'ಯಶೋಧ'ಳಾದ ಸಮಂತಾ: ಉತ್ತರಕ್ಕೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಿಂದ ಆತಂಕ!

ವಿಚ್ಛೇದನದ ಬಳಿಕ ಸಮಂತಾ ಬದಲಾಗಿದ್ದಾರೆ. ಹಿಂದಿನಂತೆ ಇಲ್ಲ ಸಮಂತಾ. ಸಖತ್ ಬೋಲ್ಡ್.. ಸಿಕ್ಕಾಪಟ್ಟೆ ಆತ್ಮವಿಶ್ವಾಸ.. ಬದುಕಿಗೊಂದು ಕ್ಲಾರಿಟಿ ಸಿಕ್ಕಿದೆ. ಇಷ್ಟೆ ಅಲ್ಲ, ಸಮಂತಾ ಈಗ ಕೇವಲ ದಕ್ಷಿಣ ಭಾರತದ ನಟಿಯಾಗಿ ಉಳಿದಿಲ್ಲ. ಭಾರತೀಯ ನಟಿಯಾಗಿ ಗುರುತಿಸಿಕೊಂಡಿದ್ದಾಗಿದೆ. ಈ ಕಾರಣಕ್ಕೆ ಸಮಂತಾ ಪ್ಯಾನ್ ಇಂಡಿಯಾ ಸಿನಿಮಾವೊಂದರಲ್ಲಿ ನಟಿಸಿದ್ದು, ಅದರ ಫಸ್ಟ್ ಲುಕ್ ರಿಲೀಸ್ ಆಗಿದೆ.

ಸಮಂತಾ ಅಭಿನಯದ ಹೊಚ್ಚ ಹೊಸ ಸಿನಿಮಾ 'ಯಶೋಧ' ಫಸ್ಟ್ ಲುಕ್ ರಿಲೀಸ್ ಆಗಿದೆ. ಚಿಕ್ಕದೊಂದು ತುಣುಕು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಸಿನಿಮಾದ ತುಣುಕನ್ನು ನೋಡಿ ಕೂಡಲೇ ಬಾಕ್ಸಾಫೀಸ್‌ನಲ್ಲಿ 'ಶೂರ್ ಶಾಟ್' ಎನ್ನುತ್ತಿದ್ದಾರೆ ಸಿನಿ ಮಂದಿ.

ಅಂದ್ಹಾಗೆ 'ಯಶೋಧ' ಸಮಂತಾ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ದೊಡ್ಡ ತಾರಾಬಳಗವೇ ಇರುವ 'ಯಶೋಧ' ಸಿನಿಮಾದ ತುಣುಕು ಉತ್ತರದಲ್ಲಿ ನಡುಕ ಹುಟ್ಟಿಸಲು ಆರಂಭಿಸಿದೆ. ಪುರುಷ ಪ್ರಧಾನ ಸಿನಿಮಾಗಳಷ್ಟೇ ಅಲ್ಲ. ಮಹಿಳ ಪ್ರಧಾನ ಸಿನಿಮಾ ಕೂಡ ದಾಖಲೆಗಳನ್ನು ಉಡೀಸ್ ಮಾಡುತ್ತೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಹಾಗಿದ್ದರೆ, 'ಯಶೋಧ' ಸಿನಿಮಾದ ಹೈಲೈಟ್ ಏನು ಎಂದು ತಿಳಿಯಲು ಮುಂದೆ ಓದಿ.

'ಯಶೋಧ' ಸೂಪರ್‌ ನ್ಯಾಚುರಲ್ ಪವರ್

'ಯಶೋಧ' ಸೂಪರ್‌ ನ್ಯಾಚುರಲ್ ಪವರ್

ಪ್ಯಾನ್ ಇಂಡಿಯಾ ಸಿನಿಮಾ 'ಯಶೋಧ' ವಿಡಿಯೋ ತುಣುಕು ಇಂದು( ಮೇ 05) ಬಿಡುಗಡೆಯಾಗಿದೆ. ಈ ತುಣುಕಿನಲ್ಲಿ ಸಮಂತಾ ನಿದ್ದೆಯಿಂದ ಎದ್ದೇಳುವ ದೃಶ್ಯವಿದೆ. ನಿದ್ದೆಯಿಂದ ಎದ್ದ ಬಳಿಕ ಸಮಂತಾ ಸುತ್ತಮುತ್ತ ಎಲ್ಲವೂ ಬದಲಾಗಿರುತ್ತೆ. ಬಳಿಕ ಎಲ್ಲಾ ದಿಕ್ಕುಗಳಲ್ಲೂ ಬಂದ್ ಆಗಿರುವ ದಾರಿ ಇಲ್ಲದ ಮನೆಯೊಳಗೆ ಬಂಧಿಯಾಗಿರುವುದನ್ನು ಪ್ರೇಕ್ಷಕರಿಗೆ ತೋರಿಸಲಾಗಿದೆ. ಈ ಚಿಕ್ಕ ತುಣುಕು 'ಯಶೋಧ' ಸಿನಿಮಾ ಸೂಪರ್‌ ನ್ಯಾಚುರಲ್ ಥ್ರಿಲ್ಲರ್ ಸ್ಟೋರಿ ಎಂಬುದನ್ನು ಸಾಬೀತು ಮಾಡಿದೆ.

'ಯಶೋಧ' ಸಿನಿಮಾ ಸಮಂತಾ ಗರ್ಭಿಣಿ

'ಯಶೋಧ' ಟೀಮ್ ರಿಲೀಸ್ ಮಾಡಿದ ಚಿಕ್ಕ ತುಣುಕು ಹಲವು ಅನುಮಾನಗಳನ್ನು ಸೃಷ್ಟಿಸಿದೆ. ಈ ಸಿನಿಮಾದಲ್ಲಿ ಸಮಂತಾ ಒಂದು ಮನೆಯೊಳಗೆ ಬಂಧಿಯಾಗಿರುವ ಮಹಿಳೆ. ಅಲ್ಲದೆ ವಿಡಿಯೋ ನೋಡಿದಾಗ, ಸಮಂತಾ ಗರ್ಭಿಣಿ ಪಾತ್ರ ಮಾಡುತ್ತಿರಬಹುದೆಂಬ ಅನುಮಾನ ಮೂಡುತ್ತಿದೆ. ಬಂಧಿಯಾಗಿರುವ ಮನೆಯೊಳಗಿಂದ ಸಮಂತಾ ಎಸ್ಕೇಪ್ ಆಗುವುದೇ ಸಿನಿಮಾ ಕಥೆ ಇರಬಹುದು ಎಂದು ಅಂದಾಜಿಸಬಹುದಾಗಿದೆ.

ಸಮಂತಾ ಪ್ಯಾನ್ ಇಂಡಿಯಾ ಸ್ಟಾರ್

ಸಮಂತಾ ಪ್ಯಾನ್ ಇಂಡಿಯಾ ಸ್ಟಾರ್

'ಯಶೋಧ' ಸಿನಿಮಾ ಶ್ರೀದೇವಿ ಪ್ರೊಡಕ್ಷನ್‌ನ 14ನೇ ಸಿನಿಮಾ. ಈ ಪ್ಯಾನ್ ಇಂಡಿಯಾ ಚಿತ್ರವನ್ನು ಹರಿ ಮತ್ತು ಹರೀಶ್‌ ಈ ನಿರ್ದೇಶಿಸಿದ್ದು, ಶಿವಲೆಂಕಾ ಕೃಷ್ಣ ಪ್ರಸಾದ್‌ ನಿರ್ಮಿಸಿದ್ದಾರೆ. "ಫ್ಯಾಮಿಲಿ ಮ್ಯಾನ್‌ 2 ವೆಬ್‌ ಸಿರೀಸ್‌ ಮೂಲಕ ಪ್ಯಾನ್‌ ಇಂಡಿಯಾ ಜನರನ್ನು ಸಮಂತಾ ತಲುಪಿದ್ದಾರೆ. ಆ ಒಂದು ಕಾರಣಕ್ಕೆ ಎಲ್ಲಿಯೂ ಕಾಂಪ್ರಮೈಸ್‌ ಆಗದೇ, ಎಲ್ಲೆಡೆ ಸಲ್ಲುವ ಸಿನಿಮಾ ಮಾಡಿದ್ದೇವೆ. ಈ ಸಿನಿಮಾದಲ್ಲಿ ಸಮಂತಾ ಡೆಡಿಕೇಷನ್‌ ತೆರೆಮೇಲೆ ಕಾಣಿಸಲಿದೆ. ಸಮಂತಾ ನಟನೆ ನೋಡುವುದೇ ಚಂದʼ ಎನ್ನುತ್ತಾರೆ. ಅಂದ್ಹಾಗೆ ಈ ಸಿನಿಮಾದಲ್ಲಿ ಸ್ಟಾರ್‌ಗಳ ದಂಡೇ ಇದೆ. ವರಲಕ್ಷ್ಮೀ ಶರತ್‌ಕುಮಾರ್‌, ಉನ್ನಿ ಮುಕುಂದನ್‌, ರಾವ್‌ ರಮೇಶ್‌, ಮುರಳಿ ಶರ್ಮಾ, ಸಂಪತ್‌ ರಾಜ್, ಶತ್ರು, ಮಧುರಿಮಾ, ಕಲ್ಪಿಕಾ ಗಣೇಶ್‌, ದಿವ್ಯಾ ಶ್ರೀಪಾದ್‌, ಪ್ರಿಯಾಂಕಾ ಶರ್ಮಾ ಸೇರಿ ಹಲವರು ನಟಿಸಿದ್ದಾರೆ.

ಆಗಸ್ಟ್ 12ಕ್ಕೆ 'ಯಶೋಧ' ರಿಲೀಸ್

ಆಗಸ್ಟ್ 12ಕ್ಕೆ 'ಯಶೋಧ' ರಿಲೀಸ್

'ಯಶೋಧ' ಸಿನಿಮಾ ಕ್ಲೈಮ್ಯಾಕ್ಸ್ ಅನ್ನು ಚಿತ್ರತಂಡ ಕೊಡೈಕೆನಾಲ್‌ನಲ್ಲಿ ಶೂಟ್ ಮಾಡಿದೆ. ಈಗಾಗಲೇ ಚಿತ್ರತಂಡ ಶೇ. 80ರಷ್ಟು ಶೂಟಿಂಗ್ ಮುಗಿಸಿದ್ದು, ಹೈದರಾಬಾದ್‌ನಲ್ಲಿ ಕೊನೆ ಹಂತದ ಶೂಟಿಂಗ್ ನಡೆಯುತ್ತಿದೆ. ಜೂನ್ 1ರ ಒಳಗೆ ಶೂಟಿಂಗ್ ಮುಗಿಸಿ, ಆಗಸ್ಟ್ 12ಕ್ಕೆ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದೆ. ಕೇವಲ ತೆಲುಗಿನಲ್ಲಿ ಮಾತ್ರವಲ್ಲದೆ, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲೂ ಯಶೋಧ ಬಿಡುಗಡೆಯಾಗಲಿದೆ.

More from Filmibeat

English summary
Samantha Starrer First Pan India Movie Yashoda First Look Released, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X