ನೈತಿಕ ಪೊಲೀಸ್‌ಗಿರಿಗೆ 'ಮಿಡಲ್ ಫಿಂಗರ್' ತೋರಿಸಿ ಧನ್ಯವಾದ ಹೇಳಿದ್ದಿದ್ದೇಕೆ ಸಮಂತಾ?
ಭಾರತೀಯ ಚಿತ್ರರಂಗ ಕಂಡ ಡೇರಿಂಗ್ ಕಮ್ ಟ್ಯಾಲೆಂಟೆಡ್ ನಟಿ ಸಮಂತಾ. ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಸಮಂತಾ ಫುಲ್ ಆಕ್ಟಿವ್ ಆಗಿದ್ದಾರೆ. ನಾಗಚೈತನ್ಯ ಜೊತೆ ವಿಚ್ಛೇದನದ ಬಳಿಕ ಸಮಂತಾ ಹೊಸ ಬದುಕನ್ನು ಕಟ್ಟಿಕೊಂಡಿದ್ದಾರೆ. ಡಿವೋರ್ಸ್ ನೋವಿನ ಬೆನ್ನಲ್ಲೇ ಆರೋಗ್ಯ ಕೂಡ ಕೈ ಕೊಟ್ಟಿತ್ತು. ದೈಹಿಕ ಹಾಗೂ ಮಾನಸಿಕ ನೋವಿನಿಂದ ಹೊರಬಂದಿರೋ ಸಮಂತಾ ಮತ್ತೆ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಕೆಲ ಮಹಿಳೆಯರು ಸಮಂತಾ ಅವರ ದಿಟ್ಟತನ, ಧೈರ್ಯವನ್ನು ಮಾದರಿಯನ್ನಾಗಿ ಇಟ್ಟುಕೊಂಡಿದ್ದಾರೆ.
ಹಾಗೇ ಸಮಂತಾ ಫ್ಯಾಷನ್ ಸೆನ್ಸ್, ಏರ್‌ಪೋರ್ಟ್ ಕಾಸ್ಟ್ಯೂಮ್, ಬೀಚ್ ಕಾಸ್ಟ್ಯೂಮ್ ಅನ್ನು ಮೆಚ್ಚಿಕೊಂಡಿದ್ದಾರೆ. ಸಮಂತಾರಂತೆಯೇ ಡ್ರೆಸ್ ಮಾಡಿಕೊಂಡು ಸಂಭ್ರಮಿಸಿದ್ದಾರೆ. ಒಮ್ಮೆ ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ಕಂಡ್ರೆ, ಇನ್ನೊಮ್ಮೆ ಪಕ್ಕಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾವುದೇ ಅವತಾರದಲ್ಲಿ ಕಂಡರೂ ಸಮಂತಾಗೆ ಮೆಚ್ಚುಗೆ ವ್ಯಕ್ತವಾಗಿದ್ದೇ ಹೆಚ್ಚು. ಆದರೂ, ಕೆಲವೊಮ್ಮೆ ಸಮಂತಾ ಕಾಸ್ಟ್ಯೂಮ್ ಸೆನ್ಸ್‌ಗೆ ಟ್ರೋಲ್ ಆಗಿದ್ದು ಇದೆ. ಈ ವೇಳೆ ಸಮಂತಾ ದಿಟ್ಟತನದಿಂದ ಉತ್ತರಿಸಿದ ಪರಿ ಮೆಚ್ಚುಗೆ ಗಳಿಸಿತ್ತು.

ಸಮಂತಾ ಹಾಗೂ ನಾಗಚೈತನ್ಯ ವಿವಾಹದ ಬಳಿಕ ಪ್ರವಾಸಕ್ಕೆ ಹೋಗಿದ್ದರು. ಇಬ್ಬರೂ ಇಬಿಜಾದಲ್ಲಿ ಒಳ್ಳೆ ಸಮಯವನ್ನು ಕಳೆದಿದ್ದರು. ಈ ವೇಳೆ ಸಮಂತಾ ಬೀಚ್ ಔಟ್‌ಫಿಟ್‌ನಲ್ಲಿರುವ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. ಒಮ್ಮೆ ಫೋಟೊ ಶೇರ್ ಮಾಡುತ್ತಿದ್ದಂತೆ ಟ್ರೋಲಿಗರು ಮುಗಿಬಿದ್ದಿದ್ದರು. ಆ ವೇಳೆ ಸಮಂತಾಗೆ ನೈತಿಕ ಪಾಠ ಮಾಡುವುದಕ್ಕೆ ಮುಂದಾಗಿದ್ದರು. ಮದುವೆ ಬಳಿಕ ಈ ರೀತಿ ಡ್ರೆಸ್ ಎಲ್ಲ ಧರಿಸದೆ ಇರುವಂತೆ ಬುದ್ಧಿ ಹೇಳಲು ಬಂದಿದ್ದರು.
2018ರಲ್ಲಿ ಸಮಂತಾ ಮಾಜಿ ಪತಿ ನಾಗ ಚೈತನ್ಯ ಜೊತೆ ಇಬಿಜಾಗೆ ಟ್ರಿಪ್ ಹೋಗಿದ್ದರು. ಆ ವೇಳೆ ಅಲ್ಲಿಂದ ಸುಂದರ ತಾಣದಲ್ಲಿರುವ ಫೋಟೊವನ್ನು ಶೇರ್ ಮಾಡಿಕೊಂಡಿದ್ದರು. ಹಾಗೇ ಇನ್‌ಸ್ಟಾಗ್ರಾಂ 'ಇನ್ನರ್ ಪೀಸ್' ಅಂತ ಬರೆದುಕೊಂಡಿದ್ದರು. ಆಗ ಆಕೆ ಡ್ರೆಸಿಂಗ್ ಸೆನ್ಸ್ ಬಗ್ಗೆ ಟ್ರೋಲಿಗರು ಕಮೆಂಟ್ ಮಾಡಲು ಆರಂಭಿಸಿದ್ದರು. ಒಬ್ಬರು "ಭಾರತೀಯ ನಾರಿಯಂತೆ ಇರುವುದನ್ನು ಕಲಿ. ಭಾರತ ಸಂಸ್ಕೃತಿ ಶ್ರೀಮಂತವಾಗಿದೆ. ಇಂತಹ ಕೆಟ್ಟ ಫೋಟೊಗಳನ್ನು ಹಾಕಬೇಡಿ. ನೀನು ಹುಡುಗನಂತೆ ಕಾಣುತ್ತಿದ್ದೀಯಾ." ಎಂದು ಕಮೆಂಟ್ ಮಾಡಿದ್ದರು. ಇನ್ನೊಬ್ಬರು " ನನಗೆ ಒಂದು ಅರ್ಥ ಆಗುತ್ತಿಲ್ಲ. ನೀನ್ಯಾಕೆ ಸರಿಯಾಗಿ ಡ್ರೆಸ್ ಮಾಡಿಕೊಳ್ಳುತ್ತಿಲ್ಲ. ನೀನು ಮದುವೆ ಆಗಿರುವ ಮಹಿಳೆನಾ? ಅಥವಾ ಎಕ್ಸ್‌ಪೋಸಿಂಗ್ ಕ್ವೀನ್?" ಎಂದು ಒಬ್ಬರು ಕಮೆಂಟ್ ಮಾಡಿದ್ದರು.
ಮತ್ತೊಬ್ಬರು " ಇಂತಹ ಫೋಟೊವನ್ನು ನಿಮ್ಮ ಬೆಡ್ ರೂಮ್‌ಗಳಲ್ಲಿ ಇಟ್ಟುಕೊಳ್ಳಿ. ಯುವಕರ ಮನಸ್ಸಿನೊಳಗೆ ಬಿಡಬೇಡಿ" ಎಂದು ಹೇಳಿದ್ದರು. ಇಂತಹ ಕಮೆಂಟ್‌ಗಳಿಗೆ ನೋಡಿದ ಬಳಿಕ ಸಮಂತಾ ಸರಿಯಾಗಿಯೇ ರಿಪ್ಲೈ ಮಾಡಿದ್ದರು. ಮೂರು ಪಾರ್ಟ್‌ಗಳಲ್ಲಿ ಪ್ರತಿಕ್ರಿಯೆ ನೀಡಿದ್ದರು. " ಇದು ನಾನು ಮದುವೆ ಬಳಿಕ ಹೇಗೆ ಬದುಕಬೇಕು ಅನ್ನೋದನ್ನು ಹೇಳಿದವರಿಗೆ" ಎಂದು ಒಂದು ಮೆಸೇಜ್ ಮಾಡಿ, ಎರಡನೇ ಪಾರ್ಟ್‌ನಲ್ಲಿ ಮಿಡಲ್ ಫಿಂಗರ್ ತೋರಿಸಿದ್ದರು. ಮೂರನೇ ಪಾರ್ಟ್‌ನಲ್ಲಿ 'ಧನ್ಯವಾದಗಳು' ಎಂದು ಬರೆದಿದ್ದರು ಎಂದು ಬಿಹೈಂಡ್ ದಿವುಡ್ಸ್ ವರದಿ ಮಾಡಿತ್ತು.


Click it and Unblock the Notifications











