"ನನಗೆ ಡಾರ್ಲಿಂಗ್ ಅಂದ್ರೆ ಪಂಚ ಪ್ರಾಣ.. ಪ್ರಭಾಸ್ ಅಂತಹ ಗಂಡ ಬೇಕು" ಎಂದ ತೆಲುಗು ನಟಿ
ತೆಲುಗು ಚಿತ್ರರಂಗದ ಡಾರ್ಲಿಂಗ್ ಪ್ರಭಾಸ್ ಮದುವೆ ಬಗ್ಗೆ ಆಗಾಗ ಚರ್ಚೆಗಳು ಎದ್ದೇಳುತ್ತಲೇ ಇರುತ್ತೆ. ಒಂದಿಷ್ಟು ದಿನ ಅನುಷ್ಕಾ ಶೆಟ್ಟಿ ಜೊತೆ ಮದುವೆ ಅಂತ ಗುಲ್ಲೆದ್ದಿತ್ತು. ಆದರೆ, ಇವರಿಬ್ಬರೂ ಆ ವದಂತಿಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಪ್ಯಾನ್ ಇಂಡಿಯಾ ಸ್ಟಾರ್ ಆದ್ಮೇಲಂತೂ ಪ್ರಭಾಸ್ ಮದುವೆ ಬಗ್ಗೆ ಯೋಚನೆಯೇ ಮಾಡುತ್ತಿಲ್ಲ ಅಂತ ಅಭಿಮಾನಿಗಳು ಆರೋಪ ಮಾಡಿದ್ದರು.
ಟಾಲಿವುಡ್‌ನ ಯಂಗ್ ರೆಬೆಲ್ ಮಾರು ಹೋಗದವರೇ ಇಲ್ಲ. ಪ್ರಭಾಸ್ ಅಂತಹ ಪರ್ಸನಾಲಿಟಿಯನ್ನು ಮದುವೆ ಆಗಬೇಕು ಅನ್ನುವುದು ಅದೆಷ್ಟೋ ಯುವತಿಯರ ಕನಸು. ಹಾಗಂತ ಇವರಷ್ಟೇ ಅಲ್ಲ. ಸಿನಿಮಾರಂಗದ ನಾಯಕಿಯರಿಗೂ ಕೂಡ ಪ್ರಭಾಸ್ ಬಗ್ಗೆ ಕ್ರಶ್ ಇದೆ. ಇತ್ತೀಚೆಗೆ ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಹೀರೋಯಿನ್ ಒಬ್ಬರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪ್ರಭಾಸ್ ಅಂತಹ ಗಂಡ ಬೇಕು ಅಂತ ಆಸೆ ಪಟ್ಟ ಯುವತಿಯರನ್ನು ಲೆಕ್ಕ ಹಾಕುವುದಕ್ಕೆ ಆಗುವುದಿಲ್ಲ. ಆದರೆ, ಆ ಸಾಲಿಗೆ ಟಾಲಿವುಡ್‌ನ ಯಶಸ್ವಿ ನಾಯಕಿ ಕೂಡ ಸೇರಿಕೊಂಡಿದ್ದಾರೆ. ಅವರೇ ಮೀನಾಕ್ಷಿ ಚೌಧರಿ. ಇತ್ತೀಚೆಗಷ್ಟೇ ಮೀನಾಕ್ಷಿ ಚೌಧರಿ ನಟಿಸಿದ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ಮೀನಾಕ್ಷಿ ಚೌಧರಿ ಇಂತಹದ್ದೊಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪ್ರಭಾಸ್ ಬಗ್ಗೆ ಅದೇನು ಹೇಳಿದ್ದಾರೆ? ಅನ್ನೋದನ್ನು ನೋಡುವುದಾದರೇ..
ವಿಕ್ಟರಿ ವೆಂಕಟೇಶ್ ನಾಯಕನಾಗಿ ನಟಿಸಿದ ಸಿನಿಮಾ 'ಸಂಕ್ರಾಂತಿಕಿ ವಸ್ತುನ್ನಾಂ' ಸುಗ್ಗಿ ಹಬ್ಬಕ್ಕೆ ರಿಲೀಸ್ ಆಗಿತ್ತು. ಈ ಸಿನಿಮಾಗೆ ಪ್ರೇಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಬಾಕ್ಸಾಫೀಸ್‌ನಲ್ಲೂ ಕೂಡ ಈ ಸಿನಿಮಾ ಸೂಪರ್ ಸಕ್ಸಸ್ ಆಗಿ ಹೊರ ಹೊಮ್ಮಿದೆ. ಹೀಗಾಗಿ ಇತ್ತೀಚೆಗೆ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾದ ಯಶಸ್ಸನ್ನು ಸಂಭ್ರಮಿಸಲಾಗಿತ್ತು. ಈ ವೇಳೆ ನಟಿ ಮೀನಾಕ್ಷಿ ಚೌಧರಿ ತನ್ನನ್ನು ಮದುವೆ ಆಗುವ ಪತಿ ಹೇಗಿರಬೇಕು ಅಂತ ಅನ್ನೋದನ್ನು ರಿವೀಲ್ ಮಾಡಿದ್ದಾರೆ.

ಮೀನಾಕ್ಷಿ ಚೌಧರಿ ತನ್ನ ಭಾವಿ ಪತಿಯ ಬಗ್ಗೆ ನೂರಾರು ಕನಸುಗಳನ್ನು ಇಟ್ಟುಕೊಂಡಿದ್ದಾಗಿ ಹೇಳಿಕೊಂಇಡದ್ದಾರೆ. ಎಲ್ಲವನ್ನೂ ಇಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ ಅಂತಾನೂ ಹೇಳಿದ್ದಾರೆ. ಒಳ್ಳೆಯ ಹೃದಯವಂತನಾಗಿರಬೇಕು. ಹಾಗೇ ಬುದ್ದಿವಂತರಾಗಿರಬೇಕು. ಇದನ್ನು ಸಾಮಾನ್ಯವಾಗಿ ಪುರುಷರಲ್ಲಿ ಹುಡುಕುತ್ತೇನೆ ಎಂದು ಮೀನಾಕ್ಷಿ ಚೌಧರಿ ಹೇಳಿಕೊಂಡಿದ್ದಾರೆ.
ಹಾಗೇ "ನಾನು ಎತ್ತರವಾಗಿದ್ದೇನೆ. ನನ್ನ ಹೈಟ್ 5.8 ಅಡಿ ಇದೆ. ಈ ಕಾರಣಕ್ಕೆ ನನ್ನಷ್ಟು ಹೈಟ್ ಇರುವ ವ್ಯಕ್ತಿನೇ ಆಗಬೇಕು. ನನಗಿಂತ ಕುಳ್ಳಗಿದ್ದರೆ, ನನ್ನನ್ನು ಹೀಲ್ಡ್ ಶೂಗಳನ್ನು ಹಾಕದಂತೆ ತಡೆಯಬಹುದು. ಅವುಗಳನ್ನು ಧರಿಸದೆ ಇರುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ನಾನು ಮದುವೆ ಆಗುವ ಹುಡುಗ ನನ್ನಷ್ಟೇ ಎತ್ತರವಿರಬೇಕು ಎಂಬುದು ಮೊದಲ ಷರತ್ತು. ಹಾಗೇ ವಿಶೇಷವಾಗಿ ಕಾಣುವಂತಹ ಹುಡುಗಬೇಕು. ಅಂತಹಸ ಹುಡುಗ ಸಿಕ್ಕರೆ ಖಂಡಿತವಾಗಿಯೂ ಮದುವೆ ಆಗುತ್ತೇನೆ" ಎಂದು ಮೀನಾಕ್ಷಿ ಚೌಧರಿ ಹೇಳಿಕೊಂಡಿದ್ದಾರೆ.
ಈ ವಿಷಯವನ್ನು ಹೇಳುವಾಗಲೇ ಮೀನಾಕ್ಷಿ ಚೌಧರಿ ಯಂಗ್ ರೆಬೆಲ್ ಪ್ರಭಾಸ್ ಹೆಸರನ್ನು ತೆಗೆದುಕೊಂಡಿದ್ದಾರೆ. "ಪ್ರಭಾಸ್ ಅಂತಹ ಗುಣಲಕ್ಷಣಗಳನ್ನು ಹೊಂದಿರುವ ವ್ಯಕ್ತಿ ನನ್ನ ಪತಿ ಆಗಬೇಕು. ನನ್ನ ಹೈಟ್‌ಗೆ ಅವರು ಸರಿಯಾಗಿ ಹೊಂದಿಕೊಳ್ಳುತ್ತಾರೆ. ನನಗೆ ಪ್ರಭಾಸ್ ಅಂದರೂ ತುಂಬಾನೇ ಇಷ್ಟ. ಅವರ ಮೇಲೆ ಕ್ರಶ್ ಆಗಿದೆ. ಅವರು ಹೈಟ್ ಇದ್ದಾರೆ. ಸುಂದರವಾಗಿದ್ದಾರೆ. ಅಂತಹ ವ್ಯಕ್ತಿ ಸಿಕ್ಕರೆ ಖಂಡಿತವಾಗಿಯೂ ನಾನು ಅವರನ್ನೇ ಮದುವೆ ಆಗುತ್ತೇನೆ" ಎಂದು ಮೀನಾಕ್ಷಿ ಚೌಧರಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications











