ಸಮಂತಾ-ವಿಜಯ್ ದೇವರಕೊಂಡ ಬೆಡ್ ರೂಂ ಸೀನ್ ವೈರಲ್: ಅಕ್ಕಿನೇನಿ ಫ್ಯಾನ್ಸ್‌ಗೆ ಇರಿಸು ಮುರಿಸು!
ವಿಜಯ್ ದೇವರಕೊಂಡ ಹಾಗೂ ಸಮಂತಾ ಜೋಡಿಯ ಖುಷಿ ಸಿನಿಮಾ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಇಬ್ಬರ ಕೆಮಿಸ್ಟ್ರಿ ಬಗ್ಗೆ ಅನುಮಾನ ಇದ್ದರೂ ಈಗ ಸುಮ್ಮನಾಗಿದ್ದಾರೆ. ಈಗಾಗಲೇ ಎರಡು ಹಾಡುಗಳು ಪ್ರೇಮಿಗಳ ಹೃದಯ ಗೆದ್ದಿದ್ದರೆ, ಅಕ್ಕಿನೇನಿ ಅಭಿಮಾನಿಗಳು ಬೇಸರ ಪಟ್ಟುಕೊಂಡಿದ್ದಾರೆ.
ವಿಜಯ್ ದೇವರಕೊಂಡ ಹಾಗೂ ಸಮಂತಾ ಇಬ್ಬರೂ ಶೂಟಿಂಗ್ ವೇಳೆ ತುಂಬಾನೇ ಹತ್ತಿರವಾಗಿದ್ದರು ಎಂದು ಅನ್ನೋ ಮಾತು ಕೇಳಿ ಬಂದಿತ್ತು. ಅದಕ್ಕೆ ಸರಿಯಾಗಿ ವಿಜಯ್ ದೇವರಕೊಂಡ ಇನ್‌ಸ್ಟಾಗ್ರಾಂನಲ್ಲೊಂದು ವಿಡಿಯೋ ಕ್ಲಿಪ್ ಶೇರ್ ಮಾಡಿಕೊಂಡಿದ್ದರು. ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವಿಜಯ್ ದೇವರಕೊಂಡು ಖುಷಿ ಸಿನಿಮಾದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಷ್ಟೇ ಅಲ್ಲದೇ, ಇಂತಹ ಪ್ರೀತಿ ನನ್ನ ಲೈಫ್‌ನಲ್ಲಿ ಬೇಕು ಎಂದು ಬರೆದುಕೊಂಡಿದ್ದಾರೆ. ಇದು ನಾಗಚೈತನ್ಯ ಹಾಗೂ ಅಕ್ಕಿನೇನಿ ಅಭಿಮಾನಿಗಳನ್ನು ಮುಜುಗರಕ್ಕೀಡು ಮಾಡುವಂತೆ ಮಾಡಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ? ವಿಡಿಯೋ ನೋಡಿ ನೆಟ್ಟಿಗರ ಏನಂತಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ವಿಜಯ್ ದೇವರಕೊಂಡ-ಸಮಂತಾ ವಿಡಿಯೋ ವೈರಲ್
ವಿಜಯ್ ದೇವರಕೊಂಡ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ್ದರು. ಅದರಲ್ಲಿ ಸಮಂತಾ ಹಾಗೂ ವಿಜಯ್ ಇಬ್ಬರೂ ಪತಿ-ಪತ್ನಿಯಾಗಿ ನಟಿಸಿದ್ದಾರೆ. ಈ ಸಿನಿಮಾದ ಒಂದು ಸನ್ನಿವೇಶದಲ್ಲಿ ವಿಜಯ್ ದೇವರಕೊಂಡ ಹಾಗೂ ಸಮಂತಾ ಇಬ್ಬರೂ ಬೆಡ್ ರೂಮ್ ಒಂದಿದೆ. ಅದನ್ನೇ ವಿಜಯ್ ಶೇರ್ ಮಾಡಿದ್ದರು.
ಇಬ್ಬರೂ ನಿದ್ದೆ ಮಾಡುತ್ತಿರುವ ದೃಶ್ಯ ಅದು. ಗಾಢ ನಿದ್ದೆಯ ವೇಳೆ ಪತಿ-ಪತ್ನಿಯರ ಅನ್ಯೊನ್ಯತೆ ಹೇಗಿರುತ್ತೆ ಅನ್ನೋದನ್ನು ತೋರಿಸಿರುವ ದೃಶ್ಯವದು. ಅದೇ ಸನ್ನಿವೇಶದ ಚಿಕ್ಕದೊಂದು ಕ್ಲಿಪ್ ಅನ್ನು ವಿಜಯ್ ಹಂಚಿಕೊಂಡಿದ್ದರು. ಅದೇ ವಿಡಿಯೋ ಈಗ ವೈರಲ್ ಆಗಿದೆ. ಈ ವಿಡಿಯೋ ನೋಡಿ ಅಕ್ಕಿನೇನಿ ಅಭಿಮಾನಿಗಳು ಅಪ್‌ಸೆಟ್ ಆಗಿದ್ದಾರೆ.
ಬೆಡ್ ರೂಮ್ ಸೀನ್ ನೋಡಿ ಏನಂದ್ರು ಫ್ಯಾನ್ಸ್?
ವಿಜಯ್ ದೇವರಕೊಂಡ ಶೇರ್ ಮಾಡಿಕೊಂಡಿರೋ ಬೆಡ್ ರೂಮ್ ಸೀನ್‌ಗಳನ್ನು ನೋಡಿ ಅಕ್ಕಿನೇನಿ ಅಭಿಮಾನಿಗಳು ನಿದ್ದೆ ಕೆಡಿಸಿಕೊಂಡಿದ್ದಾರೆ. ಅದರಲ್ಲೂ ವಿಜಯ್ ದೇವರಕೊಂಡ "ನನ್ನ ಬಯಸುವಂತಹ ಪ್ರೀತಿ" ಎಂದು ಬರೆದುಕೊಂಡ ಒಂದು ಸಾಲು ನಾಗಚೈತನ್ಯ ಅಭಿಮಾನಿಗಳ ಕಿಚ್ಚಿಗೆ ಕಾರಣವಾಗಿದೆ. ಆದರೂ ಕೆಲವು ನೆಟ್ಟಿಗರು ಇಂಟ್ರೆಸ್ಟಿಂಗ್ ಆಗಿ ಕಮೆಂಟ್‌ಗಳನ್ನು ಮಾಡಿದ್ದಾರೆ.
"ನಾಗಚೈತನ್ಯ ಹಿಂದಿನಿಂದ ಅಳುತ್ತಿದ್ದಾರೆ" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು " ಮತ್ತೊಂದು ಐಡಿಯಿಂದ ನಾಗಚೈತನ್ಯ ಈ ವಿಡಿಯೋವನ್ನು ನೋಡುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು " ವಿಜಯ್ ಅಭಿಮಾನಿಗಳು ಸಮಂತಾರನ್ನು ಇಷ್ಟಪಟ್ಟಿದ್ದಾರೆ" ಕಮೆಂಟ್ ಮಾಡಿದ್ದಾರೆ.
ಮೆಡಿಟೇಷನ್ ಮೊರೆ ಹೋದ ಸಮಂತಾ
ಇತ್ತ ಸಮಂತಾ ಕಮೆಂಟ್‌ಗಳಿಗೆ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಈಗಾಗಲೇ 'ಖುಷಿ' ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಅಲ್ಲದೆ ಬಹು ನಿರೀಕ್ಷಿತ 'ಸಿಟಾಡೆಲ್' ಇಂಡಿಯಾ ಸೀರಿಸ್ ಅನ್ನೂ ಮುಗಿಸಿ ಕೆಲವು ಕಾಲ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಸದ್ಯ ವಿಶ್ರಾಂತಿ ಮೂಡ್‌ನಲ್ಲಿ ಇದ್ದು, ಮೆಡಿಟೇಷನ್ ಮೊರೆ ಹೋಗಿದ್ದಾರೆ.
ಸಮಂತಾ ಸದ್ಯ ಕೊಯಮತ್ತೂರಿನ ಸದ್ಗುರು ನಡೆಸುತ್ತಿರುವ ಇಶಾ ಫೌಂಡೇಷನ್‌ನಲ್ಲಿ ಮೆಡಿಟೇಷನ್‌ನಲ್ಲಿ ನಿರತರಾಗಿದ್ದಾರೆ. 'ಮಯೋಸೈಟಿಸ್' ಎಂಬ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಸಿನಿಮಾದಿಂದ ಕೊಂಚ ಬ್ರೇಕ್ ಪಡೆದುಕೊಂಡು ಧ್ಯಾನದಲ್ಲಿ ತೊಡಗಿಕೊಂಡಿದ್ದಾರೆ.


Click it and Unblock the Notifications











