ತೆಲುಗು ಹೀರೋಗಳಿಗೆ ಶಾಕ್ ಕೊಟ್ರಾ ರುಕ್ಮಿಣಿ ವಸಂತ್ ? ಬಿಗ್ ಆಫರ್‌ಗಳಿಗೆ ನೋ ಎಂದಿದ್ದು ನಿಜವೇ?
'ಸಪ್ತಸಾಗರದಾಚೆ ಎಲ್ಲೋ' ರಿಲೀಸ್ ಆಗುತ್ತಿದ್ದಂತೆ ನಟಿ ರುಕ್ಮಿಣಿ ವಸಂತ್‌ಗೆ ಸಿನಿಮಾರಂಗದಲ್ಲಿ ಬೇಡಿಕೆ ಹೆಚ್ಚಾಗಿತ್ತು. ಈ ಸಿನಿಮಾ ತೆಲುಗಿಗೂ ಡಬ್ ಆಗಿ ರಿಲೀಸ್ ಆಗಿದ್ದರಿಂದ ಕನ್ನಡದಂತೆ ತೆಲುಗು ಪ್ರೇಕ್ಷಕರ ಗಮನ ಸೆಳೆದಿದ್ದರು. ಈ ಕಾರಣಕ್ಕೆ ತೆಲುಗಿನಲ್ಲೂ ರುಕ್ಮಿಣಿ ವಸಂತ್‌ಗೆ ದೊಡ್ಡ ಆಫರ್‌ಗಳು ಬರುತ್ತಿವೆ. ಆದರೆ, ರುಕ್ಮಿಣಿ ಆ ಕಡೆ ತಿರುಗಿ ಕೂಡ ನೋಡುತ್ತಿಲ್ಲ ಅನ್ನೋ ಸುದ್ದಿ ಹಬ್ಬಿದೆ.
ಕನ್ನಡ ಸಿನಿಮಾದಲ್ಲಿ ಜೋರಾಗಿ ಸದ್ದು ಮಾಡಿದ ನಾಯಕಿಯರು ತೆಲುಗು ಆಫರ್‌ಗಳನ್ನು ಕಣ್ಮುಚ್ಚಿ ಒಪ್ಪಿಕೊಳ್ಳುತ್ತಾರೆ. ಸದ್ಯ ಟಾಲಿವುಡ್‌ನಲ್ಲಿ ಕನ್ನಡದ ನಟಿಯರೇ ಹೆಚ್ಚಾಗಿ ಕಾಣಸಿಗುತ್ತಾರೆ. ಅನುಷ್ಕಾ ಶೆಟ್ಟಿ, ರಶ್ಮಿಕಾ ಮಂದಣ್ಣ, ನಭಾ ನಟೇಶ್, ನೇಹಾ ಶೆಟ್ಟಿ ತೆಲುಗು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ.

ಈ ಕಾರಣಕ್ಕೆ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಎ ಹಾಗೂ ಬಿ ಬಳಿಕ ರುಕ್ಮಿಣಿ ವಸಂತ್ ಕೂಡ ಟಾಲಿವುಡ್‌ಗೆ ಹೋಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ಈ ನಟಿಯ ಬಗ್ಗೆ ಟಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಓಡಾಡುತ್ತಿದೆ. ರುಕ್ಮಿಣಿ ಹುಡುಕಿಕೊಂಡು ಬಂದ ದೊಡ್ಡ ಬಜೆಟ್ ಸಿನಿಮಾಗಳಿಗೆ ನೋ ಎಂದಿದ್ದಾರೆ ಎಂದು ತೆಲುಗಿನಲ್ಲಿ ವರದಿಗಳಾಗಿವೆ.
ನಟಿ ರುಕ್ಮಿಣಿ ವಸಂತ್ ತೆಲುಗು ಆಫರ್‌ಗಳನ್ನು ರಿಜೆಕ್ಟ್ ಮಾಡಿದ್ದು ನಿಜವೇ? ತೆಲುಗು ಹೀರೊಗಳ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ರಾ? ಇಂತಹ ಪ್ರಶ್ನೆಗಳಿಗ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿರೋದು ನಿಜ. ಕನ್ನಡದಲ್ಲಿ ಸ್ವಲ್ಪ ಜನಪ್ರಿಯತೆ ಸಿಕ್ಕರೂ ಸಾಕು. ಅವರನ್ನು ಟಾಲಿವುಡ್ ಒಳ್ಳೆ ಸ್ವಾಗತ ಕೊಟ್ಟು ಸಿನಿಮಾ ಆಫರ್ ಕೊಡುತ್ತೆ. ಅಲ್ಲಿಂದ ಹಾಗೇ ಫ್ಯಾನ್ ಇಂಡಿಯಾ ಸಿನಿಮಾಗಳ ಕಡೆಗೆ ನಾಯಕಿಯರು ಮುಖ ಮಾಡುತ್ತಾರೆ.
ಇದಕ್ಕೆ ಅತ್ಯುತ್ತಮ ಉದಾಹರಣೆ ನಟಿ ರಶ್ಮಿಕಾ ಮಂದಣ್ಣ. ಕನ್ನಡದಿಂದ ನಟನಾ ವೃತ್ತಿ ಆರಂಭಿಸಿ, ಬಳಿಕ ತೆಲುಗಿಗೆ ಹಾರಿದ್ದರು. ಅಲ್ಲಿಂದ ಪ್ಯಾನ್ ಇಂಡಿಯಾ ನಟಿಯಾಗಿ ಸದ್ದು ಮಾಡುತ್ತಿದ್ದಾರೆ. ರುಕ್ಮಿಣಿ ವಸಂತ್‌ಗೆ ಕೂಡ ತೆಲುಗಿನಲ್ಲಿ ಈಗಾಗಲೇ ಸಾಕಷ್ಟು ಆಫರ್ ಮಾಡಿದ್ದು, ಅದೆಲ್ಲವನ್ನೂ ರಿಜೆಕ್ಟ್ ಮಾಡಿದ್ದಾರೆ ಅಂತ ತೆಲುಗಿನ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ರುಕ್ಮಿಣಿ ವಸಂತ್ ತೆಲುಗು ಸಿನಿಮಾಗಳನ್ನು ಒಪ್ಪಿಕೊಳ್ಳದೆ ಇರಲು ಏನು ಕಾರಣ ಅನ್ನುವುದನ್ನು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ರುಕ್ಮಿಣಿ ವಸಂತ್‌ಗೆ ಬಹುತೇಕ ಕಮರ್ಷಿಯಲ್ ಸಿನಿಮಾಗಳಲ್ಲೇ ಹೆಚ್ಚು ಆಫರ್‌ಗಳು ಬಂದಿದ್ದವಂತೆ. ಆ ಎಲ್ಲಾ ಆಫರ್‌ಗಳನ್ನು ರುಕ್ಮಿಣಿ ವಸಂತ್ ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ. ಸಿನಿಮಾಗಳಲ್ಲಿ ಕೇವಲ ಹಾಡು ಹಾಗೂ ರೊಮ್ಯಾಂಟಿಕ್ ದೃಶ್ಯಗಳಿಗೆ ಮಾತ್ರ ಸೀಮಿತವಾದ ಪಾತ್ರಗಳು ಬಂದಿದ್ದು, ಅಂತಹವನ್ನು ರಿಜೆಕ್ಟ್ ಮಾಡುತ್ತಿದ್ದಾರಂತೆ.
ರುಕ್ಮಿಣಿ ವಸಂತ್ ಸಿನಿಮಾದಲ್ಲಿ ಕೇವಲ ನಾಯಕನ ಪ್ರಿಯತಮೆಯಾಗಿ ನಟಿಸಲು ಒಪ್ಪುತ್ತಿಲ್ಲವಂತೆ. ಪಾತ್ರಗಳಲ್ಲಿ ಸ್ಕೋಪ್ ಇದ್ದರೆ ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ. ಅಂತಹ ಸಿನಿಮಾವನ್ನು ಆಫರ್ ಮಾಡದೆ ಇದ್ದಿದ್ದರಿಂದ ನೇರವಾಗಿ ರಿಜೆಕ್ಟ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಎರಡು ಸಿನಿಮಾ ಆಫರ್ ಬಂದಿದ್ದು, ಅವುಗಳಿಗೂ ನೋ ಎಂದಿದ್ದಾರೆಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ.
ಸದ್ಯಕ್ಕೀಗ ರುಕ್ಮಿಣಿ ವಸಂತ್ ತಮಿಳಿನ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವಿಜಯ್ ಸೇತುಪತಿ ಹಾಗೂ ಶಿವ ಕಾರ್ತಿಕೇಯನ್ ನಟಿಸುತ್ತಿರುವ ಸಿನಿಮಾಗಳಿಗೆ ಇವರೇ ನಾಯಕಿ. ಇನ್ನು ಕನ್ನಡದಲ್ಲಿ 'ಬೈರತಿ ರಣಗಲ್' ಹಾಗೂ 'ಬಘೀರ' ಸಿನಿಮಾಗಳಿಗೂ ಇವರೇ ನಾಯಕಿಯಾಗಿದ್ದಾರೆ. ಈ ಗ್ಯಾಪ್‌ನಲ್ಲಿ ವಿಜಯ್ ದೇವರಕೊಂಡ ಹಾಗೂ ರವಿತೇಜ ಸಿನಿಮಾಗಳಿಗೆ ನಾಯಕಿಯಾಗಲಿದ್ದಾರೆ ಅನ್ನೋ ಸುದ್ದಿ ಕೂಡ ಹರಿದಾಡುತ್ತಿದೆ.


Click it and Unblock the Notifications











