ಕೋಟಿ ಸಂಭಾವನೆ ಪಡೆಯುವ ಮೃಣಾಲ್ 'ಬಟ್ಟೆ'ಗೆ ಖರ್ಚು ಮಾಡುವುದೆಷ್ಟು ; ಕೇಳಿದರೆ ಶಾಕ್ ಆಗುವುದು ಪಕ್ಕಾ..!

''ಸೆಲೆಬ್ರಿಟಿ'' ಗಳ ಬದುಕು ತುಂಬಾನೇ ''ಕಲರ್ ಫುಲ್''. ಮನೆಯಾಚೆ ಕಾಲಿಟ್ಟರೆ ಸಾಕು ''ಹಣದ ಮಳೆ'' ಬೀಳುತ್ತೆ, ''ನೀರಿನ ಹೊಳೆ''ಯಂತೆ ಹಣ ಹಾಗೇ ''ಖರ್ಚು'' ಆಗುತ್ತೆ. ಇನ್ನೂ ಸೆಲೆಬ್ರಿಟಿ ಎಂಬ ''ಟ್ಯಾಗ್'' ಇರುವುದಕ್ಕಾದರೂ ''ಪ್ರೈಸ್ ಟ್ಯಾಗ್'' ನ ನೋಡದೇ ''ಬಟ್ಟೆ''ಗಳನ್ನು ಖರೀದಿ ಮಾಡಬೇಕಾಗುತ್ತೆ. ''ಲಕ್ಷ ಲಕ್ಷ ಖರ್ಚು'' ಮಾಡಿ ''ಡಿಸೈನರ್ ಬಟ್ಟೆ''ಗಳನ್ನೇ ಹಾಕಿಕೊಳ್ಳಬೇಕಾಗುತ್ತೆ.ಬಹುತೇಕರ ಬದುಕು ಹೀಗೆ ''ಥಳುಕು ಬಳುಕು''ಗಳಿಂದ ತುಂಬಿರುತ್ತೆ. ಆದರೆ ''ಮೃಣಾಲ್ ಠಾಕೂರ್'' ಬದುಕು ಮಾತ್ರ ತದ್ವಿರುದ್ದ.

ಹೌದು, ''ಉತ್ತರ''ದಿಂದ ''ದಕ್ಷಿಣ''ಕ್ಕೆ ವಲಸೆ ಬಂದ ಮೃಣಾಲ್ ಠಾಕೂರ್ ಗೆ ಇವತ್ತು ಎಲ್ಲಿಲ್ಲದ ''ಬೇಡಿಕೆ'' ಇದೆ. ಅದರಲ್ಲಿಯೂ ''ರಶ್ಮಿಕಾ ಮಂದಣ್ಣ'' ಜಾಗ ಖಾಲಿ ಮಾಡಿದ ನಂತರ ''ಆಂಧ್ರ'' ಮೃಣಾಲ್ ''ಜಪ''ವನ್ನೇ ಮಾಡುತ್ತಿದೆ. 'ಸೀತಾ ರಾಮಂ'.. 'ಹಾಯ್ ನನ್ನಾ'.. 'ಫ್ಯಾಮಿಲಿ ಸ್ಟಾರ್'.. ಹೀಗೆ ಒಂದಾದ ಮೇಲೊಂದು ತೆಲುಗು ಸಿನಿಮಾ ಮಾಡುತ್ತಿರುವ ಮೃಣಾಲ್ ಹಾಗೇ ನೋಡಿದರೆ ಇವತ್ತು ''ಕೋಟ್ಯಾಧೀಶ್ವರಿ''. ಆದರೆ ಇಂಥಾ ಮೃಣಾಲ್ ಠಾಕೂರ್ ''ಬಟ್ಟೆ''ಗಳಿಗೆ ''2000'' ಖರ್ಚು ಮಾಡಲು ಕೂಡ ಹಿಂದೆ ಮುಂದೆ ಯೋಚನೆ ಮಾಡುತ್ತಾರೆ ಎಂದರೇ ನೀವು ನಂಬ್ಲೇಬೇಕು. ಖುದ್ದು ಮೃಣಾಲ್ ಠಾಕೂರ್ ಈ ವಿಚಾರವನ್ನ ಯಾವುದೇ ''ಮುಚ್ಚು ಮರೆ''ಯಿಲ್ಲದೆ ಹೇಳಿದ್ದಾರೆ.

Seetha Ramam Fame Mrunal Thakur Never Spent More Than Rs 2 000 On Clothes

''ಸಂದರ್ಶನ''ವೊಂದರಲ್ಲಿ ಮಾತನಾಡಿರುವ ಮೃಣಾಲ್, ''ಬಟ್ಟೆ''ಗಳನ್ನ ನಾನು ಬೇರೆಯವರಿಂದ ''ಎರವಲು'' ಪಡೆಯುತ್ತೇನೆ ಅಂದಿದ್ದಾರೆ. ಯಾಕೆಂದರೆ.. ನನ್ನ ಪ್ರಕಾರ ಸಾವಿರ, ಲಕ್ಷಗಳನ್ನೆಲ್ಲ ಕೊಟ್ಟು ಬಟ್ಟೆ ಖರೀದಿಸುವುದು ''ದುಂದು ವೆಚ್ಚ'', ಎಲ್ಲಕ್ಕಿಂತ ಹೆಚ್ಚಾಗಿ ''ಒಂದೇ ಬಟ್ಟೆ''ಯನ್ನ ಮತ್ತೆ ಮತ್ತೆ ಧರಿಸಿ ನನಗೆ ರೂಢಿಯಿಲ್ಲ ಎಂದಿರುವ ಮೃಣಾಲ್ ಠಾಕೂರ್, ಒಂದು ''ಟಾಪ್'' ಗೆ ''2000'' ಕೊಟ್ಟಿದ್ದೇ ಅದೆ ಹೆಚ್ಚು ಅಂದಿದ್ದಾರೆ.

Seetha Ramam Fame Mrunal Thakur Never Spent More Than Rs 2 000 On Clothes

ನಿಜಾ..''ವಾರ್ಡ್‌ರೋಬ್‌''ನಲ್ಲಿ ಅತ್ಯುತ್ತಮವಾದ ''ಬಟ್ಟೆಗಳ ಸಂಗ್ರಹ'' ಇರಬೇಕು. ಅದು ಒಳ್ಳೆಯದು. ಹಾಗಂಥ ಸುಖಾ ಸುಮ್ಮನೆ ''ಬ್ರ್ಯಾಂಡೆಡ್ ಬಟ್ಟೆ''ಯನ್ನೇ ಖರೀದಿ ಮಾಡಬೇಕು ಎಂಬ ಹುಚ್ಚು ನನಗಿಲ್ಲ ಅಂದಿರುವ ಮೃಣಾಲ್, ಬಟ್ಟೆಗೆ ಖರ್ಚು ಮಾಡುವ ಹಣವನ್ನೇ ಬೇರೆಯದ್ದಕ್ಕೆ ಬಳಿಸಿಕೊಳ್ಳಬಹುದು ಅಲ್ಲವಾ ಎಂದು ಪ್ರಶ್ನಿಸಿದ್ದಾರೆ. ಬಟ್ಟೆಯಿಂದ ಉಳಿತಾಯವಾದ ಹಣವನ್ನ ''ಊಟ ತಿಂಡಿಗಳಿಗೆ, ಸಸ್ಯಗಳನ್ನ ನೆಡಲು ಅಥವಾ ಕೃಷಿ ಭೂಮಿಯಲ್ಲಿ ಹೂಡಿಕೆ ಮಾಡಬಹುದು'' ನಾನು ಅದನ್ನೇ ಮಾಡುತ್ತಿದ್ದೇನೆ ಎಂದು ಮೃಣಾಲ್ ಹೇಳಿದ್ದಾರೆ.

ಇನ್ನೂ ನನ್ನ ವಾರ್ಡ್ ರೋಬ್ ನಲ್ಲಿ ಜೀನ್ಸ್ ಪ್ಯಾಂಟ್.. ಶೂ.. ಹಾಗೂ ಬ್ಯಾಗ್ ಗಳನ್ನ ನೀವು ಅತೀ ಹೆಚ್ಚು ನೋಡಬಹುದು ಎಂದಿರುವ ಮೃಣಾಲ್, ಟ್ರೆಂಡ್‌ಗಳಿಗೆ ''ಮಣಿಯಬೇಡಿ'' ಎಂದು ತಮ್ಮ ಅಭಿಮಾನಿಗಳಿಗೆ ''ಕಿವಿ ಮಾತು'' ಕೂಡ ಹೇಳಿದ್ದಾರೆ. ಕಾಲಕ್ಕೆ ತಕ್ಕಂತೆ ''ಟ್ರೆಂಡ್'' ಬದಲಾಗುತ್ತಿರುತ್ತೆ. ಒಂದರ್ಥದಲ್ಲಿ ಅದು ಕ್ಷಣಿಕ. ಹೀಗಾಗಿ ''ಕ್ಷಣಿಕ ಸುಖ''ಕ್ಕೆ ಲಕ್ಷಾನುಘಟ್ಟಲೆ ಹಣ ''ವ್ಯರ್ಥ'' ಮಾಡುವ ಬದಲು ಅದೇ ಹಣವನ್ನ ನಿಮ್ಮ ನಿಮ್ಮ ಶಕ್ತಿ ಅನುಸಾರ ''ಹೂಡಿಕೆ'' ಮಾಡುವುದನ್ನ ''ಅಭ್ಯಾಸ'' ಮಾಡಿಕೊಳ್ಳಿ ಎಂಬ ಸಲಹೆಯನ್ನ ಕೊಟ್ಟಿದ್ದಾರೆ ಮೃಣಾಲ್ ಠಾಕೂರ್.

ಒಟ್ಟಿನಲ್ಲಿ ದುಡ್ಡು ಇದೆ ಎಂದು ದುಂದು ವೆಚ್ಚವನ್ನೇ ಹೆಚ್ಚು ಮಾಡುವ ಜನರು ಇರುವ ಈ ಕಾಲದಲ್ಲಿ ಮೃಣಾಲ್ ಠಾಕೂರ್ ''ಸರಳತೆಯ ಸಂದೇಶ''ವನ್ನ ಕೊಟ್ಟಿದ್ದಾರೆ. ದುಡ್ಡು ಗಳಿಸಿ, ಉಳಿಸಿ ಎಂದಿದ್ದಾರೆ. ಮೃಣಾಲ್ ಠಾಕೂರ್ ಅವರ ಈ ನೇರಾನೇರ ನುಡಿ ಸದ್ಯಕ್ಕೆ ಇವರ ಅಭಿಮಾನಿಗಳ ಹೃದಯವನ್ನಷ್ಟೇ ಅಲ್ಲ ಅನೇಕರ ಹೃದಯವನ್ನೂ ಗೆಲ್ಲುತ್ತಿದೆ.

More from Filmibeat

English summary
In An Recent Interview Bollywood And Tollywood Actress Mrunal Thakur Reveled That She Has Never Spent More Than Rs 2,000 On Clothes,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X