Sarath Babu Health Update:"ಚೇತರಿಸಿಕೊಳ್ಳಲು ಇನ್ನೂ ಸ್ವಲ್ಪ ಸಮಯಬೇಕು".. ಕುಟುಂಬದಿಂದ ಮಾಹಿತಿ
ದಕ್ಷಿಣ ಭಾರತದ ಹಿರಿಯ ನಟ ಶರತ್ ಬಾಬು ಅನಾರೋಗ್ಯದಿಂದ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ(ಮೇ 3) ರಾತ್ರಿ ಶರತ್ ಬಾಬು ಆರೋಗ್ಯ ನಿಧನರಾಗಿದ್ದಾರೆ ಅನ್ನೋ ವದಂತಿ ಹಬ್ಬಿತ್ತು. ತಕ್ಷಣವೇ ಕುಟುಂಬಸ್ಥರು ಇದು ಸುಳ್ಳು ಸುದ್ದಿಯೆಂದು ಸ್ಪಷ್ಟನೆ ನೀಡಿದ್ದರು.
ನಿನ್ನೆ(ಮೇ 4) ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಶರತ್ ಬಾಬು ನಿಧನರಾಗಿದ್ದಾರೆಂಬ ಸುದ್ದಿಯನ್ನು ಹಬ್ಬಿಸಿದ್ದರು. ಇದು ಸುಳ್ಳು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಶರತ್ ಬಾಬು ಅವರ ಸಹೋದರಿಯೇ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದರು. ಈಗ ಹಿರಿಯ ನಟನ ಸಹೋದರನ ಮಗ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ಶರತ್ ಬಾಬು ಆರೋಗ್ಯದ ಬಗ್ಗೆ ಗೊಂದಲ
ಹಿರಿಯ ನಟ ಶರತ್ ಬಾಬು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೆ, ಅವರ ಆರೋಗ್ಯ ಈಗ ಹೇಗಿದೆ? ಚೇರಿಸಿಕೊಳ್ಳುತ್ತಿದ್ದಾರಾ? ಇಲ್ವಾ? ಅನ್ನುವ ಬಗ್ಗೆ ಸರಿಯಾದ ಮಾಹಿತಿ ಅಭಿಮಾನಿಗಳಿಗೆ ಸಿಗುತ್ತಿಲ್ಲ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ವದಂತಿಗಳು ಹರಿದಾಡುತ್ತಿವೆ.
ಆತಂಕದಲ್ಲಿರೋ ನಟ ಶರತ್ ಬಾಬು ಅಭಿಮಾನಿಗಳಿಗೆ ಈಗ ಕುಟುಂಬಸ್ಥರಿಂದ ಮಾಹಿತಿ ಸಿಕ್ಕಿದೆ. ಈಗ ಹಿರಿಯನ ನಟ ಶರತ್ ಬಾಬು ಸಹೋದರನ ಪುತ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಒಳ್ಳೆಯ ಸುದ್ದಿ ಸಿಕ್ಕಿದೆ.

ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕು
ಹಿರಿಯ ನಟ ಶರತ್ ಬಾಬು ಸಹೋದರನ ಪುತ್ರ ಆಯುಷ್ ತೇಜಸ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, " ಶರತ್ ಬಾಬು ಅವರ ಆರೋಗ್ಯ ಸ್ಥಿರವಾಗಿದೆ. ಅವರು ಈಗ ಚೆನ್ನಾಗಿಯೇ ಇದ್ದಾರೆ. ದಯವಿಟ್ಟು ವದಂತಿಗಳನ್ನು ಹಬ್ಬಿಸಬೇಡಿ. ಸುಳ್ಳು ಸುದ್ದಿಯನ್ನು ನಂಬಬೇಡಿ." ಎಂದು ಮನವಿ ಮಾಡಿಕೊಂಡಿದ್ದಾರೆ.
"ಶರತ್ ಬಾಬು ಚೇತರಿಸಿಕೊಳ್ಳಲು ಸ್ವಲ್ಪ ಸಮಯಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಅವರು ಗುಣಮುಖರಾಗಲೆಂದು ಪ್ರಾರ್ಥಿಸಿ, ಆಶೀರ್ವಾದ ಮಾಡಿದ ಅಭಿಮಾನಿಗಳಿಗೆ ಧನ್ಯವಾದಗಳು" ಎಂದು ಶರತ್ ಬಾಬು ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗೇ ಅಭಿಮಾನಿಗಳ ಹಾರೈಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಹೈದರಾಬಾದ್‌ನಲ್ಲಿ ಚಿಕಿತ್ಸೆ
ಹಿರಿಯ ನಟ ಶರತ್ ಬಾಬು ಅವರಿಗೆ ಹೈದರಬಾದ್‌ನ AIG (Asian Institute Of Gastroenterology Hyderabad)ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶರತ್ ಬಾಬು ಅವರನ್ನು ಪ್ರತ್ಯೇಕ ಕೊಠಡಿಗೆ ವರ್ಗಾಯಿಸಲಾಗಿದ್ದು, ಆರೋಗ್ಯವಾಗಿದ್ದಾರೆಂದು ನಿನ್ನೆ(ಮೇ 3) ಅವರ ಸಹೋದರಿ ಹೇಳಿದ್ದರು.
ಯೂಟ್ಯೂಬ್ ಚಾನೆಲ್‌ಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಶರತ್ ಬಾಬು ನಿಧನ ಅನ್ನೋದ ಹರಿದಾಡುತ್ತಿದ್ದಂತೆ ಖುಷ್ಬೂ ಹಾಗೂ ಕಮಲ್ ಹಾಸನ್ ಟ್ವಿಟರ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದರು. ಬಳಿಕ ಇಬ್ಬರೂ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.


Click it and Unblock the Notifications











