ಕೂಸು ಹುಟ್ಟುವ ಮುಂಚೆ ; ಅಲ್ಲು ಅರ್ಜುನ್ ಅಕ್ಕ-ಪಕ್ಕ ಸಮಂತಾ ಹಾಗೂ ತ್ರಿಶಾ ..?

ಇದು ಬಣ್ಣದ ಲೋಕ. ಇಲ್ಲಿ ''ಕೂಸು ಹುಟ್ಟುವ ಮುನ್ನವೇ ಕುಲಾಯಿ'' ಹೊಲೆಯಲು ಸಾಕಷ್ಟು ಜನ ಕಾಯುತ್ತಿರುತ್ತಾರೆ.‌ ಸಿನಿಮಾ ಭಾಷೆಯಲ್ಲಿ ಇವರನ್ನ ''ಗಾಸಿಪ್‌'' ಪ್ರಿಯರು ಅಂತಾರೆ. ಸುಖಾ ಸುಮ್ಮನೆ ಸುದ್ದಿ ಹಬ್ಬಿಸುವುದೇ ಇವರ ಕೆಲಸ.

ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ''ಅಲ್ಲು ಅರ್ಜುನ್'' ''ಹೊಚ್ಚ ಹೊಸ ಚಿತ್ರ''ಕ್ಕೆ ''ಸಮಂತಾ'' ನಾಯಕಿ ಅನ್ನುವ ಸುದ್ದಿಯನ್ನ ತೇಲಿ ಬಿಡಲಾಗಿದೆ. ಇದು ಸಾಲದು ಎಂಬಂತೆ ''ತ್ರಿಶಾ'' ಕೂಡಾ ಅಲ್ಲು ಅರ್ಜುನ್ ಜೊತೆ ಈ ಚಿತ್ರದಲ್ಲಿ ''ರೊಮ್ಯಾನ್ಸ್'' ಮಾಡಲಿದ್ದಾರೆ ಎಂದು ಈ ಗಾಸಿಪ್ ಪ್ರಿಯರು ಹೈದ್ರಾಬಾದ್‌ನ ''ಜುಬಿಲಿ ಹಿಲ್ಸ್‌'' ನಲ್ಲಿ ನಿಂತು ಮಾತನಾಡಿದ್ದಾರೆ. ಇನ್ನೇನು..! ಇವರಾಡಿದ ಮಾತು ಕಿವಿಯಿಂದ ಕಿವಿಗೆ ತಲುಪಿ ಈಗ ವಿಷಯ ಊರ್ ತುಂಬಾ ಪಸರ್ ಆಗಿದೆ.

Samantha amp amp Trisha To Share Screen With Allu Arjun

ನಿಮಗೆ ಗೊತ್ತಿರಲಿ.. ಅಲ್ಲು ಅರ್ಜುನ್ ಸದ್ಯಕ್ಕೆ ''ಪುಷ್ಪ 02'' ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಏಪ್ರಿಲ್ 08 ಅಲ್ಲು ಅರ್ಜುನ್ ''ಹುಟ್ಟುಹಬ್ಬ''. ಅವತ್ತು ''ಪುಷ್ಪ 02'' ಚಿತ್ರದ ''ಟೀಸರ್'' ಬಿಡುಗಡೆಯಾಗುತ್ತೆ ಎಂಬ ನಿರೀಕ್ಷೆಯನ್ನಿಟ್ಟುಕೊಂಡು ಅಲ್ಲು ಅರ್ಜುನ್ ಭಕ್ತಗಣ ಕುಳಿತಿದೆ. ಈ ಸಂಭ್ರಮದ ಹೊತ್ತಲ್ಲಿ ಅಲ್ಲು ಅರ್ಜುನ್ ಅವರ ಮುಂದಿನ ಚಿತ್ರದ ಕುರಿತು ಚಿಂತೆ ಅನೇಕರಿಗೆ ಕಾಡುತ್ತಿದೆ.

ಇನ್ನೂ ಅಚ್ಚರಿ ಆದರೂ ಸತ್ಯ ಏನೆಂದರೆ, ''ಪುಷ್ಪ 02'' ನಂತರ ಅಲ್ಲು ಅರ್ಜುನ್ ನಡೆ ಇನ್ನೂ ನಿಗೂಢವಾಗಿದೆ. ನಿಜಾ.. ಅಲ್ಲು ಅರ್ಜುನ್ ''ಆಟ್ಲೀ'' ಜೊತೆ ಸಿನಿಮಾ ಮಾಡ್ತಾರೆ ಅನ್ನುವ ಸುದ್ದಿ ಇದೆ. ''ಸಮಂತಾ'' ಹಾಗೂ ''ತ್ರಿಶಾ'' ವಿಚಾರ ಗುಲ್ಲಾಗಿದ್ದು ಕೂಡ ''ಈ ಚಿತ್ರ''ಕ್ಕೆ ಸಂಬಂಧಿಸಿದ್ದೇ.

ಆದರೆ ನಿಮಗೆ ಗೊತ್ತಿರಲಿ ''ಅರ್ಜುನ್ ರೆಡ್ಡಿ''.. ''ಕಬೀರ್ ಸಿಂಗ್'' ಹಾಗೂ ''ಆನಿಮಲ್'' ಚಿತ್ರದ ನಿರ್ದೇಶಕ ''ಸಂದೀಪ್ ರೆಡ್ಡಿ ವಂಗಾ''ಗೂ ಅಲ್ಲು ಅರ್ಜುನ್ ''ಕಾಲ್ ಶೀಟ್'' ಕೊಟ್ಟು ಕುಳಿತಿದ್ದಾರೆ. ಈ ಕಾರಣಕ್ಕೆ ''ಆಟ್ಲಿ'' ಹಾಗೂ ''ಸಂದೀಪ್ ರೆಡ್ಡಿ ವಂಗಾ'' ಇಬ್ಬರಲ್ಲಿ ಅಲ್ಲು ಅರ್ಜುನ್ ಅವರಿಗೆ ಮೊದಲು ಆಕ್ಷನ್ ಕಟ್ ಹೇಳುವುದು ಯಾರು..? ಅನ್ನುವ ಗೊಂದಲ ಅನೇಕರನ್ನ ಇನ್ನೂ ಕಾಡುತ್ತಿದೆ.

ಇನ್ನೂ.. ''ಸಂದೀಪ್ ರೆಡ್ಡಿ ವಂಗಾ'' ಸದ್ಯಕ್ಕೆ ಡಾರ್ಲಿಂಗ್ ''ಪ್ರಭಾಸ್'' ಜೊತೆ ''ಸ್ಪಿರಿಟ್'' ಕುಡಿಯಲು ಮುಂದಾಗಿರುವ ಹಿನ್ನೆಲೆ ಟಾಲಿವುಡ್‌ನ ''ಐಕಾನ್ ಸ್ಟಾರ್‌'' ನ ಮುಂದಿನ ಸಿನಿಮಾವನ್ನ ''ಆಟ್ಲಿ'' ಅವರೇ ''ನಿರ್ದೇಶನ'' ಮಾಡುತ್ತಾರೆ ಅನ್ನುವ ''ನಂಬಿಕೆ'' ಅಲ್ಲು ಅರ್ಜುನ್ ಅಭಿಮಾನಿಗಳಲ್ಲಿಯೂ ಇದೆ. ಈ ''ಅಭಿಮಾನ''ವೇ ''ಸಮಂತಾ'' ಹಾಗೂ ''ತ್ರಿಶಾ'' ವಿಚಾರದಲ್ಲಿ ಹರಿದಾಡುತ್ತಿರುವ ಈ ಸುದ್ದಿಯನ್ನ ನಂಬುವಂತೆಯೂ ಮಾಡಿದೆ.

ಆದರೆ ಇದು ''ಬಣ್ಣದ ಲೋಕ''. ''ಕೊನೆ ಕ್ಷಣ''ದಲ್ಲಿ ಇಲ್ಲಿ ''ಸ್ಕ್ರಿಪ್ಟ್'' ಬದಲಾದರು ಬದಲಾಗಬಹುದು. ಅನಿರೀಕ್ಷಿತ ''ತಿರುವು'' ಎದುರಾದರೂ ಎದುರಾಗಬಹುದು. ''ಆಟ್ಲೀ'' ಹಾಗೂ ''ಸಂದೀಪ್'' ಹೊರತು ಪಡಿಸಿ ಅಲ್ಲು ಅರ್ಜುನ್ ''ಮುಂದಿನ ಚಿತ್ರದ ನಿರ್ದೇಶಕ'' ನಾನು ಎಂದು ಬೇರೊಬ್ಬ ''ವ್ಯಕ್ತಿ'' ಪ್ರತ್ಯಕ್ಷವಾದರು ಆಗಬಹುದು. ಹೀಗಾಗಿಯೇ ಇನ್ನೊಂದು ಮೂರು ಮುಕ್ಕಾಲು ದಿನ ''ತಾಳ್ಮೆ''ಯಿಂದ ಕಾಯಿರಿ, ಎಲ್ಲ ವಿಚಾರ ಸ್ಪಷ್ಟವಾಗಿ ಗೊತ್ತಾಗುತ್ತೆ, ''ಡ್ಯಾನ್ಸಿಂಗ್ ಸ್ಟಾರ್'' ಅಲ್ಲು ಅರ್ಜುನ್ ಅವರಿಗೆ ''ಕುಣಿಯೋಣು ಬಾರಾ'' ಎಂದು ''ಸವಾಲು'' ಹಾಕಲಿರುವ ಸುಂದರಿಯರು ಯಾರು ಅನ್ನುವುದು ತಿಳಿಯುತ್ತೆ ಎಂದು ಅಲ್ಲು ಅರ್ಜುನ್ ''ಅಭಿಮಾನಿ ಸಂಘ''ಗಳು ಅಭಿಮಾನಿಗಳಲ್ಲಿ ''ಮನವಿ''ಯನ್ನೂ ಈಗ ಸದ್ಯಕ್ಕೆ ಮಾಡಿಕೊಳ್ತಿವೆ.

ಯಾಕೆಂದರೆ ನಾವು ನಿಮಗೆ ಆಗ್ಲೇ ಹೇಳಿದಂತೆ ಏಪ್ರಿಲ್ 08ರಂದು ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಒಂದಾದ ಮೇಲೊಂದು ''ಸರ್ ಫ್ರೈಸ್‌''ಗಳು ಸಿಗುವ ನಿರೀಕ್ಷೆ ಇದೆ. ಪುಷ್ಪಾ 02 ನಂತರ ''ಮುಂದೇನು'' ಅನ್ನುವ ''ಪ್ರಶ್ನೆ''ಗೆ ಸ್ಪಷ್ಟ ''ಉತ್ತರ'' ಸಿಗುವ ಭರವಸೆಯೂ ಇದೆ.

ಇನ್ನೂ ಭರವಸೆ ಸುಳ್ಳಾಗಿಸಲು ಅಲ್ಲು ಅರ್ಜುನ್ ನಮ್ಮ ''ಕನ್ನಡ''ದ ರಾಕಿಂಗ್ ಸ್ಟಾರ್ ''ಯಶ್'' ಅಲ್ಲ. ''ಕಾಡಿಸಿ-ಸತಾಯಿಸಿ'' ತಮ್ಮ ಮುಂದಿನ ಚಿತ್ರದ ಮಾಹಿತಿಯನ್ನ ಹಂಚಿಕೊಳ್ಳುವಷ್ಟು ''ಯಶ್'' ಅವರಂತೆ ''ಅಲ್ಲು ಅರ್ಜುನ್'' ಇನ್ನೂ ''ನ್ಯಾಷನಲ್ ಸ್ಟಾರ್'' ಪಟ್ಟಕ್ಕೇರಿಲ್ಲ. ಹೀಗಾಗಿ ಏಪ್ರಿಲ್ 08ಕ್ಕೆ ಅಲ್ಲು ಅರ್ಜುನ್ ಅವರ ಹೊಸ ಸಿನಿಮಾದ ಕುರಿತು ಹೆಚ್ಚಿನ ಮಾಹಿತಿ ಸಿಗುತ್ತೆ ಎಂದು ನಾವು-ನೀವು ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಲ್ಲ. ''ನೀವೇನಂತೀರಿ''..?

More from Filmibeat

English summary
According To The Latest Reports, Samantha And Trisha To Share Screen Space With Allu Arjun In His Next Film. The Film Will Be Directed By Atlee
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X