ರಶ್ಮಿಕಾ ಅಲ್ಲ ವಿಜಯ್ ದೇವರಕೊಂಡ ಜೊತೆ ಸಮಂತಾ ರೊಮ್ಯಾನ್ಸ್

ಟಾಲಿವುಡ್‌ನಲ್ಲಿ ಸಮಂತಾ ಸಿನಿಮಾ ಬಗ್ಗೆ ಎಷ್ಟು ಚರ್ಚೆ ಆಗುತ್ತದೆಯೋ, ಅದಕ್ಕಿಂತ ಹೆಚ್ಚು ರೂಮರ್‌ಗಳು ಓಡುತ್ತವೆ. ನಾಗಚೈತನ್ಯರಿಂದ ದೂರವಾದ ಬಳಿಕವಂತೂ ಸಮಂತಾ ಬಗ್ಗೆ ಹರಿದಾಡಿದ ಗಾಳಿಸುದ್ದಿಗಳಿಗೇನು ಕಮ್ಮಿಯಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಮಂತಾಳನ್ನು ಅವಮಾನ ಮಾಡುವ ಕೆಲಸ ಕೂಡ ನಡೆದಿತ್ತು. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ನಟಿ ತನ್ನ ಭವಿಷ್ಯದ ಬಗ್ಗೆ ಆಲೋಚಿಸಿದ್ದರು. ತನಗೆ ಇಷ್ಟವಾದ ಸಿನಿಮಾವನ್ನು ಆಯ್ಕೆ ಮಾಡಿಕೊಂಡರು.

ವಿಚ್ಚೇದನದ ಬಳಿಕ ಸಮಂತಾ ಮತ್ತಷ್ಟು ಬ್ಯುಸಿಯಾಗಿದ್ದಾರೆ. ಕೈ ತುಂಬಾ ಸಿನಿಮಾಗಳಿವೆ. ವೆಬ್ ಸಿರೀಸ್‌ನಲ್ಲಿ ನಟಿಸುವಂತೆ ಬೇಡಿಕೆ ಹೆಚ್ಚಾಗಿದೆ. ಸಮಂತಾ ಮಹಿಳೆಯರ ಪಾಲಿಗೆ ಹೀರೊ ಆಗಿದ್ದಾರೆ. ಈ ಎಲ್ಲಾ ಕಾರಣಕ್ಕೆ ಸಮಂತಾಗೆ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿದೆ. ಸೂಪರ್‌ಸ್ಟಾರ್‌ಗಳಿಂದ ಹಿಡಿದು ಇತ್ತೀಚೆಗೆ ಬಂದ ಹೀರೊಗಳವರೆಗೂ ಸಮಂತಾ ಬೇಡಿಕೆ ನಟಿಯಾಗಿದ್ದಾರೆ. ಈಗ ಟಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದ್ದು, ಸಮಂತಾ ಹಾಗೂ ವಿಜಯ್ ದೇವರಕೊಂಡ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಅಂತಿದೆ. ಅಸಲಿಗೆ ಮ್ಯಾಟರ್ ಏನು ಎಂದು ತಿಳಿಯಲು ಮುಂದೆ ಓದಿ?

ವಿಜಯ್-ಸಮಂತಾ ರೊಮ್ಯಾನ್ಸ್

ವಿಜಯ್-ಸಮಂತಾ ರೊಮ್ಯಾನ್ಸ್

ಸಮಂತಾ ಟಾಲಿವುಡ್‌ನ ಹ್ಯಾಪೆನಿಂಗ್ ಹೀರೊಯಿನ್. ತೆಲುಗು ಅಷ್ಟೇ ಅಲ್ಲ. ತಮಿಳು, ಹಿಂದಿ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ವಿಜಯ್ ದೇವರಕೊಂಡ ಜೊತೆ ಸಮಂತಾ ರೊಮ್ಯಾನ್ಸ್ ಮಾಡಲಿದ್ದಾರೆ. ಈ ಸಿನಿಮಾವನ್ನು ಶಿವ ನಿರ್ಮಾಣ ನಿರ್ದೇಶನ ಮಾಡುತ್ತಿದ್ದಾರೆ. ರೊಮ್ಯಾಂಟಿಕ್ ಬ್ಯಾಕ್‌ಗ್ರೌಂಡ್‌ನಲ್ಲಿ ವಿಭಿನ್ನ ಕಥೆಯನ್ನು ಹೇಳಲು ಹೊರಟಿದ್ದಾರೆ. ಈ ಕಥೆ ಕೇಳಿದ ಕೂಡಲೇ ಸಮಂತಾ ಹಾಗೂ ವಿಜಯ್ ದೇವರಕೊಂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.

ಮಿಲಿಟರಿ ಹಿನ್ನೆಲೆಯ ಸಿನಿಮಾ

ಮಿಲಿಟರಿ ಹಿನ್ನೆಲೆಯ ಸಿನಿಮಾ

ಶಿವ ನಿರ್ವಾಣ ಹಾರ್ಟ್ ಟಚ್ ಮಾಡುವ ಕಥೆಗಳಿಗೆ ಫೇಮಸ್. ಈ ಹಿಂದೆ ನಿರ್ದೇಶಿಸಿದ ಸಿನಿಮಾಗಳು ಕೂಡ ಈ ಕಾರಣಕ್ಕೆ ಪ್ರೇಕ್ಷಕರಿಗೆ ಇಷ್ಟ ಆಗಿದ್ದವು. ಈ ಬಾರಿ ಮಿಲಿಟರಿಯನ್ನು ಬ್ಯಾಕ್‌ ಡ್ರಾಪ್‌ ಇಟ್ಟುಕೊಂಡು ರೊಮ್ಯಾಂಟಿಕ್ ಸ್ಟೋರಿ ಹೇಳಲು ಹೊರಟಿದ್ದಾರೆ. ಇದರೊಂದಿಗೆ ಸೆಂಟಿಮೆಂಟ್ ದೃಶ್ಯಗಳು ಕೂಡ ಭರಪೂರ ಇರುತ್ತೆ ಎನ್ನಲಾಗಿದೆ. ಈ ಕಥೆ ವಿಜಯ್ ದೇವರಕೊಂಡ ಹಾಗೂ ಸಮಂತಾ ಇಬ್ಬರಿಗೂ ಇಷ್ಟ ಆಗಿದೆ. ಈ ಕಾರಣಕ್ಕೆ ಶಿವ ನಿರ್ವಾಣ ಸಿನಿಮಾಗೆ ಇಬ್ಬರೂ ಸಮ್ಮತಿಸಿದ್ದಾರೆ ಎನ್ನಲಾಗಿದೆ.

ಸಮಂತಾಗಾಗಿ 'ಮಜಿಲಿ' ನಿರ್ದೇಶಿಸಿದ ಶಿವ

ಸಮಂತಾಗಾಗಿ 'ಮಜಿಲಿ' ನಿರ್ದೇಶಿಸಿದ ಶಿವ

ಸಮಂತಾ ಹಾಗೂ ನಾಗಚೈತನ್ಯ ನಟಿಸಿದ್ದ 'ಮಜಿಲಿ' ಚಿತ್ರ ನಿರ್ದೇಶಿಸಿದ್ದು ಇದೇ ಶಿವ ನಿರ್ವಾಣ. ಸಮಂತಾಗಿಂತ ನಾಗಚೈತನ್ಯಗೆ ಈ ಸಿನಿಮಾ ದೊಡ್ಡ ಟರ್ನಿಂಗ್ ಪಾಯಿಂಟ್ ಕೊಟ್ಟಿತ್ತು. ಆದರೆ, ವಿಜಯ್ ದೇವರಕೊಂಡ ಈ ಸಿನಿಮಾ ನಿರ್ದೇಶಕನೊಂದಿಗೆ ಹಿಂದೆಂದೂ ಕೆಲಸ ಮಾಡಿಲ್ಲ. ಸಮಂತಾ, ವಿಜಯ್ ದೇವರಕೊಂಡ ಹಾಗೂ ಶಿವ ನಿರ್ಮಾಣ ಈ ಮೂವರೂ ಒಟ್ಟಿಗೆ ಕೆಲಸ ಮಾಡುತ್ತಿರುವ ಮೊದಲ ಸಿನಿಮಾವಿದು ಎನ್ನಬಹುದು.

'ಪುಷ್ಪ' ನಿರ್ಮಾಪಕರಿಂದ ಸಿನಿಮಾ

'ಪುಷ್ಪ' ನಿರ್ಮಾಪಕರಿಂದ ಸಿನಿಮಾ

'ಪುಷ್ಪ' ಸಿನಿಮಾ ನಿರ್ಮಿಸಿದ್ದ ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾವನ್ನು ನಿರ್ಮಿಸುತ್ತಿದೆ. 'ಡಿಯರ್ ಕಾಮ್ರೇಡ್' ಬಳಿಕ ಇದೇ ಸಂಸ್ಥೆಗೆ ವಿಜಯ್ ದೇವರಕೊಂಡ ಮತ್ತೊಂದು ಸಿನಿಮಾ ಮಾಡಬೇಕಿತ್ತು. ಆ ಚಿತ್ರಕ್ಕೆ ಹೀರೋ ಅಂತ ಟೈಟಲ್ ಕೂಡ ಫಿಕ್ಸ್ ಆಗಿತ್ತು. ಆದರೆ, ಅದು ವರ್ಕ್‌ಔಟ್ ಆಗಿರಲಿಲ್ಲ. ಹೀಗಾಗಿ ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಜೊತೆ ವಿಜಯ್ ದೇವರಕೊಂಡ ಮಾಡುತ್ತಿದ್ದಾರೆ. ಈ ಹಿಂದೆ ಮಹಾನಟಿಯಲ್ಲಿ ವಿಜಯ್ ಹಾಗೂ ಸಮಂತಾ ಒಟ್ಟಿಗೆ ನಟಿಸಿದ್ದರು. ಈ ಬಾರಿ ಪೂರ್ಣ ಪ್ರಮಾಣದಲ್ಲಿ ರೊಮ್ಯಾಂಟಿಕ್ ಜೋಡಿಗಳಾಗಿ ತೆರೆಮೇಲೆ ಕಾಣಿಸಿಕೊಳ್ಳಿದ್ದಾರೆ.

More from Filmibeat

English summary
Samantha will be romancing with Vijay Deverakonda in next movie. Samantha has been roped in to pair up with Vijay Deverakonda for Shiva Nirvana’s next.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X