ" ಸತ್ಯ ಒಪ್ಪಿಕೊಂಡ ಸಮಂತಾ!
ಟಾಲಿವುಡ್ ಬೇಬಿ ಸಮಂತಾ ಸಿನಿಮಾದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಆರೋಗ್ಯ ತಪಾಪಣೆಗಾಗಿ ಸಿನಿಮಾದಿಂದ ದೂರವೇ ಉಳಿದಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ತಮ್ಮ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿ ಇದ್ದಾರೆ.
'ಶಾಕುಂತಲಂ' ಹೀನಾಯ ಸೋಲಿನ ಬಳಿಕ ಸಮಂತಾ 'ಖುಷಿ' ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆದರೆ, 'ಖುಷಿ' ಕೂಡ ನಿರೀಕ್ಷಿಸಿದ ಮಟ್ಟಕ್ಕೆ ಹೋಗಲಿಲ್ಲ. ಈಗ 'ಸಿಟಾಡೆಲ್' ವೆಬ್ ಸೀರಿಸ್ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

ಇತ್ತೀಚೆಗೆ ಸಮಂತಾ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಕಾಣಿಸಿಕೊಂಡಿದ್ದರು. ಅಭಿಮಾನಿಗಳಿಗೆ ಪ್ರಶ್ನೆ ಕೇಳುವಂತೆ ಕೇಳಿಕೊಂಡಿದ್ದರು. ಈ ವೇಳೆ ಅಭಿಮಾನಿಗಳು ತ್ವಚೆಯ ಬಗ್ಗೆ ಕೇಳಿದ ಪ್ರಶ್ನೆಗೆ ಸಮಂತಾ ಓಪನ್ ಆಗಿ ಉತ್ತರ ಕೊಟ್ಟಿದ್ದಾರೆ. ಸ್ಟಿರಾಯ್ಡ್ ತಗೊಂಡು ತನ್ನ ಮುಖ ಹೀಗಾಯ್ತು ಎಂದು ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಸಮಂತಾ ಹೀಗಂದಿದ್ಯಾಕೆ? ತಿಳಿಯಲು ಮುಂದೆ ಓದಿ.
ಸಮಂತಾ ತ್ವಚೆಯ ರಹಸ್ಯವೇನು?
ಇನ್‌ಸ್ಟಾಗ್ರಾಂನಲ್ಲಿ ಸಮಂತಾ ಅಭಿಮಾನಿಯೊಬ್ಬರು ನಿಮ್ಮ ಸುಂದರವಾದ ತ್ವಚೆಯ ರಹಸ್ಯವೇನು ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಸಮಂತಾ ತಮ್ಮ ತ್ವಚೆಯ ಅಸಲು ಸೀಕ್ರೇಟ್ ಏನು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಾವು ಹಾಕುವ ಫೋಟೊಗಳಿಗೆ ಫಿಲ್ಟರ್ ಹಾಕುವುದಾಗಿ ಸಮಂತಾ ಒಪ್ಪಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಫಿಲ್ಟರ್ ಹಾಕುವುದು ಏನಕ್ಕೆ ಅನ್ನೋದನ್ನೂ ರಿವೀಲ್ ಮಾಡಿದ್ದಾರೆ.

ಅಭಿಮಾನಿಗೆ ಸಮಂತಾ ಹೇಳಿದ್ದೇನು?
ತ್ವಚೆಯ ಬಗ್ಗೆ ಅಭಿಮಾನಿ ಕೇಳಿದ ಪ್ರಶ್ನೆಗೆ ಸಮಂತಾ ಉತ್ತರ ಹೀಗಿತ್ತು. " ತ್ವಚೆ ಕ್ಲಿಯರ್ ಆಗಿಲ್ಲ. ಗಾಯಕಿ ಚಿನ್ಮಯಿ ಸರಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಮತ್ತೆ ತನ್ನ ಸ್ಕಿನ್ ಅನ್ನು ಸರಿ ಮಾಡುವುದಾಗಿ ಭಾಷೆ ಕೊಟ್ಟಿದ್ದಾರೆ. ಇದು ನನಗಿರುವ ಮಯೋಸೈಟಿಸ್‌ನಿಂದ ಹೀಗಾಗಿದೆ. ಇದಕ್ಕಾಗಿ ಹೆಚ್ಚಿ ಸ್ಟಿರಾಯ್ಟ್ ಅನ್ನು ತೆಗೆದುಕೊಂಡಿದ್ದೆ. ಅದು ನನ್ನ ಚರ್ಮದ ಮೇಲೆ ಪ್ರಭಾವ ಬೀರಿದೆ" ಎಂದು ಸಮಂತಾ ಹೇಳಿದ್ದಾರೆ.
ಮಯೋಸೈಟಿಸ್ ಇದೆ ಎಂದಿದ್ದ ನಟಿ
ಕಳೆದ ವರ್ಷ ಯಶೋಧಾ ಸಿನಿಮಾ ಬಿಡುಗಡೆ ವೇಳೆ ಸಮಂತಾ ತನಗೆ ಮಯೋಸೈಟಿಸ್ ಇರುವ ಬಗ್ಗೆ ಬಹಿರಂಗ ಪಡಿಸಿದ್ದರು. ಈ ಅಪರೂಪದ ಖಾಯಿಲೆಗಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿಯೀ ಹೇಳಿಕೊಂಡಿದ್ದರು. ಆಸ್ಪತ್ರೆಯಿಂದಲೇ ಸಿನಿಮಾದ ಪ್ರಚಾರವನ್ನು ಕೂಡ ಮಾಡಿದ್ದರು. ಕೆಲವು ದಿನಗಳ ಕಾಲ ಚಿಕಿತ್ಸೆ ಪಡೆದು ಬಳಿಕ ಮತ್ತೆ ಸಿನಿಮಾಗೆ ಮರಳಿದ್ದರು.
ಸಿನಿಮಾಗೆ ಬ್ರೇಕ್
ಸಮಂತಾ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾ ಹಾಗೂ ವೆಬ್ ಸೀರಿಸ್ ಕೆಲಸಗಳನ್ನು ಮುಗಿಸಿದ್ದಾರೆ. ಸಮಂತಾ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುದ್ದಿನೂ ಇತ್ತು. ಆಯುಷ್ಮಾನ್ ಖುರಾನಾ ನಟಿಸುತ್ತಿರುವ ಸಿನಿಮಾದಲ್ಲೂ ಸಮಂತಾ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಆರೋಗ್ಯದ ದೃಷ್ಟಿಯಿಂದ ಈ ಸಿನಿಮಾವನ್ನು ಕೈ ಬಿಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಸಮಂತಾ 'ಸಿಟಾಡೆಲ್' ವೆಬ್ ಸೀರಿಸ್‌ನಲ್ಲಿ ಕಾಣಿಸಿಕೊಂಡಿದ್ದು, ಶೀಘ್ರದಲ್ಲಿಯೇ ಪ್ರೀಮಿಯರ್ ಆಗಲಿದೆ.


Click it and Unblock the Notifications











