ವಿಷ್ಣುದಾದ ಜೊತೆ ನಟಿಸಿದ್ದ ನಟಿಯೀಗೆ ಇನ್‌ಸ್ಟಾಗ್ರಾಂ ಸೆನ್ಸೆಷನ್; ಯಾರೀ ನಟಿ ಗೊತ್ತೇ?
80ರ ದಶಕ ಆರಂಭದಲ್ಲಿ ವೃತ್ತಿ ಬದುಕು ಆರಂಭಿಸಿದ ನಟಿಯೀಕೆ. ಸಿನಿಮಾದಲ್ಲಿ ಅಂತ ನಟಿಸಿದ್ದು ಕೇವಲ 10 ವರ್ಷಗಳು ಮಾತ್ರ. ಅಷ್ಟರಲ್ಲೇ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲೂ ಸುಮಾರು 80ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಆ ನಟಿಯ ಹೆಸರು ಮುಚೆರ್ಲಾ ಅರುಣಾ. ಈಕೆ ಸಾಹಸ ಸಿಂಹ ವಿಷ್ಣುವರ್ಧನ್ ಜೊತೆಗೂ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮುಚೆರ್ಲಾ ಅರುಣಾ ಮೂಲತ: ಆಂಧ್ರ ಮೂಲದವರು. ಆದರೆ, ಓದಿದ್ದು ಬೆಳೆದಿದ್ದು ಹೆಚ್ಚಾಗಿ ಚೆನ್ನೈ ಹಾಗೂ ತಮಿಳುನಾಡಿನಲ್ಲಿ. 80ರ ದಶಕದಲ್ಲಿ ಸಿನಿಮಾದಲ್ಲಿ ನಟಿಸುವುದಕ್ಕೆ ಆರಂಭಿಸಿದ್ದರು. ತಮಿಳಿನ ಜನಪ್ರಿಯ ನಿರ್ದೇಶಕ ಭಾರತಿರಾಜ ನಿರ್ದೇಶನದ ಸಿನಿಮಾ 'ಕಲ್ಲುಕ್ಕುಲ್ ಈರಂ' ಈಕೆ ನಟಿಸಿದ ಮೊದಲ ಸಿನಿಮಾ.

ಮುರ್ಚೆಲಾ ಅರುಣಾ ಈಗ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದಾರೆ. ಬದುಕಿನ ಚಿಕ್ಕ ಪುಟ್ಟ ಸಂಗತಿಗಳನ್ನು ತನಗೆ ಗೊತ್ತಿರುವಷ್ಟು ಇಂಗ್ಲಿಷ್ ಭಾಷೆಯಲ್ಲಿ ವಿಡಿಯೋ ಮಾಡಿ ಹಾಕುತ್ತಾರೆ. ಈ ವಿಡಿಯೋಗಳಿಗೆ ನೆಟ್ಟಿಗರು ಕೂಡ ಮೆಚ್ಚಿಗೆ ವ್ಯಕ್ತಪಡಿಸುತ್ತಿದ್ದಾರೆ.
ಸರಿಯಾಗಿ 1980ರಲ್ಲಿ ಸಿನಿಮಾ ಜಗತ್ತಿಗೆ ಕಾಲಿಟ್ಟಿದ್ದರು. 1982 ಕನ್ನಡದಲ್ಲಿ 'ಪರಾಜಿತ' ಅನ್ನುವ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಈಕೆ ನಟಿಸಿದ ಇನ್ನೆರಡು ಸಿನಿಮಾಗಳಲ್ಲಿ ವಿಷ್ಣುದಾದಗೆ ನಾಯಕಿಯಾಗಿದ್ದರು. ಆ ಸಿನಿಮಾ 1985ರಲ್ಲಿ ತೆರೆಕಂಡ 'ಸೌಭಾಗ್ಯ ಲಕ್ಷ್ಮಿ' ಹಾಗೂ 1986ರಲ್ಲಿ ತೆರೆಕಂಡಿದ್ದ 'ಒಂದಾಗಿ ಬಾಳು' ಸಿನಿಮಾ. ಈ ಎರಡು ಸಿನಿಮಾಗಳನ್ನು ನೋಡಿದವರಿಗೆ ಹಿರಿಯ ನಟಿ ಮುಚೆರ್ಲಾ ಅರುಣಾ ನೆನಪಿಗೆ ಬರುತ್ತಾರೆ. ಇದೇ ನಟಿಯೀಗ ಇನ್‌ಸ್ಟಾಗ್ರಾಂ ಸೆನ್ಸೇಷನ್ ಆಗಿ ಹೊರಹೊಮ್ಮಿದ್ದಾರೆ.
ಮುಚೆರ್ಲಾ ಅರುಣಾ ಸಿನಿಮಾರಂಗದಲ್ಲಿ ಆಕ್ಟಿವ್ ಆಗಿ ಇದ್ದಿದ್ದು ಕೇವಲ 10 ವರ್ಷ ಮಾತ್ರ ಅಷ್ಟರಲ್ಲೇ ನಲವತ್ತು ವರ್ಷಕ್ಕೆ ಬೇಕಾಗುವಷ್ಟು ಹೆಸರು ಸಂಪಾಧಿಸಿದ್ದರು. ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಕೇವಲ 7 ವರ್ಷಗಳಲ್ಲಿಯೇ ಮುಚೆರ್ಲಾ ಅರುಣಾ ಚಂಡೀಘಢ ಮೂಲದ ಉದ್ಯಮಿಯನ್ನು ವಿವಾಹವಾಗಿದ್ದರು. 1990ರ ವೇಳೆಗಾಗಲೇ ಮುಚೆರ್ಲಾ ಅರುಣಾ ಸಿನಿಮಾರಂಗದಿಂದ ದೂರ ಉಳಿದಿದ್ದರು.
ಇದೇ ನಟಿಯೀಗ ಮತ್ತೆ ಕಮ್‌ಬ್ಯಾಕ್ ಮಾಡುವ ಬಗ್ಗೆ ಸುಳಿವು ಕೊಟ್ಟಿದ್ದಾರೆ. ತೆಲುಗು ಸಿನಿಮಾ ಅಥವಾ ಸೀರಿಯಲ್ ಮೂಲಕ ಮತ್ತೆ ನಟನಾ ರಂಗಕ್ಕೆ ಎಂಟ್ರಿ ಕೊಡುವ ಸಾಧ್ಯತೆಯಿದೆ. ಆದರೆ ಅದಕ್ಕೂ ಮುನ್ನ ಇನ್‌ಸ್ಟಾಗ್ರಾಂನಲ್ಲಿ ಮುಚೆರ್ಲಾ ಅರುಣಾ ಸಿಕ್ಕಾಪಟ್ಟೆ ಫೇಮಸ್. ಹಾಗಂತ ಸಿನಿಮಾದಿಂದ ಅಲ್ಲ.
ಇನ್‌ಸ್ಟಾಗ್ರಾಂನಲ್ಲಿ ಮುಚೆರ್ಲಾ ಅರುಣಾ ಖಾತೆಯನ್ನು ಓಪನ್ ಮಾಡಿದ್ದಾರೆ. ಇದರಲ್ಲಿ ತನ್ನ ಬದುಕಿನ ಕುರಿತು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ. ಅದರಲ್ಲೂ ನಿತ್ಯ ಜೀವನಕ್ಕೆ ಉಪಯೋಗ ಆಗುವಂತಹ ಟಿಪ್ಸ್ ಅನ್ನು ನೀಡುತ್ತಾರೆ. ಸೀರೆ ಒಗೆಯುವುದು ಹೇಗೆ, ಹುಣಸೆ ಹಣ್ಣಿನಿಂದ ಏನು ಮಾಡಬಹುದು? ತನ್ನಿಷ್ಟದ ಅಡುಗೆಗಳ ಬಗ್ಗೆ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಾರೆ. ಈ ವಿಡಿಯೋಗಳಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ.
ವಿಶೇಷ ಅಂದರೆ, ಮುಚೆರ್ಲಾ ಅರುಣಾ ವಿಡಿಯೋವನ್ನು ಇಂಗ್ಲಿಷ್‌ನಲ್ಲೇ ಮಾಡುತ್ತಾರೆ. ಅವರಿಗೆ ತಿಳಿದಷ್ಟು ಇಂಗ್ಲಿಷ್ ಭಾಷೆಯನ್ನು ಬಳಸಿ ಯಾವುದೇ ಅಂಜಿಕೆ ಇಲ್ಲದೇನೆ ವಿಡಿಯೋ ಮಾಡುತ್ತಾರೆ. "ಹಾಯ್ ಗುಡ್ ಮಾರ್ನಿಂಗ್ ಯಾ..", "ನಮಸ್ಕಾರಂ ಯಾ", ಅಂತಲೇ ಇವರ ವಿಡಿಯೋಗಳು ಶುರುವಾಗುತ್ತವೆ. ಇವರ ಸಿಂಪ್ಲಿಸಿಟಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. "ಜನಪ್ರಿಯ ನಟಿಯಾಗಿದ್ದುಕೊಂಡು ನಿಮ್ಮ ಬದುಕನ್ನು ಎಂಜಾಯ್ ಮಾಡುತ್ತಿದ್ದಾರ.", " ಇಷ್ಟೊಂದು ಸಿಂಪಲ್‌ಗಾಗಿ ಇರಲು ಹೇಗೆ ಸಾಧ್ಯ?" ಅಂತಲ್ಲಾ ಕಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











