ನಾಗ ಚೈತನ್ಯ- ಸಮಂತಾ ವಿಚ್ಛೇದನಕ್ಕೆ ಹೊಸ ಟ್ವಿಸ್ಟ್: ಡಿವೋರ್ಸ್ ಬಯಸಿದ್ದು ಚೈ ಅಲ್ಲ ಸಮಂತಾ

ಕಳೆದ ವರ್ಷ ಅಕ್ಟೋಬರ್‌ನಿಂದ ಸಮಂತಾ ಹಾಗೂ ನಾಗಚೈತನ್ಯ ಸುದ್ದಿಯಲ್ಲಿದ್ದಾರೆ. ಇಬ್ಬರೂ ಜಂಟಿಯಾಗಿ ವಿಚ್ಛೇದನ ಪಡೆಯುತ್ತಿರುವ ವಿಷಯವನ್ನು ತಿಳಿಸುತ್ತಿದ್ದಂತೆ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಲೇ ಇದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇಬ್ಬರೂ ಬೇರೆಯಾಗುತ್ತಿರುವ ಸುದ್ದಿಯಂತೂ ಸಮಂತಾ ಹಾಗೂ ಅಕ್ಕಿನೇನಿ ಕುಟುಂಬಕ್ಕೆ ದೊಡ್ಡ ಶಾಕ್ ಆಗಿತ್ತು. ಆದರೂ, ಈ ಜೋಡಿ ವಿಚ್ಚೇದನ ಪಡೆಯುತ್ತಿರುವ ವಿಷಯವನ್ನು ಜಗತ್ತಿಗೆ ಕೂಲ್ ಆಗಿ ಬಹಿರಂಗ ಪಡಿಸಿದ್ದರು.

ಸಮಂತಾ-ನಾಗಚೈತನ್ಯ ವಿಚ್ಛೇದನ ಬಹಿರಂಗವಾಗುತ್ತಿದ್ದಂತೆ ಒಂದಿಷ್ಟು ಊಹಾ-ಪೋಹಗಳು ಹರಿದಾಡಿದ್ದವು. ಸಮಂತಾಳದ್ದೇ ತಪ್ಪು ಎನ್ನುವ ವರ್ಗ ಒಂದು ಕಡೆ. ನಾಗಚೈತನ್ಯನದ್ದೇ ತಪ್ಪು ಎನ್ನುವ ಇನ್ನೊಂದು ವರ್ಗ ಹುಟ್ಟಿಕೊಂಡಿತ್ತು. ಚೈ ಹಾಗೂ ಸ್ಯಾಮ್ ಇಬ್ಬರೂ ವಿಚ್ಛೇದನ ನೀಡಿ 5 ತಿಂಗಳಾಗುತ್ತಾ ಬಂದಿದ್ದರೂ, ಇವರ ವಿಚ್ಛೇದನದ ಬಗ್ಗೆ ಒಂದಲ್ಲಾ ಒಂದು ಸುದ್ದಿ ಹೊರಬೀಳತ್ತಲೇ ಇದೆ. ಈಗ ನಾಗಚೈತನ್ಯ ತಂದೆ ಟಾಲಿವುಡ್ ನಟ ನಾಗಾರ್ಜುನ ಇವರಿಬ್ಬರ ವಿಚ್ಚೇದನಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.

 ವಿಚ್ಛೇದನ ಬಯಸಿದ್ದು ಸಮಂತಾ

ವಿಚ್ಛೇದನ ಬಯಸಿದ್ದು ಸಮಂತಾ

ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಟಾಲಿವುಡ್‌ಗೆ ದೊಡ್ಡ ಶಾಕ್ ಆಗಿತ್ತು. ಈ ಜೋಡಿ ಇಷ್ಟು ಬೇಗೆ ಬೇರೆಯಾಗಬಾರದಿತ್ತು ಎಂದು ಮರುಗಿದವರು ಅದೆಷ್ಟೋ ಮಂದಿ. ಆದರೆ, ಇಬ್ಬರೂ ಬೇರೆ ಬೇರೆಯಾಗುವ ನಿರ್ಧಾರ ಪ್ರಕಟಿಸಿದಾಗ, ಇವರ ನಡುವೆ ಅಂತಹದ್ದು ಏನಾಯ್ತು ಅಂತ ಅವರ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು. ನಾಗಚೈತನ್ಯ ಹಾಗೂ ಅವರ ಕುಟುಂಬ ಸಮಂತಾರನ್ನು ಕಟ್ಟಿ ಹಾಕಲು ಯತ್ನಿಸಿತ್ತು ಎಂಬ ಮಾತು ಕೇಳಿಬಂದಿತ್ತು. ಸಿನಿಮಾಗಳಲ್ಲಿ ನಟಿಸಿ ನಿರ್ಬಂಧ ಹೇರಿದ್ದರು. ಬೋಲ್ಡ್ ಸೀನ್‌ಗಳಲ್ಲಿ ನಟಿಸಿದ್ದು ಇಷ್ಟವಾಗಲಿಲ್ಲ ಅನ್ನುವ ಮಾತುಗಳು ಹರಿದಾಡಿತ್ತು. ಈಗ ನಾಗಾರ್ಜುನ ಈ ವಿಚ್ಛೇದನಕ್ಕೆ ಟ್ವಿಸ್ಟ್ ಕೊಟ್ಟಿದ್ದು, ಡಿವೋರ್ಸ್ ಬೇಕು ಅಂದಿದ್ದೇ ಸಮಂತಾ ಎಂದು ಹೇಳಿದ್ದಾರೆ.

 ಸ್ಯಾಮ್ ನಿರ್ಧಾರ ಗೌರವಿಸಿದ್ದ ನಾಗ್

ಸ್ಯಾಮ್ ನಿರ್ಧಾರ ಗೌರವಿಸಿದ್ದ ನಾಗ್

ವಿಚ್ಛೇದನ ನೀಡಲು ನಿರ್ಧರಿಸಿದ ದಿನದಿಂದಲೂ ಸಮಂತಾ ಅಭಿಮಾನಿಗಳು ನಾಗಚೈತನ್ಯ ವಿರುದ್ಧ, ಹಾಗೂ ನಾಗಚೈತನ್ಯ ಅಭಿಮಾನಿಗಳು ಸಮಂತಾ ವಿರುದ್ಧ ಕಿಡಿಕಾರುತ್ತಲೇ ಇದ್ದರು. ಈಗ ನಾಗಾರ್ಜುನ ಈ ಎಲ್ಲಾ ಗೊಂದಲಗಳಿಗೆ ಹೊಸ ತಿರುವು ನೀಡಿದ್ದಾರೆ. "ಸಮಂತಾ ತೆಗೆದುಕೊಂಡ ನಿರ್ಧಾರವನ್ನು ನಾಗ ಚೈತನ್ಯ ಒಪ್ಪಿಕೊಂಡ. ಆ ವೇಳೆ ಅವನಿಗೆ ನನ್ನ ಬಗ್ಗೆ ಆತಂಕಕ್ಕೆ ಒಳಗಾಗಿದ್ದ. ಕುಟುಂಬದ ಮರ್ಯಾದೆ ಏನಾಗುತ್ತೋ ಎನ್ನುವ ಬಗ್ಗೆ ಚಿಂತೆಯಿತ್ತು." ಎಂದು ನಾಗರ್ಜುನ ಇಂಡಿಯಾ ಗ್ಲಿಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

 ಇಬ್ಬರಿಗೂ ಅದೇನಾಯ್ತೋ ಗೊತ್ತಿಲ್ಲ

ಇಬ್ಬರಿಗೂ ಅದೇನಾಯ್ತೋ ಗೊತ್ತಿಲ್ಲ

ನಾಲ್ಕು ವರ್ಷ ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಅನ್ಯೋನ್ಯವಾಗಿಯೇ ಇದ್ದರು. ಇವರ ಸಂಸಾರ ಚೆನ್ನಾಗಿಯೇ ಇತ್ತು. ಬಿಡುವು ಸಿಕ್ಕಾಗಲೆಲ್ಲಾ ಔಟಿಂಗ್ ಹೋಗುತ್ತಿದ್ದರು. ಒಟ್ಟಿಗೆ ಜಿಮ್, ಪ್ರವಾಸ ಎಲ್ಲವರನ್ನೂ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದರು. ಇದೇ ವಿಚಾರ ನಾಗಾರ್ಜುನಾಗೂ ಕಾಡುತ್ತಿದೆ. " ಇಬ್ಬರೂ ತುಂಬಾನೇ ಕ್ಲೋಸ್ ಆಗಿದ್ದರು. ಆದರೆ, ಈ ನಿರ್ಧಾರವನ್ನು ದಿಢೀರನೇ ಯಾಕೆ ತೆಗೆದುಕೊಂಡರು ಎನ್ನುವುದು ನನಗೆ ಗೊತ್ತಿಲ್ಲ. 2021ರ ಹೊಸ ವರ್ಷವನ್ನು ಇಬ್ಬರೂ ಒಟ್ಟಿಗೆ ಸಂಭ್ರಮಿಸಿದ್ದಾರೆ. ಇದಾದ ಬಳಿಕ ಸಮಸ್ಯೆ ಎದುರಾಗಿರಬಹುದು." ಎಂದು ನಾಗಾರ್ಜುನ ತಿಳಿಸಿದ್ದಾರೆ.

 ತಂದೆ-ಮಗನಿಗೆ 'ಬಂಗಾರ್‌ರಾಜು' ಯಶಸ್ಸು

ತಂದೆ-ಮಗನಿಗೆ 'ಬಂಗಾರ್‌ರಾಜು' ಯಶಸ್ಸು

'ಬಂಗಾರ್‌ರಾಜು' ಸಿನಿಮಾ ವಿಚ್ಛೇದನದ ಬಳಿಕ ತೆರೆಕಂಡಿರುವ ನಾಗಚೈತನ್ಯ ಸಿನಿಮಾ. ಹೀಗಾಗಿ ನಾಗಚೈತನ್ಯಗೆ ಈ ಸಿನಿಮಾ ಬಗ್ಗೆ ಕೊಂಚ ಆತಂಕವಿತ್ತು. ಆದರೆ, ತಂದೆ-ಮಗ ಎಂಟ್ರಿಗೆ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ತೆರೆಕಂಡಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿದೆ. ವಿಚ್ಛೇದನ ಕಹಿ ಘಟನೆಯ ಬಳಿಕ ಅಕ್ಕಿನೇನಿ ಕುಟುಂಬದಲ್ಲೊಂದು ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ.

More from Filmibeat

English summary
Nagarjuna Akkineni revealed that Samantha wanted a divorce and Naga Chaitanya agreed to her decision. Nagarjuna also revealed that Nagachaitanya was worried about his family reputation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X