"ಮೆಗಾಸ್ಟಾರ್ ಚಿರಂಜೀವಿ ನೆನೆದು ಎಷ್ಟೋ ಬಾರಿ ಕಣ್ಣೀರು ಹಾಕಿದ್ದೇನೆ"; ತೆಲುಗು ನಟಿಯ ಅಚ್ಚರಿ ಕಾಮೆಂಟ್

ಮೆಗಾಸ್ಟಾರ್ ಚಿರಂಜೀವಿ ತೆಲುಗು ಮಂದಿಯ ಫೇವರಿಟ್ ನಟ. ಇವರೊಂದಿಗೆ ಸಿನಿಮಾ ಮಾಡಬೇಕು ಅನ್ನೋದು ಅದೆಷ್ಟೋ ನಟಿಯರ ಕನಸು. ಚಿಕ್ಕದೊಂದು ಪಾತ್ರ ಸಿಕ್ಕರೂ ನಟಿಯರು ಗ್ರೀನ್ ಸಿಗ್ನಲ್ ಕೊಟ್ಟು ಬಿಡುತ್ತಾರೆ. ಒಂದಿಷ್ಟು ದಿನ ರಾಜಕೀಯ ಅಂತ ಬ್ಯುಸಿಯಾಗಿದ್ದ ಚಿರಂಜೀವಿ ಅಲ್ಲಿಂದ ಬೇಸತ್ತು ಮತ್ತೆ ಚಿತ್ರರಂಗಕ್ಕೆ ಮರಳಿದ್ದರು. ಈಗ ತಮ್ಮಿಷ್ಟದ ಸಿನಿಮಾಗಳನ್ನು ಮಾಡುತ್ತಾ ಆರಾಮಾಗಿದ್ದಾರೆ.

ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ಈಗ ಹಿರಿಯ ನಟಿ ಅಮಾನಿ ಸಂದರ್ಶನದಲ್ಲಿ ಕಾಮೆಂಟ್ ಮಾಡಿದ್ದಾರೆ. ಅಂದ್ಹಾಗೆ, ಚಿರಂಜೀವಿ ಯಶಸ್ಸಿನ ಉತ್ತುಂಗದಲ್ಲಿ ಕಾಲದಲ್ಲಿ ಅಮಾನಿ ಕೂಡ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದರು. ಅಂದಿನ ಕಾಲಕ್ಕೆ ಅಮಾನಿ ಒಬ್ಬ ಸ್ಟಾರ್ ಹೀರೋಯಿನ್. ಸೌಂದರ್ಯದ ಹೊರತಾಗಿ ನಟನೆಗೂ ಪ್ರಾಶಸ್ತ್ಯವಿರುವ ಪಾತ್ರಗಳಲ್ಲಿ ನಟಿಸಿ ಉತ್ತಮ ನಟಿ ಎನಿಸಿಕೊಂಡಿದ್ದರು.

Senior actress Aamani says I cried because of mega star Chiranjeevi goes viral

ಆ ಸಮಯದಲ್ಲಿ ಅಮಾನಿ ಹೋಮ್ಲಿ ಲುಕ್‌ಗೆ ತೆಲುಗು ಮಂದಿ ಫಿದಾ ಆಗಿದ್ದರು. ಪ್ರೇಕ್ಷಕರೂ ಕೂಡ ಈ ನಟಿಯನ್ನು ಇಷ್ಟ ಪಟ್ಟಿದ್ದರು. ಕೌಟುಂಬಿಕ ಸಿನಿಮಾಗಳಲ್ಲಿ ಅಮಾನಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. 'ಮಾವಿಚಿಗುರು', 'ಶುಭಲಗ್ನಂ', 'ಜಂಬ ಲಕಿಡಿ ಪಂಬ', 'ಮಿಸ್ಟರ್ ಪೆಲ್ಲಂ', 'ಶುಭಮಸ್ತು', 'ವಂಶನಿಕೊಕ್ಕಾಡು','ಶುಭಸಂಕಲ್ಪಂ' ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಬೇಡಿಕೆಯ ನಟಿಯಾಗಿದ್ದರು.

ಅಮಾನಿಗೆ ಯಾವಾಗ ನಾಯಕಿಯಾಗಿ ಅವಕಾಶಗಳು ಕಡಿಮೆಯಾಗ ತೊಡಗಿದವೋ ಆ ವೇಳೆ ಮದುವೆಯಾಗಲು ನಿರ್ಧರಿಸಿದ್ದರು. ತಮಿಳು ನಿರ್ಮಾಪಕ ಖಾಜಾ ಮೊಯಿದ್ದೀನ್ ಅವರನ್ನು ವಿವಾಹವಾದರು. ಹಾಗಂತ, ಇಬ್ಬರದ್ದು ಲವ್ ಮ್ಯಾರೇಜ್ ಆಗಿರಲಿಲ್ಲ. ಹಾಗಂತ ಅರೇಂಜ್ಡ್ ಮ್ಯಾರೇಜ್ ಕೂಡ ಅಲ್ಲ. ಇದೊಂದು ಆಕ್ಸಿಡೆಂಟಲ್ ಮ್ಯಾರೇಜ್ ಎಂದು ಸ್ವತ: ನಟಿ ಅಮಾನಿಯೇ ಹೇಳಿಕೊಂಡಿದ್ದಾರೆ.

ಮದುವೆ ನಂತರ ಕೌಟುಂಬಿಕ ಜೀವನಕ್ಕೆ ಮೀಸಲಿಟ್ಟಿದ್ದ ನಟಿ ಅಮಾನಿಯೀಗ ಪತಿಯಿಂದ ಬೇರೆಯಾಗಿದ್ದಾರೆ. ಸದ್ಯಕ್ಕೀಗ ಅಮಾನಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಸಂದರ್ಶನಗಳಲ್ಲಿ ಭಾಗಿಯಾಗುತ್ತಿರುವ ಅಮಾನಿ, ಹೀರೋಯಿನ್ ಆಗಿದ್ದಾಗ ಎದುರಾಗಿದ್ದ ಅನುಭವ ಹಾಗೂ ಘಟನೆಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆ ಕೆಲಸ ಮಾಡದಿರುವ ಬಗ್ಗೆ ಬೇಸರ ಹೊರಹಾಕಿದ್ದಾರೆ.

Senior actress Aamani says I cried because of mega star Chiranjeevi goes viral

ನಟಿ ಅಮಾನಿಗೆ 'ಶುಭಲಗ್ನಂ' ಸಿನಿಮಾ ಬಳಿಕ ಮೆಗಾಸ್ಟಾರ್ ಜೊತೆ ನಟಿಸುವ ಅವಕಾಶ ಸಿಕ್ಕಿತ್ತಂತೆ. 'ರಿಕ್ಷಾವಾಡು' ಸಿನಿಮಾಗಾಗಿ ಅಮಾನಿಯನ್ನು ಸಂಪರ್ಕ ಮಾಡಿ ಡೇಟ್ಸ್ ಕೂಡ ತೆಗೆದುಕೊಂಡಿದ್ದರಂತೆ. ಈ ಸಿನಿಮಾದಲ್ಲಿ ಅಮಾನಿ ಜೊತೆ ಸೌಂದರ್ಯಾ ಕೂಡ ನಾಯಕಿಯಾಗಿ ನಟಿಸುತ್ತಿದ್ದಂತೆ. ಆದರೆ, ಕೆಲವು ದಿನಗಳ ನಂತರ ಅವರ ಪಾತ್ರಕ್ಕೆ ನಗ್ಮಾ ನಾಯಕಿ ಎಂದು ಪತ್ರಿಕೆಯಲ್ಲಿ ಪ್ರಕಟ ಆಗಿತ್ತು. ಇದನ್ನು ನೋಡಿ ಸಿನಿಮಾ ಮ್ಯಾನೇಜರ್‌ಗೆ ಕರೆ ಮಾಡಿದ್ದರು. ಆಗ ಗೊತ್ತಾಗಿದ್ದೇ ಬೇರೆ ವಿಷಯ.

ಆ ಸಿನಿಮಾದ ಮ್ಯಾನೇಜರ್, "ನಿರ್ದೇಶಕರು ಬದಲಾದರು ಈ ಸಿನಿಮಾವನ್ನು ಕೋದಂಡರಾಮಿ ರೆಡ್ಡಿ ಬದಲಿಗೆ ಕೋಡಿ ರಾಮಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ ನಿಮಗೆ ಅವಕಾಶ ತಪ್ಪಿ ಹೋಯ್ತು" ಎಂದು ಹೇಳಿದ್ದರಂತೆ. ಇದಾದ ಕೆಲವು ವರ್ಷಗಳ ನಂತರ ಮತ್ತೆ ಚಿರಂಜೀವಿ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ, ಅದು ನಾಯಕಿ ಪಾತ್ರವಲ್ಲ ತಂಗಿ ಪಾತ್ರ. ಆ ಸಿನಿಮಾವೇ 'ಸ್ಟಾಲಿನ್'.

ಬಾಲ್ಯದಿಂದಲೂ ಚಿರಂಜೀವಿಯೇ ತನ್ನ ಕನಸಿನ ಹೀರೋ ಎಂದು ಅಮಾನಿ ಬಹಿರಂಗಪಡಿಸಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ಚಿರಂಜೀವಿ ಜೊತೆ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಅದನ್ನು ನೆನಪಿಸಿಕೊಂಡಾಗಲೆಲ್ಲಾ ಅಳು ಬರುತ್ತದೆ" ಎಂದು ಅಮಾನಿ ಸಂದರ್ಶನದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಕಾರ್ಯಕ್ರಮ ನಡೆಸಿಕೊಟ್ಟು ಚಿರಂಜೀವಿ ಜೊತೆ ಅಭಿಮಾನಿಯಾಗಿ ಫೋಟೋ ತೆಗೆಸಿಕೊಂಡಿದ್ದಾರೆ.

More from Filmibeat

English summary
Actress Aamani about why she rejected Chiranjeevi movie offers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X