ಹೇಮಾ ಕಮಿಟಿ ವರದಿ ಮೆಚ್ಚಿದ ಸಮಂತಾ; ಟಾಲಿವುಡ್‌ 'ವಾಯ್ಸ್ ಆಫ್ ವುಮನ್' ವರದಿಗೆ ಒತ್ತಡ

ಹೇಮಾ ವರದಿ ಬಳಿಕ ಮಲಯಾಳಂ ಚಿತ್ರರಂಗ ಶೇಕ್ ಆಗಿದೆ. ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸುರಕ್ಷತೆ ಇಲ್ಲ ಅನ್ನೋದನ್ನು ಈ ವರದಿಯಲ್ಲಿ ಪ್ರಸ್ತಾಪ ಮಾಡಲಾಗಿದೆ. 17 ಪ್ರಕಾರಗಳಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಶೋಷಣೆಯಾಗುತ್ತಿದೆ ಎಂದು ಈ ವರದಿಯಲ್ಲಿ ಹೇಳಲಾಗಿತ್ತು. ಈ ವರದಿಯನ್ನು ಸಮಂತಾ ಮೆಚ್ಚಿಕೊಂಡಿದ್ದು, ತೆಲುಗು ಚಿತ್ರರಂಗದಲ್ಲೂ ಇಂತಹದ್ದೇ ಒಂದು ಕಮಿಟಿಯನ್ನು ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೇರಳ ಹೇಮಾ ಕಮಿಟಿ ವರದಿಯನ್ನು ಸಮಂತಾ ಮೆಚ್ಚಿಕೊಂಡಿದ್ದಾರೆ. ಈ ವರದಿಯಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಆಗುತ್ತಿರುವ ಲೈಂಗಿಕ, ದೈಹಿಕ ಹಾಗೂ ಮೌಖಿಕ ನಿಂದನೆಯನ್ನು ಕಲಾವಿದರು ಹಂಚಿಕೊಂಡಿದ್ದಾರೆ. ಈ ಸಂಬಂಧ ಸಮಂತಾ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹೇಮಾ ಕಮಿಟಿ ವರದಿಯನ್ನು ಮೆಚ್ಚಿಕೊಂಡು ಪೋಸ್ಟ್ ಮಾಡಿದ್ದರು.

Samantha urged the Telangana government to do similar report like hema commitee in tollywood

ಇದರಲ್ಲಿ ಹೇಮಾ ಕಮಿಟಿ ವರದಿಯಂತ ಕೆಲಸ ಆಗಿದ್ದಕ್ಕೆ ವುಮನ್ಸ್ ಕಲೆಕ್ಟಿವ್ ಕೇರಳ (WCC)ವನ್ನು ಮೆಚ್ಚಿಕೊಂಡಿದ್ದಾರೆ. ಇದೇ ವೇಳೆ ಸಮಂತಾ ತೆಲಂಗಾಣ ಸರ್ಕಾರವನ್ನು ಇಂತಹದ್ದೇ ಒಂದು ವರದಿ ಬೇಕೆಂದು ಒತ್ತಾಯ ಮಾಡಿದ್ದಾರೆ. ಈ ಮೂಲಕ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಉತ್ತಮ ವಾತಾವರಣವನ್ನು ಸೃಷ್ಟಿ ಮಾಡಲು ಸಹಾಯ ಆಗುತ್ತೆ ಎಂದು ಹೇಳಿಕೊಂಡಿದ್ದಾರೆ.

"ನಾವು ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರು ಹೇಮಾ ಕಮಿಟಿ ವರದಿಯನ್ನು ಸ್ವಾಗತ ಮಾಡುತ್ತೇವೆ. ಹಾಗೆಯೇ ವುಮನ್ಸ್ ಕಲೆಕ್ಟಿವ್ ಕೇರಳ ಹಾಕಿದ ಪ್ರಯತ್ನಗಳ ಬಗ್ಗೆ ಮೆಚ್ಚುಗೆಯನ್ನು ಸೂಚಿಸುತ್ತೇವೆ. ಅದು ಇಲ್ಲಿವರೆಗೂ ಬರುವುದಕ್ಕೆ ದಾರಿ ಮಾಡಿ ಕೊಟ್ಟಿದೆ." ಎಂದು ನಟಿ ಸಮಂತಾ ರುಥ್ ಪ್ರಭು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

2017ರಲ್ಲಿ ಕೇರಳದಲ್ಲಿ ವುಮೆನ್ ಇನ್ ಸಿನಿಮಾ ಕಲೆಕ್ಟಿವ್ (WCC)ಯನ್ನು ಸ್ಥಾಪನೆ ಮಾಡಲಾಗಿತ್ತು. ಈ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಆಗುವ ಲೈಂಗಿಕ ಕಿರುಕುಳವನ್ನು ತಡೆಯುವುದು ಇದರ ಮುಖ್ಯ ಗುರಿ. WCC ಕೇರಳದ ಮುಖ್ಯಮಂತ್ರಿ ಮೇಲೆ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ವರದಿ ಮಾಡಲು ಕಮಿಟಿ ನಿರ್ಮಿಸುವಂತೆ ಒತ್ತಡ ತಂದಿತ್ತು. ಆ ಬಳಿಕ ಕೇರಳ ಸರ್ಕಾರ ಹೇಮಾ ಕಮಿಟಿಯನ್ನು ರೂಪುಗೊಳಿಸಿತ್ತು.

ಇದೇ ವುಮೆನ್ ಇನ್ ಸಿನಿಮಾ ಕಲೆಕ್ಟಿವ್ (WCC)ಯಿಂದ ಪ್ರೇರಣೆ ಹೊಂದಿದ ಟಾಲಿವುಡ್ ಕೂಡ 2019ರಲ್ಲಿ ವಾಯ್ಸ್ ಆಫ್ ವುಮೆನ್ (VOW)ಅನ್ನು ಸ್ಥಾಪನೆ ಮಾಡಲಾಗಿತ್ತು. ಇದು ತೆಲುಗು ಚಿತ್ರರಂಗದಲ್ಲಿರುವ ಲೈಂಗಿಕ ಕಿರುಕುಳದ ಬಗ್ಗೆ ವರದಿಯನ್ನು ಸಿದ್ಧಪಡಿಸಿತ್ತು. ಅದನ್ನು ಬಹಿರಂಗಗೊಳಿಸುವಂತೆ ಸಮಂತಾ ಜೊತೆ ಹಲವರು ಒತ್ತಡ ಹಾಕುತ್ತಿದ್ದಾರೆ.

"ನಾವು ತೆಲಂಗಾಣ ಸರ್ಕಾರವನ್ನು ಈಗಾಗಲೇ ಸಲ್ಲಿಸಿರುವ ಸಬ್ ಕಮಿಟಿ ವರದಿಯನ್ನು ಬಹಿರಂಗಗೊಳಿಸುವಂತೆ ಒತ್ತಾಯಿಸುತ್ತೇವೆ. ಈ ಮೂಲಕ ಚಿತ್ರರಂಗದಲ್ಲಿ ಮಹಿಳೆಯರು ಸೇಫ್ ಆಗಿ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಲು ನಿಯಮಾವಳಿಗಳನ್ನು ರೂಪಿಸಲು ಸರ್ಕಾರಕ್ಕೆ ಸಹಾಯವಾಗುತ್ತೆದೆ" ಎಂದು ಸಮಂತಾ ಹೇಳಿದ್ದಾರೆ.

More from Filmibeat

English summary
Samantha urged the Telangana government to do similar report like hema commitee in tollywood
Read more about: samantha tollywood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X