"ಯಾರದು ಮಹೇಶ್ ಬಾಬು? ಸತ್ತಿದ್ದೇನೋ ಬದುಕಿದ್ದೇನೋ ಅನ್ನೋದೇ ಗೊತ್ತಿಲ್ಲ" ಹಿರಿಯ ನಟಿ ಹೇಳಿಕೆ

ತೆಲುಗು ಚಿತ್ರರಂಗದ ಹ್ಯಾಂಡ್‌ಸಮ್ ಹೀರೋಗಳಲ್ಲಿ ಮಹೇಶ್ ಬಾಬು ಮೊದಲನೇ ಸ್ಥಾನದಲ್ಲಿ ನಿಲ್ಲುತ್ತಾರೆ. ತಂದೆಯಂತೆಯೇ ಟಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿರುವ ಮಹೇಶ್ ಬಾಬು ಅಭಿಮಾನಿಗಳ ಪಾಲಿಗೆ ಸೂಪರ್‌ಸ್ಟಾರ್. ಇವರ ಸಿನಿಮಾಗಳು ಕೂಡ ಬಾಕ್ಸಾಫೀಸ್‌ನಲ್ಲಿ ಹಾಗೇ ಸದ್ದು ಮಾಡುತ್ತವೆ. ಈಗ ರಾಜಮೌಳಿಯ ಮಹತ್ವಕಾಂಕ್ಷೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಮಹೇಶ್ ಬಾಬು ತಾನು ಆಯ್ತು. ತನ್ನ ಸಿನಿಮಾ ಆಯ್ತು ಅಂತ ಇವರು ನಟ. ಟಾಲಿವುಡ್ ಸೂಪರ್‌ಸ್ಟಾರ್ ವಿವಾದಗಳಿಂದ ಸದಾವಿರುತ್ತಾರೆ. ತನ್ನ ಸಿನಿಮಾ, ತನ್ನ ಕುಟುಂಬ ಇಷ್ಟರಲ್ಲೇ ಖುಷಿ ಪಡುವ ನಟ. ಆದರೆ, ಕೆಲವೊಮ್ಮೆ ಅವರ ಜೊತೆಗೆ ನಟಿಸಿದ ಸಹ ಕಲಾವಿದರೇ ಅವರನ್ನು ಅನಾವಶ್ಯಕವಾಗಿ ವಿವಾದಕ್ಕೆ ಎಳೆದು ತರುತ್ತಾರೆ. ಇತ್ತೀಚೆಗೆ ಹಿರಿಯ ನಟಿಯೊಬ್ಬರು ಸಂದರ್ಶನವನ್ನು ನೀಡಿದ್ದರು. ಅವರು ಕೊಟ್ಟ ಹೇಳಿಕೆ ಈ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ.

Senior telugu actress Talluri Rameshwari controversial statement about Mahesh Babu

ತೆಲುಗು ಹಿರಿಯ ನಟಿಯರಲ್ಲಿ ತಲ್ಲೂರಿ ರಾಮೇಶ್ವರಿ ಕೂಡ ಒಬ್ಬರು. ಈ ಹಿರಿಯ ನಟಿ ಮಹೇಶ್ ಬಾಬು ಸಿನಿಮಾದಲ್ಲಿ ತಾಯಿಯ ಪಾತ್ರದಲ್ಲಿ ನಟಿಸಿದ್ದರು. ಈ ನಟಿ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಯಾರದು ಮಹೇಶ್ ಬಾಬು? ಅವನಿಗೆ ನಾನು ಸತ್ತಿದ್ದೇನೋ? ಬದುಕಿದ್ದೇನೋ? ಅನ್ನೋದೇ ಗೊತ್ತಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ವಿವಾದಾತ್ಮಕ ಹೇಳಿಕೆ ಯಾಕೆ ಅನ್ನೋದನ್ನು ನೋಡುವುದಾರೆ.

ಮಹೇಶ್ ಬಾಬು ತಂದೆ ಸೂಪರ್ ಕೃಷ್ಣ. ಅವರ ಬಳಿಕ ಟಾಲಿವುಡ್‌ನಲ್ಲಿ ಮಹೇಶ್ ಬಾಬು ಸದ್ದು ಮಾಡುತ್ತಿದ್ದಾರೆ. ಆರಂಭದ ದಿನಗಳಲ್ಲಿ ವಿಭಿನ್ನ ಸಿನಿಮಾಗಳನ್ನು ಮಾಡುವ ಪ್ರಯತ್ನ ಮಾಡಿದ್ದರು. ಆದರೆ, ಆ ಸಿನಿಮಾಗಳು ಅವರಿಗೆ ಹೆಚ್ಚಿನ ಯಶಸ್ಸನ್ನು ತಂದುಕೊಡಲಿಲ್ಲ. ಆ ಬಳಿಕ ಟಿಪಿಕಲ್ ತೆಲುಗು ಮಾಸ್ ಸಿನಿಮಾದಲ್ಲಿ ನಟಿಸುವುದಕ್ಕೆ ಶುರು ಮಾಡಿದ್ದರು. ಅಲ್ಲಿಂದ ಮಹೇಶ್ ಬಾಬು ಕರಿಯರ್ ಗ್ರಾಫ್‌ನಲ್ಲಿ ಏರಿಕೆ ಆಗುತ್ತಲೇ ಬಂದಿದೆ.

2003ರಲ್ಲಿ ಮಹೇಶ್ ಬಾಬು 'ನಿಜಂ' ಅನ್ನುವ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾವನ್ನು ತೇಜ ನಿರ್ಮಾಣ ಮಾಡಿ ನಿರ್ದೇಶನ ಕೂಡ ಮಾಡಿದ್ದರು. ತಾಯಿ ಸೆಂಟಿಮೆಂಟ್ ಪ್ರಧಾನವಾಗಿದ್ದ ಈ ಸಿನಿಮಾವಿದು. ಇದರಲ್ಲಿ ತಾಯಿಗಾಗಿ ಮಹೇಶ್ ಬಾಬು ಏನು ಬೇಕಾದರೂ ಮಾಡುವ ಪಾತ್ರದಲ್ಲಿ ಗಮನ ಸೆಳೆದಿದ್ದರು. ಆದರೆ, ಈ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಗಳಿಸಿದ್ದರೂ, ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಮತ್ತೆ ಈ ತಂಡದೊಂದಿಗೆ ಮಹೇಶ್ ಬಾಬು ನಟಿಸಲಿಲ್ಲ. ಈ ಸಿನಿಮಾ ಮಹೇಶ್ ಬಾಬು ತಾಯಿಯ ಪಾತ್ರದಲ್ಲಿ ತಲ್ಲೂರಿ ರಾಮೇಶ್ವರಿ ನಟಿಸಿದ್ದರು.

Senior telugu actress Talluri Rameshwari controversial statement about Mahesh Babu

ಈ ನಟಿಯೇ ಮಹೇಶ್ ಬಾಬು ವಿರುದ್ಧ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು, ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ. ಸದ್ಯ ಬ್ರಹ್ಮಾನಂದಂ ಅವರೊಂದಿಗೆ 'ಬ್ರಹ್ಮ ಆನಂದಂ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದ ವೇಳೆ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡಿದ್ದರು. ಆ ವೇಳೆ ಮಹೇಶ್ ಬಾಬು ಜೊತೆ ನಟಿಸಿದ ಅನುಭವದ ಬಗ್ಗೆ ಪ್ರಶ್ನೆ ಮಾಡಿದ್ದರು. ಆಗ ವಿವಾದಾತ್ಮಕ ಹೇಳಿಕೆಯನ್ನು ಕೊಟ್ಟಿದ್ದಾರೆ.

ಯಾರವನು ಮಹೇಶ್ ಬಾಬು? ನಾನು ಬದುಕಿದ್ದೇನೋ? ಸತ್ತಿದ್ದೇನೋ ಅನ್ನೋದೇ ಅವರಿಗೆ ಗೊತ್ತಿಲ್ಲ. ನಿಜ ಹೇಳಬೇಕು ಅಂದರೆ, ಅದೇ ಅವರ ಸ್ವಭಾವ. ನಾನು ಅವರ ಬಗ್ಗೆ ಹಾಗೂ ಅವರನ್ನು ಸಂಪರ್ಕ ಮಾಡುವ ಬಗ್ಗೆ ಯೋಚನೆ ಮಾಡುವುದಿಲ್ಲ." ಎಂದು ಹೇಳಿದ್ದಾರೆ. ಈ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನು ಮಹೇಶ್ ಬಾಬು ಸದ್ಯ ರಾಜಮೌಳಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Senior telugu actress Talluri Rameshwari controversial statement about Mahesh Babu;
Read more about: mahesh babu controversy tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X