ಸಮಂತಾ ಅಭಿನಯದ 'ಯಶೋದಾ' ಶೂಟಿಂಗ್ ಫಿನಿಶ್: ಕನ್ನಡದಲ್ಲಿ ರಿಲೀಸ್ ಯಾವಾಗ?

ವಿಚ್ಛೇದನದ ಬಳಿಕ ಸಮಂತಾ ಅಭಿನಯದ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಯಾಗುತ್ತಿದೆ. ತೆಲುಗು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾ ನಟನೆಯ ಫ್ಯಾನ್ ಇಂಡಿಯಾ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ.

ಇತ್ತೀಚೆಗೆಷ್ಟೇ 'ಯಶೋದಾ' ಚಿತ್ರತಂಡ ಚಿಕ್ಕದೊಂದು ತುಣುಕನ್ನು ರಿಲೀಸ್ ಮಾಡಿತ್ತು. ಅಲ್ಲಿಂದ 'ಯಶೋದಾ' ಸಿನಿಮಾ ಬಗ್ಗೆ ಇನ್ನಿಲ್ಲಿದ ಕುತೂಹಲ ಸೃಷ್ಟಿಯಾಗಿತ್ತು. ಈಗ ಸದ್ದಿಲ್ಲದೆ ಸಿನಿಮಾದ ಶೂಟಿಂಗ್ ಮುಗಿದಿದೆ.

ಸದ್ಯ 'ಯಶೋದಾ' ಸಿನಿಮಾದ ಟಾಕಿ ಪೋಷನ್ ಮುಗಿದಿದ್ದು, ಹಾಡುಗಳ ಚಿತ್ರೀಕರಣ ಮಾತ್ರ ಉಳಿದುಕೊಂಡಿದೆ. ಚಿಕ್ಕ ತುಣುಕಿನಿಂದಲೇ ಸಿನಿಮಾ ಬಗ್ಗೆ ಕೌತುಕ ಹೆಚ್ಚಿಸಿದ್ದು, 'ಯಶೋದಾ' ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಐದು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ.

'ಯಶೋದಾ' ಶೂಟಿಂಗ್ 100 ದಿನಗಳಲ್ಲಿ ಫಿನಿಶ್

'ಯಶೋದಾ' ಶೂಟಿಂಗ್ 100 ದಿನಗಳಲ್ಲಿ ಫಿನಿಶ್

ಸಮಂತಾ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾವನ್ನು ಶಿವಲೆಂಕಾ ಕೃಷ್ಣ ಪ್ರಸಾದ್ ಎಂಬುವವರು ನಿರ್ಮಾಣ ಮಾಡಿದ್ದಾರೆ. ಅಂದ್ಹಾಗೆ ಈ ಸಿನಿಮಾವನ್ನು ಅಂದುಕೊಂಡಂತೆ 100 ದಿನಗಳಲ್ಲಿ ಶೂಟಿಂಗ್ ಮುಗಿಸಲಾಗಿದೆ. ಕೇವಲ ಒಂದು ಹಾಡಿನ ಚಿತ್ರೀಕರಣವನ್ನು ಮಾತ್ರ ಉಳಿಸಿಕೊಂಡಿದ್ದು, ಅದ್ಧೂರಿಯಾಗಿ ಮೂಡಿ ಬಂದಿದೆ ಎನ್ನುತ್ತಿದ್ದಾರೆ ನಿರ್ಮಾಪಕರು. ಈಗ ಸದ್ಯ ಪೋಸ್ಟ್ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಸಿಜೆ ವರ್ಕ್‌ ಹಾಗೂ ಇನ್ನಿತರ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

ಜುಲೈ 15 ರಿಂದ ಯಶೋದಾ ಡಬ್ಬಿಂಗ್

ಜುಲೈ 15 ರಿಂದ ಯಶೋದಾ ಡಬ್ಬಿಂಗ್

'ಯಶೋದಾ' ಸಿನಿಮಾದ ಶೂಟಿಂಗ್ ಮುಗಿದ ಬಳಿಕವೇ ಡಬ್ಬಿಂಗ್ ಕೆಲಸ ಕೂಡ ಆರಂಭ ಆಗಿದೆ. ಇದೇ ತಿಂಗಳ 15ರಿಂದ ತೆಲುಗು ಭಾಷೆಯಲ್ಲಿ ಡಬ್ಬಿಂಗ್ ಆರಂಭ ಆಗಲಿದ್ದು, ಜೊತೆ ಜೊತೆಗೆ ಬೇರೆ ಬೇರೆ ಭಾಷೆಯಲ್ಲೂ ಡಬ್ಬಿಂಗ್ ಆರಂಭ ಆಗಲಿದೆ. ಇದು ಪಕ್ಕಾ ಸಸ್ಪೆನ್ಸ್ - ಥ್ರಿಲ್ಲರ್ ಸಿನಿಮಾ ಆಗಿದ್ದು, ವಿಶ್ವದಾದ್ಯಂತ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ. ಈ ಸಿನಿಮಾದಲ್ಲಿ ಸಸ್ಪೆನ್ಸ್ ಜೊತೆ ಅಷ್ಟೇ ಪ್ರಮಾಣದ ಸಾಹಸ ದೃಶ್ಯಗಳೂ ಕೂಡ ಇರಲಿದೆ.

ಕನ್ನಡದಲ್ಲೂ ಸಮಂತಾ ಸಿನಿಮಾ

ಕನ್ನಡದಲ್ಲೂ ಸಮಂತಾ ಸಿನಿಮಾ

'ಯಶೋದಾ' ಸಿನಿಮಾ ಕೇವಲ ತೆಲುಗಿನಲ್ಲಿ ಮಾತ್ರವಷ್ಟೇ ಅಲ್ಲದೆ, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಇದೇ ಆಗಸ್ಟ್‌ 12ಕ್ಕೆ ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಸಮಂತಾ ಜೊತೆಗೆ ಸ್ಟಾರ್‌ ನಟರ ದಂಡೇ ಇದೆ. ವರಲಕ್ಷ್ಮೀ ಶರತ್‌ಕುಮಾರ್‌, ಉನ್ನಿ ಮುಕುಂದನ್‌, ರಾವ್‌ ರಮೇಶ್‌, ಮುರಳಿ ಶರ್ಮಾ, ಸಂಪತ್‌ ರಾಜ್, ಶತ್ರು, ಮಧುರಿಮಾ, ಕಲ್ಪಿಕಾ ಗಣೇಶ್‌, ದಿವ್ಯಾ ಶ್ರೀಪಾದ್‌, ಪ್ರಿಯಾಂಕಾ ಶರ್ಮಾ ಮುಂತಾದವರು ಕಾಣಿಸಿಕೊಂಡಿದ್ದಾರೆ.

ಸಮಂತಾ ಫುಲ್ ಬ್ಯುಸಿ

ಸಮಂತಾ ಫುಲ್ ಬ್ಯುಸಿ

ಸಮಂತಾ ಬಾಲಿವುಡ್‌ಗೂ ಎಂಟ್ರಿ ಕೊಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಸಮಂತಾ ಕೈಯಲ್ಲಿ ಹಲವು ಬಾಲಿವುಡ್‌ ಸಿನಿಮಾಗಳಿವೆ ಎನ್ನಲಾಗಿದೆ. ಇನ್ನೊಂದು ಕಡೆ ಈ ಪ್ಯಾನ್ ಇಂಡಿಯಾ ಸಿನಿಮಾ ಬಾಲಿವುಡ್‌ ಎಂಟ್ರಿಗೆ ಸಹಕಾರಿಯಾಗಲಿದೆ. ಇಷ್ಟೇ ಅಲ್ಲದೆ ಹಾಲಿವುಡ್‌ ಸಿನಿಮಾದಲ್ಲಿಯೂ ಸಮಂತಾ ನಟಿಸುತ್ತಿದ್ದು, 'ಯಶೋದಾ' ಯಶಸ್ಸು ಕಂಡರೆ, ಮತ್ತಷ್ಟು ಬೂಸ್ಟ್ ಸಿಗಲಿದೆ.

More from Filmibeat

English summary
Samantha Starrer Yashoda Movie Shooting Completed Dubbing Will Start Soon, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X