ವಿಚ್ಛೇದನ, ಸಾವು, ಸೋಲಿನ ಬಗ್ಗೆ ಸಮಂತಾ ಹೇಳುತ್ತಿರುವುದೇಕೆ? ಯಾಕೀ ಮಾತು?

2021 ನಟಿ ಸಮಂತಾ ಜೀವನದಲ್ಲಿ ಕರಾಳ ವರ್ಷ. ತನ್ನ ಬದುಕಿನ ಅತೀ ಕಠಿಣ ನಿರ್ಧಾರವನ್ನು ತೆಗೆದುಕೊಂಡ ವರ್ಷ. ಮತ್ತೆ ಬದುಕನ್ನು ಒಂಟಿಯಾಗಿಸಿದ ವರ್ಷ. 2021ನ್ನು ಬಹುಶಃ ಸಮಂತಾ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಪ್ರೀತಿಸಿ ಮದುವೆಯಾಗಿದ್ದ ನಾಗಚೈತನ್ಯ ಹಾಗೂ ಸಮಂತಾ ಬೇರೆಯಾದ ವರ್ಷವಿದು. ಸದ್ಯ ಸಮಂತಾ ವಿಚ್ಛೇದನವೆಂಬ ನೋವಿನಿಂದ ಹೊರಬಂದಿದ್ದರೂ ಆಗಾಗಾ ಡಿವೋರ್ಸ್, ಸಾವು, ಸೋಲಿನ ಬಗ್ಗೆ ಮಾತಾಡುತ್ತಲೇ ಇದ್ದಾರೆ.

ಸದ್ಯಕ್ಕೀಗ ಸಮಂತಾ ವಿಚ್ಛೇದನದ ಬಗ್ಗೆ ಹಂಚಿಕೊಂಡಿರುವ ಸಾಲುಗಳ ಬಗ್ಗೆ ಚರ್ಚೆಯಾಗುತ್ತಿದೆ. ಈಕೆ ನೋವಿನಿಂದ ಹೊರಬರಲು ಸಾಕಷ್ಟು ಪ್ರಯತ್ನ ನಡೆಸಿ ಗೆದ್ದಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜಾಹೀರಾತು, ವೆಬ್ ಸಿರೀಸ್‌ಗಳ ಬಗ್ಗೆನೂ ಗಮನ ಹರಿಸುತ್ತಿದ್ದಾರೆ. ಇಷ್ಟೊಂದು ಬ್ಯುಸಿಯಾಗಿರುವಾಗ ಮತ್ತೆ ವಿಚ್ಛೇದನ, ಸೋಲು, ಸಾವಿನ ಬಗ್ಗೆ ಹಾಲಿವುಡ್ ನಟ ಬರೆದ ಪುಸ್ತಕದ ಸಾಲುಗಳನ್ನು ಶೇರ್ ಮಾಡಿದ್ದು ಏಕೆ? ಎನ್ನುವ ಪ್ರಶ್ನೆ ಕಾಡುತ್ತಿದೆ.

 ವಿಚ್ಛೇದನ, ಸೋಲಿನ ಬಗ್ಗೆ ಸಮಂತಾ ಹೇಳಿದ್ದೇನು?

ವಿಚ್ಛೇದನ, ಸೋಲಿನ ಬಗ್ಗೆ ಸಮಂತಾ ಹೇಳಿದ್ದೇನು?

ಸಮಂತಾ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಸ್‌ನಲ್ಲಿ ವಿಚ್ಛೇದನ, ಸೋಲು, ಸಾವು ಹಾಗೂ ಅವಮಾನಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಹಾಲಿವುಡ್ ನಟ ವಿಲ್ ಸ್ಮಿತ್ (Will Smith) ತನ್ನ ಪುಸ್ತಕದಲ್ಲಿ ಬರೆದ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಈ ಸಾಲುಗಳನ್ನು ಸಮಂತಾ ಹಂಚಿಕೊಂಡಿದ್ದು ಏಕೆ ಎನ್ನುವ ಬಗ್ಗೆ ಚಿತ್ರರಂಗದಲ್ಲಿ ಚರ್ಚೆಯಾಗುತ್ತಿದೆ. ವಿಚ್ಛೇದನದ ಬಗ್ಗೆ ಬಳಿಕ ನೋವು, ಅವಮಾನಗಳನ್ನು ಎದುರಿಸಿ ನಿಂತಿರುವ ಸಮಂತಾ ಮತ್ತೆ ಇಂತಹ ಸಾಲುಗಳನ್ನು ಶೇರ್ ಮಾಡಿದ್ದರ ಬಗ್ಗೆ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.

 ಹಾಲಿವುಡ್ ನಟನ ಬಗ್ಗೆ ಸಮಂತಾ ಹೇಳಿದ್ದೇನು?

ಹಾಲಿವುಡ್ ನಟನ ಬಗ್ಗೆ ಸಮಂತಾ ಹೇಳಿದ್ದೇನು?

ಭಾರತೀಯ ಚಿತ್ರರಂಗದಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಕೆಲವೇ ಕೆಲವು ನಟಿಯರಲ್ಲಿದೆ. ಇದರಲ್ಲಿ ಸಮಂತಾ ಕೂಡ ಒಬ್ಬರು. ಬಿಡುವು ಸಿಕ್ಕಾಗಲೆಲ್ಲಾ ಪುಸ್ತಕಗಳನ್ನು ಹಿಡಿದು ಕೂರುತ್ತಾರೆ. ಇಂತಹ ಹಲವು ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈಗ ಹಾಲಿವುಡ್ ನಟ ವಿಲ್ ಸ್ಮಿತ್ ಪುಸ್ತಕವನ್ನು ಓದಿ ಮತ್ತಷ್ಟು ಪಕ್ವವಾಗಿದ್ದಾರೆ." ಕಠಿಣ ಪರಿಶ್ರಮ, ಹಿಂದಿನ ತಪ್ಪುಗಳಿಂದ ತಿದ್ದಿಕೊಳ್ಳುವುದು, ನಮ್ಮನ್ನು ನಾವು ಕಂಡುಕೊಳ್ಳುವುದು, ಸೋಲನ್ನು ಒಪ್ಪಿಕೊಳ್ಳದೆ ಇರುವುದು. ಹಾಗೂ ಹಾಸ್ಯ ಮನೋಭಾವ ಸಹಾಯಕ್ಕೆ ಬರುತ್ತದೆ. ಎಂತಹ ಆಕರ್ಷಕ ಮತ್ತು ಸುಂದರ ಪುಸ್ತಕ, ವಿಲ್." ಎಂದು ಬರೆದುಕೊಂಡಿದ್ದಾರೆ.

 ಯಾರೀ ವಿಲ್ ಸ್ಮಿತ್

ಯಾರೀ ವಿಲ್ ಸ್ಮಿತ್

ವಿಲ್ ಸ್ಮಿತಾ ಹಾಲಿವುಡ್‌ನ ಸೂಪರ್‌ಸ್ಟಾರ್. 53 ವರ್ಷದ ಈ ಅಮೆರಿಕಾದ ನಟ ನಿರ್ಮಾಪಕನೂ ಹೌದು. 'ಮೆನ್ ಇನ್ ಬ್ಲ್ಯಾಕ್', 'ಐಯಾಮ್ ಲೆಜೆಂಡ್' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆ ಜೊತೆ ಜೊತೆಗೆ ಸಮಾಜಮುಖಿ ಕೆಲಸಗಳಲ್ಲೂ ಭಾಗಿಯಾಗಿದ್ದಾರೆ. 1992ರಲ್ಲಿ ಶೆರೀ ಜಾಂಪಿನೋ (Sheree Zampino) ಅವರೊಂದಿಗೆ ವಿಲ್ ಸ್ಮಿತ್ ವಿವಾಹವಾಗಿದ್ದರು. ಕೇವಲ ಮೂರೇ ವರ್ಷಗಳಲ್ಲಿ ವಿಲ್ ಸ್ಮಿತ್ ಕೌಟುಂಬಿಕ ಜೀವನ ಅಂತ್ಯವಾಗಿತ್ತು. ಬಳಿಕ 1997ರಲ್ಲಿ ಜಡಾ ಪಿಂಕೆಟ್ (Jada Pinkett) ಎರಡನೇ ಮದುವೆ ಆಗಿದ್ದರು. ಈ ನಟನ ಯುವಕನಾಗಿದ್ದಾಗ ವಿಚ್ಛೇದನ, ಪ್ರೀತಿ, ಸೋಲು ಇವುಗಳಿಂದ ಹೊರಬರಲು ಪರದಾಡಿದ್ದರ ಬಗ್ಗೆ ಪುಸ್ತಕದಲ್ಲಿ ಬರೆದಿದ್ದಾರೆ.

 ಹಾರ್ಟ್‌ಬ್ರೇಕ್‌ಗೆ ಯಾವುದೇ ಮದ್ದಿಲ್ಲ

ಹಾರ್ಟ್‌ಬ್ರೇಕ್‌ಗೆ ಯಾವುದೇ ಮದ್ದಿಲ್ಲ

ಹಾಲಿವುಡ್ ನಟ ವಿಲ ಸ್ಮಿತ್ ತಾನೇ ಬರೆದ 'ವಿಲ್' ಎಂಬ ಪುಸ್ತಕದಲ್ಲಿ ತನ್ನ ವೈಯಕ್ತಿಕ ಜೀವನದ ಬಗ್ಗೆ ಬರೆದುಕೊಂಡಿದ್ದಾರೆ. ತನ್ನ 16ನೇ ವಯಸ್ಸಿನಲ್ಲಿ ಗರ್ಲ್‌ಫ್ರೆಂಡ್ ಸಿಕ್ಕಿದ್ದು, ಬಳಿಕ ಪ್ರೀತಿ ಮುರಿದು ಬಿದ್ದಿದ್ದು, ಮಲಾನೀ ಎಂಬುವವರ ಜೊತೆ ಪ್ರೀತಿ, ಆಗಲೂ ನಟನಿಗಾದ ಮೋಸ. ಆ ನೋವಿನಿಂದ ಹೊರಬರಲಾರದೆ ಪರದಾಡಿದ್ದನ್ನು ವಿಲ್ ಸ್ಮಿತ್ ತನ್ನ ಪುಸ್ತಕದಲ್ಲಿ ಬರೆದು ಕೊಂಡಿದ್ದಾರೆ." ಹಾರ್ಟ್ ಬ್ರೇಕ್‌ ಆದರೆ, ಅದಕ್ಕೆ ಯಾವುದೇ ಮದ್ದು ಇಲ್ಲ." ಎಂದು ಹೇಳಿದ್ದಾರೆ.

More from Filmibeat

English summary
Samantha shares Hollywood actor Will Smith quotes on failure, divorce and death from his book. She shared Will Smith book cover page and said "Work hard, learn from your setbacks, self-reflect, reinvent yourself and never ever give up.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X