ಸಮಂತಾ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿಸದ್ದು ಮಾಡೋಕೆ ರೆಡಿ: 'ಯಶೋದಾ' ಟೀಸರ್‌ಗೆ ಮುಹೂರ್ತ!
ವಿಚ್ಛೇದನದ ಬಳಿಕ ಸಮಂತಾ ಸಿಕ್ಕಾಪಟ್ಟೆ ಆಕ್ಟಿವ್ ಆಗಿರೋದು ಗೊತ್ತೇ ಇದೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿರೋ ಸಮಂತಾ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಸಮಂತಾ ಫ್ಯಾನ್ಸ್ ಇದೇ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.
ಸಮಂತಾ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಯಶೋದಾ'. ಈ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಾಕಿದೆ. ಈಗ ಟೀಸರ್ ಬಿಡುಗಡೆ ಮಾಡಿ ಮತ್ತಷ್ಟು ಎದೆ ಬಡಿತ ಹೆಚ್ಚಿಸುವುದಕ್ಕೆ ಮುಂದಾಗಿದೆ. ಸದ್ಯ ಟೀಸರ್ ರಿಲೀಸ್ ಡೇಟ್ ಅನೌನ್ಸ್ ಮಾಡುವುದಕ್ಕೆಂದೇ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಅದೂ ಕೂಡ ಗಮನ ಸೆಳೆಯುತ್ತಿದೆ.
ಈಗಾಗಲೇ ಯಶೋದಾ ತುಣುಕುಗಳು ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. 'ಯಶೋದಾ' ಸಿನಿಮಾ ಮೂಡಿಬಂದಿರೋ ಬಗ್ಗೆ ನಿರ್ಮಾಣ ಸಂಸ್ಥೆ ಖುಷಿಯಾಗಿದ್ದು,ಈ ಸಿನಿಮಾವನ್ನು ಐದು ಭಾಷೆಗಳಲ್ಲಿ ಗ್ರ್ಯಾಂಡ್ ಆಗಿ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ.

ಸಮಂತಾ ಸಿಕ್ಕಾಪಟ್ಟೆ ಬ್ಯುಸಿ
ಟಾಲಿವುಡ್ ನಟಿ ಸಮಂತಾ ದಕ್ಷಿಣ ಭಾರತದಲ್ಲಿ ಈಗಾಗಲೇ ತನ್ನದೇ ಹೆಸರನ್ನು ಅಚ್ಚೋತ್ತಿದ್ದಾಗಿದೆ. ತೆಲುಗು, ತಮಿಳು ಭಾಷೆಗಳಲ್ಲೇ ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ಸಮಂತಾ ವಿಚ್ಚೇದನ ಬಳಿಕ ಫುಲ್ ಆಕ್ಟಿವ್ ಆಗಿದ್ದಾರೆ. ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ವೆಬ್ ಸೀರಿಸ್ 'ಫ್ಯಾಮಿಲಿ ಮ್ಯಾನ್'ನಲ್ಲಿ ನಟಿಸಿದ ಮೇಲಂತೂ ಸಮಂತಾ ಉತ್ತರ ಭಾರತದಲ್ಲೂ ಫೇಮಸ್ ಆಗಿದ್ದಾರೆ.

ಸಮಂತಾ ಬಾಲಿವುಡ್ ಸಿನಿಮಾ
'ಫ್ಯಾಮಿಲಿ ಮ್ಯಾನ್ 2' ವೆಬ್ ಸೀರಿಸ್ ಬಳಿಕ ಸಮಂತಾಗೆ ಬಾಲಿವುಡ್‌ನಿಂದ ಆಫರ್ ಬಂದಿದೆ. ಅದರಲ್ಲೂ 'ಕಾಫಿ ವಿತ್ ಕರಣ್ ಸೀಸನ್ 7'ರಲ್ಲಿ ಭಾಗವಹಿಸಿದ ಬಳಿಕ ಸಮಂತಾ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರ ಆಗಿದ್ದಾರೆ. ಇನ್ನು 'ಪುಷ್ಪ'ದ ಐಟಂ ಸಾಂಗ್ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ಇನ್ನು ಬಾಲಿವುಡ್ ಮೂಲಗಳ ಪ್ರಕಾರ, ಅಕ್ಷಯ್ ಕುಮಾರ್ ಸಿನಿಮಾಗೆ ಸಮಂತಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

'ಯಶೋದಾ' ಪ್ಯಾನ್ ಇಂಡಿಯಾ ಸಿನಿಮಾ
ಸಮಂತಾ ತೆಲುಗಿನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಯಶೋದಾ' ಹಾಗೂ 'ಖುಷಿ' ಸಿನಿಮಾಗಳು ಕುತೂಹಲ ಕೆರಳಿಸಿದೆ. 'ಯಶೋದಾ' ಈಗಾಗಲೇ ಶೂಟಿಂಗ್ ಮುಗಿದಿದ್ದು ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ವಿಚ್ಛೇದನದ ಬಳಿಕ ನಯನತಾರಾ ಜೊತೆ ನಟಿಸಿದ 'ಕಾತುವಾಕುಲಾ ರೆಂಡು ಕಾದಲ್' ಸಿನಿಮಾ ರಿಲೀಸ್ ಆಗಿದ್ದು,ಖದೀಜಾ ರೋಲ್ ಪ್ರೇಕ್ಷಕರ ಗಮನ ಸೆಳೆದಿತ್ತು.

'ಯಶೋದಾ' ಟೀಸರ್ ಯಾವಾಗ?
ಸಮಂತಾ ಅಭಿನಯದ 'ಯಶೋದಾ' ಬಿಡುಗಡೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸದ್ಯ ಈ ಸಿನಿಮಾದ ಟೀಸರ್ ಸೆಪ್ಟೆಂಬರ್ 9 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಸಮಂತಾ ಜೊತೆ ಉನ್ನಿ ಮುಕುಂದನ್, ವರಲಕ್ಷ್ಮಿ ಸೇರಿದಂತೆ ದಿಗ್ಗಜರು ನಟಿಸಿದ್ದಾರೆ.

ಸಮಂತಾ ಸೈಲೆಂಟ್ ಆಗಿದ್ದೇಕೆ?
ಮದುವೆ, ವಿಚ್ಛೇದನ ಅಂತ ತನ್ನ ಜೀವನದಲ್ಲಿ ಏನೇ ಎದುರಾದರೂ, ಸಮಂತಾ ಯಾವುದಕ್ಕೂ ಜಗ್ಗಲಿಲ್ಲ. ಸೂಪರ್‌ಸ್ಟಾರ್‌ಗಳ ಜೊತೆ ನಟಿಸಿರೋ ಸಮಂತಾ ನಟನೆಯನ್ನು ಮುಂದುವರೆಸಿದ್ದರು. ಆದರೆ, ಕೆಲವು ದಿನಗಳಿಂದ ಸಮಂತಾ ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಕೊನೆಗೂ 41 ದಿನಗಳ ಬಳಿಕ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ.


Click it and Unblock the Notifications










