ತೆಲುಗಿನ ಎಲ್ಲಾ ಸಿನಿಮಾಗಳಿಗೂ ಒಂದೇ ದರ.. ಗುಡ್ ನ್ಯೂಸ್ ಕೊಟ್ಟ ದಿಲ್ ರಾಜು!
ಟಾಲಿವುಡ್‌ನಲ್ಲಿ ಸಿನಿಮಾ ಟಿಕೆಟ್ ದರದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆದಿದೆ. ಇತ್ತೀಚೆಗಷ್ಟೇ ಕೆಲವು ಚಿತ್ರಗಳ ಬೆಲೆಯನ್ನು ಭಾರೀ ಏರಿಕೆಗೆ ಮಾಡಲಾಗಿತ್ತು. ಅಲ್ಲದೆ ಸ್ಮಾಲ್ ಬಜೆಟ್ ಸಿನಿಮಾಗಳ ಬೆಲೆಯೂ ಅಷ್ಟೇ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು.
ಈ ಬೆಳವಣಿಗೆ ಟಾಲಿವುಡ್ ಚಿತ್ರರಂಗಕ್ಕೆ ಸಾಕಷ್ಟು ನಷ್ಟವಾಗುತ್ತಿದೆ ಎಂಬ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಟಾಲಿವುಡ್‌ನ ಸ್ಮಾರ್ಟ್ ನಿರ್ಮಾಪಕ ದಿಲ್ ರಾಜು ಆಶ್ಚರ್ಯಕರ ಸಂಗತಿಯೊಂದನ್ನು ನೀಡಿದ್ದಾರೆ. ಅದೇನು ಅಂತ ತಿಳಿಯಲು ಮುಂದೆ ಓದಿ.

ದುಬಾರಿ ಮೊತ್ತಕ್ಕೆ ಟಿಕೆಟ್ ದರ
ಕೆಲ ದಿನಗಳ ಹಿಂದಷ್ಟೇ ಆಂಧ್ರಪ್ರದೇಶ ಸರ್ಕಾರ ಸಿನಿಮಾಗಳ ಟಿಕೆಟ್ ಬೆಳೆಯನ್ನು ಗಣನೀಯವಾಗಿ ಇಳಿಸಿತ್ತು. ಇದು ಟಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಈ ಬೆಳವಣಿಗೆಯಿಂದ ಟಾಲಿವುಡ್ ಮಂದಿ ಪೇಚಿಗೆ ಸಿಲುಕಿದ್ದರು. ಬಳಿಕ ಹೈಕೋರ್ಟಿಗೆ ಹೋದ ಮೇಲೂ ಟಿಕೆಟ್ ದರ ಏರಿಕೆ ಬಗ್ಗೆ ಕ್ರಮಕೈಗೊಳ್ಳಲು ಸಾಧ್ಯವಾಗಿತ್ತು. ಸದ್ಯಕ್ಕೀಗ ತೆಲಂಗಾಣದಲ್ಲಿ ದೊಡ್ಡ ಮೊತ್ತಕ್ಕೆ ಸಿನಿಮಾ ಮಾರಾಟವಾಗುತ್ತಿದೆ. ಈ ಕಾರಣಕ್ಕೆ ತೆಲಂಗಾಣ ಮತ್ತು ಆಂಧ್ರ ಎರಡೂ ರಾಜ್ಯಗಳಲ್ಲಿ ಥಿಯೇಟರ್‌ಗಳಿಗೆ ಬಂದು ಸಿನಿಮಾ ನೋಡುವ ಪ್ರೇಕ್ಷಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಚಲನ ಮೂಡಿಸಿದ ದಿಲ್ ರಾಜು ಮಾತು
ಈ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸಭೆ ನಡೆಸಲಾಗಿದೆ. ಟಿಕೆಟ್ ದರವನ್ನು ಮರುಪರಿಶೀಲನೆ ಮಾಡುವಂತೆ ನಿರ್ಮಾಪಕರು ಈಗಾಗಲೇ ಹಲವಾರು ಬಾರಿ ಸಭೆ ನಡೆಸಿದ್ದಾರೆ. ಯಾವ ಬೆಲೆಗೆ ಟಿಕೆಟ್‌ಗಳನ್ನು ಮಾರಾಟ ಮಾಡಬೇಕು? ಎಷ್ಟು ಬೆಲೆಗೆ ಸೇಲ್ ಮಾಡಬೇಕು ಎನ್ನುವ ಬಗ್ಗೆ ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ದಿಲ್ ರಾಜು ಆಡಿದ ಇತ್ತೀಚಿನ ಮಾತುಗಳು ಸಂಚಲನ ಸೃಷ್ಟಿಸಿವೆ ಇನ್ನು ಮುಂದೆ ಎಲ್ಲಾ ಸಿನಿಮಾಗಳಿಗೂ ಒಂದೇ ಬೆಲೆ ಇರಲಿದೆ ಎಂದು ದಿಲ್ ರಾಜು ಬಹಿರಂಗ ಪಡಿಸಿದ್ದಾರೆ.

ಎಲ್ಲಾ ಸಿನಿಮಾಗಳಿಗೂ ಒಂದೇ ಬೆಲೆ
ಎಲ್ಲಾ ಸಿನಿಮಾಗಳಿಗೂ ಇನ್ನುಂದೆ ಒಂದೇ ಬೆಲೆ ಇರುತ್ತೆ. ಇದರೊಂದಿಗೆ ಅದ್ಧೂರಿ ಬಜೆಟ್‌ನಲ್ಲಿ ನಿರ್ಮಾಣ ಆದ ಸ್ಟಾರ್ ಹೀರೊಗಳ ಸಿನಿಮಾಗಳ ವಿಚಾರದಲ್ಲಿ ವಿನಾಯಿತಿ ಇರುತ್ತದೆ ಎಂದು ದಿಲ್ ರಾಜು ಸ್ಪಷ್ಟಪಡಿಸಿದ್ದಾರೆ. ಸ್ಟಾರ್ ಹೀರೊಗಳ ಸಿನಿಮಾ ಹೈ ಬಜೆಟ್ ಸಿನಿಮಾ ಆಗಿರುತ್ತೆ. ಈ ಸಿನಿಮಾಗಳನ್ನು ಹೊರತುಪಡಿಸಿ ಉಳಿದೆಲ್ಲ ಚಿತ್ರಗಳಿಗೂ ಒಂದೇ ರೀತಿಯ ಟಿಕೆಟ್ ದರ ಇರಲಿದೆ ಎಂದಿದ್ದಾರೆ.
Recommended Video

ದಿಲ್ ರಾಜು ಹೇಳಿದ್ದೇನು?
ಹೈದರಾಬಾದ್ ಮತ್ತು ವೈಜಾಗ್‌ನಂತಹ ನಗರಗಳಲ್ಲಿ ಜಿಎಸ್‌ಟಿ ಸೇರಿದಂತೆ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಿಗೆ 150 ರೂ. ನಿಗದಿಯಾಗಿದೆ. ಹಾಗೇ ಮಲ್ಟಿಪ್ಲೆಕ್ಸ್‌ನಲ್ಲಿ ರೂ.200 ವೆಚ್ಚ ಇರುತ್ತೆ ಎಂದು ದಿಲ್ ರಾಜು ಹೇಳಿದ್ದಾರೆ. ಎಲ್ಲಾ ನಿರ್ಮಾಪಕರೊಂದಿಗೆ ಚರ್ಚಿಸಿದ ಬಳಿಕ ಟಿಕೆಟ್ ದರದ ಬಗ್ಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದಿಲ್ ರಾಜು ಬಹಿರಂಗಪಡಿಸಿದ್ದಾರೆ.


Click it and Unblock the Notifications











